ಬುಧವಾರ, ಜುಲೈ 23, 2008

ಒಂದು ಮಳೆ ನಿಂತ ಮಧ್ಯಾಹ್ನ..

ಒಂದು ಮಳೆ ನಿಂತ ಮಧ್ಯಾಹ್ನ
ಅವಳು ಸಿಕ್ಕಳು, ಅನಿರೀಕ್ಷಿತವಾಗಿ
ಆಗ ತಾನೆ ಬಂದ ಮಳೆಯಂತೆ.

ಮಾತಾಡಲಿಲ್ಲ ಇಬ್ಬರೂ, ಘಳಿಗೆ
ಅವಳ ಕಣ್ಣಲ್ಲಿ ನೀರು ಕಂಡಂತಾಯಿತು
ಘಟಿಸಿದ ಭೂತಕ್ಕೆ ಶ್ರದ್ಧಾಂಜಲಿಯೆಂಬಂತೆ

ಹೊರಟೆವು ಮುಂದೆ, ಮಾತೇನೂ ಆಡದೆ
ಹೊರಡುವ ಮುನ್ನ ಅವಳ ಕೈ ಸೋಕಿತು
ಕಳೆದ ದಿವ್ಯಗಳ ಕೊನೆ ಝಲಕಂತೆ

ನಾಲ್ಕೆಂಟು ಹೆಜ್ಜೆಗಳಾದ ಮೇಲೆ ತಿರುಗಬೇಕೆನಿಸಿತು
ತಿರುಗಲಿಲ್ಲ, ಏನೂ ಘಟಿಸದು, ಗೊತ್ತು..ಆದರೂ,
ಅವಳ ಬೆನ್ನು ನೋಡುವ ಧೈರ್ಯವಿಲ್ಲ.

18 ಕಾಮೆಂಟ್‌ಗಳು:

ಜಿ ಎನ್ ಮೋಹನ್ ಹೇಳಿದರು...

tumba chennaagide
namma bhootakalakkoo kannadi hidiyabedi
-g n mohan

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ಶ್ರೀನಿಧಿಯವರೆ...

‘ಮಳೆ ನಿಂತ ಮಧ್ಯಾಹ್ನ’ ಈ ಸಾಲಿನಲ್ಲೇ ಎಷ್ಟೊಂದು ಕಲ್ಪನೆ, ಕನಸು,ಅನುಭವ, ನೆನಪುಗಳಿರುತ್ತವೆ.

ಬೆನ್ನುತಿರಿಗಿಸಿ ನೋಡಲಾಗದ ಗತಕಾಲ, ಅವಳ ಚಿತ್ರಣ ಎಲ್ಲವೂ ಸಹಜ ಸುಂದರ ಹೆಣಿಕೆಯಲಿ. ತುಂಬ ಇಷ್ಟವಾಯ್ತು.

Sree ಹೇಳಿದರು...

ಬೂಟಿಫುಲ್ಲು!:)

Vijaya ಹೇಳಿದರು...

:-) rejection na oppikollodu kashta ... tumba chennagi helideeya adanna.

jomon varghese ಹೇಳಿದರು...

ಹ್ಹ ಹ್ಹ... ಚೆಂದದ ಕವಿತೆ.

ಶ್ವೇತ ಹೇಳಿದರು...

Nice.... :-)

ಅನಾಮಧೇಯ ಹೇಳಿದರು...

simply superb...... ಅಷ್ಟೇ ಹೇಳಿದರೆ ಮಾತು ಕಡಿಮೆ ಆದೀತೇನೋ..... ಮಾನಸಿಕ ಭಾವನೆಗಳ ಪ್ರಾಕ್ಕೃತಿಕ ಹೋಲಿಕೆಯ ಸೂಕ್ಷ್ಮ ಚಿತ್ರಣ ಸೊಗಸಾಗಿ ಮೂಡಿಬಂದಿದೆ. ನಿಂತ ಮಳೆ ಹನಿ ಕಣ್ಣಲ್ಲಿ ಜಿನುಗಿದ ನೀರು ಎರಡರ ಸಾಮ್ಯತೆ - very brilliant thought. ಒಟ್ಟಾರೆಯಾಗಿ ಒಂದು ಅನಿರೀಕ್ಷತೆ, ಸಂತಸ, ಮಾನಸಿಕ ತೊಳಲಾಟ practicalness- ಅದರ depth ಎಲ್ಲವನ್ನು ಸೂಜಿಗೆ ಪೋಣಿಸಿ ಹೊಲೆದ ಸುಂದರ ಚಿತ್ತಾರ...

Unknown ಹೇಳಿದರು...

chennagide sreenidhi.... title is very apt...

Parisarapremi ಹೇಳಿದರು...

neenu gaaLi aanjaneyana taayata kaTsko... ;-)

ಅಂತರ್ವಾಣಿ ಹೇಳಿದರು...

tumbaa sundaravaada kavana

VENU VINOD ಹೇಳಿದರು...

