ಸೋಮವಾರ, ಜುಲೈ 24, 2017

ಜಯ ಜಯ ಜಗನ್ನಾಥ!

ಪುರಿಯ ಪುರಾಧೀಶ:
ಪುರಿಒಡಿಶಾ ಕರಾವಳಿಯ ಪುಟ್ಟ ಪಟ್ಟಣಸಟ್ಟನೆ ನೋಡಿದರೆನಮ್ಮ ಮಂಗಳೂರೋಉಡುಪಿಯೋಕಾರವಾರವೋ ಅನ್ನಿಸುವಂತಹ ಊರುಅದೇ ತೆಂಗುಬಾಳೆಹಸಿರು ಗದ್ದೆಗಳ ಸಾಲುಎಳನೀರು ಮಾರುವ ಪೋರರುಗೇರು ಹೂವಿನ ಘಮಭೂಲಕ್ಷಣದಲ್ಲಿ ತನ್ನಿಂದ ಸಾವಿರಾರು ಕಿಲೋಮೀಟರು ದೂರದಲ್ಲಿರುವ ಉಡುಪಿಯಂತಿರುವ ದೇಗುಲ ನಗರಿ ಪುರಿಅಲ್ಲಿರುವ ಪೊಡವಿಗೊಡೆಯನೇ ಇಲ್ಲಿರೂ ಆರಾಧ್ಯ ದೈವಅಲ್ಲಿ ಕಡೆಗೋಲು ಕೃಷ್ಣನಾದರೆಇಲ್ಲಿ ಜಗನ್ನಾಥಪುರಿಯ ದೇವಸ್ಥಾನದ ಅನ್ನಸಂತರ್ಪಣೆವಿಶ್ವವಿಖ್ಯಾತಮೋಕ್ಷಮಾರ್ಗಕ್ಕಾಗಿ ದರ್ಶನ ಮಾಡಬೇಕಿರುವ ಏಳು ಪುಣ್ಯಕ್ಷೇತ್ರಗಳಲ್ಲಿ ಈ ದೇಗುಲವೂ ಒಂದು ಎಂದು ಪುರಾಣಗಳೇ ಹೇಳುತ್ತವೆ.
ಜಗನ್ನಾಥನೆಂದರೆಜಗದ ಒಡೆಯ ಎಂದರ್ಥಆದರೆ ಈ ನಮ್ಮ ಕೃಷ್ಣನೆಂದ ಮೇಲೆ ಗೊತ್ತಲ್ಲಆತ ಒಡೆಯನಿಗಿಂತ ಜಾಸ್ತಿ ಸ್ನೇಹಿತನೇಪೂರ್ವ ಕರಾವಳಿಯ ಪುರಿಯಲ್ಲಿ ನೆಲೆ ನಿಂತ ಈ ಜಗನ್ನಾಥನೂ ಅಷ್ಟೇಸಖ ಭಾವದ ಸುಖೀ ದೇವರುನಾಡಿನೆಲ್ಲಡೆಯ ಜನ ಈ ಜಗನ್ನಾಥನ ಬೀಡಿಗೆ ಬಂದು ಆತನ ದರ್ಶನಕ್ಕೆಂದು ಸಾಲು ಹಚ್ಚಿ ನಿಂತರೆ ಬಿಡುಗಣ್ಣನಾಗಿ ಎಲ್ಲರಿಗೂ ಆಶೀರ್ವಾದ ಮಾಡುತ್ತ ನಿಲ್ಲುವ ಬಣ್ಣದ ದೇವ ಅವನಿಲ್ಲಿಹಸಿದ ಹೊಟ್ಟೆಗೆ ಇಲ್ಲವೆನ್ನದೆ ಊಟವನಿಕ್ಕುವ ಮಹಾಗುರುಇಲ್ಲಿ ಉಣ್ಣದೇ ಹೋಗುವ ಭಕ್ತರಿಲ್ಲದೇವರಿಗೆ ಕೈ ಮುಗಿಯುವುದು ಮರೆತರೂಘಮಘಮ ಕಿಚಡೀ ಹೊಟ್ಟೆಗಿಳಿಯದೇ ಹೋಗದೇನೋ.


ಪುರಾಣದಲ್ಲೇನಿದೆ?
