ಗುರುವಾರ, ಜೂನ್ 17, 2010
ಲವ್ವರ್
ಕಾಂಡಿಮೆಂಟ್ಸು ಅಂಗಡಿಯೊಂದಕ್ಕೆ ಹೋಗಿದ್ದೆ, ಅಂಗಡಿ ಹುಡುಗ ಫೋನಲ್ಲಿ ಮಾತಾಡ್ತಾ ನಿಂತಿದ್ದ...
ನನಗೆ ಬೇಕಾದ್ದನ್ನ ಆರ್ಡರ್ ಮಾಡಿದೆ, ಫೋನಲ್ಲಿ ಮಾತಾಡ್ತಾನೇ ತೆಗೆದು ಕೊಟ್ಟ.ದುಡ್ಡು ಕೊಡಲು ಹೊರಟೆ, ಕೈ ಸನ್ನೆ ಮಾಡಿ, ನಿಲ್ಲಿಸಿಕೊಂಡು, ಫೋನ್ ಸಂಭಾಷಣೆ ಮುಂದುವರಿಸಿದ.
" ಇಲ್ಲ ಇಲ್ಲ, ಲವ್ವರ್ ಇಲ್ಲ"
"..."
"ನಿಜ್ವಾಗ್ಲೂ ಇಲ್ಲ"
"..."
"ನಿಮ್ ಹತ್ರ ಯಾಕ್ರೀ ಸುಳ್ ಹೇಳ್ಲಿ ನಾನು, ಲವ್ವರ್ ಇಲ್ಲ ಕಣ್ರೀ.."
"..."
" ಲವ್ವರ್ ಇದ್ರೆ ಸುಮ್ನಿರ್ತಿದ್ನಾ ನಾನು"
"..."
ನಾನು ಸುಮ್ನೇ ಇದ್ದೆ..
"ನೀವು ನಮ್ಮ ಖಾಯಂ ಕಸ್ಟಮರ್ ಸಾರ್, ನನ್ ಹತ್ರ ಲವ್ವರ್ ಇದ್ರೆ ಹೇಳ್ದೇ ಮೋಸ ಮಾಡ್ತೀನಾ?"
"..."
ಅಯ್ಯ! ಇದೊಳ್ಳೆ ಕತೆನಲಪಾ ಅಂತ ನಾನು..
ಆ ಕಡೆ ಪಾರ್ಟಿ ಏನೋ ಸುಮಾರು ಕೊರೀತು.. ಈ ಹುಡ್ಗ ಈ ಬಾರಿ ಸ್ವಲ್ಪ ಜೋರಾಗೇ,
"ಲವ್ವರ್ ಇದ್ರೆ ನೀವ್ ತಗಂಬುಡಿ ಸಾರ್, ನಾನೂ ನೋಡ್ತೀನಿ" ಅಂದ.
ನಂಗೆ ಇವನ ಲವ್ವರ್ ಪುರಾಣ ಕಟ್ಟಿಕೊಂಡು ಆಗಬೇಕಾದ್ದು ಏನೂ ಇರಲಿಲ್ಲ. ದುಡ್ಡು ಎಷ್ಟಾಯ್ತು ಅಂತ ಸನ್ನೆ ಮಾಡಿದೆ..
ಕೈಲಿದ್ದ ನೋಟು ಇಸಕೊಂಡು , ಚಿಲ್ಲರೆ ಹುಡುಕುತ್ತ ಮತ್ತೆ ಶುರು ಮಾಡಿದ.
"ನೋಡಿ, ನಾನು ಯಾವಗ್ಲೂ ನಿಮ್ಗೆ ನನ್ ಕಡೆಯಿಂದ ಲವ್ವರ್ ಕೊಡ್ತೀನಿ ಅಲ್ವಾ, ಈ ಸಲ ಅಡ್ಜಸ್ಟ್ ಮಾಡ್ಕಳಿ ಸಾರ್"
ನನಗೆ ತಲೆಯೆಲ್ಲ ಒಂದು ಸಲ ಗಿರ್ರಂತು! ಇಷ್ಟೊಂದು ಪಬ್ಲಿಕ್ಕಾಗಿ, ಹೀಂಗೆಲ್ಲ ಮಾತಾಡದ!ಇದ್ಯಾಕೋ ಸಾವಾಸ ಅಲ್ಲಾಂತ, ಚಿಲ್ಲರೆ ತಗಂಡು ಹಂಗೆ ಮೆಲ್ಲಗೆ ಹೊರಟೆ..
