ಮಂಗಳವಾರ, ಫೆಬ್ರವರಿ 26, 2008

ಹೀಗೊಂದು ಬೆಳಗು

ಕಾರ್ತಿಕದ ಹೊಸ ಬೆಳಗು, ಚಳಿಯು ಬಹಳಿತ್ತು
ದೇಗುಲದ ಘಂಟೆ ತಾನ್ ಇನ್ನು ಮಲಗಿತ್ತು.
ಅವಳಾಗಲೇ ಎದ್ದು ಅಂಗಳದಲಿದ್ದಳು
ರಂಗೋಲಿ ಚುಕ್ಕಿಯಲಿ ತಾನೆ ಚಿತ್ರವಾಗಿದ್ದಳು

ಅದಾವುದೋ ಭಂಗಿಯಲಿ ಕಟೆದಿಟ್ಟ ಹಾಗೆ,
ಕೂತಿದ್ದಳವಳು, ಇಳಿದು ಬಂದಂತೆ ಸೊಬಗೆ.
ಕೈಬೆರಳುಗಳೋಡುತಿವೆ, ಸೇರಿಸಲು ಬಂಧ
ಕಣ್ಣಾಲಿಗಳ ಚಲನೆ, ರಂಗವಲ್ಲಿಗೂ ಚಂದ

ಅಂಗಳದೊಳಿಂಗುತಿದೆ ರಾತ್ರಿಯಾ ಮಳೆನೀರು
ಮಂಗಳದ ರಂಗೋಲಿ ಒದ್ದೆ ನೆಲದಿ.
ಕಾಡಂಚಿನಾ ಮನೆಯು, ತಣ್ಣನೆಯ ಮೆಲುಗಾಳಿ
ಹಾಡುತಿದೆ ವನಪಕ್ಷಿ, ಹಸಿರಿನೊಳಗಿಂದ

ಚಿತ್ರದೊಳಗಡೆಯಿಂದ ಮೆಲ್ಲನೆದ್ದಳು ಅವಳು
ಮೊಗದೊಳಗೆ ತೃಪ್ತಿಗೆರೆ, ಏನೋ ಅನಂದ.
ಬಣ್ಣಬಟ್ಟಲ ಜೊತೆಗೆ, ಸೀರೆಯಂಚನು ಹಿಡಿದು
ನಡೆದು ಹೋದಳು ಆಕೆ ಎಳೆಬೆಳಕಿನೊಳಗೆ

ಮಿದುನೆಲದ ಮಣ್ಣಲ್ಲಿ ಪಾದಪದ್ಮಗಳ ಅಚ್ಚಿತ್ತು
ರಂಗವಲ್ಲಿಯ ಜೊತೆಗೆ ಸ್ಪರ್ಧೆಗಿಳಿದಂತೆ.
ದೂರಲೋಕದ ಸಿರಿಯು, ಎದ್ದು ಹೋದಂತಿತ್ತು
ಹೆಜ್ಜೆಗುರುತುಗಳನ್ನು ಇಲ್ಲೇ ಬಿಟ್ಟು.

31 ಕಾಮೆಂಟ್‌ಗಳು:

Sandeepa ಹೇಳಿದರು...

ಅದ್ಬುತ!!

Archu ಹೇಳಿದರು...

too...good :)
cheers,
archana

ಅನಾಮಧೇಯ ಹೇಳಿದರು...

Hinge serial aagi niddgeTTu bareyo nim kavithegaLige vasthu agidaaLe andre nijakku paapa maDidaaLe avLu! :)

ಅಮರ ಹೇಳಿದರು...

ಸೂಪರ್ ಕಣೋ .... ಚಲೋ ಐತಿ!!!
-ಅಮರ

Lakshmi Shashidhar Chaitanya ಹೇಳಿದರು...

ಸಖತ್ತಾಗಿದೆ !!

VENU VINOD ಹೇಳಿದರು...

