ಗುರುವಾರ, ಅಕ್ಟೋಬರ್ 02, 2008

ಸಹಾಯ ಮಾಡಿ!!

ಮೂರು ನಾಲ್ಕು ದಿನದಿಂದ ಆರೋಗ್ಯ ಸರಿಯಿಲ್ಲ. ಜ್ವರ ಮತ್ತು ಜೋರು ನೆಗಡಿ. ಮನೆಯಿಂದ ಅಮ್ಮ ಫೋನು ಮಾಡಿದವಳು, ನನ್ನ ಧ್ವನಿಯಿಂದಲೇ ಕಂಡು ಹಿಡಿದುಬಿಟ್ಲು, ಜ್ವರ, ತಲೆನೋವು ಮತ್ತು ನೆಗಡಿ ಅಂತ. ಅಲ್ಲಿಂದ ಆರಂಭ ಮನೆಮದ್ದುಗಳ ಸಲಹೆಗಳು.

ಅಮ್ಮ: ಒಂದು ಕಾಲು ಲೋಟ ಕೊಬರಿಎಣ್ಣೆ ಕಾಸಿ, ಅದ್ಕೆ ಮೆಂತೆ ಮತ್ತೆ ಜೀರಿಗೆ ಹಾಕಿ, ಬಂಗಾರದ ಬಣ್ಣಕ್ಕೆ ಬರೋವರೆಗೆ ಫ್ರೈ ಮಾಡಿ, ಆ ಎಣ್ಣೆ ತಣಿಸಿ, ಅದ್ನ ತಲೆಗ್ ಹಾಕಿ, ಬಿಸಿ ಬಿಸಿ ನೀರಲ್ಲಿ ಸ್ನಾನ ಮಾಡಿದ್ರೆ, ಕಫ ಕಡ್ಮೆ ಆಗತ್ತೆ.

ತಂಗಿ ನಯನಾ: ಬಿಸಿನೀರಿಗೆ ವಿಕ್ಸ್ ಹಾಕಿ ಇನ್ ಹೇಲ್ ಮಾಡೋದು ವೇಸ್ಟ್. ಅದರ ಬದಲು, ಉಪ್ಪು ಹಾಕಿ ಇನ್ಹೇಲ್ ಮಾಡು, ನೆಗಡಿ ಕಡ್ಮೆ ಆಗತ್ತೆ. ಜೊತೆಗೆ, ಬೆಳ್ಳುಳ್ಳು ಒಂದೆರಡು ಎಸಳು ಜಜ್ಜಿ, ಹತ್ತಿಗೆ ಅದರ ರಸ ಬಿಟ್ಕೊಂಡು, ಎರಡೂ ಕಿವಿಗೆ ಇಟ್ಕಂಡು ಬೆಚ್ಚಗೆ ಮಲಗಬೇಕು.( ಈ ಬೆಳ್ಳುಳ್ಳಿ ಮೆಥಡ್ ಏನು ಅಂತ ಕೇಳದ್ರೆ ಹೇಳ್ಲಿಲ್ಲ, ಅದ್ನೆಲ್ಲ ಹೇಳ್ಬಾರ್ದು, ಸುಮ್ನೆ ಮಾಡ್ಬೇಕು ಅಂದ್ಲು!)

ದಯಾನಂದ: ಮೂರು ನಾಲ್ಕು ಚಮಚ ಕರಿಮೆಣಸಿನ ಪುಡಿ ನೀರಲ್ ಕುದ್ಸಿ, ೬-೮ ಚಮಚ ಬೆಲ್ಲ ಹಾಕಿ, ಕುದ್ಸಿ, ಆಮೇಲೆ ಒಂದು ಲಿಂಬೆ ಹಿಂಡಿ ಅದ್ನ ಕುಡೀಬೇಕು. ಕುಡಿಯೋಕೋ ಪ್ರೊಸೀಜರ್ ಇದೆ, ಗಟ ಗಟ ಕುಡೀಬಾರ್ದು, ಬಿಸಿಬಿಸಿ ಒಂದೊಂದೇ ಗುಟುಕು ಕುಡ್ದ್ರೆ, ಜ್ವರದ ಜೊತೆ, ಕಫನೂ ಕಡ್ಮೆ ಆಗತ್ತೆ.( ಈಗ ಬ್ಲಾಗ್ ಅಪ್ ಡೇಟ್ ಮಾಡೋಕೆ ಅವನು ಮಾಡ್ಕೊಟ್ಟ ಕಷಾಯನೇ ಕಾರಣ)

