ಬೇರು ಬಂದಿದೆ ಅವಳಿಗೆ
ಕಾಲಕಾಲಗಳಿಂದ
ಕೂತಲ್ಲಿಯೇ ಕೂತು
ಹೂತು
ಬೇರು ಬಂದಿದೆ ಅವಳಿಗೆ
ನಾಭಿಯಿಂದ ಹೊರಟು
ಕೆಳಗಿಳಿದು
ಬೇರು ಹೊರಟಿದೆ
ಆಳಕೆ,
ಮಣ್ಣ ಕಣಕಣದಾಚೆಗೆ
ಇರುವ ನೆಲನೆಲೆಯಾಚೆ
ಅಲ್ಲೆಲ್ಲೋ ತಾಕುತಿದೆ
ಬೇರ ತುದಿ
ಅವಳಿಗೆ ಇಲ್ಲಿ
ಸಂಚಲನ
ಹೊರಟ ಬೇರಿಗೆ
ನೂರು ದಾರಿ
ನೂರು ಟಿಸಿಲು..
ಕೂತಲ್ಲಿಯೇ
ಅವಳು
ಸರ್ವಗ್ರಾಹಿ,
ಸಮಸ್ತ ಧಾತ್ರಿ.
19 ಕಾಮೆಂಟ್ಗಳು:
huh! kavigalige en en kaanutte anta artha aagode kashta :-). aa perspective inda nannanthorge nododu innoo kashta!!
ಕಲ್ಪನೆ ಮಾಡ್ಕೋತಾ ಇದ್ದೀನಿ, ಯಾರಿಗಾದರೂ ಬೇರು ಬೆಳ್ಕೊಂಡ್ಬಿಟ್ರೆ ಹೇಗಿರ್ಬೋದು ಅಂತ!! ಆಲದ ಮರ ಆಗ್ಬಿಟ್ರೆ ಕಷ್ಟ!!!
ಬೆಳಗಿಂದ ಇದು ಏಳನೇ ಸಾರಿ ಓದ್ತಿರೋದು. ಆದ್ರೆ ಅರ್ಥ ಆಗೋ ಯಾವ ಲಕ್ಷಣಗಳೂ ಕಾಣ್ತಿಲ್ಲ :(
ಅರ್ಥ ಮಾಡ್ಕೊಂಡೆ ಸಿದ್ದ ಅಂತ ನಾನೂ ಹಠ ಹಿಡದು ಕೂತಿದೀನಿ....! :)
ಅರುಣ ಆಲದ ಮರ ಅಂದ. ನನಗೆ ಅಶ್ವತ್ಥ ವೃಕ್ಷ ಎನ್ನಿಸುತ್ತಿದೆ. ಯಾವ ಮರ ಅಂತ ನೀವೇ ಹೇಳ್ಬಿಡಿ ಶ್ರೀನಿಧಿ. ಸಸ್ಪೆನ್ಸ್ ಯಾಕೆ?
ಹಹ್ಹಹ್ಹಾ...! ವೈಶಾಲಿ, ನಿಜ ಹೇಳ್ಬೇಕಂದ್ರೆ ನನ್ನ ಪರಿಸ್ಥಿತಿಯೂ ಅದೇ ಆಯ್ತು, ಯಾರಿಗೆ ಬೇರು ಬಂತೋ, ಯಾಕೆ ಬಂತೋ, ಅದು ಇವ್ರಿಗೆ ಹೇಗೆ ಕಾಣ್ತೋ, ಶಿವನೇ! ರಾಮಣ್ಣ ಮೇಷ್ಟರು ಎಲ್ಲಪ್ಪಾ, ಅವರಿಗೇನಾದ್ರೂ ಅರ್ಥ ಆಯ್ತಾ ಕೇಳ್ಬಹುದಿತ್ತು! :P
ಶ್ರೀನಿಧಿ...
ಮೊದಲ ಸಾಲು ಓದ್ತಿದ್ದಂಗೆ ನೀ ನನಗೇ ಬೈತಾ ಇದ್ದೆ ಅಂದ್ಕಂಡಿ ‘ಮನೆಲ್ಲೆ ಕೂತು ಕೂತು ಬೇರು ಬೈಂದು ಇವಳಿಗೆ’ ಅಂತ ಬೈತಾ ಇದ್ದ ನನ್ನನ್ನೇ ಅಂದ್ಕಂಡಿ :-)
ಮುಂದೆ ಓದ್ತಾ ಹೋದಂಗೆ ಸ್ವಲ್ಪ ಸ್ವಲ್ಪ ಅರ್ಥ ಆತು. ಅರ್ಥ ಹೇಳಿದ್ರೆ ಮತ್ತೆ ನಿನ್ ಹತ್ರ ಬೈಸ್ಗ್ಯಳವ್ವು :-)
ದೇಶಪ್ರೇಮ ಮತ್ತು ಸಾಮಾಜಿಕ ಕಳಕಳಿ ಹೀಗೇ ಸಾಗ್ತಾ ಇರಲಿ.
ಯಾವತ್ತೂ ನೀ ಬರೆದಂಗೆ ಚಂದದ ಕವನ. ಇಷ್ಟ ಆತು.
