ನನಗೆ ಬರೆಯುವ "ಹುಚ್ಚು" ಆರಂಭವಾಗಿದ್ದು ನಾನು ಬಿ.ಎ ಓದುತ್ತಿದ್ದ ಕಾಲದಲ್ಲಿ. ಕವನ, ಕಥೆಯಂತದ್ದನ್ನು ಬರೆಯಲು ಆರಂಭಿಸಿದ್ದೆ ಆವಾಗ. ಸುಮ್ಮನೇ ಮನಸ್ಸಿಗೆ ತೋಚಿದ್ದನ್ನು ಗೀಚುವುದು, ಸಿಕ್ಕಲ್ಲಿ ಎಸೆಯುವುದು ಮಾಮೂಲಾಗಿತ್ತು. ಇನ್ನು ನನಗೇ ತೀರಾ ಇಷ್ಟ ಅನ್ನಿಸಿದ್ದನ್ನು ಎಲ್ಲಾದರೂ ಪುಸ್ತಕದಲ್ಲಿ ಬರೆದಿಡುತ್ತಿದ್ದೆ. ಅಪ್ಪ ಒಂದಷ್ಟು ದಿನ "ಪುಣ್ಯಾತ್ಮಾ, ಬರೆದಿದ್ದನ್ನು ಯಾವುದಾದರೂ ಪತ್ರಿಕೆಗೆ ಕಳಿಸೋ" ಅಂತ ಹೇಳೀ ಹೇಳೀ ಸೋತು ಹೋದರು.ನಾನು ನನ್ನ ಪಾಡಿಗೆ ಗೀಚಿ ಎಲ್ಲಾದರೂ ಹಾಕುವುದನ್ನು ಹಾಯಾಗಿ ಮುಂದುವರೆಸಿದ್ದೆ. ಅಮ್ಮ ಮನೆ ಗುಡಿಸುವಾಗ ನಾನು ಬರೆದು ಬಿಸಾಕಿದ ಹಾಳೆಗಳನ್ನು ತಂದು ನನ್ನ ಮುಂದಿಡುತ್ತಿದ್ದರು. ಅವರಿಗೂ ಭ್ರಮನಿರಸನವಾಗಿ, ನನ್ನ ಬರಹವನ್ನು "ಸೂಟ್ ಕೇಸ್ ಸಾಹಿತ್ಯ" ಅಂತ ನಾಮಕರಣ ಮಾಡಿದರು.
ಆಮೇಲೆ ಬೆಂಗಳೂರಿಗೆ ಬಂದು ಬ್ಲಾಗೂ ಅದೂ ಇದೂ ಅಂತ ಶುರು ಮಾಡಿಕೊಂಡು ಬರೆದದ್ದು ಉಳಿಯತೊಡಗಿತು. ತಂಗಿ ಮನೆಯಿಂದ ಆವಾಗಾವಾಗ ಫೋನ್ ಮಾಡಿ, "ಅಣ್ಣಾ, ನೀ ಬರ್ದ್ ಕವ್ನ ಸಿಕ್ಕಿದ್ದು, ಅರ್ಧ ಬರ್ದಿಟ್ಟ ಕಥೆ ಸಿಕ್ಕಿದ್ದು" ಅಂತ ಅವ್ಳು ಬೆಂಗಳೂರಿಗೆ ಬರೋವರೆಗೂ ಹೇಳುತ್ತಿದ್ದಳು. ಈ ಬರವಣಿಗೆ ಎಲ್ಲಿಗೆ ಹೋಗುತ್ತದೆ ಅನ್ನುವುದು ನಂಗೂ ಗೊತ್ತಿರಲಿಲ್ಲ.
ಇಂಟರ್ನೆಟ್ಟಿನಲ್ಲಿ ಜೀಮೇಲೂ,ಆರ್ಕುಟ್ಟು ಅಂತೆಲ್ಲ ಬಂದು, ನನ್ನ ಹಾಗಿದ್ದೇ ಇನ್ನೊಂದಿಷ್ಟು ಜನ ಹುಚ್ಚರ ಪರಿಚಯ ಆಯಿತು. ಚಾರಣ, ಹರಟೆ ಹೆಚ್ಚಿತು. ಯಾವುದೋ ಒಂದು ಭಯಂಕರ ಘಳಿಗೆಯಲ್ಲಿ ನಾವೊಂದಿಷ್ಟುಜನ ಸೇರಿ ಪುಸ್ತಕ ಯಾಕೆ ಬರೀಬಾರದು ಅನ್ನುವ ಆಲೋಚನೆ ಬಂತು. ತಿಂಗಳಾನುಗಟ್ಟಲೇ ತಪಸ್ಸಿನ ನಂತರ ನಾವು ಕಂಡ ಕನಸು ನನಸಾಗೋ ಸಮಯವೂ ಹತ್ತಿರ ಬರ್ತಿದೆ ಈಗ.