ಇಂದ್ರದ್ಯುಮ್ನನೆಂಬ ಮಹಾರಾಜನ ಅಪರಿಮಿತ ವಿಷ್ಣುಭಕ್ತಿಪುರಿಯ ದೇಗುಲದ ಮೂಲಖುದ್ದು ವಿಷ್ಣುವೇವಿಶ್ವಕರ್ಮನೊಡಗೂಡಿ ಅಪೂರ್ಣ ಮೂರ್ತಿಗಳನ್ನ ಕೆತ್ತಿದ್ದನೆಂಬುದು ಐತಿಹ್ಯ೨೧ ದಿನಗಳ ಕಾಲ ಗರ್ಭಗುಡಿಯ ಬಾಗಿಲು ತೆಗೆಯಬಾರದೆಂಬ ಶರತ್ತನ್ನ ಮೀರಿ ಇಂದ್ರದ್ಯಮ್ನನ ಪತ್ನಿಬಾಗಿಲು ತೆಗೆದ ಕಾರಣಕ್ಕೆ ಮೂರ್ತಿಗಳಿಗೆ ಕೈ ಕಾಲುಗಳೇ ಮೂಡಿರಲಿಲ್ಲ.ಅಂದಿನಿಂದ ಇಂದಿನವರೆಗೂ ಜಗನ್ನಾಥ ಬಲರಾಮ ಸುಭದ್ರೆಯರು ಬಿಟ್ಟಗಣ್ಣಿನಬಣ್ಣಬಣ್ಣದ ಅಲಂಕಾರ ಹೊಂದಿರುವ ಚೆಲುವ ಚೆಲುವೆಯರುಹಾಂಮರದ ಮೂರ್ತಿಗಳು ಇವೆಲ್ಲನಮ್ಮ ಎಂದಿನ ಸಂಪ್ರದಾಯದ ಕಲ್ಲಿನ ವಿಗ್ರಹಗಳಲ್ಲ!
ಬ್ರಹ್ಮಾಂಡ ಪುರಾಣಸ್ಕಂದ ಪುರಾಣಭವಿಷ್ಯ ಪುರಾಣವೂ ಸೇರಿದಂತೆ ಹಲವು ಪುರಾಣಗಳಲ್ಲಿ ಮತ್ತೆ ಮತ್ತೆ ಪುರಿಯ ಉಲ್ಲೇಖವಿದೆಜಗನ್ನಾಥನನ್ನು ವರ್ಣಿಸುವ ಶ್ಲೋಕಗಳಿವೆಎಂದಿನಂತೆತನ್ನ ಪತ್ನಿಯರ ಜೊತೆಗಲ್ಲದೇ ಒಡಹುಟ್ಟಿದವರ ಜೊತೆಗೆ ನೆಲೆನಿಂತ ಈ ವಾಸುದೇವನಿಗೆಅಪಾರ ಗೌರವಇಂದ್ರದುಮ್ಯನ ಅಂದು ವಿಷ್ಣುವನ್ನು ಕೋರಿಕೊಂಡಂತೆಯೇಇಂದಿಗೂ ಈ ದೇಗುಲ ಕೇವಲ ಮೂರು ತಾಸುಗಳಷ್ಟೇ ಮುಚ್ಚಿರುತ್ತದೆಹಗಲಿರುಳುಳೆನ್ನದೇ ಮಂದಿರವನ್ನು ಸಂದರ್ಶಿಬಹುದಾದಅದ್ವೀತೀಯ ತಾಣ ಇದು.