ಸರ್ವಗ್ರಾಹಿ,
ಸಮಸ್ತ ಧಾತ್ರಿ. Quite meaningful.
ಒಳ್ಳೆಯ ಕವನ ಎಂದು ನನ್ನ bhavane. ಬೇರು ಎನ್ನುವುದರ ಅರ್ಥವೇ ಜೀವ ಹಾಗು ಜಡಗಳನ್ನು ಒಂದು ಮಾಡುವುದು ಎಂದು. ಈ ಮೇಲಿನ ಕೆಲವು ಪ್ರತಿಕ್ರಿಯೆಗಳನ್ನು ಓದಿ ಆಶ್ಚರ್ಯವಾಯಿತು!!. ಕನ್ನಡ ಸಾಹಿತ್ಯವನ್ನು ಆಳವಾಗಿ ಓದಿಕೊಂಡವರಿದ್ದಾರೆ, ಬ್ಲಾಗರ್ ಗಳು ಇದ್ದರೆ. ಇವರ್ಯಾರಿಗೂ "ಸರ್ವ ಧಾತ್ರಿ" ಎನ್ನುವುದರ ಅರ್ಥ ಆಗಲಿಲ್ಲವೇ?.
ತಳ ಭದ್ರವಾಗಿದ್ದಾರೆ ಆಗುತ್ತಿತ್ತು. ಓದಲು ಸಮಯ ವಿಲ್ಲ, ಸ್ವಲ್ಪ ತಿಳಿದುಕೊಂಡ ಕೂಡಲೇ ಬರೆದುಬಿದಬೇಕು!.
ಶ್ರೀನಿಧಿ ಒಳ್ಳೆಯ ಕವನ.
Osho!
ಶ್ರೀನಿಧಿ,
ಪ್ರಸ್ತುತ ಸ್ಥಿತಿಗೆ ಕನ್ನಡಿಹಿಡಿಯುವಂತಿದೆ ಕವನ. ಸಮಸ್ತ ಧಾತ್ರಿಗೆ ಆಗುತ್ತಿರುವ ಅನ್ಯಾಯ ನೋಡಿ ನೋಡಿ ಸಾಕಾಗಿದೆ. ಈವರೆಗೆ ಕಣ್ಮುಚ್ಚಿ ಕುಳಿದ್ದೆಲ್ಲರಿಗೂ ಬೇರು ಬಂದು ಬಿಟ್ಟಿತ್ತು. ಈಗ ಎಲ್ಲೋ ಒಂದು ಕಡೆ ಸಂಚಲನ ಉಂಟಾಗುತ್ತಿದೆಯೋನೋ.. ಇದು ನಾನು ಅರ್ಥೈಸಿಕೊಂಡು ಪರಿ. ಕವನವೇನಿದ್ದಿರೂ ಅವರವರ ಭಾವಕ್ಕೆ ತಾನೇ ಬಿಟ್ಟಿದ್ದು? :)
ತುಂಬ ಚನ್ನಾಗಿದೆ..ಆದ್ರೆ ನನಗೆ ಅರ್ಥಾನೆ ಆಗ್ಲಿಲ್ಲ..ಆದ್ರೂ ಚನ್ನಾಗಿದೆ...ಮತ್ತೆ ಮತ್ತೆ ಒದುತ್ತ ಇದ್ದ್ದಿನಿ ಅರ್ಥ ಆದ್ರೂ ಆಗಬಹುದು...
ತುಂಬಾ ಚನ್ನಾಗಿದೆ ..ಹಿಹಿಹಿ
ಬರೀ ಬೇರು ಬಂದರೆ ಸಾಕೇ,ಹೇಳು.
ಟೊಂಗೆಗಳೂ ಬೇಕೈ, ಕೇಳು.
ಭೂಮಿಯಲಿಳಿಸಿ ಬೇರು,ಬಾನಿಗೆ ನೀಡಿ ಮುಖ
ಚಲಿಸಿದರಷ್ಟೆ ದೊರೆವದು ಬಾಳು.
Chikka, Chokkavaada kavana, arthavatthaagide.
`iruva neleneleyaache
allello thaakutide bEra thudi
avalige illi sanchalana'
Superb lines !!
ಹಿಂದಿನವರು ಜನರು ಬದುಕಕ್ಕೋಸ್ಕರ ಕವಿತೆ ಬರೀತಿದ್ರು.
ಈಗ ಜನರು ಬದುಕಕ್ಕೋಸ್ಕರ ಇಂತ ಕವಿತೆ ಬರೀಯೋದು ನಿಲ್ಲಿಸ್ಬೇಕು.
ದೇಶಪ್ರೇಮ ಮತ್ತು ಸಾಮಾಜಿಕ ಕಳಕಳಿ ಅಂತೆ ...