ನಾಡಿದ್ದು ಭಾನುವಾರ ಬೆಳಿಗ್ಗೆ, ನಾನು, ಅರುಣ, ಸುಶ್ರುತ, ಅನ್ನಪೂರ್ಣ ಮತ್ತು ಶ್ರೀನಿವಾಸ್ ಸೇರಿ ಬರೆದಿರುವ "ಚಿತ್ರ ಚಾಪ" ಪುಸ್ತಕದ ಬಿಡುಗಡೆ. ಪರಿಸರ ನಮ್ಮ ಪುಸ್ತಕದ ವಿಷಯ. ನಮ್ಮ ಕಣ್ಣಿಗೆ ಹೇಗೆ ಪ್ರಕೃತಿ ಕಂಡಿದೆಯೋ , ಹಾಗೆ ಬರೆದಿದ್ದೇವೆ. ಲಲಿತ ಪ್ರಬಂಧ, ಅನುಭವ ಕಥನ, ಚಾರಣದ ಟ್ರಾವೆಲಾಗು, ಕವನಗಳು - ಹೀಗೆ ಏನೇನೋ ಇವೆ, ಪರಿಸರದ ಬಗೆಗೆ.
ಬೆಂಗಳೂರಿನ ಬಸವನಗುಡಿಯ ಬಿ.ಪಿ ವಾಡಿಯಾ ರಸ್ತೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ, ನಮ್ಮ ಕನಸು "ಚಿತ್ರಚಾಪ" ನನಸಾಗ್ತಿದೆ. ನಮ್ಮೆಲ್ಲರ ಪ್ರೀತಿಯ ಲೇಖಕ ವಸುಧೇಂದ್ರ, ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ಕನ್ನಡದ ಹಿರಿಯ ವಿದ್ವಾಂಸ ಪ್ರೊ. ಜಿ.ವೆಂಕಟಸುಬ್ಬಯ್ಯನವರು ಪುಸ್ತಕ ಬಿಡುಗಡೆ ಮಾಡಿ ನಮ್ಮ ಬೆನ್ನು ತಟ್ಟುತ್ತಾರೆ. ನಮ್ಮ ಪುಸ್ತಕಕ್ಕೆ ಬೆಳಕಾಗಿರುವುದು "ಪ್ರಣತಿ ಪ್ರಕಾಶನ ". ಪ್ರಣತಿಯ ಉದ್ಘಾಟನೆಯೂ ಅಂದೇ.
ಫೆಬ್ರವರಿ ೧೦ ನೇ ತಾರೀಕು ಭಾನುವಾರ ಬೆಳಿಗ್ಗೆ ೧೦.೩೦ಕ್ಕೆ ನೀವೆಲ್ಲ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿರುತ್ತೀರಿ ಅನ್ನುವುದು ನಮ್ಮ ವಿಶ್ವಾಸ. ಬ್ಲಾಗುಗಳಲ್ಲೇ ಮಾತನಾಡುವುದು ಹೇಗೂ ಇದೆ. ಎಲ್ರೂ ಬನ್ನಿ , ಕೂತು ಮಾತಾಡೋಣ. ನಂಗೆ ಮತ್ತೇನು ಹೇಳಬೇಕು ಅಂತ ತೋಚುತ್ತಿಲ್ಲ.
31 ಕಾಮೆಂಟ್ಗಳು:
ಹಾರ್ದಿಕ ಅಭಿನಂದನೆಗಳು ಮತ್ತು ಶುಭಾಶಯಗಳು!
"ಚಿತ್ರಚಾಪ - ಪ್ರಕೃತಿಗೊಂದು ಕೃತಿ" ತಲೆಬರಹ ಸೊಗಸಾಗಿದೆ. ಹಾಗೆಯೇ ಮುಖಪುಟ ವಿನ್ಯಾಸ ಸಹ. ಚಾಪದ ಪ್ರತ್ಯೇಕ ಬಣ್ಣಗಳಿಗೂ ಅವುಗಳೆಲ್ಲ ಪ್ರತ್ಯೇಕವಾಗಿದ್ದೂ ಒಂದಾಗಿ ಚಾಪದ ರೂಪವಾಗಿರುವ ’ಪಟ್ಟಕ’ ಪ್ರಕ್ರಿಯೆಗೂ ಮತ್ತೊಮ್ಮೆ ವಂದನೆಗಳು, ಅಭಿನಂದನೆಗಳು!