ಆಧ್ಯಾತ್ಮ ಕ್ಷೇತ್ರ:
ಪುರಿಯ ಮಂದಿರದ ಬಗ್ಗೆಕಾಲನ ಹೊಡೆತಕ್ಕೋವೈರಿಗಳ ಅಟಾಟೋಪಕ್ಕೋ ಸಿಕ್ಕು ಧ್ವಂಸಗೊಂಡ ದೇವಳವನ್ನ ಮತ್ತೆ ಮತ್ತೆ ಕಟ್ಟಿಸಿದ ರಾಜರುಗಳ ಬಗ್ಗೆ ಹೇಳಹೊರಟರೆ ಅದೇ ಇನ್ನೊಂದು ಲೇಖನವಾದೀತುಈಗಿರುವ ದೇಗುಲವನ್ನು ಕಟ್ಟಿಸಿದಾತಕಳಿಂಗ ರಾಜ ಖರವೇಲವೇದಗಳಿಗಿಂತ ಪುರಾತನವಾದ ಇತಿಹಾಸವನ್ನು ಹೊಂದಿರುವ ಈ ಜಗನ್ನಾಥಆ ಯಾವ ಆಡಂಬರವನ್ನೂ ಹೊರದೇ ಸರಳರಲ್ಲಿ ಸರಳನಂತೆ ನಿಂತಿದ್ದಾನೆ ಇಲ್ಲಿಆದರೆ ಆ ಸರಳತೆಯ ಹಿಂದೆ ಭಾರತದ ಭವ್ಯ ಆಧ್ಯಾತ್ಮ ಪ್ರಪಂಚದ ಹೊಳಹುಗಳಿವೆಇಲ್ಲಿನ ಮೂರು ಮೂರ್ತಿಗಳು ಸರ್ವಜ್ಞತೆ-ಸರ್ವವ್ಯಾಪಕತೆಸರ್ವಶಕ್ತತೆಯನ್ನು ಪ್ರತಿನಿಧಿಸುತ್ತವೆದೇಗುಲದ ಗೋಪುರದಲ್ಲಿನ ಸುದರ್ಶನ ಚಕ್ರಇವೆಲ್ಲವನ್ನು ಮೀರಿದ ನಾಲ್ಕನೆಯ ಆಯಾಮವನ್ನ ಸೂಚಿಸುತ್ತದೆಪದೇ ಪದೇ ಬದಲಾಗುವ ಮೂರ್ತಿಗಳುವಿಗ್ರಹಗಳಿಗಿಂತ ಮೂಲತತ್ವವೇ ಮುಖ್ಯ ಎಂಬುದನ್ನು ಸಾರುತ್ತವೆಪಾಂಡವರಾದಿಯಾಗಿಆದಿ ಶಂಕರಾಚಾರ್ಯರೂ ಸೇರಿದಂತೆ ಅದೆಷ್ಟೋ ಸಾಧಕರನ್ನ ಸೆಳೆದ ದಿವ್ಯ ಕ್ಷೇತ್ರವಿದು.
ಇಲ್ಲಿನ ಮೂರ್ತಿಗಳಿಗೆ ಕೈ-ಕಾಲುಗಳಿಲ್ಲದೇ ಇರುವುದಕ್ಕೆ ಒಂದು ಕಥೆಯಿದೆಪ್ರಾಪಂಚಿಕ ಇಹ ಭೋಗಗಳ ಈ ಜಗತ್ತಿನಲ್ಲಿ ನಮಗೆ ಯಾವ ಕೈಕಾಲುಗಳೂ ಬೇಡ ಎಂದನಂತೆ ಜಗನ್ನಾಥಎಲ್ಲವನ್ನೂ ಕಣ್ಣಿನಿಂದಲೇ ಸ್ವೀಕರಿಸುತ್ತೇನೆಸಾಕುಭಕ್ತರ ಕಣ್ಣಿಗೆ ನನ್ನ ಕಣ್ಣುಗಳು ಕಾಣಲಿನಮ್ಮ ಸಂವಹನ ಅಷ್ಟರಿಂದಲೇ ಸಾಧ್ಯ ಎಂದು ಇಂದ್ರದ್ಯುಮ್ನನಿಗೆ ಸಮಾಧಾನ ಹೇಳಿದ್ದನಂತೆ!