ತೇಜಸ್ವಿನತ್ಗೆ: ಕ್ರೋಸಿನ್ ತಗ, ನೆಗಡಿಗೆ ಡಿ ಕೋಲ್ಡ್, ಬಿಸಿ ಆಹಾರ ತಿನ್ನು.

ನಿಮ್ಮ ಬಳಿ ಇನ್ನೇನಾದರೂ ಒಳ್ಳೇ ಸಜೆಶನ್ನುಗಳು, ಮನೆಮದ್ದು ಇದೆಯೇ? ತಿಳಿಸಿ ಪ್ಲೀಸ್!

21 ಕಾಮೆಂಟ್‌ಗಳು:

Parisarapremi ಹೇಳಿದರು...

ಬೆಳಿಗ್ಗೆ ನಾನ್ ಹೇಳಿದ್ದನ್ನ ನೀನು ಇಲ್ಲಿ ಉಲ್ಲೇಖಿಸಿಲ್ಲವಾದ್ದರಿಂದ ಈ ಪೋಸ್ಟು ಖಂಡನೀಯ. ಆದ್ರೂ ಪರ್ವಾಗಿಲ್ಲ, ಇನ್ನೊಂದ್ ಸಲ ಹೇಳ್ತೀನಿ ತೊಗೊ.

ಮನಸು ಬರಿದಾದಾಗ ನೋವಡರಿ ಸೋತಾಗ
ನಡೆ ಮೆಲ್ಲ ಗಿರಿಕಣಿವೆ ಇಳಿಜಾರಿನಲ್ಲಿ.
ತೇಲು ಮುಗಿಲಿನ ತಂಪು ಮುದವ ತರುವುದೆದೆಗೆ
ಮೊರೆ ಹೋಗು ಕಾನನಕೆ - ಮುದ್ದುರಾಮ.

ರಾಘವೇಂದ್ರ ಹೆಗಡೆ- ಸಕಲ ಸ್ಟುಡಿಯೋ. ಹೇಳಿದರು...

sayankala athava ratri 11 ra olage utakke modalu hasida hotteyalli hecchu huli tinnade sariyada pramanadalli nirdishtavadaddannu "JEEVAKKE TAGANDRE "jwara manga maya

ಅನಾಮಧೇಯ ಹೇಳಿದರು...

ಇದೆಲ್ಲಾ ಹಳೇ ಐಡಿಯಾ ಶ್ರೀನಿಧಿ. ವರ್ಕೌಟ್ ಆಗೋಲ್ಲ. ಕರೆಕ್ಟಾಗಿ ಹೇಳ್ತೀನಿ ಕೇಳಿಸ್ಕೊಳ್ಳಿ..
ನಿಮ್ಮ ಮನೆ ಹತ್ತಿರದ ವೈನ್ ಸ್ಟೋರಿಗೆ ಹೋಗಿ. ಒಂದು ಕ್ವಾರ್ಟರ್ ಮ್ಯಾನ್ಷನ್ ಹೌಸ್ ಬ್ರಾಂಡಿ ತಗೊಳ್ಳಿ..
ಮನೆಗೆ ಬಂದು ಬಿಸಿನೀರು ಕಾಯಿಸಿಕೊಳ್ಳಿ. ಒಂದು ಗ್ಲಾಸಿಗೆ 60 ಎಂಎಲ್ ಬ್ರಾಂಡಿ ಹಾಕಿ. ಅದಕ್ಕೆ ಅರ್ಧ ನಿಂಬೆ ಹಣ್ಣು ಹಿಂಡಿ, ಕುದಿಯುವ ಬಿಸಿನೀರು ಸುರಿಯಿರಿ.
ಬ್ರಾಂಡಿಯನ್ನು ಒಂದೊಂದೇ ಸಿಪ್ ಹೀರುತ್ತಾ, ಅದರಿಂದ ಹೊರಹೊಮ್ಮುವ ಹಬೆಯನ್ನು ಆಘ್ರಾಣಿಸಿ.
ಈ ರೀತಿ ಒಂದು ಗಂಟೆಯ ಕಾಲಾವಧಿಯಲ್ಲಿ ಮೂರು ಸಾರಿ ಮಾಡಿ. ಮಾರನೆಯ ಬೆಳಗ್ಗೆ ನೆಗಡಿ ಓಡಿಹೋಗದೇ ಇದ್ದರೆ ...
ನೀವು ಮನುಷ್ಯರೇ ಅಲ್ಲ.
-ಜೋಗಿ

