ಬಯಲ ಗಾಳಿಗೆ ಎಲೆಯು
ಸುಮ್ಮನಲುಗಿದ ಹಾಗೆ
ಮಲೆಯ ಕಣಿವೆಯ ಝರಿಯು
ಚಿಮ್ಮಿ ಸಾಗುವ ಸೊಬಗೆ
ಎಂಥ ನಗು ಅವಳದು!
ಗಿರಿಯ ಮೇಲಿನ ಮಂಜು
ಮೆಲ್ಲ ಕರಗುವ ತೆರನ,
ನದಿಯ ನೀರನು ತಡೆವ
ಕಲ್ಲು ಹಾಡುವ ತ ರ ನ
ಅಂಥ ನಗು ಅವಳದು!
ತೀರಗುಂಟದ ಅಲೆಯು
ಪಾದಕೆ ಮಾಡುವ ಮುದ್ದು
ಮಳೆನೀರು ಬೀಳುತಿಹ
ಪದ್ಮಪತ್ರದ ಸದ್ದು
ಇಂಥ ನಗು ಅವಳದು!
15 ಕಾಮೆಂಟ್ಗಳು:
sooooper..!
ವಾವ್!
ನಿಜ ಹೇಳು ಶ್ರೀನಿಧಿ ಇಷ್ಟೊಳ್ಳೇ ರೀತಿಯಲ್ಲಿ ಅವಳ ಸುಂದರ ನಗುವನ್ನು ವಿವರಿಸಬೇಕೆಂದರೆ ನಿನಗೆ ಅವಳೂ ಸಿಕ್ಕಿರಬೇಕಲ್ಲಾ?!;-P ಸುಳ್ಳು ಹೇಳಬೇಡ... ನಾನು ಅವಳನ್ನೇ ಕೇಳಿ ತಿಳಿಯಬೇಕಾದೀತು ಮತ್ತೆ..:) ಸುಂದರ ಕವನ.
hmm...!!
ಶ್ರೀನಿಧಿ...
ರಾಶಿ ಚೊಲೊ ಇದ್ದು.
ಕವಿಗಳೆ, ಮದ್ವೆ ಯಾವಾಗ?? ;-)
ಶ್ರೀನಿಧಿಯ ಹೃದಯವನು ಕದ್ದಂಥ ನಗುವು!
ಅವನ ಮನಸೆ ಕವನವಾಗಿ ಅರಳಿದ ನಗುವು!!
ಶ್ರೀನಿಧಿ, ಎಲ್ಲಿದ್ದಾಳೋ ಇಂಥ ಸುಂದರ ನಗುವಿನ ಸುಂದರಿ? ಅವಳಿಗೆ ತಕ್ಕದಾದ ಸುಂದರ ಕವನ. ಎಂದು, ಎಲ್ಲಿ, ಹೇಗೆ ಅವಳಿಗೆ ಇದನ್ನು ಕೊಟ್ಟೆ; ಹೇಳಬಹುದಾ?
ಪ್ರಕಾಶಣ್ಣ, ಮಧು-ಥ್ಯಾಂಕ್ಸು:)
ತೇಜಸ್ವಿನಿ- ಹೇಳುವುದಕ್ಕೂ ,ಕೇಳುವುದಕ್ಕೂ ಇದು ಸಮಯವಲ್ಲ:)
ಗ್ರೀಷ್ಮ- ?ಯಾಕೆ ಹಮ್?
ಶಾಂತಲಾ ಭಂಡಿ-ಧನ್ಯ!
ಶ್ರೀನಿಧಿ- ಸಮಯವಿದೆಯಪ್ಪಾ!
ಸುನಾಥ್ ಕಾಕಾ- :):)
ಜ್ಯೋತೀ ಮೇಡಮ್- ಅದ್ನೆಲ್ಲಾ ಇಲ್ಲಿ ಅಷ್ಟ್ ಸುಲಭದಲ್ಲಿ ಹೇಳಬಹುದಾ!?
ond vaara bittu noddre elroo wholesale aagi blog update maadbittideera!!!
keep it flowing :-)
ಹಾಯ್ ಶ್ರೀನಿಧಿ..ನಾನು ಧರಿತ್ರಿ..ಬ್ಲಾಗ್ ಲೋಕಕ್ಕೆ ಹೊಸಬಳು. ಒಂದೇ ಒಂದು ಸಲ ಪುರುಸೋತ್ತು ಮಾಡಿಕೊಂಡು ಧರಿತ್ರಿ ಕಡೆ ಬನ್ನಿ..ಬೆನ್ನುತಟ್ಟಿ.
-ಧರಿತ್ರಿ
ಮತ್ತೆ ಅವಳ ನಗು ಓದಿ
ಹುಡುಕಿ ಹೊರಟೆ
ನಿಮಗೆ ಸಿಕ್ಕಳೆ.॒!
ಚೆನ್ನಾಗಿದೆ..ಶ್ರೀನಿಧಿ
ಹಿಗೆಲ್ಲ ನಗು ಬಗ್ಗೆ ಬರ್ದಿದೀರಾ ... ಯಾರ್ ಅಂಗ್ ನಗ್ತರಾ ಅಂತಾ ಹುಡ್ಕೊಂಡು ಹೊಗಂಗಾಯ್ತಲ್ಲರೀ
ನಗುವಾಗ ನಗು ಸದ್ದು ಬರೋದು ಬಿಟ್ಟು ಬೇರೇನೋ ಸದ್ದು ಬಂದರೆ ಯಾಕೋ ಡೌಟು!! ;-)
Shreenidhi,
Very very chweet poem :-)
Thanks you.....
Sunil.
ಕಾಮೆಂಟ್ ಪೋಸ್ಟ್ ಮಾಡಿ