ವಿಶಿಷ್ಟ ಆಚರಣೆಗಳ ಸರಳ ಜಗನ್ನಾಥ:
ಪುರಿಯನ್ನು ಜಗನ್ನಾಥನು ಆವರಿಸಿಕೊಂಡಿರುವ ಪರಿ ಅನನ್ಯಇಲ್ಲಿನ ಮಂದಿಗೆ ಅವನೇ ಗುರುಊರಿಗೂರೇ ಅವನ ಧ್ಯಾನದಲ್ಲಿ ಮಗ್ನವಾದೊಂದು ಮಹಾಮೇಳದಂತೆ ಕಾಣುತ್ತದೆದೇವರನ್ನ ಸ್ನೇಹಿತನಂತೆ ಕಾಣುತ್ತಅವನನ್ನೊಂದು ನೋಡಿಕೊಂಡು ಬನ್ನಿ ಎಂದು ಏಕವಚನದಲ್ಲಿ ಜಗನ್ನಾಥನ ಬಗ್ಗೆ ಮಾತನಾಡುತ್ತ ಸಂಚರಿಸುವ ಸೈಕಲ್ ರಿಕ್ಷಾವಾಲಾಗಳುದೇವರ ಪ್ರಸಾದವನ್ನು ಉಂಡೇ ಇಲ್ಲವೇ ಇನ್ನೂ ಎಂದು ಕಣ್ಣು ಬಿಟ್ಟು ಅಚ್ಚರಿ ವ್ಯಕ್ತ ಪಡಿಸುವ ಅಂಗಡಿಯವರು, "ಜಗತ್ತಿನ ಅತ್ಯಂತ ದೊಡ್ಡ ಹೋಟೇಲು ಯಾವುದು ಗೊತ್ತಾಇದೇಜಗನ್ನಾಥನ ಮಂದಿರಎಂದು ನಗುವ ಪಾಂಡಾಗಳು.. ಹೀಗೆ ನಗರ ತುಂಬ ಜಗನ್ನಾಥನದೇ ಗುಂಗು.
ಈ ಜಗನ್ನಾಥನೂ ಅಷ್ಟೇಸಂಪ್ರದಾಯಗಳನ್ನು ಮೀರಿ ನಿಂತ ಪುಣ್ಯಾತ್ಮಅದಕ್ಕಾಗಿಯೇ ಏನೋಜನರಿಗೂ ಅವನೆಂದರೆ ಇಷ್ಟ೧೦-೧೯ ವರ್ಷಗಳಿಗೊಮ್ಮೆಇಲ್ಲಿ ದೇವ ವಿಗ್ರಹಗಳೇ ಬದಲಾಗುತ್ತವೆ. ಆಷಾಢ ಅಧಿಕಮಾಸ ಬಂದ ವರ್ಷವೆಲ್ಲಹೊಸ ಮೂರ್ತಿಗಳ ಪ್ರತಿಷ್ಠಾಪನೆ ಆಗುತ್ತದೆ.  ವರ್ಷಕ್ಕೆ ಹದಿನೈದು ದಿನ ಆರೋಗ್ಯ ಸರಿಯಿಲ್ಲ ಎಂದು ದೇವರೂ ರಜೆ ಹಾಕುತ್ತಾರೆಹೌದು. ಆಷಾಢ ಮಾಸದ ಸೆಖೆಯಲ್ಲಿ ದೇವರುಗಳೆಲ್ಲ ಹೊರ ಬಂದು ಸ್ನಾನ ಮಾಡುತ್ತಾರೆ! ಸ್ನಾನ ಪೂರ್ಣಿಮೆಯೆಂದೇ ಹೆಸರು ಆದಿನಕ್ಕೆ. ಹದಿನೈದು ದಿನಗಳ ಸ್ನಾನ ಮತ್ತು ಮಾವಿನಹಣ್ಣಿನರಸದ ಅಭಿಷೇಕ ದಿಂದ ಸುಸ್ತಾದ ಸ್ವಾಮಿ, ಹುಷಾರು ತಪ್ಪಿ ಮುಂದಿನ ಹದಿನೈದು ದಿನಗಳ ಕಾಲ ಭಕ್ತಾದಿಗಳಿಗೆ ದರ್ಶನ ನೀಡದೇರಜೆ ಹಾಕಿ ಮೂಲಿಕೆಗಳ ಔಷಧ ಸ್ವೀಕರಿಸುತ್ತ ಆರಾಮಾಗುತ್ತಾರೆಇಂಥ ದೇವ ಎಲ್ಲಿ ಸಿಕ್ಕಾನು ಹೇಳಿನಮ್ಮ ಮಧ್ಯದಿಂದಲೇ ಎದ್ದು ಹೋಗಿ ಕೂತಂತೆ ಕಾಣುವ ಜಗದ ನಾಥ ಈತ!