ಅನಾಮಧೇಯ ಹೇಳಿದರು...

"ಬಿಸಿನೀರಿಗೆ ವಿಕ್ಸ್ ಹಾಕಿ ಇನ್ ಹೇಲ್ ಮಾಡೋದು ವೇಸ್ಟ್."

- ಹೌದು!

bhadra ಹೇಳಿದರು...

ಔಷಧಿ ಸೂಚಿಸುವ ಮೊದಲು ನನ್ನ ಒಂದೆರಡು ಪ್ರಶ್ನೆಗಳಿಗೆ ಉತ್ತರಿಸಿ:

೧. ನಿಮಗೆ ಮದುವೆ ಆಗಿದೆಯೇ?
೨. ಪ್ರತಿನಿತ್ಯ ಸಂಜೆ ಎಷ್ಟು ಹೊತ್ತಿಗೆ ಮನೆ ಸೇರುತ್ತೀರಿ?
೩. ಕೆಲಸ ಮುಗಿದ ಬಳಿಕ, ಮನೆಗೆ ಹೋಗುವ ಮೊದಲು ಎಲ್ಲೆಲ್ಲಿಗೆ ಹೋಗುತ್ತೀರಿ?
೪. ಕಂಪ್ಯೂಟರಿನ ಮುಂದೆ ಎಷ್ಟು ಕಾಲ ಕುಳಿತಿರುತ್ತೀರಿ? ಅಲ್ಲಿ ಹೆಚ್ಚಾಗಿ ಓಡಾಡುವ ತಾಣ ಆವುದು?
೫. ಮೋಟುಗೋಡೆಯಾಚೆ ಎಷ್ಟು ಹೊತ್ತಿರುತ್ತೀರಿ?
೬. ಓಶೋ ಸಹವಾಸ ಏನಾದರೂ ಇದೆಯಾ?

ಈ ಪ್ರಶ್ನೆಗಳಿಗೆ ಮುಚ್ಚು ಮರೆಯಿಲ್ಲದೇ ಉತ್ತರಿಸಿದರೆ, ಏಕೆ ನೆಗಡಿ ಆಗಿದೆ, ಅದಕ್ಕೆ ಯಾವ ಔಷಧಿ ಕೊಡಬಹುದೆಂಬುದನ್ನು ನಿರ್ಧರಿಸಬಹುದು :P

ಬಾಲವನ ಹೇಳಿದರು...

ಶ್ರೀನಿಧಿಯವರೇ,
ನೀವು ಯಾವುದೇ ಮದ್ದು ಅಥವಾ ಕಷಾಯ ಕುಡಿದರೆ ನೆಗಡಿ ವಾಸಿಯಾಗಲು ಏಳು ದಿನ ಬೇಕು, ಏನೂ ಮಾಡದಿದ್ದರೆ ಒಂದು ವಾರದಲ್ಲಿ ವಾಸಿಯಾಗತ್ತೆ, ನಿಜವಾಗಲೂ!!

-ಬಾಲ

Sushrutha Dodderi ಹೇಳಿದರು...

ಜೋಗಿ ಸರ್ ಸಜೆಶನ್ ಪ್ರಯೋಗ ಮಾಡೋ ಹಾಗಿದ್ರೆ ನನ್ನೂ ಕರಿ. ಬೇಕೂಂತಂದ್ರೆ ಒಂದೆರ್ಡು ಐಸ್‍ಕ್ಯಾಂಡಿ ತಿಂದು - ಮಳೇಲಿ ನೆಂದು ನೆಗಡಿ,ಜ್ವರ ಬರಿಸಿಕೊಳ್ತೀನಿ. :D

Srikanth - ಶ್ರೀಕಾಂತ ಹೇಳಿದರು...

