ಸೋಮವಾರ, ಫೆಬ್ರವರಿ 15, 2010

ದರ್ಶನ ಭಾಗ್ಯ!

(ಹಿಂದೆ ಎಚ್.ಆರ್ ಆಗಿದ್ದಾಗಿನ ಅನುಭವಗಳನ್ನು ಬರೀತಿದ್ದೆ. ಮಾಧ್ಯಮ ಜಗತ್ತಿಗೆ ಬಂದು ಎರಡು ಎರಡೂವರೆ ವರ್ಷಗಳಾದರೂ ಹೆಚ್ಚಿಗೆ ಏನೂ ಬರೆದಿಲ್ಲ- ಇಲ್ಲಿನ ಅನುಭವಗಳ ಬಗ್ಗೆ. ಇನ್ನು ಬರೆಯಲಾಗುವುದು:)


ನನ್ನ ಅಣ್ಣ ಉಡುಪೀಲಿರ್ತಾರೆ. ಅವ್ರ ದೂರದ ಸಂಬಂಧಿಯೊಬ್ಬರ ಮಗ ಏನೋ ಬೆಂಗಳೂರಲ್ಲಿ ಸರಿಯಾದ ಕೆಲ್ಸ ಇಲ್ದೇ ಅಲೀತಿದಾನೆ ಅಂತ ನನ್ನ ಹತ್ರ ಒಂದಿನ ಫೋನ್ ಮಾಡಿದೋರು ಹೇಳಿದ್ರು. ಮನೆ ಕಡೆಗೂ ಕಷ್ಟ, ಎನಾರೂ ಕೆಲ್ಸ ಇದ್ರೆ ನೋಡೋ ಅಂದ್ರು. ಅವನನ್ನು ನಾನೂ ಯಾವ್ದೋ ಮದುವೆಲೆಲ್ಲೋ ನೋಡಿದ್ದೆ ಹಿಂದೊಮ್ಮೆ. ಅದೇನೋ ಇರಲಾರದೇ.. ಅಂತಾರಲ್ಲ, ಹಾಂಗೆ ನಾನು, ಹೌದಾ ಅವ್ನಿಗೆ ನನ್ನ ನಂಬರ್ರು ಕೊಡಿ, ಮಾತಾಡ್ತೀನಿ ಅಂದೆ.

ನಾಲ್ಕಾರು ದಿನ ಕಳೀತು. ನಾನು ವಿಶ್ಯ ಮರ್ತೇ ಬಿಟ್ಟಿದ್ದೆ. ಆಫೀಸಲ್ಲಿ ಕೂತಿದ್ದೆ. ರಿಸೆಪ್ಶನ್ ಫೋನ್ ಮಾಡಿ ಉಲಿದಳು- ನಿಮ್ಮನ್ನು ಹುಡ್ಕೊಂಡು ಯಾರೋ ಬಂದಿದಾರೆ, ಇಲ್ಲೇ ಕೂತಿದಾರೆ ಬನ್ನಿ ಅಂತ. ಪುಣ್ಯಕ್ಕೆ ಎಲ್ಲೂ ಹೊರ್ಗೆ ಹೋಗ್ದೇ ಆಫೀಸಲ್ಲೇ ಇದ್ದೆ. ಹೋಗಿ ನೋಡಿದ್ರೆ, ಅದೇ ನನ್ನ ಅಣ್ಣನ ಸಂಬಂಧೀ ಹುಡುಗ. ಫೋನೂ ಗೀನೂ ಏನೂ ಮಾಡ್ದೇ ಧಿಮ್ ರಂಗ ಅಂತ ಬಂದಿದ್ದ.