ದನಿ, ಯಾಪದ ಲೆಕ್ಕನೇ ಉಂದುಲಾ ಭಾರಿ ಎಡ್ಡೆ ಉಂಡು...
ಬರೆಲೆ ಬರೆಯೋಂದಿಪ್ಪುಲೆ :)

chethan ಹೇಳಿದರು...

thumba chennaagide. ishtavaitu.

ಸಿಂಧು sindhu ಹೇಳಿದರು...

ನಿಧಿ,

ತುಂಬ ಚೊಲೋ ಇದ್ದು.
ಕಾಡಂಚಿನಾ ಮನೆಯ ಒದ್ದೆ ಅಂಗಳ, ರಂಗೋಲಿ ಚಿತ್ತಾರ, ಹಕ್ಕಿಗೊರಳು, ಮತ್ತೆ ನಿನ್ನ ಕಾಡುವ ಸಾಲುಗಳು..
ಬಣ್ಣಬಟ್ಟಲ ಜೊತೆಗೆ, ಸೀರೆಯಂಚನು ಹಿಡಿದು
ನಡೆದು ಹೋದಳು ಆಕೆ ಎಳೆಬೆಳಕಿನೊಳಗ... ಸಕ್ಕತ್ ಕಣೋ.

ಪ್ರೀತಿಯಿಂದ
ಸಿಂಧು

Srikanth - ಶ್ರೀಕಾಂತ ಹೇಳಿದರು...

siksikkaapatte chennaagide!! sooper-u!

Malenadiga ಹೇಳಿದರು...

ಸರಳತೆಯೇ ಮೈತಳೆದಂತಿದೆ.ಕಲ್ಪನೆಯ ಹಾದಿಯಲ್ಲಿ ತೇಲುವ ನಿನ್ನ ಸಾಲುಗಳು ಮನವನ್ನು ಆವರಿಸಿಬಿಡುತ್ತದೆ. ಚೆನ್ನಾಗಿದೆ ಕವನ

ಅನಾಮಧೇಯ ಹೇಳಿದರು...

ಕವಿತೆ ತುಂಬಾ ಚೆನ್ನಾಗಿದೆ. ಕೆ.ಎಸ್.ನ.ವಿಲ್ ಬರೆದು ನಿಮ್ಮನ್ನು ವಾರಸುದಾರರಾಗಿಸಿದ್ದಾರಾ ಹೇಗೆ? :)


ಅದಿರಲಿ, ನಿಮ್ಮ ಚೆಲುವೆಗೆ ಚಳಿಯಲ್ಲೂ ಬೆಚ್ಚಗೆ ಹೊದ್ದು ಮಲಗಲು ಬಿಡೋದಿಲ್ಲವಲ್ಲಾ ನೀವು. ಕಾರ್ತೀಕದ ಚಳಿಯಲ್ಲೂ ಬೇಗ ಎದ್ದು ರಂಗವಲ್ಲಿ ಹಾಕಲೇಬೇಕು! - ನನ್ನಿಂದಂತೂ ಆಗದ ಕೆಲಸ ಇದು . :)

Sushrutha Dodderi ಹೇಳಿದರು...

ನಿನ್ನ ಕವಿತೆಗಳಿಂದಾಗಿ ಬೆಳಗುಗಳು ಇನ್ನಷ್ಟು ಚಂದವಾಗುತ್ತಿವೆ. ಸೂಪರ್ ಮಗಾ!

Annapoorna Daithota ಹೇಳಿದರು...

Wow !!

Keshav.Kulkarni ಹೇಳಿದರು...

ಮಿದುನೆಲದ ಮಣ್ಣಲ್ಲಿ ಪಾದಪದ್ಮಗಳ ಅಚ್ಚಿತ್ತು
ರಂಗವಲ್ಲಿಯ ಜೊತೆಗೆ ಸ್ಪರ್ಧೆಗಿಳಿದಂತೆ.

ತುಂಬ ಸುಂದರ ಸಾಲುಗಳು. ಎಷ್ಟೊಂದು ಸುಂದರ ಕವಿತೆಗಳು ಬ್ಲಾಗುಗಳಲ್ಲಿ ನಾನು ಈಗೀಗ ಓದುತ್ತಿದ್ದೇನೆಂದರೆ ನಾನು ನವೋದಯ ಕಾಲದ ರೋಮ್ಯಾಂಟಿಸಂ ನಲ್ಲಿ ವಿಹರಿಸುತ್ತಿದ್ದೇನೆ ಎನಿಸುತ್ತಿದೆ.