ಕಾಡಿಗೆ ಹೋಗಿ ಬೆಟ್ಟ-ಗುಡ್ಡ ಹತ್ಕೊಂಡು ಬನ್ನಿ. ಎಲ್ಲ ಸರಿಹೋಗತ್ತೆ.

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ಶ್ರೀನಿಧಿ...
ವಾತಾವರಣನೇ ಹಾಂಗಿದ್ದು ಅನಿಸ್ತು. ಎಲ್ಲಾ ಕಡೆ ಥಂಡಿ ಜ್ವರ. ನಿಜ,ಇದಕ್ಕೆ ಒಳ್ಳೆ ಔಷಧಿ ಅಂದ್ರೆ ಕರಿಮೆಣಸಿನ ಕಷಾಯ. ಗಂಡಸ್ರು, ಹೆಂಗಸ್ರು , ಹುಡುಗ್ರು,ಮಕ್ಳು... ಮನೆಯಲ್ಲಿ ಯಾರಿಗೆ ಥಂಡಿಜ್ವರ ಬಂದ್ರೂ ಕರಿಮೆಣಸು ಕೊತ್ತಂಬರಿ ಕಷಾಯ ಕುಡಿದ್ರೆ ವಾಸಿಯಾಗ್ತು. ಕಷಾಯ ಬಿಟ್ರೆ ತೇಜಸ್ವಿನಿ ಹೇಳಿದಂಗೆ ಮಾಡುವುದು ವಾಸಿ.

Sree ಹೇಳಿದರು...

ಇಷ್ಟೊತ್ತಿಗೆ ಓಡಿಹೋಗಿರತ್ತೆ ನೆಗಡಿ ಅಲ್ವಾ, ಎಷ್ಟೆಲ್ಲಾ ಸಜೆಶನ್ನುಗಳು! ಅಬ್ಬಾ ಹೊಟ್ಟೆಕಿಚ್ಚಾಗ್ತಿದೆ!:)
ಶುಂಠಿ-ಮೆಣಸಿನ ಕಷಾಯನೂ ಟ್ರೈ ಮಾಡ್ಬಹುದು, ಇನ್ನೂ ನೆಗಡಿ ಇದ್ರೆ!:)

Archu ಹೇಳಿದರು...

hey shreenidhi..
nangoo sheeta,kemmu..
odta iddene suggestions ella :)

oLLe meNasu kashaaya oleya mele kudeeta ide..haagagi ole aarisi, kudeelikke ( ? ) hogtene..
cheers,
archana

ಶ್ರೀನಿಧಿ.ಡಿ.ಎಸ್ ಹೇಳಿದರು...

ಅರುಣ, ವಿಷ್ಯ ಕರೆಕ್ಟು. ಆದ ಪ್ರಮಾದವನ್ನು ಒಪ್ಪಿಕೊಂಡು ಕ್ಷಮೆ ಕೇಳುತ್ತಿದ್ದೇನೆ:)

ರಾಘು, ಹುಂ,ಜೀವಕ್ ತಗಳದ್ರ ಬಗ್ಗೆ ನೇ ಹೆಚ್ಚಿಗೆ ಜನಕ್ಕೆ ಪ್ರೀತಿ ಇದ್ದ ಹಾಗಿದೆ!