ನಮ್ ಆಫೀಸೆಲ್ಲ ಒಂದ್ ಸಲ ತೋರ್ಸಿ, ಕ್ಯಾಂಟೀನಿಗೆ ಕರ್ಕೊಂಡು ಹೋದೆ. ಜ್ಯೂಸ್ ಗೆ ಹೇಳಿ, ಅವನ್ ಹತ್ರ ಏನ್ ಮಾಡ್ಕೊಂಡ್ ಇದೀಯಾ, ಏನ್ ಕತೆ -ವಿಚಾರ್ಸ್ತಾ ಇದ್ದೆ. ಅಷ್ಟ್ ಹೊತ್ತಿಗೆ, ನಮ್ಮಲಿನ ಸ್ಟುಡಿಯೋಗೆ ಶೂಟಿಂಗ್ ಗೆ ಅಂತ ಬಂದಿದ್ದ ನಟ ರಮೇಶ್ ಅರವಿಂದ್ ಹಾಗೇ ಯಾರ್ ಜೊತೆಗೋ ಮಾತಾಡ್ತಾ ಕ್ಯಾಂಟೀನ್ ಗೆ ಬಂದ್ರು. ಈ ಪುಣ್ಯಾತ್ಮ ಯಾರೋ ರಾಷ್ಟ್ರಗೀತೆ ಹಾಡಿದ್ ಕೇಳಿದ ಹಾಗೆ ಎದ್ದು ನಿಂತು ಬಿಡೋದಾ! ಏನಾಯ್ತೋ, ಕೂತ್ಗೊಳಪ್ಪಾ ಅಂತ ಎಳೆದು ಕೂರ್ಸಿದೆ. ಆ ಕಡೆ ಟೇಬಲಿನ ಯಾರೋ ಸಣ್ಣಗೆ ನಕ್ಕಿದ್ದು ಕೇಳ್ಸಿತು.

ನಾನು ಮತ್ತೆ ಅವನ ಕೆಲ್ಸದ ಬಗ್ಗೆ ವಿಚಾರ್ಸ್ತೀನಿ, ಊಹೂಂ, ಈ ಯಪ್ಪಂಗೆ ಅದೆಲ್ಲ ತಲೆಗೇ ಹೋಗ್ತಿಲ್ಲ. ಅಣ್ಣಾ, ನಿಮ್ಮಲ್ಲಿಗೆ ಎಲ್ಲಾ ಫಿಲಂ ಸ್ಟಾರ್ಸ್ ಬರ್ತಾರಾ?- ಹೂಂ ಕಣೋ ಬರ್ತಾರೆ ಅಂದೆ. ನೀ ನೋಡಿದೀಯಾ ಅವ್ರನ್ನ?- ಹೌದು. ಏನ್ ಚಾನ್ಸಣ್ಣಾ ನಿಂದೂ.. ಮಸ್ತ್ ಅಂತ ಉಸ್ರೆಳ್ಕೊಂಡ.

ಆಮೇಲಿಂದ ೫ ನಿಮಿಷ ಆತನಿಗೆ ನಮ್ಮಲ್ಲಿ ಯಾರ್ಯಾರು ಬರ್ತಾರೆ, ಯಾಕ್ ಬರ್ತಾರೆ ಇತ್ಯಾದಿಯೆಲ್ಲ ವಿವರಿಸ್ಬೇಕಾಯ್ತು. ಹಾಗೇ ಮಾತಾಡ್ತಾ ದರ್ಶನ್ ಬಂದಿದ್ದ ಸುದ್ದಿ ಹೇಳಿದ ಕೂಡ್ಲೇ ಈ ಹುಡುಗ, ಹಾಂ! ಅಂತ ದೊಡ್ಡದಾಗಿ ಬಾಯಿಬಿಟ್ಟ. ತಾನು ದರ್ಶನ್ ದೊಡ್ಡ ಫ್ಯಾನ್ ಅಂತಲೂ, ಆತನ ಯಾವುದೇ ಚಿತ್ರಗಳನ್ನ ನೋಡದೇ ಬಿಟ್ಟಿಲ್ಲ - ಮೆಜೆಸ್ಟಿಕ್, ಕರಿಯ ಅಂತೆಲ್ಲ ಆತ ನಟಿಸಿದ ಎಲ್ಲ ಚಿತ್ರಗಳ ಹೆಸರು ಪಟ ಪಟ ವರದಿಯೊಪ್ಪಿಸಿದ.