Congratsಲೇ ದೋಸ್ತ.
ಶುಭವಾಗಲಿ! :-)
Btw, ಚಿತ್ರ ವಿನ್ಯಾಸ ಯಾರಿದ್ದು?
Namaskara,
Hearty Congragulations n all the very best in your new venture:-) The title name is unique.... n I am sure the book is good....Mathoome HarThika AbhiNandanegalu.....
Congrats!!!
ಶುಭಾಶಯಗಳು.. ;)
ಮುಖಪುಟ ಚೆನ್ನಾಗಿದೆ.. :D
Congrats and all the best!!
Cheers,
Archana
ಒಳ್ಳೆ ಸುದ್ದಿ ... ಎಲ್ಲರಿಗೂ ಶುಭವಾಗಲಿ
ನಾಲ್ವರಿಗೂ ನನ್ನ ಹಾರ್ದಿಕ ಅಭಿನಂದನೆಗಳು.
Cover page design is by Mr. Girish C.S. ಹಾಗೇ ಪುಸ್ತಕದೊಳಗೆ ರಾಘವೇಂದ್ರ ಹೆಗಡೆಯವರ ರೇಖಾಚಿತ್ರಗಳಿವೆ.
ನಿಧಿ,
ಅಭಿನಂದನೆಗಳು ಕನ್ನಡ ಪಂಡಿತರೆ.. :)
ಖುಷಿಯ ಸಮಯ. ಬರದೆ ಇರುತ್ತೇನೆಯೇ.
ನೀನು ಮತ್ತು ಗೆಳೆಯರಿಗೆಲ್ಲ ನನ್ನ ಶುಭಾಶಯ.
ನಿಮ್ಮ ಬರಹಗಳನ್ನೋದಿ ನಾವು ಓದುಗರ ಮನದಲ್ಲಿ ಇಂದ್ರಚಾಪ ಮೂಡುವುದರಲ್ಲಿ ಯಾವ ಸಂಶಯವೂ ಇಲ್ಲ.
ಪ್ರೀತಿಯಿಂದ
ಸಿಂಧು
Hallo
Wish you best of Luck.
Keep going.
Waiting for some more book releases from you.
ನಾಲ್ವರಿಗೂ ಒಳ್ಳೆಯದಾಗಲಿ, ಇನ್ನಷ್ಟು ಬರಹಗಳು ಪುಸ್ತಕಗಳಾಗಲಿ. ಪುಸ್ತಕ ಕೊಡುವ ಸೊಗಸು ಬೇರೇನೂ ಕೊಡದು ಎಂಬುದು ನನ್ನ ನಂಬಿಕೆ.
ನಾವಡ
ಶ್ರೀನಿಧಿ ಅವರೆ...
ಅಭಿನಂದನೆಗಳು.
"ಚಿತ್ರಛಾಪ" ಟೈಟಲ್ ತುಂಬಾ ಇಷ್ಟವಾಯ್ತು. ಐವರಿಗೂ ಶುಭಾವಗಲಿ. ಪುಸ್ತಕ ಮುಂಬರುವ ನಿಮ್ಮ ಪುಸ್ತಕಗಳಿಗೆ ದೀಪವಾಗಲಿ.
ಚಿತ್ರಛಾಪ ಸರಿಯಾದ ಶಬ್ದ ಅನ್ನಿಸ್ತು! ಒಂದು ಸಲ ಕಾಗುಣಿತ ಪರಿಶೀಲಿಸಿ . ಅದು ಹಾಗಿರಲಿ..ಅಭಿನಂದನೆ!
Congrats le dosta.. :)
anu ilde book release madta idde, banda mele nodkyatti :)
Book release cholo agli heli haraisutta ..
Cheers
Chin
ಅಭಿನಂದನೆಗಳು ಕಣ್ರಪ್ಪ..
ಅಂತೂ.. ಇಂತೂ.. ಒಂದು..
ಮುಖಪುಟ ಚೆನ್ನಾಗಿದೆ.. ನಿಮ್ಮಂತ - ನಮ್ಮಂತ ಎಲ್ಲಾ ಹುಡುಗರಿಗೂ.. ಇದು ಮಾದರಿಯಾಗಲಿ...
ಮತ್ತೊಮ್ಮೆ ಅಭಿನಂದನೆಗಳು...
