ಬಸ್ಟ್ಯಾಂಡು ರೈಲ್ವೇ ಸ್ಟೇಶನ್ನುಗಳ
ನಿಯಾನು ದೀಪಗಳ ಕೆಳಗೊಮ್ಮೆ
ನಿಂತು ನೋಡಿದರೆ
ವಿದಾಯದ ಹಲವು ಭಾವಗಳು
ಸುಳಿಯುವುದು ಕಾಣುವುದು, ಎಂದೂ.
ಇಲ್ಲಿಯ ತನಕ ಬೆಚ್ಚಗೆ ಬೆಸೆದಿದ್ದ
ಕೈಯ ಬಿಸುಪುಗಳೆಲ್ಲ ಅನಾಥವಾಗಿ ನಿಂತಿದ್ದು,
ಅಪ್ಪುಗೆ ಆಲಿಂಗನಗಳು ಅಸಹಾಯಕರಾಗಿ
ಅಲೆಯುವುದು,
ಸಂಧಿಸಿದ ಕಣ್ಣುಗಳ ಬಂಧಿಸಿದ ಬಂಧ
ಕಡಿದುಅಲ್ಲೆ ಬಿದ್ದಿರುವುದು
ಹುಸಿ ಮುನಿಸು, ಕಾತರ ನಿರೀಕ್ಷೆಗಳು
ಮುದುರಿ ಕುಳಿತಿರುವುದು
ಅಗಲಿದ ತುಟಿಗಳ ನಡುವಿನ ಮುತ್ತು
ಆಶ್ರಯ ಹುಡುಕುವುದು,
ಬೀಸಿದ ಕೈಗಳ ತುದಿಯ ಬೇಸರ ಅಳುತ್ತಿರುವುದು,
ಜೊತೆಗೆ ಸರಿವ ಭಾರ ಉಸಿರು.
ಕಾಣಲೇಬೇಕೆಂದಿಲ್ಲ ಇವುಗಳೆಲ್ಲ, ಎಲ್ಲರಿಗೂ.
ಆದರೆ ಕಣ್ಣಿಗೆ ಬೀಳಲೇಬೇಕು,
ಪ್ಲಾಟ್ ಫಾರಂ ಬೆಂಚಿನ ಮೇಲೆ ಬಿಟ್ಟು ಹೋದ ಒದ್ದೆ ಕರ್ಚೀಫು,
ಅಲ್ಲೆ ಪಕ್ಕದಿ ಗುಲಾಬಿಯ ಒಂಟಿ ಪಕಳೆ
ಅರೆಗತ್ತಲ ಮೂಲೆಯಲಿ ಬಿದ್ದ ಕಣ್ಣೀರ ಬಿಂದು,
ಮತ್ತು ನಿಧಾನವಾಗಿ
ದೂರ ಸಾಗುತ್ತಿರುವ ಒಂಟಿ ಪಾದಗಳು.
14 ಕಾಮೆಂಟ್ಗಳು:
:( hmm...
ಕಾಣಲೇ ಬೇಕೆಂದಿಲ್ಲ...
ದೀಪದ ಕೆಳಗೊಂದೇ ಅಲ್ಲ.. ಮನೆಗೆ ಬಂದಮೇಲೂ...!
ಅಂಗಿ ಗುಂಡಿಗೆ ಸಿಕ್ಕಿಹಾಕಿಕೊಂಡ ಅವಳ ತಲೆಕೂದಲು..
ನನಗೇ ತಿಳಿಯದಂತೆ ನನ್ನ ಪರ್ಸೊಳಗೆ ಅವಳು ಸೇರಿಸಿದ ತನ್ನ ಬಾಲ್ಯದ ಪೋಟೊ!
ತೋಳಿನಲ್ಲಿ ಇನ್ನೂ ಕಾಣುತ್ತಿರುವ ಅವಳ ಹಲ್ಲಿನ ಗುರುತು..
ಬಸ್ಸಿನ ಟಿಕೇಟಿನ ಹಿಂದೆ ಅವಳು ಬಿಡಿಸಿದ ಗುಲಾಬಿ ಹೂವಿನ ಚಿತ್ರ..
ಟಿಶ್ಯೂ ಪೇಪರಿನಲ್ಲಿ ಮಾಡಿದ ಕತ್ತಿದೋಣಿ..
ಕಷ್ಟಪಟ್ಟು ತಡೆಹಿಡಿದ ಕಣ್ಣೀರು..
ಒಳ್ಳೇ ಕಮೆಂಟ್ ಸಂದೀಪಾ..