ಥ್ಯಾಂಕ್ಸ್!

ಕೇಶವ (www.kannada-nudi.blogspot.com

Unknown ಹೇಳಿದರು...

Dosta.... superragiddu..... Nice one.... Cooool....

ಸುಪ್ತದೀಪ್ತಿ suptadeepti ಹೇಳಿದರು...

ಚೆನ್ನಾಗಿದೆ ಮರೀ. ಒಂದಿಷ್ಟು ಲಯದ ಮೇಲೆ ಕುಸುರಿ ಮಾಡಿ ತಾಳಕ್ಕೆ ಹೊಂದಿಸಿ ಹಾಡಿಸು.

ನಿನಗೂ ತುಳು ಬರ್ತದಾ?

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ಶ್ರೀ ನಿಧಿ...
ರಾಗ-ತಾಳಗಳ ಜೊತೆ ಸೇರಿಬಿಟ್ಟರೆ ಉಯ್ಯಾಲೆಯಲ್ಲಿ ತೇಲಿಸಬಲ್ಲ ಸಾಲುಗಳು.
ಮಂಗಳದಂಗಳದ ರಂಗೋಲೆಯಲಿ ಕಂಡವಳು ಹೆಜ್ಜೆ ಬಿಟ್ಟು ಅಚ್ಚೊತ್ತಿ ನಡೆದ ರೀತಿ...
ಹೆಜ್ಜೆ ಕಾಣ ಬಂದವರಲ್ಲೆಲ್ಲ ಅಚ್ಚೊತ್ತಿಬಿಡುವ ಹಾಗಿದೆ.
ಹೊಗಳಿದಷ್ಟೂ ಸಾಲದು ಹೊಳೆವ ಸಾಲುಗಳನ್ನ.

ಶ್ರೀನಿಧಿ.ಡಿ.ಎಸ್ ಹೇಳಿದರು...

ಸಂದೀಪ,

ಹೌದನಾ! ತೀರಾ ಹಾಂಗೆ ಒಂದೇ ಶಬ್ದ ಬರದ್ರೆ ಸ್ವಲ್ಪ್ ಡೌಟ್ ಬತ್ತು:)

ಅರ್ಚನಾ,

ಥ್ಯಾಂಕ್ಸು:)

ಶ್ರೀ,
ಏನೋ, ಬರಿಯೋ ಮೂಡ್ ಬಂತಪ್ಪಾ... ಅಷ್ಟಕ್ಕೂ, ಅವಳು ಪಾಪ ಮಾಡಿದಾಳೆ ಅಂತ ಯಾಕಂತೀರಿ! ನಿದ್ರೆ ಬಿಟ್ಟ್ "ಅವಳ" ಮೇಲೆ ಕವನ ಬರೀತೀನಿ ಅಂದ್ರೆ ಪುಣ್ಯ ಮಾಡಿದಾಳೆ ಅವಳು!:)

ಶ್ರೀನಿಧಿ.ಡಿ.ಎಸ್ ಹೇಳಿದರು...

ಅಮರ,
ಥ್ಯಾಂಕ್ಸಲೇ ದೊರೇ!

ಲಕ್ಷ್ಮೀ,

ಹಂಗಂತೀರಾ?:)

ಶ್ರೀನಿಧಿ.ಡಿ.ಎಸ್ ಹೇಳಿದರು...

ವೇಣು,
ನಿಕಲ್ನ ಮಾತ ಆಶೀರ್ವಾದ!:) ಬರೆಯೊಂದುಪ್ಪುವೆ...

ಚೇತನ್,

ಧನ್ಯವಾದ.. ನಿಮ್ಮ ಬ್ಲಾಗು ಚೆನ್ನಾಗಿದೆ! ನೀವೂ ಚಾರಣಿಗರು ಅಂತ ತಿಳಿದು ಖುಷಿಯಾಯಿತು.

