ಗುರುವಾರ, ನವೆಂಬರ್ 29, 2012

ಕಾಫಿ ಮತ್ತು ಕಾಂತಾ ಸಂಹಿತೆ



ನಿನ್ನೆಯ ಅಚಾತುರ್ಯಕ್ಕೆ ಬೇಸರಿಸಬೇಡ
ಏನೋ ನಡೆದು ಹೋಯಿತು
ಬಿಡು, ಅಂತವಳು ಮಾಡಿದಾಗ
ಸಮಾಧಾನ
ಸುಮ್ಮನೆ ಸದ್ದು ಮಾಡಿದ್ದು ಕಾಫಿ ಟೇಬಲ್ಲು

ಗಾಜಿನ ಮೇಲೆ ಕಂಡ ಪ್ರತಿಫಲನದಲ್ಲೂ ಇಲ್ಲ
ತೇವಭಾವ
ಮರೆಯಬೇಕು ಎನ್ನುವುದಿಲ್ಲ ಆದರೆ
ನೆನಪಿಟ್ಟುಕೊಂಡು
ಚುಚ್ಚಿಕೊಳ್ಳುವುದೂ ಬೇಡ

ಎಂದಾಗ ಏನೋ ಹೇಳಲು ಹೋದ
ಮಾತು ಕಾಫಿಯ
ಹನಿಯೊಡನೆ ಸಿಕ್ಕಿ ಕೆಳಗೆಲ್ಲೋ
ಬಿದ್ದು ಕಳೆದು ಹೋಯಿತು
ಹುಡುಕಲು ಹೋಗಲಿಲ್ಲ

ಸಮಾಧಾನ ಮಾಡಿಕೋ
ರಿಲ್ಯಾಕ್ಸ್,
ಅಂತಂದು
ಹೆಗಲು ಸವರಿ ಎದ್ದು ಹೋದಾಗ
ವೈಟರ್ ಮಧ್ಯ ಬಂದಿದ್ದು ಯೋಗಾಯೋಗ


ಹೊರಗೆ ಬಿಸಿಲು ಜೋರಿದೆ.
ಅವಳ ಕಾಫಿಯ ಕಪ್ಪು ಮೂಡಿಸಿದ್ದ
ಹಸಿವರ್ತುಲ ನಿಧಾನ
ನಿಧಾನವಾಗಿ ಒಣಗುತ್ತಿದೆ
ತೃಷೆಯೂ.

6 ಕಾಮೆಂಟ್‌ಗಳು:

ಸಿಂಧು sindhu ಹೇಳಿದರು...

ನಿಧೀ...

ಸಖೀ ಗೀತ!

ಒದ್ದೆ ಒದ್ದೆ ಭಾವ-
ಪೂರ್ಣ
ಸಾಲಲ್ಲಿ ಹೇಳದೇ
ಉಳಿದ ಶೇಷ
ಅಕ್ಷರ ಅಕ್ಷರದಲ್ಲೂ

mmm... she is lucky
to have such an artistic expression for the worst moments..

ಸಿಂಧು

Parisarapremi ಹೇಳಿದರು...

raam-raamaa....

sunaath ಹೇಳಿದರು...

ಶ್ರೀನಿಧಿ,
ನಿಮ್ಮ ಕವನಗಳು ಕೊಡುವ ಸುಖವೇ ವಿಶಿಷ್ಟ. ಬಹಳ ದಿನಗಳ ಬಳಿಕ ಬರೆದಿದ್ದೀರಿ. ಸಮಾಧಾನವಿದೆ.

Swarna ಹೇಳಿದರು...

ನಿಮ್ಮ ಹೆಸರನ್ನು ಶತಾವಧಾನದ ಲೈವ್ ಸ್ಟ್ರೀಮ್ನಲ್ಲಿ ನೋಡಿದ ಹಾಗಿತ್ತು.
ಕವಿತೆ ತುಂಬಾ ಚೆನ್ನಾಗಿದೆ

ಮೌನರಾಗ ಹೇಳಿದರು...

ಚಂದದ ಕವಿತೆ ಸರ್...

ಶ್ರೀನಿಧಿ.ಡಿ.ಎಸ್ ಹೇಳಿದರು...

thanks all!