ಗುರುವಾರ, ಜನವರಿ 11, 2007

ಸಾಗರ ಸಮ್ಮುಖದಲ್ಲಿ-೨

ಸಾಗರದ ದಂಡೆಯಲಿ, ಅವಳ ಜೊತೆ ಜೊತೆಯಲ್ಲಿ
ಸಾಗುತಿದ್ದೆನು ಹೀಗೇ, ಕೈಯ ಹಿಡಿದು.
ಕಾಲ ಕೆಳಗಡೆಯಲ್ಲ ಮರಳ ಕಣಗಳ ಹಾಸು
ಜೊತೆಗಿಹಳು ಮನದನ್ನೆ ಮಲ್ಲಿಗೆಯ ಮುಡಿದು.

ಎದುರುಗಡೆ ದಿನ್ನೆಯಲಿ ಕೋಟೆ ಕಟ್ಟುವ ಆಟ
ಬಾಲಕರ ನೆಗೆದಾಟ, ಹರ್ಷ ಸಂಭ್ರಮವು.
ಪಕ್ಕದಲಿ ನೋಡಿದರೆ ಶಂಖ ಹೆಕ್ಕುವ ಹುಡುಗಿ,
ಗಾಳಿಪಟ ಹಾರಿಹುದು ತೀರದುದ್ದಕ್ಕೂ.

ಬಯಲು ಸೀಮೆಯ ಹುಡುಗಿ, ಕಡಲು ಹೊಸದಿವಳಿಗೆ
ಬೆರಗುಗಣ್ಣಿನ ಒಳಗೆ ಶರಧಿ ಪ್ರತಿಬಿಂಬ.
ನೀರ ರಾಶಿಯ ನೋಡಿ, ಬಾಲ್ಯ ಒಡಮೂಡಿಹುದು
ಏನ ಮಾಡುವುದೆಂಬ ಗೊಂದಲವು ಮನತುಂಬ!

ಪಡುವಣದ ಅಂಚಲ್ಲಿ ಸೂರ್ಯ ಸ್ನಾನವಿದೀಗ
ಅವನ ಕೆಂಬಣ್ಣದಲೀಕೆ ಮಿಂದಿಹಳು ಮೊದಲೆ,
ನೇಸರನ ಸೊಬಗ ನೋಡುತಲಿ ಇವಳಿರೆ,
ನನಗೆ ಈಕೆಯ ಮೊಗವು, ಅದಕು ಸೊಗಸು!

7 ಕಾಮೆಂಟ್‌ಗಳು:

Sushrutha Dodderi ಹೇಳಿದರು...

ನೇಸರನ ಸೊಬಗಿಗಿಂತಲೂ ಸೊಗಸೇ ಅತ್ತಿಗೆಯ ಮೊಗ? ಆಹಾ..!

ಅನಾಮಧೇಯ ಹೇಳಿದರು...

ಕವನ ತುಂಬಾ ಸೊಗಸಾಗಿದೆ.

"ಪಡುವಣದ ಅಂಚಲ್ಲಿ ಸೂರ್ಯ ಸ್ನಾನವಿದೀಗ
ಅವನ ಕೆಂಬಣ್ಣದಲೀಕೆ ಮಿಂದಿಹಳು ಮೊದಲೆ,
ನೇಸರನ ಸೊಬಗ ನೋಡುತಲಿ ಇವಳಿರೆ,
ನನಗೆ ಈಕೆಯ ಮೊಗವು, ಅದಕು ಸೊಗಸು!"
ಸಾಲುಗಳು ತುಂಬಾ ಚೆನ್ನಾಗಿವೆ.

Deep ಹೇಳಿದರು...

Hmm..chennagi baritheera..

Annapoorna Daithota ಹೇಳಿದರು...

ಬಹಳ ಚೆನ್ನಾಗಿದೆ ಶ್ರೀನಿಧಿ..... ಕೆ.ಎಸ್.ನರಸಿಂಹಸ್ವಾಮಿ ಅವರ ನಂತರ ನೀವೆ :)

ಮನಸ್ವಿನಿ ಹೇಳಿದರು...

ತುಂಬಾ ಚೆನ್ನಾಗಿದೆ.

ಶ್ರೀನಿಧಿ.ಡಿ.ಎಸ್ ಹೇಳಿದರು...

suSh, avi, deep,ಮನಸ್ವಿನಿ

ಥ್ಯಾಂಕ್ಸು!!:)

ಅನಾ,
ಅಷ್ಟೆಲ್ಲಾ ಹೊಗಳೋದು ಬೇಡಾ ಮೇಡಮ್!!ಹೆದ್ರಿಕೆ ಆಗತ್ತೆ!

Lanabhat ಹೇಳಿದರು...

ಚನ್ನಾಗಿದೆ....ಸಮುದ್ರ ತೀರ ನೆನಪಾಯ್ತು... :)