ಸಿಂಧು ಮ್ಯಾಡಮ್,

ತೀರ ನಿನ್ನಷ್ಟೆಲ್ಲ ಚೊಲೋ ಬರಿಯಲೆ ಬರದಿಲ್ಲೆ:)ನಿನ್ನ ಪ್ರೀತಿಗೆ ಏನ್ ಹೇಳ್ಲಿ?.. ಬೆನ್ ತಟ್ಟಿದ್ಕೆ ಚಾಕ್ಲೇಟು!:)

ಶ್ರೀನಿಧಿ.ಡಿ.ಎಸ್ ಹೇಳಿದರು...

ಶ್ರೀಕಾಂತ್,
ತುಂಬ್ ತುಂಬಾ ಧನ್ಯ!

ಮಲೆನಾಡಿಗ,
ಏನೋ ಬರೆದಿದ್ದೇನೆ.. ಸುಮ್ನೆ, ತೋಚಿದ್ದನ್ನ ಬರೀತ ಹೋದೆ ಹಾಗೆಯೆ.ನಿಮ್ಮ ಪ್ರೀತಿಗೆ ಋಣಿ.

ತ್ರಿವೇಣಿ ಮೇಡಮ್,
ವಿಲ್ಲೂ ಇಲ್ಲ ಮಣ್ಣೂ ಇಲ್ಲ! ಅವ್ರ್ ಹೆಸ್ರೆಲ್ಲ ಹೇಳ್ಬೇಡಿ ಹೆದ್ರಿಕೆ ಆಗತ್ತೆ! ಚೆಲುವೆ ಆದ್ ಮೇಲ್ ಮುಗ್ದೇ ಹೋಯ್ತು, ಕವಿ ಕಲ್ಪನೆಕ್ ಸಿಕ್ಕಿ ಒದ್ದಾಡ್ಬೇಕು:) ಬೇಗ ಏಳ್ಸೋದು, ಚಳಿಲ್ ನಡ್ಗ್ಸೋದು.. ಪಾಪ!

ಶ್ರೀನಿಧಿ.ಡಿ.ಎಸ್ ಹೇಳಿದರು...

ಸುಶ್,

ಎಂತಲೇ ಈ ಪರಿ ಎಲ್ಲ ಹೇಳ್ತಾ ಇದ್ದೆ:)ಲವ್ಯೂ..

ಅನ್ನಪೂರ್ಣ,

ಥ್ಯಾಂಕ್ಸಕ್ಕಾ...


ಕೇಶವ್ ಕುಲಕರ್ಣಿಗಳೇ,
ನವೋದಯ ಕಾಲದ ರೋಮ್ಯಾಂಟಿಸಂ! ಏನೋಪಾ!:)

ಶ್ರೀನಿಧಿ.ಡಿ.ಎಸ್ ಹೇಳಿದರು...

ಮಹೇಶಾ,
ಥ್ಯಾಂಕ್ಸಲೇ ದೋಸ್ತಾ!!

ಹರಿವ ಲಹರಿಯವರೇ,

ನಾನು ಲಯ ಬಿಟ್ಟು ಕವನ ಬರಿಯೋದು ಬಹಳಾ ಕಡಿಮೆ. ಹಾಡೋ ತರದ್ದೇ ಬರ್ದಿರ್ತೇನೆ. ಈ ಸಲ ಕೊನೆಯ ೨ ಪ್ಯಾರಗಳಲ್ಲಿ ಲಯ ಬಿಟ್ಟು ಹೋಗಿವೆ, ಬರೀವಾಗ್ಲೇ ಗೊತ್ತಿತ್ತು.. . ಗಮನಿಸಿದ್ದಕ್ಕೆ ಥ್ಯಾಂಕ್ಸ್! ಇನ್ನು ಹಾಡಿಸೋ ಮಾತು, ನೋಡೋಣ ಆ ಕಾಲವೂ ಮುಂದೆಂದಾದರೂ ಬಂದೀತೇ ಅಂತ!

