ಬುಧವಾರ, ಜನವರಿ 23, 2008

ಜಂಗಮ ಬಿಂಬಗಳು - ೧

ಅದು ಅವರಿಬ್ಬರ ಕೊನೆಯ ಭೇಟಿ. ಇಬ್ಬರೂ ಕೂತು ಮಾತಾಡಿದರು. ಕಣ್ಣು ತುಂಬಿಕೊಂಡರು. ಪರಸ್ಪರ ಬೇರೆಯಾಗಿ ಹೊರಟರು. ಮರುದಿನ ಬೆಳಿಗ್ಗೆ , ಆಕೆ ಅವನಿಗೆ ಮತ್ತೆ ಸಿಕ್ಕಳು.
******
ಅವನಿಗೆ ಕನಸುಗಳು ಬೀಳುತ್ತಿಲ್ಲ ಅಂತ ಚಿಂತೆ. ನಿತ್ಯವೂ ಅದನ್ನೇ ಯೋಚಿಸುತ್ತ ಕೂರುತ್ತಿದ್ದ. ಕಣ್ಣೆದುರಿದ್ದ ನನಸೂ ಕಮರಿ ಹೋಯಿತು.
******
ಹೋಟಿಲಿನ ಹೊರಗೆ ಭಿಕ್ಷುಕಿಯಂತೆ ಕಾಣುವಾಕೆ ನಿಂತಿದ್ದಳು. ಮನದಲ್ಲೇ ಅಂದುಕೊಂಡೆ, "ಇವರ ಗೋಳು ತಪ್ಪಿದ್ದಲ್ಲ ನಿತ್ಯ". ಅಷ್ಟು ಹೊತ್ತಿಗೆ ಹೋಟೇಲಿನ ಹುಡುಗ, ಏನೋ ಪಾರ್ಸೆಲ್ ತಂದು ಆಕೆಯ ಕೈಗಿತ್ತ. ಆಕೆ ಮೆಲ್ಲನೆ ಅಲ್ಲಿಂದ ಹೊರಟಳು. ಛೇ, ತಪ್ಪು ತಿಳಿದೆನಲ್ಲಾ ಅಂತ ಬೇಸರವಾಯಿತು. ಬೈಕು ಹತ್ತ ಹೊರಟಾಗ ಎದುರಿಗೆ ಅವಳು ನಿಂತಿದ್ದಳು - ಕೈ ನನ್ನೆದುರು ಚಾಚಿ.
******
- ಇದೊಂದು ಹೊಸ ಯತ್ನ. ಮನಸ್ಸಿಗೆ, ಕಣ್ಣಿಗೆ ಕಂಡ ಒಂದಿಷ್ಟು ಜಂಗಮ ಬಿಂಬಗಳು.. ಆವಾಗಾವಾಗ, ನಿಮ್ಮ ಮುಂದೆ.
( ಇದು ನನ್ನ ನೂರನೇ ಪೋಸ್ಟು!)

24 ಕಾಮೆಂಟ್‌ಗಳು:

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ಶ್ರೀನಿಧಿ ಅವರೆ...

ಶತಕಗಳತ್ತ ಧಾವಿಸಿ ಮುನ್ನಡೆಯುತ್ತಿರುವ ನಿಮಗೆ ಅಭಿನಂದನೆಗಳು.

ನಿಮ್ಮ ನೂರನೆಯ ಪೋಸ್ಟ್ ಕೂಡ ತುಂಬ ಹಿಡಿಸಿತು. ಮಾತಾಡದೆಯೇ ಎಲ್ಲವನ್ನೂ ಹೇಳಿಬಿಡುವ "ಭಾವ ಬಿಂದು"ವಿನ ಹಾಗೆ.

ಅನಾಮಧೇಯ ಹೇಳಿದರು...

Time sikkagella nimma modalaneya post iMda OduttiddEne....
chennAgi bareyuttIra. hIgeyE bareyuttiri.
-Shantala Bhandi.

ಅನಾಮಧೇಯ ಹೇಳಿದರು...

Congrats DOsta,

Anu sikkapatte enjoy maduva blog galalli nindu ondu :) ninna blog sure mada discussion anu neenu madiddu innu nenpiddu.. Blogna gadi heege odta irli..

Cheers
Chin

Sushrutha Dodderi ಹೇಳಿದರು...

congrats.. love u..

ವಿ.ರಾ.ಹೆ. ಹೇಳಿದರು...

ಐತ್ತಲಕಡಿ.. ನೂರು !! ಕಂಗ್ರಾಟ್ಸ್ .

ಜಂಗಮ ಬಿಂಬಗಳು ಚೆನಾಗಿದ್ದು. ಒಳ್ಳೇ ಪ್ರಯತ್ನ.

Unknown ಹೇಳಿದರು...

Shreenidhi,

After a long time you have again continued ur passion. It was a nice Jangama.... hope to see more of it soon.

Harsha Bhat ಹೇಳಿದರು...

Tendulkar matte shreenidhi ibru onde dina 100 hodadda..... . ha ha :)

congrats gurugaLe ...

Parisarapremi ಹೇಳಿದರು...

kanasu - nanasu suuuper kaNappa....

anda haage shreenidhi baryOdu andre adu noorEnu, saavira, laksha kOTi postugaLu baruttave.. naavu Odhtivi... :-)

PRANJALE ಹೇಳಿದರು...

ಜಂಗಮ ಬಿಂದು... ಬರಹಗಳ ಚಿತ್ರ ಒಳ್ಳೆ ಪ್ರಯತ್ನ.......

Lakshmi Shashidhar Chaitanya ಹೇಳಿದರು...

