ಬುಧವಾರ, ನವೆಂಬರ್ 30, 2011

ಚಲನ-ಚಿತ್ರ

ಇಪ್ಪತ್ತಡಿಗೂ ಮೀರಿ ನಿಂತ
ನಾಯಕನ ಕಟೌಟಿನಲ್ಲಿ
ಮೂಗು ಕೊಂಚ ಊನ
ಸಾಲಿನ ಕೊನೆಯಲ್ಲಿ ನಿಂತವಗೆ
ಟಿಕೇಟು ಸಿಗುವುದು ಅನುಮಾನ
ವಾಗಿ ಪದಪದ ಚಡಪಡಿಕೆ

ಕಣ್ಣ ಕನಸುಗಳಿಗೆ ದಾರಿ ತೋರುವ
ಕೌಂಟರಿನ ಹಿಂದೆ ಕೂತ
ಮುಖಕ್ಕೆ ಸುಮ್ಮನೆ ಬಿಗುಮಾನ
ಒಳಬಿಡುವ ಗೇಟ್ ಕೀಪರನಿಗೂ
ಬಾಡಿಗೆಯ ದರ್ಪ
ಮಾಡಿದಂತೆ ಏನೋ ಉಪಕಾರ
“ಹೋಗಿ ಹೋಗಿ”..

ಸಾಗಿದೆ ಸಿನಿಮಾ, ಮರೆಸಿ ಎಲ್ಲರ
ಎಲ್ಲವನೂ
ಅಲ್ಲಲ್ಲಿ ಒಳಗಿಳಿಸಿ ಖುಷಿಯ ಬಿಂಬ
ಜತೆಗೆ ಕೊಂಚ ನೋವನ್ನೂ

ಇಂಟರ್ವಲ್ ನಲ್ಲಿ ಎದ್ದು ಬಂದ ಹೋಟೇಲು
ಮಾಣಿಯ ನಡಿಗೆಯಲ್ಲಿ
ನಾಯಕನ ಚೈತನ್ಯ
ಶೌಚಾಲಯದ ಮೂಲೆಯ ಹೊಗೆಸುರುಳಿಗಳಲ್ಲಿ
ಕನಸು ರಿಂಗಣ

ಶುಭಂ ಕಾಣುವ ಮೊದಲೇ ಹೊರಟಿದ್ದಾರೆ
ಮಂದಿ, ಕೊನೆಯ ಸೀನಿಗಿಂತ ಮುಖ್ಯ
ಟ್ರಾಫಿಕ್ಕು ಇರದ ರಸ್ತೆ,ಸಾಗಿದರೆ
ಆರಾಮಾಗಿ ದಾರಿ ತುಂಬ
ಚಿತ್ರದ ಮೆಲುಕು

ಇಲ್ಲೀಗ ಚಿತ್ರಮಂದಿರ ಖಾಲಿ
ಮೇಲೆಲ್ಲೋ ಉರುಳಿಬಿದ್ದ ಕೋಕ್
ಬಾಟಲಿ ಸದ್ದು ಗಾಂಧಿಕ್ಲಾಸಲ್ಲಿ
ಅನುರಣನ

ಜಾಡಮಾಲಿ ಹೆಂಗಸಿಗೆ ಕಂಡಿದೆ
ಯಾರೋ ಬಿಟ್ಟು ಹೋದ ಪಾಪ್ ಕಾರ್ನು
ಕಟ್ಟಿಕೊಳ್ಳಬೇಕಿದೆ ಅದನ್ನ ಸೆರಗೊಳಗೆ
ಮಂದಿ ಬರುವ ಮುನ್ನ
ಗುಡಿಸಲು ಬಾಕಿ ಇದೆ ಇನ್ನೂ ಎರಡು ಸಾಲು

ಇನ್ನೇನು ಕೆಲವೇ ಕ್ಷಣಗಳಲ್ಲಿ ಮುಂದಿನ ದೇಖಾವೆ..


15 ಕಾಮೆಂಟ್‌ಗಳು:

ರಾಘವೇಂದ್ರ ಜೋಶಿ ಹೇಳಿದರು...

Thumbs up!
:-)

ಸುಶ್ರುತ ದೊಡ್ಡೇರಿ ಹೇಳಿದರು...

:-)

ತೇಜಸ್ವಿನಿ ಹೆಗಡೆ ಹೇಳಿದರು...