ಶಾಂತಲಾಜೀ,
ಏನು ಹೇಳಲಪ್ಪಾ! ಬರೀವಾಗ ಸುಮ್ನೆ ಏನೋನೋ ಬರ್ದು ಬಿಟ್ಟಿದಿನೇನೇನೋ ಅಂತ ಹೆದ್ರಿಕೆ ಆಗಿರತ್ತೆ!

Parisarapremi ಹೇಳಿದರು...

ಏನಲ್ಲಾ ಅಂದ್ರೂ ಸುಮಾರು ಹತ್ತು ಸಲ ಓದಿ ಆಯ್ತು ನೆನ್ನೆಯಿಂದ! :-)

ಆದ್ರೂ, ಮೊನ್ನೆ ಫೋನ್ ಮಾಡಿ ನೀನು ಓದ್ಬಿಟಿದ್ದಿದ್ರೆ ಈ ಕಮೆಂಟನ್ನು ಇಲ್ಲಿ ಬರೆಯಲು ಸಾಧ್ಯ ಇರುತ್ತಿರಲಿಲ್ಲ ನೋಡು.

ತನ್ ಹಾಯಿ ಹೇಳಿದರು...

ಹೆಜ್ಜೆ ಗುರುತುಗಳನ್ನು ಇಲ್ಲೇ ಬಿಟ್ಟು..
ಆಹ್.. ಚಂದ ಕವನ..

ರಂಜನಾ ಹೆಗ್ಡೆ ಹೇಳಿದರು...

ಶ್ರೀ,
ಅವಳು, ಅವಳ ಪಾದ ಅದು ಎಷ್ಟು ಚಂದ ಇದ್ದಿಕ್ಕೋ ಮರಾಯಾ.
ಸುಪರ್ ಆಗಿದ್ದು ಕವನ.ಸುಪರ್ ಅಂದ್ರೆ ಸುಪರ್

ಶ್ವೇತ ಹೇಳಿದರು...

ಕವನದ ಕಲ್ಪನೆಯೊಂದಿಗೆ comment ಸಾಲುಗಳೂ ಅದ್ಭುತ..!!!

ತೇಜಸ್ವಿನಿ ಹೆಗಡೆ ಹೇಳಿದರು...

ಶ್ರೀನಿಧಿ

ರಾಶಿನೇ ಚೊಲೋ ಬಂಜು ಕವನ. ನನ್ನ ‘ಹೆಜ್ಜೆಗಳು’ ಕವನಕ್ಕೆ ಉತ್ತರ ಸಿಕ್ಕಿದ್ದು. ‘ಯಾರ ಹೆಜ್ಜೆಗುರುತುಗಳು’ ಹೇಳಿ ಈಗ ತಿಳೀತು ಬಿಡು... ;-) Very nice poem

ಭಾವನೆಗಳಿಗೆ ಜೀವ ತುಂಬುತ್ತ... ಹೇಳಿದರು...

super boss... who is that..?

Unknown ಹೇಳಿದರು...

tumba dinagaLa nantra nimma blog odo avakasha sigtu, tumba khushi aytri odi. hige barita iri

ಅನಾಮಧೇಯ ಹೇಳಿದರು...

ಅದಾವುದೋ ಭಂಗಿಯಲಿ ಕಟೆದಿಟ್ಟ ಹಾಗೆ,
ಕೂತಿದ್ದಳವಳು, ಇಳಿದು ಬಂದಂತೆ ಸೊಬಗೆ.
ಕೈಬೆರಳುಗಳೋಡುತಿವೆ, ಸೇರಿಸಲು ಬಂಧ
ಕಣ್ಣಾಲಿಗಳ ಚಲನೆ, ರಂಗವಲ್ಲಿಗೂ ಚಂದ..

ಎಷ್ಟು ಚಂದ ಬರ್ದಿದ್ದೀಯೊ?..ರಂಗವಲ್ಲಿ ಯಾರಾದ್ರು ಹಾಕ್ತ ಇದ್ದಿದ್ದನ್ನ ಕದ್ದು ನೊಡಿದೆಯೋ ಹೇಗೆ ಕಳ್ಳ?