ಜಗನ್ನಾಥ ರಥೋತ್ಸವ:
ವಿಶ್ವಪ್ರಸಿದ್ಧ ಜಗನ್ನಾಥ ರಥೋತ್ಸವದ ಬಗ್ಗೆ ತಿಳಿಯದವರಿಲ್ಲವೇನೋ. ಪ್ರತಿ ವರುಷ, ಇಲ್ಲಿ ನಡೆಯುವ ರಥಯಾತ್ರೆಗೆ ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಾರೆ. ಈ ರಥೋತ್ಸವದ ಹಿಂದಿನ ಆಚರಣೆಯೂ ಮಜವಾಗಿದೆ! ಈ ಹುಷಾರಿಲ್ಲದೇ ಮಲಗಿದ್ದ ಕೃಷ್ಣ- ಬಲರಾಮ-ಸುಭದ್ರೆಯರು, ಮತ್ತೆ ಆರೋಗ್ಯವಂತರಾದ ಮೇಲೆ ಅವರಿಗೆಲ್ಲ ಏನಾದರೂ ರುಚಿ-ರುಚಿಯಾಗಿದ್ದು ತಿನ್ನಬೇಕು ಅನ್ನಿಸಿ ಅಲ್ಲೇ ಸ್ವಲ್ಪ ದೂರದಲ್ಲಿರುವ ಗುಂಡೀಚಾ ಅನ್ನುವ ತನ್ನ ಅತ್ತೇಮನೆಗೆ ಹೋಗುತ್ತಾರೆ! ದೇವರೆಂದ ಮೇಲೆ ಸುಮ್ಮನೇ ಹೋಗಲು ಸಾಧ್ಯವೇ? ಅದಕ್ಕೇ ಈ ರಥಯಾತ್ರೆ ನಡೆಯುತ್ತದೆ. ವೈಭವೋಪೇತವಾಗಿ ಅಲಂಕರಿಸಿಕೊಂಡ ಸೋದರ ಸೋದರಿಯರು, ಅಲ್ಲಿ ಹೋಗಿ ಒಂದಿಷ್ಟು ದಿನಗಳ ಕಾಲ ಇದ್ದು ಬರುತ್ತಾರೆ. ತನ್ನ ಬಾಲ್ಯಕ್ಕೆ ಮರಳುವ ಕೃಷ್ಣನ ಸಂಭ್ರಮ ಇದು. ಹೆಂಡತಿ ಲಕ್ಷ್ಮಿಯನ್ನ ದೇಗುಲದಲ್ಲೇ ಬಿಟ್ಟು- ತಾನು ಮಾತ್ರ ಅಣ್ಣ ತಂಗಿಯರೊಡಗೂಡಿ ಹೋಗುತ್ತಾನೆ ಜಗನ್ನಾಥ. ಗುಂಡೀಚ ದೇಗುಲದಲ್ಲಿ ಕೃಷ್ಣನ ಆಮೋದ ಪ್ರಮೋದಗಳ ಸಕಲ ವ್ಯವಸ್ಥೆಗಳೂ ಇದೆ! ಆತ ಅಲ್ಲಿ ಎಲ್ಲ ಮರೆತು ರಾಸಲೀಲೆಯಾಡುತ್ತಾನೆ, ಬೇಕುಬೇಕಾದ ತಿಂಡಿ ತಿನಿಸುಗಳನ್ನ ತಿನ್ನುತ್ತಾನೆ. ಸಿಟ್ಟುಗೊಂಡು ಬಂದ ಲಕ್ಷ್ಮಿಯನ್ನ ಸಮಾಧಾನಿಸಿ ಮರಳಿ ಕಳಿಸುತ್ತಾನೆ! ಎಲ್ಲ ಮುಗಿದ ಮೇಲೆ-ತಾನು ಮತ್ತೆ ಜಗನ್ನಾಥ ದೇವಸ್ಥಾನಕ್ಕೆ ವಾಪಸ್ಸು ಬರುತ್ತಾನೆ. ಇಲ್ಲಿನ ಮಂದಿ ಕೃಷ್ಣನೊಡಗೂಡಿ ತಾವು ಕೂಡ ಈ ರಥಯಾತ್ರೆಯಲ್ಲಿ ಸಂಭ್ರಮಿಸುತ್ತಾರೆ. ತಾವೂ ಆತನ ಬಾಲ್ಯಕ್ಕೆ ಹೋಗುತ್ತಾರೆ. ಪುರಿಯ ಬೀದಿ ಬೀದಿಗಳಲ್ಲಿನ ಎಲ್ಲ ದೇಗುಲಗಳೂ ಕೃಷ್ಣನ ನೆಂಟರದೇ! ಅತ್ತೆ-ಮಾವ-ಚಿಕ್ಕಮ್ಮ-ಚಿಕ್ಕಪ್ಪ-ಹೆಂಡತಿ-ಅಣ್ಣ-ಹೀಗೆ ಎಲ್ಲ ಕಡೆಗಳಿಗೂ ಈ ಜಗನ್ನಾಥ ರಥಯಾತ್ರೆಯ ನೆಪದಲ್ಲಿ ಭೇಟಿಕೊಡುತ್ತಾನೆ. ಅಲ್ಲೆಲ್ಲ ರಥ ಸಾಗುತ್ತದೆ.


