ಮಂಗಳವಾರ, ಜನವರಿ 19, 2010

ಬಿದಿರಿನ ಉಸಿರಿಗೆ..

ಮಂದಮಾರುತದಿ ಬೆರೆತು ಕೇಳುತಿದೆ ಮಧುರ ಮುರುಳಿ ಗಾನ
ಹುಲ್ಲುಗಾವಲಿನ ಬಯಲೊಳಗೆಲ್ಲೋ, ಕೊಳಲು ಹಿಡಿದ ತರುಣ

ಅಲೆ ಅಲೆ ಅಲೆ ಅಲೆ ನಾದದ ಲೀಲೆ, ಹಬ್ಬಿದೆ ಸ್ವನ ಘಮ ಊರಿನ ಮೇಲೆ..
ಬಗೆ ಬಗೆ ಬಗೆ ಬಗೆ ವೇಣು ವಿನೋದ, ಜೀವದಿಂ ಜೀವಕೆ ನೂರ್ಬಗೆ ಮೋದ

ಬೆಳ್ಳಿಯ ಗಿಂಡಿಲಿ ಹಾಲನು ಕರೆಯುವ ಗೋಪಿಕೆಗದೆ ಸಂಸಾರ
ನಲ್ಲನ ಕಾಯುವ ಹುಡುಗಿಗೆ ಮನದಲಿ ಭೃಂಗದ ಸಂಚಾರ

ಮರದಡಿ ನೆಳಲಿನ ದನಗಾಹಿಗೆ ನೆಮ್ಮದಿಯಾ ತಾನ
ದೇವರೆದುರ ಮಂದಸ್ಮಿತ ವದನ, ಧ್ಯಾನದೊಳಗೆ ಲೀನ

ಬಾಲರಿಗೆ ನವನೀತ, ಸೋತವಗದು ಗೀತ
ಬೇಟದ ಪ್ರೇಮಿಗಳು ರಾಗಕೆ ಉನ್ಮತ್ತ

ಬಿದಿರಿನ ಉಸಿರಿಗೆ ಯಾವುದೋ ಲೀಲೆ,
ಭಾವಕೆ, ಭಕ್ತಿಗೆ ಪ್ರೇಮಕೆ ಮುಕ್ತಿಗೆ -ಎಲ್ಲಕೂ ತಾಯೇ..

7 ಕಾಮೆಂಟ್‌ಗಳು:

Shivakumara ಹೇಳಿದರು...

ಅವಸರವೇ ಅಪಘಾತಕ್ಕೆ ಕಾರಣ ಗುರುವೇ! ಇದೊಂದು ಪದ್ಯ ಯಾಕೆ ಹೀಗಿದೆ?

Unknown ಹೇಳಿದರು...

baLa cholo odiskandu hoto maaraaya. Those rhyming words made it easy to read through.

sunaath ಹೇಳಿದರು...

ಈ ಕವನವು ಒಂದು ಸೊಗಸಿನ, ನಲಿವಿನ ಪ್ರಪಂಚವನ್ನು ಕಟ್ಟಿಕೊಡುತ್ತಿದೆ. ನಲಿವಿನ, ಒಲವಿನ ಭಾವನೆಯನ್ನು ಮನದಲ್ಲಿ ತುಂಬಿಕೊಂಡ ನಿಮಗೆ ನಿಮ್ಮ ಕನಸಿನ ಪ್ರಪಂಚ ಸಿದ್ಧಿಸಲಿ ಎಂದು ಹಾರೈಸುತ್ತೇನೆ.

ಶಾಂತಲಾ ಭಂಡಿ (ಸನ್ನಿಧಿ) ಹೇಳಿದರು...

ಶ್ರೀನಿಧಿ...

ತುಂಬ ಇಷ್ಟ ಆತು :-)

ಶೆಟ್ಟರು (Shettaru) ಹೇಳಿದರು...

ಕನ್ನಡ ಬ್ಲಾಗ ಲೋಕದ ಸಮೀಕ್ಷೆ: ನೀವೂ ಭಾಗವಹಿಸಿ ಮತ್ತು ನಿಮ್ಮ ಗೆಳೆಯರಿಗೂ ತಿಳಿಸಿ

ಆತ್ಮೀಯರೆ,

ಅತ್ಯಂತ ಶೀಘ್ರವಾಗಿ ಹಾಗೂ ಗುಣಾತ್ಮಕವಾಗಿ ಬೆಳೆಯುತ್ತಿರುವ ಒಂದು ಪ್ರಬಲ ಮಾದ್ಯಮ “ಬ್ಲಾಗಿಂಗ್”, ಇದಕ್ಕೆ ಕನ್ನಡಿಗರು ಮತ್ತು ಕನ್ನಡ ಬ್ಲಾಗಿಂಗ ಹೋರತಲ್ಲ. ಇವತ್ತಿಗೆ ಕನ್ನಡದಲ್ಲು ಸುಮಾರು ೮೦೦ಕ್ಕೂ ಹೆಚ್ಚು ಬ್ಲಾಗಗಳಿವೆ. ಭಾರತಿಯ ಭಾಷೆಗಳ ಬ್ಲಾಗಿಂಗ ಸಂಭ್ರಮದಲ್ಲಿ ಕನ್ನಡವಿಗ ಪ್ರಖರ ಪ್ರಕಾಶ, ಸುಂದರ ಅಕ್ಷರಗಳ ಉದ್ಯಾನ.