ಓಹ್, ಸಾರಿ, ಒಳ್ಳೇ ಕವನ ಶ್ರೀನಿಧಿ.. :) :)
ವೋಮ್ಮೋಮ್ಮೆ ಆಗಲಿಕೆಯ ಆಶಂಕೆ ಹದ್ದಾಗಿ ಎರಗಿ ಸುಖವನ್ನೇ ಕದ್ದು ಹಾರುವಂತೆ ಅಂತ K S N ಹಾಡಿದ್ರೆ
ನೀವು ಆಗಲಿಕೆಯ ಆ ಕ್ಷಣದ ತುಡಿತಗಳನ್ನು ಚಿತ್ರಿಸಿದ್ದೀರ. ನಿಮ್ಮ ಕವನವನ್ನು ವೋದಿದ ನಂತರ ವೊಂದು ನೀಳ ನಿಟ್ಟುಸಿರು vodee ಕಣ್ಣು.....
ಇನ್ನೇನು ಹೇಳಲಿ... ಅದ್ಭುತ!!!!!
matthade Bhavanaathmaka kshana.... matthade Shreenidiyinda.... :):)
"ಇಲ್ಲಿಯ ತನಕ ಬೆಚ್ಚಗೆ ಬೆಸೆದಿದ್ದ
ಕೈಯ ಬಿಸುಪುಗಳೆಲ್ಲ ಅನಾಥವಾಗಿ ನಿಂತಿದ್ದು,
ಅಪ್ಪುಗೆ ಆಲಿಂಗನಗಳು ಅಸಹಾಯಕರಾಗಿ
ಅಲೆಯುವುದು,
ಸಂಧಿಸಿದ ಕಣ್ಣುಗಳ ಬಂಧಿಸಿದ ಬಂಧ
ಕಡಿದುಅಲ್ಲೆ ಬಿದ್ದಿರುವುದು"-sakth ide Shree ee bhaavanegalu.
ಬಿಸುಪುಗಳೆಲ್ಲ ಅನಾಥವಾಗಿ,ಆಲಿಂಗನಗಳು ಅಸಹಾಯಕರಾಗಿ,ಸಂಧಿಸಿದ ಕಣ್ಣುಗಳ ಬಂಧಿಸಿದ ಬಂಧ-woh woh adbhuta kalanegalu. I (everybody feeling while reading it)felt these while reading this stranza. Hence, musth ide bhaavane mattu nimma hrudayada maathu!!
ಮನುಷ್ಯನೇನೋ ನೀನು... !!!!
ಸಕತ್ತಾಗಿ ಬರ್ದಿದಿಯಾ.. ಸೂಪರ್ ಕವನ.
ಇನ್ಮೇಲೆ ನಿಯಾನು ದೀಪಗಳನ್ನು ನೋಡಿದರೆ ಸಾಕು ಇದೇ ನೆನಪಾಗುತ್ತದೆ. ಸಂದೀಪನ ಕಮೆಂಟು ಓದಿದ ಮೇಲಂತೂ ಕವನದ ಭಾವದ ಆಳ ಇನ್ನೂ ಚೆನ್ನಾಗಿ ತಿಳಿಯತ್ತದೆ :-|
ಯಥಾಪ್ರಕಾರ ಪತ್ರಿಕೆ ಕಳುಹಿಸಲು ಕೋರಲಾಗಿದೆ. :-)
ನಿಮ್ಮ ಕವನ ನನ್ನ ಹೃದಯವನ್ನು ಅಪ್ಪಿತು
ಆ ನಿಯಾನ್ ದೀಪ ಆರಿ
ಮೇಲಿಂದ ಬಂದ ರವಿ
ಅವನ ಬೆಳಕಿಗೆ ಮತ್ತೆ ಉರಿದವು
ನೀವು ಬಿಟ್ಟು ಬಂದ ನೆನಪುಗಳು
ಆ ನೆನಪುಗಳನ್ನು ಸಂಜೆಯ ವರೆಗೆ
ಜೇಬಲ್ಲಿ ಜೋಪಾನ ವಾಗಿಡಬೇಕು
ಬದುಕಿನ ಸಂಜೆಗೆ ಬೇಕಾಗಬಹುದು
ಎಂದೋ ಹಿಂದೊಮ್ಮೆ ಯಾರಿಂದಲೋ ಅಗಲಿದ ಅದೇ ಜಾಗ,
ಮತ್ತೆ ಕಾಣಬಹುದೇನೋ ಎಂದು ಕಾಯುತ್ತಿರುವ ನಿರೀಕ್ಷೆಯ ಕಣ್ಣುಗಳು
ಯಾರನ್ನೋ ನೆನಪಿಸುವ ಊರಿನ ಬೋರ್ಡ್ ಹಾಕಿದ ಆ ಬಸ್ಸು
ಒಂದೇ ಎರಡೇ..............