ದೇವನೊಬ್ಬ, ತಾನು ದೈವತ್ವಕ್ಕೇರಿದ್ದರೂ, ಹೀಗೆ ಮನುಷ್ಯ ಸಹಜ ಆಚರಣೆಗಳ ಮೂಲಕ ಜನಮಾನಸಕ್ಕೆ ಬಹಳ ಹತ್ತಿರವಾಗುತ್ತಾನೆ. ತಾನೂ ಕೂಡ ನಿಮ್ಮಂತೆಯೇ ಎಂಬ ಆಪ್ತತೆಯನ್ನ ಸಾಮಾನ್ಯರಲ್ಲಿ ಬಿತ್ತುತ್ತಾನೆ. ಜಗನ್ನಾಥ ಈ ಕಾರಣಕ್ಕಾಗಿಯೇ ಎಲ್ಲರಿಗೂ ಪ್ರಿಯ. ಇಷ್ಟೊಂದು ಸರಳ ದೇವರು ಭಾರತದಲ್ಲಿ ಬೇರೆಲ್ಲಿಯೂ ಇಲ್ಲವೇನೋ. ತುಂಬ ಮಡಿವಂತಿಕೆ ಇಲ್ಲದ, ತಿಂಡಿಪೋತ ದೇವರು ನಮ್ಮ ಜಗನ್ನಾಥ. ದಿನವಿಡೀ ದರ್ಶನ ನೀಡುವ, ಬಡವ ಬಲ್ಲಿದನೆಂಬ ಭೇದವಿಲ್ಲದ, ಅತ್ಯುಚ್ಚವಾದ ಆಚಾರವನ್ನೋ, ಪಾಂಡಿತ್ಯವನ್ನೋ ಬೇಡ ಈ ಮಹಾಗುರು, ಸಮಸ್ತರಿಗೂ ಆಪ್ತ. ಜಗನ್ನಾಥನ ಮಂದಿರದೊಳಗೆ ಒಮ್ಮೆ ನಡೆದಾಡಿದರೆ, ಯಾರಿಗೇ ಆದರೂ ಅದರ ಅರಿವಾಗುತ್ತದೆ.
ಮತ್ತೆ ಮತ್ತೆ ಸತ್ತು ಹುಟ್ಟುವ ಜಗನ್ನಾಥ, ಮನುಷ್ಯರಾದವರೂ ದೈವತ್ವಕ್ಕೇರಬಹುದು ಎಂಬ ಸತ್ಯವನ್ನು ಸಾರುತ್ತ ಪುರಿಯಲ್ಲಿ ನಿಂತಿದ್ದಾನೆ. ಕೈಕಾಲುಗಳ ಅಗತ್ಯವಿಲ್ಲದೆಯೇ ಜಗವನ್ನು ಮುನ್ನೆಡಬಹುದು, ಹೃದಯದಲ್ಲಿ ಭಕ್ತಿಯಿದ್ದರೆ ಸಾಕು ಎನ್ನುವ ಈ ಜಗನ್ನಾಥನಿಗೆ-ಜಗನ್ನಾಥನೇ ಸಾಟಿ!

