ಮಂಗಳವಾರ, ಆಗಸ್ಟ್ 24, 2010

ದಾಂಪತ್ಯ ಗೀತೆಗಳು-1

ನಾನು ಇವಳಿಗೂ ಮೊದಲು
ಮನೆಗೆ ಬಂದು, ಕಾಪಿಗೀಪಿ ಮಾಡಿ
ಅಚ್ಚರಿ ಮೂಡಿಸೋಣವೆಂದು, ಇಂದು ಬರೋದು ಲೇಟು
ಅಂತ ಗಿಲೀಟು ಮೆಸೇಜು ಮಾಡಿ
ಬೈಕು ಪಕ್ಕದ ರೋಡಲ್ಲಿಟ್ಟು,
ಮನೆಗೆ ಬಂದರೆ
ತೆರೆದ ಬಾಗಿಲು ನಗುತ್ತಿತ್ತು,
ಮತ್ತೆ ಎದುರಿಗೆ ಇವಳು.

ಇವತ್ತು ಲೇಟಾಗತ್ತೆ ಕಣೇ ಅಂದು
ರಾತ್ರಿ ಒಂಬತ್ತಕ್ಕೆ ಬಂದರೆ, ಇವಳ
ಮುಖದಲಿ ಬೇಸರ
ಮೊನ್ನೆ ಹೇಳಿದಂತೆ ಸುಳ್ಳು ಹೇಳಿದ್ದೆ
ಅಂದುಕೊಂಡೆ,
ಯಾಕೆ ಬೇಗ ಬರಲಿಲ್ಲ
ಅನ್ನುವ ಅಮಾಯಕ ಪ್ರಶ್ನೆಗೆ ನನ್ನಲಿಲ್ಲ
ಉತ್ತರ.

ಅದೇನೋ, ನನ್ನ ಮೇಲೆ ಸಿಟ್ಟು ಮಾಡಿಕೊಂಡು
ಮಾತಾಡಿಸಿದರೂ ಆಡದೇ,
ಮಂಚದ ಮೇಲೆ ಕೂತು,
ಏನೋ ವೀಡಿಯೋ ನೋಡಿ ಮೆಲ್ಲಗೆ ನಗುತ್ತಿದ್ದಳು,
ಮೆಲ್ಲ ಹೋಗಿ ಇಣುಕಿದರೆ,
ಅಲ್ಲಿ ನಾನು ತಾಳಿ ಕಟ್ಟುತ್ತಿದ್ದೆ!

8 ಕಾಮೆಂಟ್‌ಗಳು:

ತೇಜಸ್ವಿನಿ ಹೆಗಡೆ ಹೇಳಿದರು...

ಹೊಸ ಹೊಸ ಅನುಭವ :) ಆಗ್ತಾನೇ ಇರ್ಲಿ.. ಹೀಗೆ ಬರ್ತಾನೇ ಇರ್ಲಿ...:)

ರಂಜನಾ ಹೆಗ್ಡೆ ಹೇಳಿದರು...

super. expected.:)

ಹಷ೯ (Harsha) ಹೇಳಿದರು...

:) idanna nodu .. henge bardre yangu artha aagtu kavana ellla :) :)

Parisarapremi ಹೇಳಿದರು...

@harsha: ondu party kodsbeku kaNappa neenu!!

ವಿ.ರಾ.ಹೆ. ಹೇಳಿದರು...

:) :)

raveendra ಹೇಳಿದರು...

@ಹರ್ಷ
ಇದಕ್ಕೆ ನನ್ನ ಅನುಮೋದನೆ ಇದೆ. ನಾವುನು ಕೂಡ ಗದ್ಯದ ೧ ಪ್ಯಾರ copy ಮಾಡಿ, ಮಧ್ಯದಲ್ಲಿ ಒಂದಷ್ಟು ಬಾರಿ ಎಂಟರ್ ಹೊಡದ್ರೆ ಆತು. ಪದ್ಯ ರೆಡಿ :)
@ಶೀನ
ಇದನ್ನ ಒಳ್ಳೆ ಗೀತೆ, ಕವನ ಅಂತ ನಾನು ಒಪ್ಗ್ಯಳದೆ ಇದ್ರುವ, ಬಹಳ ದಿನದ ನಂತರ ಬ್ಲಾಗ್ ಅಪ್ಡೇಟ್ ಮಾಡಿದ್ದಕ್ಕೆ congrats ಹೇಳ್ತೆ.

ಕಾರ್ತಿಕ್ ಪರಾಡ್ಕರ್ ಹೇಳಿದರು...

ಹುಟ್ಟುತ್ತಿವೆಯಲ್ಲ ಎಪಿಸೋಡಿನಂತೆ ದಾಂಪತ್ಯ ಗೀತೆಗಳು...ಮುದುವೆ ಆಗಿದ್ದೂ ಸಾರ್ಥಕ ಆಯ್ತು ಬಿಡಿ..!!

Shiv ಹೇಳಿದರು...

ಊರಿಗೆ ಬಂದವಳು ನೀರಿಗೆ ಬಾರದೆ ಇರ್ತಾಳೆ ಅನ್ನೋ ಹಾಗೆ ಕವಿಗಳು ಮದುವೆ ಆದರೆ ಅವರಿಂದ ದಾಂಪತ್ಯ ಗೀತೆ ಬರದಿದ್ದರೆ ಹೇಗೆ :)

ಚೆನ್ನಾಗಿದೆ ಗೀತೆ..

ತುಂಬಾ ತಡವಾಗಿಲ್ಲ ಅನ್ನುಕೊಳ್ಳುತ್ತಾ...ದಾಂಪತ್ಯಕ್ಕೆ ಕಾಲಿಟ್ಟಿದಕ್ಕೆ ಅಭಿನಂದನೆಗಳು !