ಸೋಮವಾರ, ನವೆಂಬರ್ 06, 2006

ಎಲ್ಲಿ ಜಾರಿತೋ....

ಮನಸ್ಸೇಕೊ ಖಾಲಿ ಆದಂತಿದೆ! ಏನೂ ಅಲೋಚನೆಗಳು ಹುಟ್ಟುತ್ತಿಲ್ಲವೋ ಅಥವಾ ಹುಟ್ಟಿದವುಗಳು ಎಲ್ಲೊ ಹರಿದು ಹೋಗುತ್ತಿರೋದು ಗೊತ್ತೇ ಆಗುತ್ತಿಲ್ಲವೋ, ತಿಳಿದಿಲ್ಲ! ಮನೆಗೆ ಹೋಗಿ ಬಂದೆ ಈ weekendಉ! ಆಮೇಲೆ ಹೀಗಾ??, ಅದೂ ಗೊತ್ತಿಲ್ಲ! ಮನೆಗೆ ಹೋಗಿ ಬಂದೆ ಅಂದರೆ, ಮನಸ್ಸು ಯಾವಾಗಲೂ ಖುಷಿ ಖುಷಿಲಿ ಇರ್ತಿತ್ತು, ಆದರೆ ಈ ಸಲ ಯಾಕೋ ಕೈ ಕೊಟ್ಟಿದೆಯಾ?, ಇರಬಹುದು!
ಮನಸ್ಸಿಗಾದರೂ ಏನು ಯಾವಾಗ್ಲೂ ಒಳ್ಳೇ moodನಲ್ಲೇ ಇರು ಅಂತ ಆರ್ಡರ್ ಮಾಡಕಾಗತ್ತಾ?, ಅಲ್ಲಾ, ಮಾಡಿದ್ರು ಅದು ಕೇಳತ್ತಾ?!! ಅದು ಸ್ವತಂತ್ರ, ಸರ್ವ ತಂತ್ರ ಸ್ವತಂತ್ರ! ನಮ್ಮ ಜೊತೆಗೇ ಇದ್ದು ನಮ್ಮ ದಿಕ್ಕನ್ನೇ ತಪ್ಪಿಸೋ ಅಪಾಪೋಲಿ! ಇನ್ನು ಕೆಲಬಾರಿ ನಮ್ಮನ್ನ ಸರಿ ದಾರಿಗೆ ಕರೆದೊಯ್ಯೋ ಗಾಂಧೀ ತಾತ.
ಈ ಬಾರಿ ನನ್ನ ಮನ ೨-೩ ದಿನದಿಂದ ಕೈ ಕೊಟ್ಟಿದೆ! ಪ್ರಾಯಶ: ಭರ್ಜರಿ rest ಮಾಡ್ತಾ ಇದೆಯೇನೋ ಅಂತ doubt! ಏನೋ ಒಂತರಾ iritationnu! ಎಲ್ಲಾ ಸ್ತಬ್ದ ಆದಂತಾ ಮನಸ್ತಿತಿ.ಮಾಡಬೇಕಾದ್ದನ್ನ ಯಾಂತ್ರಿಕವಾಗಿ ಮಾಡ್ತಾ ಇದೀನಿ ಅನ್ನೋ ಭಾವ. ಹಮ್.. ಸರಿ ಆಗ್ದೆ ಎಲ್ಲಿಗ್ ಹೋಗತ್ತೆ ನನ್ ಮಗಂದು! ದಾರಿಗೆ ಬರಲೇ ಬೇಕು!! ಹಾಗೆ ಬರೋಕೆ ಒಂದು ಕ್ಷಣ ಸಾಕು! ಆ ಕ್ಷಣಕ್ಕಾಗಿ ಕಾಯ್ತಾ ಇದೀನಿ..
ಯಾರಿಗೆ ಗೊತ್ತು, ಇವತ್ತೆ,ಈಗಲೇ, ಈ ಕ್ಷಣವೇ!....

4 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

Enappa nin problemmu jeevandalli?? yakingaythu? :) :) :)

ಶ್ರೀನಿಧಿ.ಡಿ.ಎಸ್ ಹೇಳಿದರು...

hmmm! kelavondsala eneno agtha!:o)

Sushrutha Dodderi ಹೇಳಿದರು...

ನನ್ನನ್ನು ಕಾಡುತ್ತಿರುವ ಭಾವವೇ ನಿನ್ನನ್ನೂ ಕಾಡುತ್ತಿದೆ??!! ಹಾಹ! ಮನಸೇ ಓ ಮನಸೇ... ಈ ಭಾವಜೀವಿಗಳನ್ನು ಕಾಪಾಡು..

Pramod P T ಹೇಳಿದರು...

ಶ್ರೀನಿಧಿಯವರೇ,
ನೀವು ನನಗೆ ಬರೆದ comment ಮರೆತುಬಿಟ್ರಾ?
ಸ್ವಲ್ಪ ಜ್ನಾಪಿಸಿಕೊಳ್ಳಿ, ಎಲ್ಲಾ ಸರಿ ಹೊಗುತ್ತೆ! :)