ಬಹಳಷ್ಟು ಬ್ಲಾಗ್‍ಗಳಲ್ಲಿ ಒಂದು, ಎರಡು ಪೋಸ್ಟುಗಳಿವೆ. ಕೆಲವೆಡೆ ಒಬ್ಬರೇ ಐದಾರು ಬ್ಲಾಗ್ ಮಾಡಿಕೊಂಡಿದ್ದಾರೆ. ಏನೇ ಆದರೂ ಉತ್ಸಾಹ-ಆಕಾಶಕ್ಕೆ ಏಣಿ ಹಾಕುವಷ್ಟಿದೆ. ಹೀಗಾಗಿ ಕನ್ನಡ ಬ್ಲಾಗುಗಳ ಮತ್ತು ಬ್ಲಾಗಿಗರ ಈ ಸಮೀಕ್ಷೆ ನಮ್ಮ ಮನದಲ್ಲಿ ಹುಟ್ಟಿದ್ದು, ಈ ಸಮೀಕ್ಷೆ ಕನ್ನಡ ಬ್ಲಾಗುಗಳ ಮತ್ತು ಬ್ಲಾಗಿಗರ ವಿಶೇಷಗುಣ, ಅಪೂರ್ವಲಕ್ಷಣ, ವೈಶಿಷ್ಟ್ಯಗಳನ್ನು ಅರ್ಥೈಸಿಕೊಳ್ಳುವ ಒಂದು ಸಣ್ಣ ಪ್ರಯತ್ನ.

ಆತ್ಮೀಯ ಬ್ಲಾಗ ಬಂಧುಗಳೇ, ಈ ಸಮೀಕ್ಷೆಯ ಸಫಲತೆ ನಿಮ್ಮ ಸಹಯೋಗದಿಂದ ಮಾತ್ರ ಸಾಧ್ಯ. ಹೀಗಾಗಿ ದಯವಿಟ್ಟು ಈ ಕೆಳಗೆ ನೀಡಿದ ಸಂಪರ್ಕ ಕೊಂಡಿ (Link) ಚಿಟುಕಿಸಿ ಅಲ್ಲಿ ನೀಡಲಾಗಿರುವ ಕೆಲವು ಪ್ರಶ್ನೆಗಳಿಗೆ ಉತ್ತರಿಸಿ. ನೀವು ನಿಡಿದ ಎಲ್ಲ ಮಾಹೀತಿಗಳನ್ನು ರಹಸ್ಯವಾಗಿರಿಸುವುದಾಗಿಯೂ ಮತ್ತು ಸಮೀಕ್ಷೆಯ ಫಲಿತಾಂಶವನ್ನು ಕೇವಲ ಶೈಕ್ಷಣಿಕ ಕಾರ್ಯಗಳಿಗೆ ಮಾತ್ರ ಉಪಯೋಗಿಸಿಕೊಳ್ಳಲಾಗುವುದಾಗಿ ಈ ಮೂಲಕ ಪ್ರಮಾಣಿಸುತ್ತೆವೆ.

http://spreadsheets.google.com/viewform?formkey=dF90eEtaNDlnNkRQQmVPZlBRSE02OGc6MA..

ತಮ್ಮ ಸಲಹೆ ಮತ್ತು ಸಂದೇಹಗಳಿಗಾಗಿ shettaru@gmail.com ಗೆ ಮಿಂಚಂಚೆ ಕಳುಹಿಸಿ.

ಧನ್ಯವಾದಗಳೊಂದಿಗೆ

ಈರಣ್ಣ ಶೆಟ್ಟರು ಮತ್ತು ಗ್ರಂಥಪಾಲಕ ಗೆಳೆಯರು

ಸಿಂಧು sindhu ಹೇಳಿದರು...

ನಿಧೀ,

ಮಧುರವಾದ ಪದಮಾಲಿಕೆ!

ತುಂಬ ಇಷ್ಟ ಆತು,

ನಾ.ಹೆಗ್ಡೇರ ಮನಿಗೆ ಹೋಗದು ಯಾವಾಗ?

ಪ್ರೀತಿಯಿಂದ,
ಸಿಂಧು

ಶ್ರೀನಿಧಿ.ಡಿ.ಎಸ್ ಹೇಳಿದರು...

ಶಿವಕುಮಾರಾ,

ಹೌದೇನೋ? ಇನ್ನೂ ಚೆನ್ನಾಗ್ ಬರಿಯೋಕೆ ಟ್ರೈ ಮಾಡ್ತೀನಿ..

ಕೃಷ್ಣ- :) ಥ್ಯಾಂಕ್ಸು

ಕಾಕಾ, ನಿಮ್ಮ ಆಶೀರ್ವಾದ ಹೀಂಗೇ ಇರ್ಲಿ..

ಶಾಂತಲಾ ಮೇಡಮ್,
ಹೌದೇನ್ರೀ? ಧನ್ಯ.

ಸಿಂಧಕ್ಕ,
:)
ಹೋಪನೇ, ಎಲ್ಲರ್ನೂ ಒಟ್ ಹಾಕಕಾತು.