ನಿಮ್ಮವ
-ವೀರೇಶ ಹೊಗೆಸೊಪ್ಪಿನವರ
ನಂಗೆ ಹಾಳಾದ ಇಂಟರ್ನಲ್ಸು. ಭಯಂಕರ missing it... however ಎಲ್ಲಾ ಚೆನ್ನಗ್ ಆಗ್ಲಿ
ನಾನಂತು ಬರ್ತೀನಿ ಮೊನ್ನೆ ಹೇಳಿದ್ದು ಮರಿಬೇಡ...... :)
Joshi sir,
Thanksu:)
Sandeepa,
Che! Nee ididre maja bartittu nodu!
Santhripthi,
Expecting u on tht day!:)
Hatwar,
Thank u saaar,
Anantha,
kRutajnathegaLu...
Archana,Shyaama,Tejaswini hegde,
Barbeku bhanuvaara!:)
Sindhu,
Ningentoo heLadille bidu:)
Sheshagiri sir,
Thanksoo, banni nadiddu..
NavaDare,
nimma maathu satya. PustakagaLu kodo majane bere! Banni... mataDona..
Shantala madam,
Thankz, bengloorige bandaaga sigi!
Gopi,
ಚಿತ್ರಛಾಪ alla, "ಚಿತ್ರಚಾಪ" ne sari.ಕಾಮನಬಿಲ್ಲು anta artha:)
chinmaya,
bega baro:)
Veeresh, thankz kanayya!
malnad hudgi,
pustka kaLsteevi bidu:)
Nischith,
heartly welcome:)
sorry ಶ್ರೀನಿಧಿ, ನಾನೂ ಸಹ "ಚಿತ್ರಛಾಪ" ಅಂತನೆ ಬರದ್ದಿ, "ಚಿತ್ರಚಾಪ" ಶಬ್ದದ ಅರ್ಥ ತುಂಬಾ ಇಷ್ಟ ಆತು, ಆದ್ರೆ ನನ್ನ ಈ ಪಾಲಿಗೆ ಶಬ್ದ ಹೊಸದು, so ಕಾಗುಣಿತ ತಪ್ಪಿದ್ದಿ ಅನಿಸ್ತು. ನಿಂಗಳ ಪುಸ್ತಕದ ಹೆಸರನ್ನೆ ಬದಲು ಮಾಡಿ ಬರ್ದಿದ್ದಕ್ಕೆ ಬೇಜಾರು ಮಾಡ್ಕ್ಯಳಡ. :)
all the best, shreenidhi... :-)
ತಡವಾಗಿ ಬಂದೆ.
ನಿಮ್ಮೆಲ್ಲರ ಹುರುಪಿಗೆ, ಉತ್ಸಾಹಕ್ಕೆ, ಒಳ್ಳೆಯ ಪ್ರಯತ್ನಕ್ಕೆ ಶುಭಾಶಯಗಳು. ಭಾನುವಾರದ ಬೆಳಗು ಇನ್ನೊಂದು ಹೊಸ ದಿಕ್ಕನ್ನು ಬೆಳಗಿಸಲಿ. ಕಾರ್ಯಕ್ರಮ ಯಶಸ್ವಿಯಾಗಲಿ. ನಿಮ್ಮನ್ನು ಪ್ರೋತ್ಸಾಹಿಸಿ ಬೆನ್ನು ತಟ್ಟಿದ್ದಕ್ಕಾಗಿ ವಸುಧೇಂದ್ರ ಅವರಿಗೆ ನನ್ನ ನಮಸ್ಕಾರಗಳನ್ನೂ ವಂದನೆಗಳನ್ನೂ ತಿಳಿಸಿ.
modalige ellarigu shubhashayagalu...nimma e baravanigeya saahasakke modalakruti bidugadeyaguttide..idu hige munduvareyali anta haaraike..
NiTiN hegde muttige
congrats shrinidhi. but i cant come. nan friendsge helthini. chennagi nadili.
karyakramakke bandu bennu tattida ellarigoo navu abhaarigaLu.
http://www.baanuli.com/topheading.php?catid=4&id=1291
ಪುಸ್ತಕ ಬಿಡುಗಡೆಯಾಗಿದ್ದಕ್ಕೆ ಅಭಿನಂದನೆಗಳು....
ಶ್ರೀ ನಿಧಿ,
ಅಭಿನಂದನೆಗಳು !
ಚಿತ್ರಚಾಪ ನಾವು ಹೇಗೆ ಪಡೆಯಬಹುದೆಂದು ತಿಳಿಸಿ
'ಚಿತ್ರಚಾಪ’ ಹೆಸರು ಮತ್ತು ಮುಖಪುಟ ಎರಡೂ ಚೆನ್ನಾಗಿವೆ.
ಕಾಮೆಂಟ್ ಪೋಸ್ಟ್ ಮಾಡಿ