ಶುಕ್ರವಾರ, ಜನವರಿ 14, 2011

ಸಂಕ್ರಮಣದ ಹೊತ್ತು

ಆಫೀಸಿಂದ ಹೊರಟರೆ
ಅಚಾನಕ್ಕಾಗಿ ಮದುವೆ ಗೊತ್ತಾದ
ಹೆಣ್ಣಿನ ಹಾಗೆ
ರಸ್ತೆಗಳ ಚಹರೆಯೇ ಬದಲು.
ಫುಟ್ ಪಾತುಗಳ ಮೇಲೆ ಕಬ್ಬು,
ಹೂ ರಾಶಿ ..ಯಾರಿಗೆ ಏನು ಬೇಕೋ ಏನೋ
ಎಲ್ಲೆಡೆ ಚೌಕಾಸಿ

ಬೈಕು ಸರ್ವೀಸಿಗೆ ಬಿಡಲು
ಹೊತ್ತು,
ಅಥವ ಹೊಸದೆ ಕೊಂಡರೆ ಹೇಗೆ?
ಈ ಬಾರಿ
ಸ್ಯಾಲರಿ ಹೈಕಿಲ್ಲ
ಅಂತ ಸುದ್ದಿ

ಅಮ್ಮನ ಕಳಕಳಿಯ ಫೋನು
ನಾಳೆ ರಜೆ, ಹೊರಟು
ಬನ್ನಿ ಊರಿಗೆ
ಸಂಕ್ರಾಂತಿಗೆ
ಪಾಯಸ , ಹೋಳಿಗೆ ವಿಶೇಷ
ಇಲ್ಲಿಯವರೆಗೆ ಮನೆಯಲ್ಲಿ
ಅದನ್ನ ಹೀಗೆಲ್ಲ ಆಚರಿಸಿದ್ದು
ನೆನಪಿಲ್ಲ

ಮನೆಗೆ ಬಂದರೆ
ಹೆಂಡತಿಯ ಮನವಿ
ಇನ್ನಾದರೂ ಖರ್ಚು ಲೆಕ್ಕವಿಡು
ಅದೂ ಇದೂ ಅಂತ
ಉಡಾಯಿಸೋದು ಬಿಡು

ನಾಳೆ
ಗೆಳೆಯನೊಬ್ಬ ಹೊಸ ಬಾಡಿಗೆ ಮನೆಗೆ
ಹೊರಟಿದ್ದಾನೆ


ಇದು ಸಂಕ್ರಮಣದ ಹೊತ್ತು..

5 ಕಾಮೆಂಟ್‌ಗಳು:

VENU VINOD ಹೇಳಿದರು...

sooparroo sooperu :)

Parisarapremi ಹೇಳಿದರು...

:-) chennaagide kaNayyaaa...

ಅನಿಕೇತನ ಸುನಿಲ್ ಹೇಳಿದರು...

Simple and special dear ;-)liked it..Thank you.
Sunil.

coffeewrites ಹೇಳಿದರು...

ತುಂಬಾ ಚೆನ್ನಾಗಿದೆ.
ಹಳೆಯ ನೆನಪುಗಳ ಜೋಲಿಗೆ
ಹೊಸ ಲಾಲಿ
ಖಾಲಿಯಾದ ಬದುಕಲ್ಲಿ
ಕಳೆದದ್ದನ್ನ ಎತ್ತಿಕೊದುತ್ತಲೇ
ಇದು ಸಂಕ್ರಮಣ ಎನ್ನೋ ಭಾವ.

Anuradha ಹೇಳಿದರು...

ಬದುಕಿನಲ್ಲಿ ಸಂಕ್ರಮಣ ಒಮ್ಮೆ ಬಂದರೆ ಪರವಾಗಿಲ್ಲ ,ವರುಷ ,ವರುಷ ಬರುವ ಸಂಕ್ರಾಂತಿ ..ಎಳ್ಳುಬೆಲ್ಲದಲ್ಲೇ ಮುಗಿಯಲಿ ..:)