ಜೋಗಿ ಸಾರ್!
ಮುಂದಿನ ಸಲ ನೀವ್ ಕೊಟ್ಟ ಐಡಿಯಾನೇ ಕಾರ್ಯರೂಪಕ್ ತರ್ಬೇಕು ಅಂತ ಡಿಸೈಡೆಡ್ದು! ಅಲ್ನೋಡಿ, ಸುಶ್ರುತ ಬೇರೆ ಬರ್ತಾನಂತೆ:)

ಜೋಶೀಜೀ, ನೀವು ಬಿಡಿ ಸಾರ್, ಪನ್-ಡಿತರು!:)


ಶ್ರೀನಿವಾಸರೇ,

ಜ್ವರದಲ್ಲಿದ್ದವನಿಗೆ ಸಹಾಯ ಮಾಡೋದು ಬಿಟ್ಟು ಇಂತಹ ಪ್ರಶ್ನೆಗಳನ್ನು ಕೇಳಿರುವುದು ಖಂಡನೀಯ!:):)

ಬಾಲವನದವರೇ,

ಹಳೆಯ ಸತ್ಯವನ್ನು ನೆನಪಿಸಿದ್ದಕ್ಕೆ ಥ್ಯಾಂಕ್ಸು!

ಶ್ರೀನಿಧಿ.ಡಿ.ಎಸ್ ಹೇಳಿದರು...

ಸುಶ್,

ಮಗಾ,ಜೈ ಅಂದ! ಹೇಳ್ಬಿಡ್ತೀನಪಾ, ಮುಂದಿನ್ ಸಲ ಜ್ವರ ಬಂದಾಗ- ಅಥವಾ ಬರೋ ಹಾಂಗಾದಾಗ!

ಶ್ರೀಕಾಂತ್,

ಯಾವಾಗ ಹೋಗೋಣ?

ಶಾಂತಲಾ ಮೇಡಮ್,

ಅಲ್ಲಿಗೆ ಕರಿಮೆಣ್ಸಿನ್ ಕಷಾಯಕ್ ಎರಡ್ಮೂರು ವೋಟ್ ಬಿದ್ ಹಾಂಗಾತು!

sree,:)

ಹೊಟ್ಟೆಕಿಚ್ಚಾ?:) ಏನೋ ಪಾಪ ಹುಡ್ಗ ಬದುಕ್ಲಿ ಅಂತ ಜನ ಇಷ್ಟೆಲ್ಲ ಸಲಹೆ ಕೊಟಿದಾರಪಾ! ನಿಮ್ಮ ಸಲಹೆಯನ್ನೂ ಆದರಪೂರ್ವಕವಾಗಿ ಸ್ವೀಕರಿಸಲಾಗಿದೆ!

ಅರ್ಚನಾ,

ಸಮಾಧಾನ ಆಯ್ತು ನಂಗೆ, ನಿಮ್ಗೂ ಉಪಯೋಗ ಆಯ್ತಲ್ಲ ಈ ಪೋಸ್ಟು! ತೀರಾ ಜೋಗಿ ಸಾರ್ ಹೇಳಿದ್ನೆಲ್ಲ ಟ್ರೈ ಮಾಡೀರಾ ಮತ್ತೆ!:)

ತೇಜಸ್ವಿನಿ ಹೆಗಡೆ ಹೇಳಿದರು...

ಶ್ರೀನಿಧಿ,

ಹುಶಾರಾದೆ ಅಂದ್ಕತ್ತಿ.. ಮೇಲಿನ ಐಡಿಯಾಗಳಲ್ಲಿ ಯಾವುದಾದರೂ ಒಂದನ್ನು ಉಪಯೋಗಿಸು .. ಎಲ್ಲವನ್ನೂ ಮಾಡಾಡ.. ಎಲ್ಲಾ ಔಷಧಿಗಳನ್ನೂ ಉಪಯೋಗಿಸಿದ್ರೆ ಮಾತ್ರ...!!! :)

bhadra ಹೇಳಿದರು...

ನಿಜಕ್ಕೂ ಅನಾರೋಗ್ಯವಾ? ಅಥವಾ ತಮಾಷೆಗೆ ಹೀಗೆ ಬರೆದದ್ದಾ? :o

ಸುಪ್ತದೀಪ್ತಿ suptadeepti ಹೇಳಿದರು...

