ಯಾವತ್ತಾರೂ ಹೀಗಾಗತ್ತೆ ಅಂದ್ಕಂಡಿರ್ಲಿಲ್ಲ, ಹಾಂಗಾಗೇ ಬರೀಬೇಕು ಅಂತ ಗೊತಾಗ್ತಿಲ್ಲ. ಹಾಳೆಯಲ್ಲಿ ಬರಿಯೋದಾಗಿದ್ರೆ ಹಳೇ ಸಿನಿಮಾಗಳಲ್ಲಿ ನೋಡಿದ ಹಾಗೆ ಸುಮಾರು ೪೦-೫೦ ಬಿಳೀ ಕಾಗದದ ಉಂಡೆಗಳು ಇಲ್ಲಿ ನನ್ನ ಸುತ್ತ ಬಿದ್ದಿರ್ತಿದ್ವು , ಗ್ಯಾರೆಂಟಿ. ಪುಣ್ಯ,ಬ್ಲಾಗರಿನ ಬಿಳಿಯ ಅವಕಾಶ- ಅದಕ್ಕೆಲ್ಲ ಅವಕಾಶ ಕೊಡಲಿಲ್ಲ.
ನನ್ನ ಕವವ ಸಂಕಲನ, ಹೂವು ಹೆಕ್ಕುವ ಸಮಯ ಅಗಸ್ಟ್ ೯ರ ಶ್ರಾವಣ ಭಾನುವಾರ ಬಿಡುಗಡೆಯಾಗ್ತಿದೆ. ಜೋಗಿ ಸರ್ ಮುನ್ನುಡಿ ಬರೆದ ಪುಸ್ತಕವನ್ನು ನಾನು ಬೆರಗುಗಣ್ಣುಗಳಿಂದ ಆರಾಧಿಸುವ ಹಿರಿಯ ಕವಿ ಎಚ್.ಎಸ್.ವೆಂಕಟೇಶಮೂರ್ತಿಯವರು ಲೋಕಾರ್ಪಣೆ ಮಾಡುತ್ತಿದ್ದಾರೆ.
ಜೊತೆಗೆ ಅಂದೇ, ಗೆಳೆಯ ಸುಶ್ರುತನ ಹೊಳೆಬಾಗಿಲು ಲಲಿತ ಪ್ರಬಂಧ ಸಂಕಲನ ಬಿಡುಗಡೆಯಾಗ್ತಿದೆ. ಅದನ್ನ ಬಿಡುಗಡೆ ಮಾಡೋರು ನಾಗತಿಹಳ್ಳಿ ಚಂದ್ರಶೇಖರ್ ಸರ್.
ನಮ್ಮದೇ ಸಂಸ್ಥೆ ಪ್ರಣತಿ ಇಬ್ಬರ ಪುಸ್ತಕಗಳನ್ನೂ ಪ್ರಕಟಿಸಿದೆ. ಈ ವರ್ಷದ ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರರಿಗೆ ಪ್ರೋತ್ಸಾಹ ನೀಡೋ ಪುಸ್ತಕ ಪ್ರಕಟಣೆ ಯೋಜನೆಯಲ್ಲಿ ನಮ್ಮ ಪುಸ್ತಕಗಳು ಆಯ್ಕೆಯಾದ್ದವು.
ನಾನು, ಸುಶ್ ಮತ್ತು ಪ್ರಣತಿಯ ಗೆಳೆಯರೆಲ್ಲ ಬನಶಂಕರಿಯ ಸುಚಿತ್ರ ಫಿಲ್ಮ್ ಸೊಸೈಟಿ ಯಲ್ಲಿ ಬರುವ ಭಾನುವಾರ, 9ನೇ ತಾರೀಖು ಬೆಳಗ್ಗೆ 10.30ಕ್ಕೆ ನಿಮಗಾಗಿ ಕಾಯುತ್ತಿರುತ್ತೇವೆ.
