ಬುಧವಾರ, ಅಕ್ಟೋಬರ್ 08, 2008

ಹೀಂಗೇ ಸುಮ್ನೆ..

ಮೊನ್ನೆ ಮೊನ್ನೆ ಸುರಪುರದ ಮಡೋಸ್ ಟೇಲರ್ ರ ೨೦೦ ನೇ ಜನ್ಮದಿನ ಆಚರಿಸಲಾಯಿತು. ಕಲೆಕ್ಟರ್ ಆಗಿದ್ದ ಈತ ಹಲವು ಸುಧಾರಣಾ ಕಾರ್ಯಕ್ರಮಗಳಿಂದ ಜನಮನ ಗೆದ್ದಿದ್ದ. ಮೇಲಿನ ಕೆಂಡಸಂಪಿಗೆ ಲಿಂಕ್ ನಲ್ಲಿ ಟೇಲರ್ ಬಗ್ಗೆ ಹೆಚ್ಚಿನ ಮಾಹಿತಿ ಇದೆ, ನೋಡಿ. ಗುಲ್ಬರ್ಗದಇನ್ನೂರನೇ ಜನ್ಮದಿನದ ನೆನಪಿಗೆ ಸಮಾರಂಭವೊಂದನ್ನು ಏರ್ಪಡಿಸಲಾಗಿತ್ತು. ಕರ್ನಾಟಕ ಸರಕಾರದ ಮಾನ್ಯ ಮಂತ್ರಿಗಳಾದ ರೇವೂನಾಯಕ್ ಬೆಳಮಗಿಯವರು, ಈ ಸಮಾರಂಭದಲ್ಲಿ ಪಾಲ್ಗೊಂಡು ಭಾಷಣ ಮಾಡಿದರು. ಏನ್ ಅದ್ಭುತ ಭಾಷಣ ಮಾಡಿದರು ಅಂತೀರಿ !

"ನಮ್ಮ ಜೀವನದಲ್ಲಿ ಟೈಲರುಗಳ ಪಾತ್ರ ಮುಖ್ಯಾ, ನಮ್ಮ ಮಾನ ಉಳ್ಸೋದಿಕ್ಕ ಅವರಿಲ್ದಿದ್ರೆ ಆಗಲ್ಲ,ದರ್ಜಿಗಳನ್ನ ನೆನ್ಪಿಸ್ಕೊಳ್ಳೋ ಅಂತಾ ಪ್ರೋಗ್ರಾಮು ಮಾಡ್ತಿರೋದು ನಿಜಕ್ಕೂ ಒಳ್ಳೇದು.." ಅಂತೆಲ್ಲಾ ಮಾತಾಡದ್ರು. ಜನ ಬಿದ್ದು ಬಿದ್ದು ನಗ್ತಿದ್ರೂ ಸಾಹೇಬ್ರಿಗೆ ಏನೂ ಗೊತ್ತೇ ಆಗ್ಲಿಲ್ಲ!

ಸಾಹೇಬರ ಪಿ.ಎ ಕೆಲಸ ಕಳೆದುಕೊಂಡ ಸುದ್ದಿಯೇನೂ ಬಂದಿಲ್ಲ.

************

ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಮಾತನಾಡುತ್ತ ಹೇಳಿದ್ದು-

"ಕಾಡುಗಳಿಗೂ ಮನುಷ್ಯರಿಗೂ ಅವಿನಾಭಾವ ಸಂಬಂಧ ಇದೆ. ಮನುಷ್ಯ ಕಾಡು ಇಲ್ಲದೇ ಬದುಕಲಾರ, ಕಾಡು ಕೂಡ ಮನುಷ್ಯ ಇಲ್ಲದೇ ಇರಲಾರದು, ಎರಡೂ ಇಂಟರ್ ಲಿಂಕ್ಡು" ಅಂತ.

ಇಂಟರ್ವ್ಯೂ ಮಾಡುತ್ತಿದ್ದವರು ತಲೆ ಚಚ್ಚಿಕೊಳ್ಳಲಿಲ್ಲ ಅಂತ ಸುದ್ದಿ.



8 ಕಾಮೆಂಟ್‌ಗಳು:

Lakshmi Shashidhar Chaitanya ಹೇಳಿದರು...

:-) :-) :-) :-)

ವಿ.ರಾ.ಹೆ. ಹೇಳಿದರು...

:)

ಕರಮಕಾಂಡ

Shree ಹೇಳಿದರು...

ಪಾಪ, ಇಂಟರ್ವ್ಯೂ ಮಾಡ್ತಿದ್ದವ್ರ ಕಷ್ಟ ಅವ್ರಿಗೆ ಮಾತ್ರ ಗೊತ್ತಿರ್ತದೆ! :P

Sree ಹೇಳಿದರು...

=))
(yahoo nalli biddu biddu nago smiley)

Annapoorna Daithota ಹೇಳಿದರು...

haa haa haa :)

chetana ಹೇಳಿದರು...

ನಿಜ್ವಾಗ್ಲೂನಾ? ನಿಜ್ಜ್ವಾಗ್ಗ್ಲೂನಾ!?

ಆಲಾಪಿನಿ ಹೇಳಿದರು...

ನಿಜ. ಇಂಥ ಅದ್ಭುತ ಜೀವಗಳಿಗೆ ಅಂತಾನೇ ಒಂದು ಝೂ ಓಪನ್ ಮಾಡಬೇಕು.

sunaath ಹೇಳಿದರು...

ವರ್ಷದ ನಗೆಹನಿ ಹೇಳಿದ್ದಕ್ಕಾಗಿ ಮಂತ್ರಿವರ್ಯರಿಗೆ ಅಭಿನಂದನೆಗಳು.