ಸೋಮವಾರ, ಡಿಸೆಂಬರ್ 21, 2009

ಗುನುಗುಗಳು..

ಪಟ್ಟಣದ ಚಂದಿರಗೆ ಬೇಡ
ತಾರೆಗಳ ಸಖ್ಯ, ಮಿನುಗು
ತಾರೆಗು ಮಿಗಿಲು
ನಗರ ದೀಪ!

ದಾರ ಕಡಿದ ಪಟಕೆ
ದೀಪಗಂಬದ ಕುಣಿಕೆ
ಮಗುವಾಸೆ ಸಾವು, ಪಟಕೆ
ದಿಗಂತದ ಕನಸು

ಬ್ರೇಕು ತಪ್ಪಿದ ಸೈಕಲ್,
ಸವಾರನಿಗೆ ದಿಗಿಲು,
ಇಳಿಜಾರ ಚಕ್ರಗತಿ
ಅದರೆದೆಯ ಮಿಡಿತ

4 ಕಾಮೆಂಟ್‌ಗಳು:

sunaath ಹೇಳಿದರು...

ತುಂಬಾ ಚೆನ್ನಾಗಿ ಗುನಗಿದ್ದೀರಾ,ಶ್ರೀನಿಧಿ.
ನೀವು ಗುನುಗುತ್ತಾ ಇರಬೇಕು ಎನ್ನುವದು ನನ್ನ ಅಪೇಕ್ಷೆ.

ಜೋಮನ್ ಹೇಳಿದರು...

nice..

ಕೃಷ್ಣ ಮೂರೂರು ಹೇಳಿದರು...

poorna artha aydille, adroo lahari iddu

Parisarapremi ಹೇಳಿದರು...

ayyuuuu yuu....