ನಾನೂ ಒಂದಿಷ್ಟು ಸೀನಿಕೊಂಡು, ಮೂಗು ಕಣ್ಣು ಒರಸಿ-ಒರಸಿ ಕೆಂಪು ಮಾಡಿಕೊಳ್ಳುತ್ತಾ ಇದನ್ನು ಓದುತ್ತಿದ್ದೇನೆ. ಗಂಡನಿಗೆ, ಮಗನಿಗೆ ಒಳ್ಳೆಮೆಣಸು, ಶುಂಠಿ, ಅರಶಿನ, ಬೆಲ್ಲದ ಕಷಾಯ ಮಾಡಿಕೊಡುವ ನನಗೆ ನನಗಾಗಿ ಮಾಡಿಕೊಳ್ಳಲು ತೀರಾ ಉದಾಸೀನ. ಹಾಗಾಗಿ, ಮೆಟಾಸಿನ್ ಮತ್ತು "ಸೀತೋಫಲಾದಿ ಚೂರ್ಣ"ವೆಂಬ ಆಯುರ್ವೇದೀಯ ಪುಡಿ ಜೇನಿನೊಡನೆ ನನ್ನ ಗಂಟಲಿಗೆ "ಸುಕೂನ್" ಕೊಡುತ್ತಿವೆ.

ನೀನು ಇಷ್ಟೊತ್ತಿಗೆ ಆರಾಮಾಗಿರಬಹುದು. ಟೇಕ್ ಕೇರ್!!

jomon varghese ಹೇಳಿದರು...

ಈದ ತೆಲೆ ನೋಯಿಸ್ತಿದೆ! ನೆಗಡಿ ಬಂದರೂ ಬರಬಹುದು.
ಶ್ರೀನಿಧಿ ಕ್ಲಿನಿಕ್ ನಲ್ಲಿ ಯಾವುದಾದರೂ ಹೊಸ ಔಷಧಿ ಬಂದಿದ್ರೆ ತಿಳಿಸಿ.

Vijaya ಹೇಳಿದರು...

avath sanje MTR nalli thogond coffee tindi inda nin negdi jwara khanditha hogide antha andkoteeni :-)

ಚಿನ್ಮಯ ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಚಿನ್ಮಯ ಹೇಳಿದರು...

ಶ್ರೀನಿಧಿ,
ನೆಗಡಿ ಮತ್ತು ಜ್ವರಕ್ಕೆ ಕಫ ಮತ್ತು ಕೆಮ್ಮು ಹತ್ತಿರದ ನೆಂಟರು.
“ಕೆಮ್ಮುವಾಗ ಘೈಲು ಘೈಲೆಂದು ಶಬ್ಧ ಹೊರಬರುತ್ತಿದ್ದರೆ ಮೂವತ್ತು ನಂಬರಿನ ಖಡಕ್ ಬೀಡಿ ಸೇದಿರಿ, ಕಫ ಕತ್ತರಿಸಿ ಹೋಗುತ್ತದೆ” ಎಂದು ನಾವು ಬಾಲ್ಯದಲ್ಲಿದ್ದಾಗ ನಮ್ಮ ಊರಿನಲ್ಲಿ ಬಿಡಾರ ಮಾಡಿಕೊಂಡಿದ್ದ ಕೊಡೆ ರೆಪೇರಿಯ ಸಾಯ್ಬ ಹೇಳುತ್ತಿದ್ದ. ಈ ಕಫ ಮತ್ತು ಸಿಂಬಳ ಒಂದೇ ನಾಣ್ಯದ ಎರಡು ಮುಖಗಳು.

ಬಸ್ಸು ಒಂದು ರೂಟು ಎರಡು
ಸತ್ಯವದುವೇ ಸಿಂಬಳ
ನಾಮ ಬೇರೆಯಾದರೇನು
ಕಫದ ಮೂಲ ಅದುವೆಯ.

ಈಗ ಗುಣಮುಖವಾಗಿದ್ದೀರೆಂದು ಭಾವಿಸುತ್ತೇನೆ.
-ಚಿನ್ಮಯ.

ಸಂದೀಪ್ ಕಾಮತ್ ಹೇಳಿದರು...

ಜೋಗಿ ಹೇಳಿದ ಮದ್ದು ನೋಡಿದ್ರೆ ನಂಗೂ ನೆಗಡಿ ಬಂದ್ರೆ ಚೆನ್ನಾಗಿರ್ತಿತ್ತು ಅನ್ಸುತ್ತೆ:)