ನಾನು ಸುಮ್ಮನೇ ಕೂತು ಜ್ಯೂಸ್ ಕುಡೀತಿದ್ದೆ. "ಒಂದೇ ಒಂದು ಫಿಲಂ ಬಿಟ್ಟಿಲ್ಲ ಅಣ್ಣಂದು. ಫಸ್ಟ್ ಡೇ, ಫಸ್ಟ್ ಶೋ. ಪಕ್ಕಾ. ಆವತ್ತೇ ನಾಲಕ್ ಸಲ ನೋಡಿದ್ದೂ ಇದೆ ಮತ್ತೆ. ಕರಿಯ ಫಿಲಂ ೨೪ ಸಲ, ಮತ್ತಿನ್ಯಾವ್ದೋ ೧೭, ಮತ್ತಿನ್ಯಾವ್ದೋ ೧೪ ಅಂತ ಉದ್ದಕ್ಕೆ ಪಟ್ಟಿ ತೆಗ್ದ.

ಅಲ್ವೋ, ಕೆಲ್ಸ ಮಾಡೋ ಕಂಪ್ನಿನೋರು ಅಷ್ಟೆಲ್ಲ ರಜೆ ಕೊಡ್ತಾರೇನೋ, ದುಡ್ ಎಲ್ಲಿಂದ ಬರತ್ತೋ ಅಂದಿದ್ದಕ್ಕೆ "ಅಣ್ಣನ್ ಫಿಲಂ ನೋಡೋಕ್ ಬಿಡ್ದೇ ಇರೋ ಕಂಪ್ನಿ ಕೆಲ್ಸ ಯಾಕಣ್ಣಾ ಬೇಕು, ಬಿಟ್ ಬಿಡ್ತೀನಿ ಅಷ್ಟೇ, ಆಗ್ಲೇ ಎರಡ್ ಕಂಪ್ನೀ ಲಿ ಅದ್ಕೇ ಗಲಾಟೆ ಮಾಡಿ ಬಿಟ್ಟಿದೀನಿ ಜಾಬ್ ನ ಅಂದ. ನಾನು ಒಟ್ಟು ಎಷ್ಟ್ ಕಂಪ್ನಿಲಿ ಕೆಲ್ಸ ಮಾಡಿದೀಯಾ ಅನ್ನೋ ಪ್ರಶ್ನೆ ಕೇಳುವ ಸಾಹಸ ಮಾಡಲಿಲ್ಲ.. ಈತ ನೆಲೆ ಯಾಕೆ ಕಂಡುಕೊಂಡಿಲ್ಲ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿತ್ತು.

"ಅಣ್ಣಾ, ಒಂದು ಹೆಲ್ಪ್ ಮಾಡಣ್ಣ, ನಿಮ್ ಕಂಪ್ನೀಲೇ ಏನಾರೂ ಕೆಲ್ಸ -ಸೆಕ್ಯುರಿಟೀ ಗಾರ್ಡ್ ಆದ್ರೂ ಪರ್ವಾಗಿಲ್ಲ- ಇದ್ರೆ ಕೊಡ್ಸ್ ಬಿಡು. ದರ್ಶನ್ ಬಂದಾಗ ಒಂದ್ ಸಲ ತಬ್ಗೊಂಡು, ಶೇಕ್ ಹ್ಯಾಂಡ್ ಕೊಟ್ಟು ಕಣ್ ತುಂಬ ನೋಡ್ಕಂಬಿಡ್ತೀನಿ. ಪ್ಲೀಸ್"
ನಮ್ಮಲ್ಲಿ ದರ್ಶನ್ ಫಿಲಂ ರಿಲೀಸ್ ಆಗಿದ್ ದಿನ ರಜೆ ಕೊಡ್ದಿದ್ರೆ?
"ಹೇ, ಅದ್ ಹೆಂಗಾರಾ ಹೋಗದೇ"