ಹುಡುಗ ಹೇಳ್ತಾ ಇದ್ದ, ವಿ ಆರ್ ಎಲ್ ನಲ್ ಅಂತೂ ಖಂಡಿತ ಇಲ್ಲ ಸಾರ್, ಬೇರೆದ್ರಲ್ಲಿ ಲವ್ವರ್ ಇದ್ಯಾ ಟ್ರೈ ಮಾಡ್ತೀನಿ !!
ಅವನು ಈ ಬ್ಯುಸಿನೆಸ್ಸು ಮಾಡ್ತಾನೆ ಅಂತ ನಂಗೆ ಹೇಗೆ ಗೊತ್ತಾಗಬೇಕು!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
13 ಕಾಮೆಂಟ್ಗಳು:
hogli konege Seabird nalladru lavvar kodsdna kelbekittu :)
ಹಹ.. ಚೆನ್ನಾಗಿದೆ.. ವಿ ಆರ್ ಎಲ್ ನಲ್ಲಿ ಇದ್ಯಾ ನೋಡ್ತೀನಿ ಅನ್ನೋವರೆಗೂ ಸಕತ್ ಕನ್ಫ್ಯೂಶನ್ ಆಗಿತ್ತು.. ಆಮೇಲೆ ಗೊತ್ತಾಯ್ತು..ಆತ Lower Berth ಬಗ್ಗೆ ಮಾತಾಡ್ತಾ ಇದ್ದ ಅಂತ.. ನನ್ನ ಊಹೆ ಸರೀನಾ..??
ಇಂಥ ಮಾತುಗಳು ಕೆಲವರಿಗೆ ಬೇಗ ಅರ್ಥ ಆಗಬಹುದು..
ಆದ್ರೆ ನಮ್ಮಂತವರಿಗೆ ಒಂದು ಸಾರಿ ತಲೆ ಗಿರ್ರ್ ಗುಡದು ಸಹಜ ಅಲ್ದಾ ನಿಧಿ???..ಆಮೇಲೆ ನಿಧಾನಕ್ಕೆ ಅರ್ಥ ಆಗ್ತು..:-)
ತುಂಬಾ ದಿನಗಳ ನಂತರ ಬ್ಲಾಗ್ ಬರದ್ದೆ..
nice .. :-)
ನನಗಂತೂ ಇನ್ನೂ ಬಗೆ ಹರ್ದಿಲ್ಲೆ. "Lower Birth" ಆ ಅಥ್ವಾ ನಿಜವಾಗಲೂ ಆ ತರ "Value Added Service" ಊ ಶುರು ಅಯ್ದಾ ಹೇಳಿ!!!!
:-)))))))))))))))))))
ತುಂಬಾ ಚೆನ್ನಾಗಿದ್ದು......ಕೆಳಗಿನ ಸಾಲು " ನಿಜವಾಗ್ಲು ತಲೆ ತಿರುಗಿಸ್ತು!!!
"ನೋಡಿ, ನಾನು ಯಾವಗ್ಲೂ ನಿಮ್ಗೆ ನನ್ ಕಡೆಯಿಂದ ಲವ್ವರ್ ಕೊಡ್ತೀನಿ ಅಲ್ವಾ, ಈ ಸಲ ಅಡ್ಜಸ್ಟ್ ಮಾಡ್ಕಳಿ ಸಾರ್"
ಹಾ ಹಾ..
Punya Lovverna mele malagikondu hogabahudu antha helalilla.
ಸ್ಲೀಪರ ಬಸ್ಸುಗಳಲ್ಲಿ ಲವ್ವರ ಸಿಕ್ಕರೇ ಚೆನ್ನಾಗಿರೋದು!
Illa illa "blog bariyalla", "baryode illa"..
Shreenidhi gu ondu blog emba side business ide anta re-artha agiddu ivatte :)
btw, nice post, missed them a lot.
-Chin
ಹ್ಹ ಹ್ಹ ತಮಾಷೆಯಾಗಿದೆ. ಸುನಾಥ್ ಅವರ ಕಮೆಂಟ್ ಸೂಪರ್.
@ all,
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.
ಬೇರೆಯವರ ಮಾತು ಕದ್ದು ಕೇಳೋದು ತಪ್ಪು....
ಹ ಹ್ಹ ಹ್ಹ ಹ್ಹ ತುಂಬಾ ಸೊಗಸಾಗಿದೆ.
ಎಷ್ಟೋ ದಿನಗಳ ನಂತರ ನಿಮ್ಮ ಬ್ಲಾಗ್ ಓದ್ತಾ ಇದೀನಿ...
ಕಾಮೆಂಟ್ ಪೋಸ್ಟ್ ಮಾಡಿ