ಸತ್ತು ಹುಟ್ಟುವ ದೇವರುಗಳು
ಜಗತ್ತಿನ ಯಾವ ದೇವಸ್ಥಾನದಲ್ಲಿಯೂ ಇಲ್ಲದ ಅತ್ಯಂತ ವಿಶೇಷ ಆಚರಣೆ ಪುರಿಯ ದೇಗುಲದಲ್ಲಿದೆ. ಅಧಿಕ ಆಷಾಢ ಮಾಸ ಬಂದ ವರ್ಷ ಅಲ್ಲಿನ ಮೂರ್ತಿಗಳನ್ನ ಬದಲಾಯಿಸಲಾಗುತ್ತದೆ. ಈ ಆಚರಣೆಗೆ ನಬಕಲೇಬರ ಎಂದು ಹೆಸರು. ನವ ಕಳೇಬರವೆಂದರೆ-ಹೊಸ ದೇಹ ಎಂದರ್ಥ. ಹನ್ನೆರಡು ಅಥವಾ ಹತ್ತೊಂಬತ್ತು ವರುಷಗಳಿಗೊಮ್ಮೆ ಬರುವ ಈ ಅಧಿಕ ಮಾಸದಲ್ಲಿ, ಹಳೆಯ ಮೂರ್ತಿಗಳನ್ನು ವಿಸರ್ಜಿಸಿ-ಹೊಸ ವಿಗ್ರಹಗಳನ್ನು ದೇಗುಲದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಮರದ ಮೂರ್ತಿಗಳಾದ ಕಾರಣಕ್ಕೆ, ಈ ವಿಹ್ರಗಗಳೂ ಕೂಡ ಜೀರ್ಣಾವಸ್ಥೆಯನ್ನು ತಲುಪಿರುತ್ತವೆ. ಈ ಹೊತ್ತಿನಲ್ಲಿ ದಾರುಬ್ರಹ್ಮವೆಂದು ಕರೆಯುವ ಬೇವಿನ ಮರದಿಂದ ಹೊಸ ಕಾಷ್ಠ ಶಿಲ್ಪಗಳನ್ನ ಕೆತ್ತಲಾಗುತ್ತದೆ. ಈ ಮರಗಳನ್ನು ಆಯ್ಕೆ ಮಾಡಿಕೊಳ್ಳಬೇಕಿದ್ದರೆ ಕೂಡ ಬಹಳ ಸೂಕ್ಷ್ಮ ಪ್ರಕ್ರಿಯೆಗಳಿದ್ದು- ಕಡುಗಪ್ಪು ಬಣ್ಣದ ಮರವೇ- ಜಗನ್ನಾಥನ ಕೆತ್ತನೆಗೆ ಬೇಕಿದ್ದರೆ, ಬಲರಾಮ ಸುಭದ್ರೆಯರಿಗೆ ಮಾಮೂಲು ಮರಗಳೇ ಸಾಕು.  ಹೊಸ ವಿಗ್ರಹಗಳು ಸಿದ್ಧವಾದ ಮೇಲೆ,  ಹಳೆಯ ಮೂರ್ತಿಗಳು ಸಾವನ್ನಪ್ಪಿದವೆಂದು ನಿರ್ಣಯಿಸಿ-ಸೂಕ್ತ ಕ್ರಿಯಾ ಕರ್ಮಗಳನ್ನೂ ನಡೆಸಲಾಗುತ್ತದೆ. ಹೊಸ ದೇಹಗಳೊಂದಿಗೆ ಹಳೆಯ ದೇವರುಗಳು ಮತ್ತೆ ಭಕ್ತರ ದರ್ಶನಕ್ಕೆ ಸಿದ್ಧವಾಗುತ್ತಾರೆ. ತೀರಾ ಇತ್ತೀಚೆಗೆ, 2015 ನೇ ಇಸವಿಯಲ್ಲಿ ನಬಕಲೇಬರ ಆಚರಣೆ ಜರುಗಿತ್ತು.