ರೀ ... ಸ್ವಾತಂತ್ರ್ಯದ ಹೋರಾಟ ಸಮಯದಲ್ಲಿ ಇಂತ ಕವಿತೆ ಬರೆದು ದೇಶಪ್ರೇಮ, ಸಾಮಾಜಿಕ ಕಳಕಳಿ ಅಂತ ಹೇಳಿದ್ರೆ ಜನ ಸಾಮಾನ್ಯರಿಗೆ ಅರ್ಥ ಆಗಿರ್ತಿರ್ಲಿಲ್ಲ... ಸ್ವಾತಂತ್ರ್ಯನೂ ಸಿಗುತ್ತಿರಲಿಲ್ಲ...
ಸರಿ ... ಪ್ರಸ್ತುತ ಸ್ಥಿತಿಗೆ ಕನ್ನಡಿಹಿಡಿಯುವಂತಿದೆ ಕವನ. ಅದ್ರೆ ಸಾಮಾನ್ಯರಿಗೆ ಅರ್ಥ ಆಗೋ ಹಾಗೆ ಹೇಳಿ .. ನಿಮ್ಮ ಬುದ್ದಿವಂತಿಕೆನ(?) ಸಾಮಾನ್ಯ ಜನರ ತಾಳ್ಮೆ ಪರೀಕ್ಷೆ ಮಾಡಕ್ಕೆ ಉಪಯೋಗಿಸೋದು ಬೇಡ.
ಅಥವ ತಾವುಗಳು ಅತಿಬುದ್ದಿವಂತಿವಂತರು ಅಂತ ತೋರಿಸ್ಕೋತ ಇದ್ದೀರ? ಇಂತ ಕವಿತೆ ಬರ್ದು ...
ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು.
ಕೆಲವರಿಗೆ ಕವನ ಅರ್ಥ ಆಗಿಲ್ಲ, ಕೆಲವರಿಗೆ ಆಗಿದೆ. ಅವರವರ ಭಾವಕ್ಕೆ ತಕ್ಕ ಹಾಗೆ ಅರ್ಥ ಮಾಡಿಕೊಂಡಿದ್ದೀರಿ, ಸಂತೋಷ.
ಕವಿಯಾದವನು ಕವನದ ಅರ್ಥ ಹೇಳುತ್ತ ಕುಳಿತುಕೊಳ್ಳಬಾರದು ಎಂಬುದು ನನ್ನ ಯೋಚನೆ. ಕವಿತೆ ಒಂದು ಕಲಾಕೃತಿ ಇದ್ದ ಹಾಗೆ, ಅವರವರಿಗೆ ಕಾಣುವ ಭಾವ ಅವರದು. ಗೃಹಿಕೆಯ ಮಿತಿಗೆ ಲಭ್ಯವಾದ ಹಾಗೆ.
ಅನಾನಿಮಸ್ ಗೆ ಉತ್ತರಿಸಬೇಕು ಅನಿಸುತ್ತಿಲ್ಲ. ನಾನೇನು ಅನ್ನುವುದು ನನಗೆ ಗೊತ್ತು.
ಒಳ್ಳೆಯ ಯೋಚನಾಭರಿತ ಕವನ.
ನನ್ನ "ಗೃಹಿಕೆಯ ಮಿತಿಗೆ ಲಭ್ಯವಾದ ಹಾಗೆ",
ನಂಗ್ಯಾಕೋ ಇದು ಪ್ರಕ್ರತಿಯ ಹೆಣ್ತನದ ಬಗ್ಗೆ ಬರೆದದ್ದು ಅನ್ನಿಸ್ತಿದೆ. ಬೇರು ಬಂದಿದೆ ಅನ್ನೋದು ಕವಿಯ ರಮ್ಯ ಕಲ್ಪನೆ. ಬಸಿರನ್ನು, ಹೊಸ ಜೀವವನ್ನು ಬೇರು ಬಂದಿದೆ ಎಂದು ಹೋಲಿಸಿಕೊಂಡು ಭೂಮಿಯೊಡೆ ಒಂದಾಗುವ ಯೋಚನೆ ನಂಗೆ ಇಷ್ಟವೂ ಕಷ್ಟವೂ ಆಯಿತು. ಆದರೆ ಇದರಲ್ಲಿ ಸಾಮಾಜಿಕ ಕಳಕಳಿ ಗೊತ್ತಾಗಲಿಲ್ಲ. ಓಶೋ ಅಂದಿದ್ದು ನಾಭಿಯ,ಕರುಳು ಬಳ್ಳಿ ಪ್ರಸ್ತಾವನೆ ಬಂದಿದ್ದಕ್ಕಾ. ನಾ ಕವಿತೆ ಓದೋದೇ ಕಡಿಮೆ. ಆದ್ರೆ ನಮ್ಮ ವೈಶಾಲಿಯ ವತ್ತಾಯಕ್ಕೆ ಇದನ್ನು ಓದಿ ಇಲ್ಲಿ ಸಿಕ್ಕು ಬಿದ್ದೆ.
hotte bandide avanige....pulsaralle kuthu kuthu..........chennagide ista aiythu nanondu berene artha mdkonde
DAmu
chennagide.... prathama baarige ee blogge visit maadtiddene.. :)
~:rathnakar
ಕಾಮೆಂಟ್ ಪೋಸ್ಟ್ ಮಾಡಿ