ಸೋಮವಾರ, ಸೆಪ್ಟೆಂಬರ್ 27, 2010

ತ್ರೀ- ಡಿ ಹನಿಗಳು

ಬತ್ತಿದ್ದ ತೊರೆಯೊಳಗೆ
ಅವಳು ಕಾಲಿಟ್ಟ ಕೂಡಲೇ
ಎಲ್ಲಿಂದಲೋ ಬಂದ ನೀರು
ಗೆಜ್ಜೆ ತೋಯಿಸಿತು,ಅವರ್ಯಾರೋ
ಹೊಟ್ಟೆಕಿಚ್ಚಿಗೆ ಅಲ್ಲೆಲ್ಲೋ ಮಳೆಯಾಯಿತು
ಅಂದರು.

ಇನ್ನೂ ಯಾಕೆ ಮಳೆ ಬಂದಿಲ್ಲ ಅಂತ
ತುಂಟ ಅಣಬೆಯೊಂದು
ಮಣ್ಣಿಂದ ಹೊರ ಬಂದು ಇಣುಕೋ
ಹೊತ್ತಿಗೆ ಹನಿಯೊಂದು
ಅದರ
ನೆತ್ತಿ ಮೊಟಕಿತು!

ದಣಪೆಯಾಚೆಗೆ
ಕಾದು ನಿಂತಿದ್ದ ಎಳೆಕಿರಣ
ಅಮ್ಮ ಎದ್ದು ಅಡುಗೆಮನೆಗೆ
ಹೋದ ಕೂಡಲೇ,
ಮೆಲ್ಲನೆ ಒಳಬಂದು
ಎಲ್ಲರನ್ನ ಎಬ್ಬಿಸಿತು.

6 ಕಾಮೆಂಟ್‌ಗಳು:

ತೇಜಸ್ವಿನಿ ಹೆಗಡೆ ಹೇಳಿದರು...

ಎರಡನೆಯ ಹಾಗೂ ಮೂರನೆಯದ್ದು ಓಕೆ.. ಚೆನ್ನಾಗಿದೆ. ಆದ್ರೆ ಮೊದ್ಲನೇದು ಮತ್ತು ಶೀರ್ಷಿಕೆ ಅರ್ಥ ಆಗ್ಲಿಲ್ಲಾ....!:( ("ಅರ್ಥ ಆದಷ್ಟು ಮಾತ್ರ ನಮ್ಮದು" ಎಂದು ಹೇಳ್ಬೇಡಪ್ಪಾ..:-p)

Srinidhi ಹೇಳಿದರು...

ಎರಡನೆಯ ಹನಿ ಇಷ್ಟ ಆಯಿತು. ತ್ರೀಡೀ ಹೇಗೆ ಅಂತ ಗೊತ್ತಾಗಲು ಕನ್ನಡಕ ಹಾಕ್ಕೊಬೇಕಾ? :-೦

Prakash Shetty ಹೇಳಿದರು...

ಹೌದು..
ಮೊದಲೇ ಹೇಳಿದಂತೆ ಇದು 3D ಕವನ.. ಎರೆಡೆರಡು ಆಯಾಮಗಳಲ್ಲಿ ಈ ಹನಿಗಳನ್ನು ಅರ್ಥೈಸಿದರೂ ಇನ್ನೊಂದು ‘ಮೂರನೇಯ’ ಆಯಾಮ ಈ ‘ಹನಿ’ಗಳಿಗಿದೆ...

ಥಿಂಕಿಸಿ... ಥಿಂಕಿಸುತ್ತಾ ಇರಿ ಅಂತಲೇ ಬರ್ದಿರಬೇಕು ನಮ್ಮ ನಿಧಿ ಸಾಬ್ರು... ಅಲ್ವೇನ್ರೀ....

Shiv ಹೇಳಿದರು...

ಶ್ರೀನಿಧಿ,

ಮೂರನೇಯ ಆಯಮಾ ಹುಡುಕುತ್ತಾ ಇದೀನಿ :)

ಎಳೆಕಿರಣ ಕಾದು ಒಳಗೆ ಬಂದ ಕಲ್ಪನೆ ಚೆನ್ನಾಗಿದೆ

ಚರಿತಾ ಭಟ್ ಹೇಳಿದರು...

ಫುಲ್ ಕಣ್ ಪ್ಯೂಸು. :)

ಅನಾಮಧೇಯ ಹೇಳಿದರು...

nice one
-venkatraman