ಭಾನುವಾರ, ಫೆಬ್ರವರಿ 12, 2012

ಮಾತು




ನಿತ್ಯ ಇಷ್ಟು ಹೊತ್ತಿಗೆ ಕೆಟ್ಟದಾಗಿ
ಕೂಗುತ್ತಿದ್ದ ತರಕಾರಿ ಗಾಡಿಯವನೂ
ಬಂದಂತಿಲ್ಲ ಇಂದು.

ಹೋದ ಕರೆಂಟಿನದೂ
ಪತ್ತೆಯಿಲ್ಲ
ಫ್ಯಾನಾದರೂ ಸದ್ದು ಮಾಡುತ್ತಿತ್ತು
ಪಕ್ಕದ ಫ್ಲಾಟಿನ ಮಗು ಇನ್ನೂ
ಸ್ಕೂಲಿಂದ ಬಂದಿಲ್ಲ.

ಪೇಪರ್ ವೇಯ್ಟಾದರೂ
ಬೀಳಬಹುದಿತ್ತು ನೆಲಕ್ಕೆ
ಅಥವ ಕೇಬಲಿನ ಹುಡುಗ
ಬರಬಹುದಿತ್ತು


ಅಗೋ,
ಅಲ್ಲಿ ಮೆಟ್ಟಿಲ ಸದ್ದು
ಕೇಳುತ್ತಿದೆ
ಬಡಿಯುತ್ತಾರೆ ಈಗ ಯಾರೋ
ಬಾಗಿಲು
ಅನ್ನುವಾಗಲೇ ಶಬ್ದ ನಿಂತು
ಹೋ ಗಿ ದೆ.

ಹೋಗಲಿ,
ನಾನೇ ಆರಂಭಿಸುತ್ತೇನೆ
ಮಾತು.
ಸುಮ್ಮನಿರುವುದಕ್ಕಿಂತ
ಸೋಲುವುದು ವಾಸಿ.

8 ಕಾಮೆಂಟ್‌ಗಳು:

Subrahmanya ಹೇಳಿದರು...

ಹೂಂ ಕಣ್ರೀ ..:)

Badarinath Palavalli ಹೇಳಿದರು...

ಖಾಲಿತನಕ್ಕೆ ಮಾತೇ ಮದ್ದು.
ನವಿರಾದ ಕವನ. :-)

ನನ್ನ ಬ್ಲಾಗಿಗೂ ಸ್ವಾಗತ.

Parisarapremi ಹೇಳಿದರು...

:-) mobile kooDa ring aaglilveno?? :D

Susheel Sandeep ಹೇಳಿದರು...

ಹೆಹೆಹೆ ಇಂಥಾ ಟೈಮೇ ಬೆಸ್ಟು..ಸರಕಾರದ ಅಧ್ವಾನಗಳನ್ನು ನೆನಸಿಕೊಂಡು ಹಿಡಿಹಿಡಿ ಶಾಪ ಹಾಕೋಕೆ...ಕ್ಯೂರಿಯಾಸಿಟಿಗಾದರೂ ಏನಾಯ್ತು? ಯಾರದು? ಅಂತ ಕೇಳ್ತಾರೆ ಮಾತಿಲ್ಲದೆ ಕೂತ-ಅವ್ರು :)

ಸಿಂಧು sindhu ಹೇಳಿದರು...

ನಿಧಿ,
ಕವಿ-ರು ಮಳೆ.. (ತುಂತುರು ಮಳೆ ಥರ.. )
ಚೆನಾಗಿದ್ದು ಕವಿತೆ.
ಹೌದು ಯಾರಿಗೆ ಜಾಸ್ತಿ ಕೆಟ್ಟದನ್ನಿಸ್ತೋ ಅವ್ರೆ ಮೊದ್ಲು ಮಾತು ಶುರು ಮಾಡದು.. :)
ಒಂದೊಂದ್ಸಲ silence - ಉ ಎಷ್ಟು ಒಳ್ಳೇದು ಅಲ್ದಾ. ಹೆಂಗಾರು ಮಾಡಿ ಮಾತು ಶುರು ಮಾಡಲೇಬೇಕು ಅನ್ಸದೆನು ಸುಮ್ನೆ ಅಲ್ಲ.

ಹೂಗೆಜ್ಜೆಯ ಹುಡುಗಿಗೆ ಮೌನ ಮುರಿಯಲು ಯಾವಾಗಲು ಸಿಗ್ಗು ಇದ್ದೆ ಇರುತ್ತೆ. ನಿನ್ನ ಹೂಬೆರಳು ಮಾತನರಳಿಸುವುದೇ ಸರಿ.
(ಈ ಹೂಬೆರಳು ಅನ್ನೋದು ಬೇಂದ್ರೆಯವರ ಪ್ರತಿಮೆ)

ಪ್ರೀತಿಯಿಂದ,
ಸಿಂಧು

ಶ್ರೀನಿಧಿ.ಡಿ.ಎಸ್ ಹೇಳಿದರು...

ಥರಹೇವಾರಿ ಕಮೆಂಟುಗಳು:)

ಧನ್ಯವಾದ ಎಲ್ಲರಿಗೂ!

ಶ್ರೀನಿಧಿ.ಡಿ.ಎಸ್ ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಮೌನರಾಗ ಹೇಳಿದರು...

Nice one..