ಏನು ಹೇಳ್ಬೇಕೋ ಗೊತ್ತಗ್ತಿಲ್ಲಾ.. ಓದಿ ಮುಗಿದಾಗ ನನ್ನದೂ ಒಂದು ಭಾರವಾಡ ನಿಟ್ಟುಸಿರು ಹೊರ ಬಂತು
ಹಾಯ್ ನಿಧಿ,
ಸೂಪರ್ ಕವನ..ಅಧ್ಬುತ!!
Super kavana nidhi, ashte olleya sandeepana comment..
ella blog gu intha adrashta irtille...
cheers
Chin
ಸಂದೀಪ,
ಅಕ್ಷರಶ: ನನ್ನ ಬಳಿ ಶಬ್ದಗಳಿಲ್ಲ!
ಸುಶ್,
:))
ಮಲ್ನಾಡ್ ಹುಡ್ಗಿ,
ನಿಮ್ಮ ಭಾವ ಪೂರ್ಣ ಸ್ಪಂದನಕ್ಕೆ ಕೃತಜ್ಞ.
@annapoorNa
ಮತ್ತೆ ಅದೇ ಶೈಲಿಯ ಕಾಮೆಂಟು , ಮತ್ತೆ ಅನ್ನಪೂರ್ಣಾ ಅವರಿಂದ!:)
@ ರೇವಣ
ವಂದನೆಗಳು ಕಣಪ್ಪಾ! ನನ್ನ ಬ್ಲಾಗಿಗೆ ಹೀಗೇ ಭೇಟಿ ಕೊಡುತ್ತಿರು!
@ ವಿಕಾಸ,
ಬೈತಾ ಇದೀಯೋ , ಹೊಗಳತಾ ಇದೀಯೋ ಗೊತಾಗ್ಲಿಲ್ಲ ಒಂದು ಸಲ!:)
ಪತ್ರಿಕೆಗೆ ಕಳಿಸುವರೇ, ಪ್ರಯತ್ನ ನಡೆದಿದೆ!
@ಬಾನಾಡಿ,
ನಿಮ್ಮ ಅನಿಸಿಕೆಗೆ ಸ್ವಾಗತ,
ಬದುಕಿನ ಸಂಜೆಗೆ ವಿದಾಯದ ನೆನಪುಗಳು ಬೇಕೇ?
ಶ್ಯಾಮಾ,
ನಿಮ್ಮಗಳೆಲ್ಲರ ರಿಪ್ಲೈ ನೋಡಿ, ನಾನು ಕವನವನ್ನ ಇನ್ನಷ್ಟು ವಿಸ್ತರಿಸಬೇಕಿತ್ತೇನೋ ಅನ್ನಿಸೋಕೆ ಶುರುವಾಗಿದೆ!
ಪ್ರಮೋದ್,
ಹೀಗೇ ಬಂದು ಹೋಗಿ ಮಾಡ್ತಾ ಇರಿ ದೊರೆ...
ಚಿನ್ಮಯಾ,
:)))
ಶ್ರೀನಿಧಿ,
ಒಂದು ಭಾವಪೂರ್ಣ ಕವಿತೆ.
ಕಾಲದ ಕೈಯಲ್ಲಿ ನಾವೆಷ್ಟು ಅಸಹಾಯಕರು.. :(
ನಿನ್ನೆ ಸಂಜೆ ಸೇರಿ ನಕ್ಕಿದ್ದ ಆರೂವರೆಗೆ ಇವತ್ತು ಕೂತು ಬಿಕ್ಕಳಿಸುತ್ತಿರುತ್ತೇವೆ. ಆಸೆಪಟ್ಟು ಓಡುತ್ತಿದ್ದ ಜಾಗಗಳ ಹಾದಿಯನ್ನು ಉದ್ದೇಶಪೂರ್ವಕವಾಗಿ ಮರೆತು ಬಿಡುತ್ತೇವೆ.
ಎಷ್ಟು ಮರೆತರೂ ಮರೆತ ವಸ್ತು,ವ್ಯಕ್ತಿ,ಅನುಭೂತಿ, ಅಲ್ಲೆ ಇರುತ್ತದೆ. ತಿರುಗಿ ನೋಡಿದ ಕೂಡಲೆ ನೆನಪಿಸಲು.
ಓದಿ ಮನಸ್ಸೆಲ್ಲ ಮೋಡ ಕವಿದಿದೆ. ಉಂಹುಂ ಮಳೆ ಬಂದು ತಂಪಾಗುವುದಿಲ್ಲ. ಬರಿಯ ಮೋಡವಷ್ಟೆ.
ಕಾಮೆಂಟ್ ಪೋಸ್ಟ್ ಮಾಡಿ