ಖಂಡಿತ ಕೆಲ್ಸ ಇದ್ರೆ ಕೊಡಸ್ತೀನಪಾ ಅಂತಂದು ಹೊರಡಿಸಿದೆ. ಹೊರಡೋ ಮುಂಚೆ, "ನೆಕ್ಸ್ಟ್ ಟೈಮ್ ದರ್ಶನ್ ಬರೋವಾಗ ಹೇಳು ಬಂದೋಗ್ತೀನಿ"ಅಂದ. ಆಯ್ತಪಾ ದೊರೇ ಅಂತಂದು ಕಳಿಸಿದೆ.

ಸೆಕ್ಯುರಿಟಿ ಗಾರ್ಡೇ ದರ್ಶನ್ ಮೈ ಮೇಲೆ ಬೀಳೋಕೆ ಹೋಗೋ ದೃಶ್ಯ ಕಲ್ಪಿಸಿಕೊಂಡು , ನಗು ಬಂತು.

24 ಕಾಮೆಂಟ್‌ಗಳು:

sunaath ಹೇಳಿದರು...

ಒಳ್ಳೇ ಶೈಲಿಯಲ್ಲಿ ಬರೀತೀರಾ. ಇಂತಹ ಆಪ್ತಬರಹಗಳನ್ನು ಇನ್ನಿಷ್ಟು ಕೊಡಿ.

Non Sense ಹೇಳಿದರು...

ಅಣ್ಣ ಖರೆ ಹವ್ದನ ಇದು?

Sree ಹೇಳಿದರು...

neevu media janagaLge dinaa stargaLna nODi nODi apathya andre paapa ellaarU hangE irOkaagatta?;)

Vijaya ಹೇಳಿದರು...

title super :-) ... sikkapatte senti postgalanna odi odi saakagittu ... refreshing change!

Vijaya ಹೇಳಿದರು...

btw, nam office nalli nin blog access aayatappa!! allindaane comment-u :-)

Parisarapremi ಹೇಳಿದರು...

ಎಲ್ಲಾ ಬಿಟ್ಟು ದರ್ಶನ!! ರಾಮ್ ರಾಮ!!

Harsha Bhat ಹೇಳಿದರು...

darshan katti hidkonde bartane anta hedrsodalva? ... enta anna maraya neenu tammanna hedrsachance bitte... ;)

ತೇಜಸ್ವಿನಿ ಹೆಗಡೆ ಹೇಳಿದರು...

:D :D :D

ಸಂದೀಪ್ ಕಾಮತ್ ಹೇಳಿದರು...

ಮೀರಾ ಜಾಸ್ಮೀನ್ ಏನಾದ್ರೂ ಬಂದ್ರೆ ಅಂಗೇ ಒಂದು ಮಿಸ್ ಕಾಲ್ ಕೊಟ್ಬುಡಣ್ಣೋ.

Lakshmi Shashidhar Chaitanya ಹೇಳಿದರು...

ramesh matte sudeep bartare andhre nange heLbiDi, naanu bandhbiDtini... pleeeeeeeeeease kanri ! :D :D

ಶ್ರೀನಿಧಿ.ಡಿ.ಎಸ್ ಹೇಳಿದರು...

ಸುನಾಥ್ ಕಾಕಾ,
ಇನ್ನೂ ಬರಲಿವೆ:)

ರವೀಂದ್ರ, ಹೌದಲೇ ಅಣ್ಣಾ, ನಂಬಲೇ ಬೇಕು!

ಶ್ರೀ,
ಅದ್ರೂ, ತೀರಾ ಹೀಂಗೆಲ್ಲ ಆದ್ರೆ ಕಷ್ಟ ಕಣ್ರೀ..