ಶತಕ ಪೂರೈಸಿದ ತುಂತುರು ಹನಿಗಳ ಮೋಡವಾದ ಶ್ರೀನಿಧಿಯವರಿಗೆ ಅಭಿನಂದನೆಗಳು. ತಮ್ಮ ಹನಿಗಳು ಅಸಂಖ್ಯಾತವಾಗಲಿ ಎಂದು ಆಶಿಸುತ್ತೇನೆ.

Sree ಹೇಳಿದರು...

congrats!! chennaagive jangama mimbagaLu, liked especially the first two... great going, all the best

ತೇಜಸ್ವಿನಿ ಹೆಗಡೆ ಹೇಳಿದರು...

ಭಿಕ್ಷುಕಿಯ್ ಬಿಂಬ ತುಂಬಾ ಇಷ್ಟವಾಯಿತು... ಉತ್ತಮವಾಗಿದೆ.

ರಾಜೇಶ್ ನಾಯ್ಕ ಹೇಳಿದರು...

ನೀವು ಮತ್ತೆ ಬರೆಯಲು ಶುರುಮಾಡಿದ್ದನ್ನು ಗಮನಿಸಿರಲಿಲ್ಲ. ಮತ್ತೆ ಓದಲು ಉತ್ತಮ ಸರಕು ದೊರೆತದ್ದು ಕಂಡು ಸಂತೋಷವಾಯಿತು.

ವಿಕ್ರಮ ಹತ್ವಾರ ಹೇಳಿದರು...

ella bimbagalu chennaagive. koneyadu tumba chennaagide. jangama bimbada haagide. madhyaddu naalku saalU aagabahudu anisitu. keep writing.

ಅನಾಮಧೇಯ ಹೇಳಿದರು...

heyyyyyyyyyyyyyyy many many congratulations....shataka barisiddakke :) baravanige hige chennagi, nirataravagi sagali.... loads of good wishes.

ಬಾನಾಡಿ ಹೇಳಿದರು...

ನೂರರ ಸಂಭ್ರಮಕ್ಕೆ ಅಭಿನಂದನೆಗಳು.
ಬಾನಾಡಿ.

ಮೃಗನಯನೀ ಹೇಳಿದರು...

cool dear. nice try, intresting.. keep updating

nUrakke jai

jomon varghese ಹೇಳಿದರು...

ನಮಸ್ತೆ.

ನೂರನೇ ಪೋಸ್ಟಿನ ಜಂಗಮ ಬಿಂಬ ಚೆನ್ನಾಗಿದೆ. ಎನನ್ನೂ ಹೇಳದೆ, ಎಲ್ಲವನ್ನೂ ಹೇಳಿಬಿಡುವ ಜೀವಂತ ಬಿಂಬ, ಸುಂದರ ದೃಶ್ಯಕಾವ್ಯದಂತೆ.

ಧನ್ಯವಾದಗಳು.

ಜೋಮನ್.

ರೇಣುಕಾ ನಿಡಗುಂದಿ ಹೇಳಿದರು...

Congratulations, Jangama Bimba chennagide..

ಅನಾಮಧೇಯ ಹೇಳಿದರು...

ಶ್ರೀನಿಧಿ ಅವರೇ,
ನಿಮ್ಮ ನೂರನೇ ಪೋಸ್ಟ್ ಚೆನ್ನಾಗಿದೆ. ಜಂಗಮ ಬಿಂಬಗಳು ಚೆನ್ನಾಗಿವೆ. ಪುಟ್ಟ ಪುಟ್ಟ ಲಹರಿಯಿದ್ದ ಹಾಗೆ.
ಜತೆಗೆ ಶತಕ ಬಾರಿಸಿದ್ದಕ್ಕೆ ಅಭಿನಂದನೆಗಳು.
ನಾವಡ

VENU VINOD ಹೇಳಿದರು...

ಶ್ರೀನಿಧಿ,
ಶತಕ ದಾಖಲೆಗೆ ಕಂಗ್ರಾಟ್ಸ್.
ಹೊಸ ಪ್ರಯೋಗ ಚೆನ್ನಾಗಿದೆ, ಇನ್ನಷ್ಟು ಮಂದಿಗೆ ಸ್ಪೂರ್ತಿಯಾದೀತು, ಕನಿಷ್ಠ ನನಗಾದರೂ :)

ಶ್ರೀನಿಧಿ.ಡಿ.ಎಸ್ ಹೇಳಿದರು...

ನನ್ನ ಬ್ಲಾಗುಗಳ ಬರಹವನ್ನು ಮೆಚ್ಚಿದವರಿಗೆ, ತಿದ್ದಿತೀಡಿದವರಿಗೆ ನನ್ನ ನಮನಗಳು. ಬ್ಲಾಗು ಲೋಕದ ನಲ್ಮೆ ಹೀಗೆಯೇ ಮುಂದುವರಿಯುತ್ತಿರಲಿ...

ಶ್ರೀನಿಧಿ.ಡಿ.ಎಸ್ ಹೇಳಿದರು...

ಚಿನ್ಮಯಾ,

ಹೌದು ನೋಡು, ಆವತ್ತೊಂದಿನ ನೀನು ಯಾಕೆ ಬ್ಲಾಗು ಬರ್ಯಕು ಹಾಂಗೆ ಹೀಂಗೆ ಅಂತೆಲ್ಲ ನನ್ನ ತಲೆ ತಿಂದಿದ್ದೆ!!:)

ಶ್ರೀನಿಧಿ.ಡಿ.ಎಸ್ ಹೇಳಿದರು...

ಪ್ರಾಂಜಲೆ,ಕೃತಜ್ಞ.. "ಜಂಗಮ ಬಿಂದು " ಅಲ್ಲ, ಬಿಂಬಗಳು...