ಶನಿವಾರ, ಡಿಸೆಂಬರ್ 01, 2007

ನಾನು ನಾನಾಗುವುದು..

ನಾನು ಏನೂ ಅಲ್ಲ..
ಹಾಗೆಂದು ಹೇಳಿದರೆ ಯಾರೂ ನಂಬುವುದಿಲ್ಲ.
ನನ್ನ ಬಗೆಗೆ ನನಗಿಂತ ಹೆಚ್ಚು
ಅವರುಗಳಿಗೆ ಗೊತ್ತು.

ಅವರ ದನಿಗಳಿಗೆ ನಾನು ಮರುಳಾಗಿದ್ದೇನೆ.
ಹೊಗಳುವಿಕೆಗೆ ಅರಳಿದ್ದೇನೆ.
ನಾನೇನಲ್ಲವೋ , ಅದೇ ನಾನಾಗಿದ್ದೇನೆ.
ಆದರೂ ನನ್ನನ್ನು ಹುಡುಕುತ್ತಿದ್ದೇನೆ.

ಕಳೆದು ಹೋಗಲು ಇಷ್ಟವಿರಲಿಲ್ಲ ನನಗೆ,
ಏನು ಮಾಡುವುದು, ದಿಕ್ಕು ತಪ್ಪಿಬಿಟ್ಟಿದ್ದೇನೆ.
ಚಕ್ರದಾರಿಯಲಿ ಸುತ್ತುತ್ತಿದ್ದೇನೆ,
ನಿರ್ವಾತದಲೂ ಉಸಿರಾಡುತ್ತಿದ್ದೇನೆ.

ನಾನು ಮತ್ತಿನ್ನೇನಾದರೂ ಆಗೋ ಬದಲು
ನಾನೇ ಆಗಿದ್ದರೆ ಚೆನ್ನಿರುತ್ತಿತ್ತು,
ಆದರೆ ಭವಿಷ್ಯ ಯಾರಿಗೆ ಗೊತ್ತು?
ಕಾಯುತ್ತೇನೆ ಮೂರೂ ಹೊತ್ತು..

ನಾನು ನಾನೇ ಆಗುವವರೆಗೂ.

5 ಕಾಮೆಂಟ್‌ಗಳು:

Alpazna ಹೇಳಿದರು...

ಆಹಾಂ..
ಚೆನ್ನಾಗಿದ್ದು..

ಸಿಂಧು Sindhu ಹೇಳಿದರು...

ನಿಧಿ,

ಥಿಯರಿಗಳು ಬದುಕನ್ನು ಸಹನೀಯವಾಗಿಸುವುದಿಲ್ಲ.

ಕವಿತೆ ಚೆನ್ನಾಗಿದ್ದು. ನೀನು ನಿನಗೇನು ಬೇಕೋ ಅದೇ ಆಗಿರುವುದು ನಿನಗೆ ಬೇಗ ಗೊತ್ತಾಗಲಿ. :)

ಪ್ರೀತಿಯಿಂದ
ಸಿಂಧು

ಶಾಂತಲಾ ಭಂಡಿ ಹೇಳಿದರು...

ಶ್ರೀನಿಧಿಯವರೆ,
ಚೆನ್ನಾಗಿದೆ ಕವನ.
"ಕಳೆದು ಹೋಗಲು ಇಷ್ಟವಿರಲಿಲ್ಲ ನನಗೆ,
ಏನು ಮಾಡುವುದು, ದಿಕ್ಕು ತಪ್ಪಿಬಿಟ್ಟಿದ್ದೇನೆ.
ಚಕ್ರದಾರಿಯಲಿ ಸುತ್ತುತ್ತಿದ್ದೇನೆ,
ನಿರ್ವಾತದಲೂ ಉಸಿರಾಡುತ್ತಿದ್ದೇನೆ."

ಚೆನ್ನಾಗಿ ಬರೆದಿದ್ದೀರ.

ಸುಶ್ರುತ ದೊಡ್ಡೇರಿ ಹೇಳಿದರು...

ಎಲ್ಲರು ಹೇಳ್ತ ಅಂತ ನಾನೂ ಚನಾಗಿದ್ದು ಅಂತ ಹೇಳ್ಲಾಗ. ಸ್ವಲ್ಪ ಡಿಫ್ರೆಂಟ್ ಇರವು ನಾನು:

ನಿಧಿ, ಈ ಕವ್ನ ಚನಾಗಿಲ್ಲೆ. ~!! :) :D

ಅನಾಮಧೇಯ ಹೇಳಿದರು...

ಕಳೆದು ಹೋಗಲು ಇಷ್ಟವಿರಲಿಲ್ಲ ನನಗೆ,
ಏನು ಮಾಡುವುದು, ದಿಕ್ಕು ತಪ್ಪಿಬಿಟ್ಟಿದ್ದೇನೆ.
ಚಕ್ರದಾರಿಯಲಿ ಸುತ್ತುತ್ತಿದ್ದೇನೆ,
ನಿರ್ವಾತದಲೂ ಉಸಿರಾಡುತ್ತಿದ್ದೇನೆ.

tumba ishta aytu e saalugaLu. 'm so happy tat u r back with good kavitegaLu :)