ವಿಜಯಾ ಮೇಡಂ,
ಥ್ಯಾಂಕ್ಸು, ಮತ್ತು ನನ್ನ ಬ್ಲಾಗ್ ಟೆಂಪ್ಲೇಟ್ ಚೇಂಜ್ ಆಗಿದ್ದಕ್ಕೇನೋ ಹಾಂಗಾರೆ!
ಹೂಂ ಕಣೋ ಅರುಣ, ಅವ್ನು ನಿನ್ ಫೇವರಿಟ್ ಅಲ್ಬಾ?- ಅರ್ಜುನ ಅನ್ನುತಾರೆ ನನ್ನ:)

ಹರ್ಷಾ, ಹೌದಲಲೆ!

ಅತ್ಗೇ, ಇರ್ಲಿ ಇರ್ಲಿ..

ಸಂದೀಪ್ ಕಾಮತ್ ಮತ್ತು ಲಕ್ಷ್ಮೀಜೀ,

ಈ ಬಗ್ಗೆ ಗಮನ ಹರಿಸಲಾಗುವುದು:)

Unknown ಹೇಳಿದರು...

volle post Sri, vodi tumba enjoy maadhe.

ವಿ.ರಾ.ಹೆ. ಹೇಳಿದರು...

ನೀನು ಹೆಚ್ಚಾರ್ ಆಗಿದ್ರೇ ಚೆನ್ನಾಗಿತ್ತು. ವಾರಕ್ಕೆರಡಾದರೂ ಇಂತಹ ಚಂದ ಚಂದ ಬರಹ ಬರ್ತಿತ್ತು. ಈಗ್ಲೂ ಸ್ವಲ್ಪ ಗಮನ ಹರಿಸು ಈ ಕಡೆ. ಹಾಸ್ಯ, ವಾಸ್ತವ, ಚಿಂತನೆ ಎಲ್ಲಾ ಕಾಣಿಸ್ತು ಈ ಬರಹದಲ್ಲಿ ನಂಗೆ. ಚೆನ್ನಾಗಿ ಬರದ್ದೆ.

ಅಂದಹಾಗೆ, ರಕ್ಷಿತಾ ಬರದಾದ್ರೆ ನಂಗೊಂದು ಮೆಸೇಜ್ ಪ್ಲೀಜ್.. :-) ತೀರ ತಬ್ಕೊಳ್ಳೋ ಸೀನ್ ಎಲ್ಲಾ ನೆನ್ಸ್ಕೊಂಡು ಕೊರಗಬೇಡ ಮತ್ತೆ :)

ಅನಾಮಧೇಯ ಹೇಳಿದರು...

halli hudugaru andre hagene alva avara mugdha manssu hage iratte adakkella identa artical !

Sushrutha Dodderi ಹೇಳಿದರು...

@ ವಿ.ರಾ.ಹೆ.,

ವ್ಹಾಟ್ಟೇ ಖರಾಬ್ ಟೇಸ್ಟ್ ಯು ಹ್ಯಾವ್! ಹೋಗೀ ಹೋಗಿ ರಕ್ಷಿತಾ!! ನಾಕು ಎಮ್ಮೆಯಷ್ಟು ದಪ್ಪಗಿದಾಳೆ. ಐ ಡೌಟ್ ಯು ಕನ್ ಹಗ್ ಹರ್ ಈವನ್!

ಮನಸಿನ ಮಾತುಗಳು ಹೇಳಿದರು...

ಅಂತೂ ಇಂತೂ ಅವನಿಗೆ ಕೆಲಸ ಕೊಡಿಸಿದ್ರ ಇಲ್ವಾ ಲಾಸ್ಟಿಗೆ?? ...:-)

ವಿ.ರಾ.ಹೆ. ಹೇಳಿದರು...

@ಸುಶ್ರುತ್,

ಮನೆಲ್ಲಿ ಹೇಳಿ ಬಂದಿದ್ದೀಯಾ ತಾನೆ? :X
ಹೆಂಗಾದ್ರೂ ಇರ್ಲಿ, ಅದೆಲ್ಲಾ ಅವರವರ ನೋಟ. :)

ಮಿಥುನ ಕೊಡೆತ್ತೂರು ಹೇಳಿದರು...

ha hah ah

ಶ್ರೀನಿಧಿ.ಡಿ.ಎಸ್ ಹೇಳಿದರು...

