ತುಂತುರು ಹನಿಗಳು ಎರಡು ವರ್ಷ ಪೂರೈಸಿದೆ. ನಾನು ಬ್ಲಾಗು ಆರಂಭಿಸಿದಾಗ ಇಷ್ಟು ದೂರ ಪಯಣಿಸುತ್ತೇನೆ ಅಂದುಕೊಂಡಿರಲಿಲ್ಲ. ಪ್ರಾಮಾಣಿಕವಾಗಿ ಹೇಳಬೇಕಂದರೆ,ಬ್ಲಾಗು ಶುರು ಮಾಡಬೇಕು ಅನ್ನುವ ಉದ್ದೇಶವೂ ನನಗಿರಲಿಲ್ಲ. ಗೆಳೆಯ ಚಿನ್ಮಯ ತಲೆ ತಿಂದೂ ತಿಂದೂ, ಒಂದು ದಿನ ಬ್ಲಾಗು ಆರಂಭಿಸಿದೆ. ಆವಾಗ ಸಾಫ್ಟ್ ವೇರ್ ಕಂಪನಿಯಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆ. ಈಗ ಮಾಧ್ಯಮ ಜಗತ್ತಿನಲ್ಲಿದ್ದೇನೆ.
ಮಧ್ಯ ಬರೆಯುವುದನ್ನು ಸ್ವಲ್ಪ ಕಾಲ ನಿಲ್ಲಿಸಿದ್ದೆ. ಆದರೆ ಚಟ ಬಿಡಬೇಕಲ್ಲ, ಮತ್ತೆ ಎಳೆದುಕೊಂಡು ಬಂತು, ಇಲ್ಲಿಗೇ.
ಬ್ಲಾಗ್ ಬಂಧುಗಳಿಂದ ಅದೆಷ್ಟೋ ಕಲಿತಿದ್ದೇನೆ ಕಳೆದೆರಡು ವರುಷಗಳಿಂದ. ನನ್ನ ಕವನಗಳನ್ನ, ನೀವು ಬರಹಗಳನ್ನ ಸಹಿಸಿಕೊಂಡಿದ್ದೀರಿ,ಮೆಚ್ಚಿಕೊಂಡಿದ್ದೀರಿ. ತಪ್ಪಿದ್ದರೆ ಗದರಿದ್ದೀರಿ, ತಿದ್ದಿದ್ದೀರಿ, ನಿಮಗೆಲ್ಲ ನಾನು ಕೃತಜ್ಞ. ಈ ಬ್ಲಾಗು ಅದೆಷ್ಟೋ ಸ್ನೇಹಿತರುಗಳನ್ನ ಕೊಟ್ಟಿದೆ ನಂಗೆ. ಅದೆಷ್ಟೋ ಹೊಸ ವಿಷಯಗಳನ್ನ ಬ್ಲಾಗು ಲೋಕದಿಂದ ತಿಳಿದುಕೊಂಡಿದ್ದೇನೆ.
ಈ ಪಯಣ ಹೀಗೇ ಸಾಗುತ್ತಿರಲಿ.. ಮತ್ತೊಮ್ಮೆ, ಥ್ಯಾಂಕ್ಸ್.
20 ಕಾಮೆಂಟ್ಗಳು:
ತುಂತುರು ಹನಿಗೆ ಎರಡು ವರ್ಷ ಆಗಿರುವ ಸಂಭ್ರಮಕ್ಕೇ ಅನ್ನಿಸುತ್ತೆ ಆ ಪಾಟಿ ಮಳೆ!! :-)
ಬರೀತಿರಯ್ಯಾ, ನಿರಂತರವಾಗಿ.. ನಾವು ಓದ್ತಾ ಇರ್ತೀವಿ... :-)
ನಿಂಗೆ ನಾನು ಅಭಿನಂದನೆಗಳ ಜೊತೆ ಥ್ಯಾಂಕ್ಸ್ ಕೂಡ ಹೇಳ್ಬೇಕು.
ಬರೀತಿರು... :)
ಶುಭಾಶಯ!
ತುಂತುರು ಹನಿಗಳು ಸುರಿಯುತ್ತಲೇ ಇರಲಿ...
ಶುಭಾಶಯ ! ಹೀಗೆ ಸಾಗುತ್ತಿರಲಿ ನಿಮ್ಮ ಬರಹ. [ ಈವಾಗೇನಾದ್ರೂ ಬರ್ಯೋದನ್ನ ನಿಲ್ಲಿಸಿದ್ರೆ ನಾವ್ ಸುಮ್ನಿರಲ್ಲ ಅಂತ ಸಪರೇಟ್ ಆಗಿ ಹೇಳಬೇಕಿಲ್ಲ ಅಲ್ವ ?;-) ]
ಶ್ಶೆ, ಎರಡು ವರುಷವಾ?! ತಲೆ ಹಾಳಾಯಿತು;
ನಾನೆಷ್ಟು ಹಿಂದೆ ಇದ್ದೇನೆಂದು ಗೊತ್ತಾಗಿ.