ಬಂದು ನಮ್ಮನ್ನು ಖುಷಿಗೊಳಿಸುತ್ತೀರಿ ನೀವು. ಗೊತ್ತು ನಮಗೆ:)

10 ಕಾಮೆಂಟ್ಗಳು:
ಶ್ರೀನಿಧಿ, ಶುಭಾಕಾಂಕ್ಷೆಗಳು, ಹರಕೆ ಹಾರೈಕೆಗಳು. ಪ್ರೋಗ್ರಾಂ ಚೆನ್ನಾಗಿ ನಡೆಯಲಿ.
ನಿಮ್ಮ ಪುಸ್ತಕಗಳ ಬಿಡುಗಡೆ ಸಮಾರಂಭಕ್ಕೆ ಶುಭ ಹಾರೈಕೆಗಳು. ಇನ್ನೂ ಹೆಚ್ಚಿನ ಕನ್ನಡ ಸೇವೆ ನಿಮ್ಮಿಂದ ಸಹಾ ನಡೆಯುತ್ತಿರಲಿ...
ಶ್ರೀನಿಧಿ,
ಸಿಹಿ ಸುದ್ದಿ.. ಕಾರ್ಯಕ್ರಮವೆಲ್ಲಾ ಸಿಹಿ, ಸವಿಯಾಗಿ ನಡೆಯಲಿ. ಶುಭವಾಗಲಿ.
ಶುಭ ಹಾರೈಕೆಗಳು, ಇಬ್ಬರಿಗೂ
ಶ್ರೀನಿಧಿ,
ನಿಮ್ಮ ಕವನಗಳನ್ನು ತುಂಬಾ ಮೆಚ್ಚಿಕೊಂಡಿರುವವನು ನಾನು. ಭೌತಿಕವಾಗಿ ಬರಲಾಗದಿದ್ದರೂ, ನನ್ನ ಮನಸ್ಸು ಅಲ್ಲೇ ಇರುತ್ತದೆ.
ನಿಮಗೆ ಹಾಗೂ ಸುಶ್ರುತಗೆ ನನ್ನ ಶುಭಾಶಯಗಳು.
ಅಭಿನಂದನೆಗಳು ಇಬ್ರಿಗೂ!!!!:)
ನಮ್ ಅಣ್ಣಾವ್ರ ಕಾರ್ಯಕ್ರಮಕ್ಕೆ ನಾವ್ ಬರ್ತೀವಿ. ಪುಸ್ತಕದ ಹೆಸರು ಮತ್ತೆ ಮುಖಪುಟವೇ ಇಷ್ಟು ಚಂದ ಇದೆ. ಇನ್ನು ಕವಿತೆಗಳು ಅದೆಷ್ಟು ಮುದ್ದಾಗಿವೆಯೋ...! ವೇಟಿಂಗು ವೇಟಿಂಗು ವೇಟಿಂಗು !
ಅಭಿನಂದನೆಗಳು. ಶುಭವಾಗಲಿ.
-ಪವನಜ
ಜೈ ಹೋ!
ಸುಶ್ರುತ, ನಿಮ್ಮ ಪ್ರಬಂಧಗಳ ಕೃತಿ ‘ಹೊಳೆಬಾಗಿಲು‘ ಬಿಡುಗಡೆಯಾಗುತ್ತಿರುವುದು ತುಂಬಾ ಸಂತೋಷದ ಸಂಗತಿ. ಅಂದು ಥಟ್ ಅಂತ ಹೇಳಿ ಮುದ್ರಣವಿದೆ. ಆದರೂ ಬೆಳಿಗ್ಗೆ ಬಂದು ನಿಮಗೆ ಶುಭ ಹಾರೈಸಲು ಪ್ರಯತ್ನಿಸುತ್ತೇನೆ. ಅಭಿನಂದನೆಗಳು.
-ನಾಸೋಮೇಶ್ವರ
ಕಾಮೆಂಟ್ ಪೋಸ್ಟ್ ಮಾಡಿ