Dolly,
Thnkz kane!:)

ವಿಕಾಸ,
ಇನ್ ಬರೀತೀನಪಾ ಈ ತರದ್ದನ್ನ.ಆದ್ರೂ, ಸುಶ್ರುತ ಹೇಳಿದ್ದು ಕರೆಕ್ಟಿದೆ!

ಸುಶ್- ನೀ ಅಂದಿದ್ದಕ್ಕೆ ೨೦೦% ವೋಟು!

ಶ್ರೀನಿಧಿ.ಡಿ.ಎಸ್ ಹೇಳಿದರು...

ದಿವ್ಯಾ,

ಅವನಿಗೆ ಕೆಲ್ಸ ಕೊಡ್ಸಿದ್ರೆ, ನನ್ನ ಹುಡ್ಕೊಂಡು ಬಂದಾರು !!

ವಿಕಾಸ,

ನೀನು ಇಲ್ಲೆಲ್ಲ ಹೀಂಗೆಲ್ಲ ಧಮ್ಕಿ ಹಾಕಂಗೆ ಇಲ್ಲಪ!

ಮಿಥುನ,

:)

Parisarapremi ಹೇಳಿದರು...

ಸುಶ್ರುತ, ‘ಕನ್‘ ಅಂದ್ರೆ ಏನು? ಯೂ ಕನ್ ಹಗ್ ಹರ್ ಅಂದ ಹೇಳಿದ್ದೀಯ! ಇದು ಬರಹ ದಿರೆಚ್ತ್ ಸಮಸ್ಯೆಯಂತೂ ಅಲ್ಲ!

sapna ಹೇಳಿದರು...

ನಂಗೂ ಓದಿ ನಗು ತಡೀಲಿಕ್ಕೆ ಆಗ್ತಿಲ್ಲ ಶ್ರೀನಿಧಿ ಅವ್ರೇ. ಅದ್ಯಾರು ನಂಗೂ ಒಂದಸ್ಲ ತೋರ್ಸಿದ್ರೆ ಕಣ್ತುಂಬ ನೋಡ್ಬಿಡ್ತಿದ್ದೆ. ರಮೇಶ್ ಬಂದ ದಿನ ನಾನೂ ಆಫೀಸಲ್ಲೇ ಇದ್ನಲ್ಲಾ..:)

damodara dondole ಹೇಳಿದರು...

YENGE OBBA FILM ACTOR DARSHANA ADAGLE HINGE...INNU IVRU AWARD FUNCTIONGELLA BANDRE YENGE...ADRLI EGA NIM OFFICENALLI SUDEEP YAVAG BARTHARE VICHARISI NAN VODAFONE CL MADI...

ಚಿನ್ಮಯ ಹೇಳಿದರು...

ಸೂಪರ್ ಪೋಸ್ಟ್!!
ನನ್ನ ಗೆಳೆಯ ರಾಜೇಶನಿಗೆ ಇದೆ ತರಹದ ಒಂದು 'ದರ್ಶನ' ಅನುಭವವಾಗಿತ್ತು.
ಚಹಾ ಅಂಗಡಿಯ ಒಂದು ಮಾತುಕತೆ! ಚಿತ್ರದ ಚಿತ್ರೀಕರಣವನ್ನು ಪೊಲೀಸರು ಅಡ್ಡಿ ಮಾಡಿದಾಗ ಅಲ್ಲೇ ಇದ್ದ ದರ್ಶನ್,ಪೋಲಿಸ ಕಮೀಶನರಿಗೆ ಒಂದೇ ಹೊಡೆತ ಕೊಟ್ಟನಂತೆ. ಪೋಲಿಸ ಕಮೀಶನರ ಗಪ್ ಚಿಪ್!!
ನನ್ನ ಗೆಳೆಯನಿಗೆ ನಗು ತಡೆಯಲಾಗಲಿಲ್ಲ!