Liked! :)

Parisarapremi ಹೇಳಿದರು...

yaavdO tagaDu cinema nODkonD bandirO haagide?? ;-) ;-)

Chinmaya Hegde ಹೇಳಿದರು...

ಹದಿನೈದು ಅಡಿಗೂ ಮೀರಿ ನಿಂತ ನಾಯಕಿಯ
ಅರೆ ಬೆತ್ತಲೆ ಕಟೌಟು!
ಸಾಲಿನಲ್ಲಿ ನಿಂತವರಿಗೆ
ಐ ವತ್ತಕ್ಕೆ , ನುರೋ,
ಎನ್ನುವವರ cought ಔಟ್!

Chinmaya Hegde ಹೇಳಿದರು...

ಹದಿನೈದು ಅಡಿಗೂ ಮೀರಿ ನಿಂತ ನಾಯಕಿಯ
ಅರೆ ಬೆತ್ತಲೆ ಕಟೌಟು!
ಸಾಲಿನಲ್ಲಿ ನಿಂತವರಿಗೆ
ಐ ವತ್ತಕ್ಕೆ , ನುರೋ,
ಎನ್ನುವವರ cought ಔಟ್!

ಶ್ರೀನಿಧಿ.ಡಿ.ಎಸ್ ಹೇಳಿದರು...

@ರಾಘವೇಂದ್ರ ಜೋಶಿ- ಧನ್ಯವಾದಗಳು ಸರ್..

@ ಸುಶ್- :)) ನಿಂದ್ಯಾವಾಗ?:)
@ ತೇಜಸ್ವಿನಿ ಹೆಗಡೆ- ಧನ್ಯೋಸ್ಮಿ!

॒@ ಅರುಣ- ಟಾಕೀಸಲ್ಲಿ ಸಿನ್ಮಾ ನೋಡ್ದೆ ೪-೫ ತಿಂಗ್ಳಾಯ್ತು ಮಾರಾಯಾ:(

॒॒॒@ಚಿನ್ಮಯಾ- ನೀನೂ ಬರಿಯಲೆ ಶುರು ಮಾಡದ್ ಒಳ್ಳೇದು ನೋಡು:)

sunaath ಹೇಳಿದರು...

Wonderful!

Subrahmanya ಹೇಳಿದರು...

ನಂಗೊಂದ್ ಟಿಕೀಟ್ :)

ಜ್ಯೋತಿ ಶೀಗೆಪಾಲ್ ಹೇಳಿದರು...

tumba tumba chennagide...

radhakrishna Kashyap ಹೇಳಿದರು...

thumbaa channagide.

ಸಿಂಧು Sindhu ಹೇಳಿದರು...

ನಿಧೀ...

ಚೆನಾಗಿದ್ದು, ತುಂಬ ಇಷ್ಟ ಆತು.
ಇಂಟರ್ವಲ್ಲಿನ ಬಿಂಕವನ್ನು ಚಿತ್ರಿಸಿದ ಪರಿ ಸೂಪರ್!

ಪ್ರೀತಿಯಿಂದ,ಸಿಂಧು

VENU VINOD ಹೇಳಿದರು...

ಛೇ...ಇದನ್ನು ಇಷ್ಟು ತಡವಾಗಿ ಓದಿದೆ...
ಇದನ್ನು ಇನ್ನಷ್ಟು ಸುಂದರವಾಗಿ ಬರೆಯುವುದು ಅಸಾಧ್ಯವೇನೋ!
-ವೇಣು

Anuradha ಹೇಳಿದರು...

ನಾವು ಮೊದಲು ತುಂಬಾ ಸಿನಿಮಾ ನೋಡುತ್ತಿದ್ದೆವು. ಅಟೋ ಸಿಗಲ್ಲ ಅನ್ನೋ ಕಾರಣಕ್ಕೆ ಕೊನೆ ದೃಶ್ಯ ನೋಡುತ್ತಲೇ ಇರಲಿಲ್ಲ ...ಈಗ ಸಿನಿಮಾ ನೋಡುವುದನ್ನೇ ಬಿಟ್ಟಿದ್ದೇವೆ ,Flash back ತೋರಿಸಿದ್ದಕ್ಕಾಗಿ ವಂದನೆಗಳು
ಅನುರಾಧ y

ಶ್ರೀನಿಧಿ.ಡಿ.ಎಸ್ ಹೇಳಿದರು...

ಮತ್ತೊಂದು ಸಲ ಥ್ಯಾಂಕ್ಸು ಎಲ್ಲರಿಗೂ!