ನಾಲ್ಕೆಂಟು ಹೆಜ್ಜೆಗಳಾದ ಮೇಲೆ ತಿರುಗಬೇಕೆನಿಸಿತು
ತಿರುಗಲಿಲ್ಲ, ಏನೂ ಘಟಿಸದು, ಗೊತ್ತು..ಆದರೂ,
ಅವಳ ಬೆನ್ನು ನೋಡುವ ಧೈರ್ಯವಿಲ್ಲ.

superro superu :)

Unknown ಹೇಳಿದರು...

ಭಲೇ....

ಮಳೆಯಲ್ಲಿ ನಿಂತ ಮಧ್ಯಾಹ್ನವನ್ನ
'ಅವಳು' ಹೋದ್ಲಲ್ಲಾ,
ಈಗ್ಲಾದೂ ಕೂಡ್ಸೋ ದೊರೇ.. :)

mruganayanee ಹೇಳಿದರು...

ನಿ ಅವತ್ತು ಓದಿ ಹೇಳಿದ್ದನ್ನ ರೆಕಾರ್ದ್ ಮಾಡ್ಕಂಡ್ ಇದ್ದೆ. ಅದ್ನ ನಮ್ floorನಲ್ಲಿರೊರ್ಗೆಲ್ಲಾ ಕೆಳಿಸಿ ಕೇಳಿಸಿ, ನಮ್ ಹಾಸ್ಟಲ್ನಲ್ಲಿ ಫುಲ್ famous ನೀನು.... ದಿವ್ಯ ತಲೆನೋವಿಲ್ಲದೆ ಓದಿ ಮತ್ತೆ ಖುಷಿಯಾಯಿತು... :-)

Unknown ಹೇಳಿದರು...

srinidi nimma kavana chennagide idu nemma kalpaneyo nijavo guthilla but manasige thatuvathide

Lakshmi Shashidhar Chaitanya ಹೇಳಿದರು...

ನಾಲ್ಕೆಂಟು ಹೆಜ್ಜೆಗಳಾದ ಮೇಲೆ ತಿರುಗಬೇಕೆನಿಸಿತು
ತಿರುಗಲಿಲ್ಲ, ಏನೂ ಘಟಿಸದು, ಗೊತ್ತು..ಆದರೂ,
ಅವಳ ಬೆನ್ನು ನೋಡುವ ಧೈರ್ಯವಿಲ್ಲ.

sakhath andhre sakkhath linegaLu !
aadru...nimge dhairya irlilla annodanna nambodu salpa kashta ;-) arun heLida haage taayta kaTTiskoLLi, help aagabhudeno ! ;-)

ಹರೀಶ್ ಕೇರ ಹೇಳಿದರು...

Real poetry in last lines.
-Harish Kera

ಅನಾಮಧೇಯ ಹೇಳಿದರು...

ನಮಸ್ತೇ,
ಬರುವ ಸೋಮವಾರ ಹದಿನೆಂಟನೆ ತಾರೀಖು ಸಂಜೆ ಆರು ಗಂಟೆಗೆ, ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ ನಲ್ಲಿ ನನ್ನ ಪುಸ್ತಕ ‘ಭಾಮಿನಿ ಷಟ್ಪದಿ’ ಬಿಡುಗಡೆಯಾಗಲಿದೆ.
ಅವತ್ತು ಪ್ರೊ. ವಿವೇಕ್ ರೈ, ಜಿ.ಪಿ.ಬಸವ ರಾಜು ಅವರು ವೇದಿಕೆಯಲ್ಲಿರುತ್ತಾರೆ. ಗೆಳತಿ, ಬರಹಗಾರ್ತಿ ಟೀನಾ ಪುಸ್ತಕದ ಬಗ್ಗೆ ಮಾತನಾಡುತ್ತಾಳೆ. ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿ ಅವತ್ತು ನೀವು ಇರುತ್ತೀರಿ.
‘ಸೋಮವಾರ’ ಇತ್ಯಾದಿ ಯಾವ ನೆವವನ್ನೂ ಹೇಳದೆ ಅಂದಿನ ಕಾರ್ಯಕ್ರಮಕ್ಕೆ ನೀವು ಬಂದರೆ ನನಗೆ ಬಹಳ ಬಹಳ ಖುಷಿಯಾಗುತ್ತದೆ.
ಖಂಡಿತ ಬರಲೇಬೇಕು.

ನಿಮಗಾಗಿ ಕಾದಿರುತ್ತೇನೆ.

ಪ್ರೀತಿಯಿಂದ,
ಚೇತನಾ ತೀರ್ಥಹಳ್ಳಿ

Unknown ಹೇಳಿದರು...

chandada kavite.