ಆದರೂ ಅಭಿನಂದನೆ ಹೇಳದಿದ್ರೆ ಕೆಟ್ಟವನಾಗ್ತೇನೆ ಅಂತ ಹೆದ್ರಿಕೆಯಾಗಿ
ಶುಭಾಶಯ, ಶುಭಾಶಯ, ಶುಭಾಶಯಾ...
ellarigoo thanksoo:)
Nimma bare eradu kavna odide! Kaleduhogibitte!
Matte oduvanthe mado takattu nimma aksharagaligide! Adbhutavaagi barediddeera!!!
Sowmya
abhinandanegalu.....heege barithaa iri........
ಕಂಗ್ರ್ಯಾಟ್ಸು:) ತುಂತುರು ಹಾಡು ಹೀಗೇ ಬರ್ತಾ ಇರಲಿ:)
ಹಾರ್ದಿಕ ಅಭಿನಂದನೆಗಳು. ತುಂತುರು ಹನಿಗೆ ಶುಭಾಶಯಗಳು :)
hey ... congrats ... besht of luck!! haage nange barkodbekaaddannoo swalpa barkotre ... olledu :-)
heege bareetiru ... namge khushi odokke!!
ಹೀಗೆ ಬರೆಯುತ್ತಿ ಇರಿ. ಬರವಣಿಗೆ ನಿರಂತರವಾಗಿ ಸಾಗಲಿ. ಬೇರೆಯವರೂ ಇದರಿಂದ ಸ್ಪೂರ್ತಿ ಪಡೆಯಲಿ. ಅವರಿಂದನೂ ಬರವಣಿಗೆ ಪ್ರಾರಂಭವಾಗಲಿ
ಶುಭಾಶಯಗಳು
sara,
kangratsri nam kadinda......
ತುಂತುರು ಹನಿಗಳಿಗೆ ೨ನೇ ವರ್ಷದ ಹುಟ್ಟು ಹಬ್ಬದ ಹಾರ್ಧಿಕ ಶುಭಾಷಯಗಳು, ಹೀಗೆ ಅತ್ಯುತ್ತಮ ಬರಹಗಳನ್ನು ಬರೆಯುತ್ತಲೇ ಇರಿ.. ತುಂತುರು ಹನಿಗಳು ಹೆಚ್ಚೆಚ್ಚು ಹುಟ್ಟಿದ ಹಬ್ಬದ ಸಂಭ್ರಮ ಆಚರಿಸಲಿ....
ಹಹ್! ನಾನು ಕಂಗ್ರಾಟ್ಸ್ ಹೇಳ್ಲೇ ಇಲ್ಲೆ ನೋಡು!
yendend suriyuththale irali
ಹೇಯ್ ಕವನ ಬರ್ದು ಎಷ್ಟ್ ದಿನ ಆಯ್ತು ಮಾರಯ.... ನಿನ್ಗೆ ಯಾರಾದ್ರು ಬೈದಿದ್ರೆ ಬರೆಯೋಕ್ಕೆ ನೆನ್ಪೇ ಆಗದಿಲ್ಲ ಅನ್ಸತ್ತೆ...
ಅರಣ್ ಹೇಳಿದ ಹಾಗೆ ನಿನ್ನ ಬ್ಲಾಗಿಗೆ ೨ ವರ್ಷ ಆದ ಕುಷಿಗೇನೆ ಈ ಪಾಟಿ ಮಳೆ...ಬೇಗ ಮೂರು ವರ್ಷನೂ ಅಗೋಗ್ಲಿ..ಅಂದ ಹಗೆ ಕವಿತೆ ಬರೆದು ತುಂಬಾ ದಿನ ಆಯ್ತು ನೀ..ಯಾವಾಗ ಬರಿತೀ?
ಎರಡು ಅಲ್ಲ..ಎರೆಡೇ ವರ್ಷ ಅಗಿರೋದು..ಇನು ತುಂಬಾ ಬರಿಬೇಕು ನೀನು...
ಮಸ್ತ್ ಮಜಾ ಮಾಡು
ninge innond sala abhinandanegaLu..
ಕಾಮೆಂಟ್ ಪೋಸ್ಟ್ ಮಾಡಿ