ಜಗನ್ನಾಥ ಮಹಾಪ್ರಸಾದ:
ಪುರಿಯ ದೇಗುಲದ ಮಹಾಪ್ರಸಾದ, ಅತ್ಯಂತ ವಿಶಿಷ್ಠವಾದದ್ದು. ಜಗನ್ನಾಥನಿಗೆ ಪ್ರತಿದಿನ, ತಪ್ಪದೆ, 56 ಬಗೆಯ ವಿವಿಧ ಖಾದ್ಯ-ಅನ್ನ ನೈವೇದ್ಯವನ್ನ ಸಮರ್ಪಿಸಲಾಗುತ್ತದೆ. ಛಪ್ಪನ್ನ ಭೋಗ್ ಎಂದು ಕರೆಯುವ ಈ ಆಹಾರ ಸಮ್ಮೇಳವೇ-ಬಾಯಲ್ಲಿ ನೀರೂರಿಸುವಂತದ್ದು. ಅನ್ನ, ತುಪ್ಪದಲ್ಲಿ ಕಲಸಿದ ಅನ್ನ, ಸಿಹಿಯಾದ ದಾಲ್, ಕಿಚಡಿ, ತರಕಾರಿಗಳನ್ನ ಬೆರೆಸಿ ಮಾಡಿರುವ ವೈವಿಧ್ಯಮಯ ಸಾರು/ಸಾಂಬಾರುಗಳು.. ಭಕ್ಷ್ಯಗಳು- ಹೀಗೆ ಇವೆಲ್ಲವನ್ನ ಭೋಜನಪ್ರಿಯ ಜಗನ್ನಾಥನಿಗೆ ಸಮರ್ಪಿಸಿ- ಭಕ್ತಾದಿಗಳಿಗೂ ಬಡಿಸಲಾಗುತ್ತದೆ. ನಿತ್ಯ ಇವುಗಳನ್ನ ಕಟ್ಟಿಗೆಯ ಒಲೆಯಲ್ಲೇ, ಮಡಿಕೆಗಳಲ್ಲಿಯೇ ಬೇಯಿಸಲಾಗುತ್ತದೆ. ಒಂದರ ಮೇಲೊಂದು ಮಡಿಕೆಗಳನ್ನ ಇರಿಸಿ, ಈ ಮಹಾಪ್ರಸಾದವನ್ನು ತಯಾರಿಸುವುದನ್ನು ನೋಡುವುದೇ ಒಂದು ಸೊಗಸು.

ರಥೋತ್ಸವದ ತಯಾರಿ
ಪ್ರತಿ ವರುಷದ ರಥೋತ್ಸವಕ್ಕೆ ಕೂಡ ಹೊಸ ರಥಗಳನ್ನ ನಿರ್ಮಿಸುವುದು ಜಗನ್ನಾಥ ದೇಗುಲದ ವಿಶೇಷತೆ. ಸುಮಾರು ೪೫ ಅಡಿಗಳಷ್ಟು ಎತ್ತರವಿರುವ ರಥಗಳ ನಿರ್ಮಾಣವೇ ಒಂದು ಕಲೆ. ಜಗನ್ನಾಥನ ರಥ, ನಂದಿಘೋಷ, ಬಲರಾಮನದು ತಾಲಧ್ವಜ, ಸುಭದ್ರೆಯದು ಪದ್ಮಧ್ವಜ. ನೋಡಲು ದೇಗುಲದ ಗೋಪುರಗಳನ್ನೇ ಹೋಲುವ ರಚನೆಯನ್ನ ಈ ರಥಗಳು ಹೊಂದಿದ್ದು ಜಗನ್ನಾಥನ ರಥ, ಎಲ್ಲಕ್ಕೂ ಎತ್ತರವಾಗಿದೆ. ನೂರಾರು ವರುಷಗಳಿಂದಲೂ ಒಂದೇ ರೀತಿಯಾಗಿ ಈ ರಥಗಳ ನಿರ್ಮಾಣ ನಡೆಯುತ್ತಿದ್ದು, ತಲೆತಲಾಂತರಗಳಿಂದಲೂ ಒಂದೇ ಮನೆತನದ ಮಂದಿ ಈ ಹಕ್ಕನ್ನ ಹೊಂದಿದ್ದಾರೆ. ಪ್ರತಿವರುಷ ಒಡಿಶಾದ ಕಾಡುಗಳಲ್ಲಿ ಅದಕ್ಕೆ ಬೇಕಾದ ಮರಗಳನ್ನ ಪೂಜಿಸಿ, ಕಡಿದು- ನಂತರ ಮಹಾನದಿಯಲ್ಲಿ ಮರಗಳ ತುಂಡುಗಳನ್ನ ತೇಲಿಬಿಡಲಾಗುತ್ತದೆ. ಅವುಗಳನ್ನ ಪುರಿಯಲ್ಲಿ ಸಂಗ್ರಹಿಸಿ, ಅಕ್ಷಯ ತೃತೀಯಾದ ಪುಣ್ಯದಿನದಂದು ರಥಗಳ ಕೆತ್ತನೆ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ನೂರಾರು ಮಂದಿ ಸುಮಾರು ಎರಡು-ಮೂರು ತಿಂಗಳುಗಳ ಕಾಲ ಶ್ರಮಿಸಿ ರಥಗಳನ್ನ ಸಿದ್ಧಗೊಳಿಸುತ್ತಾರೆ. ಹದಿನಾರು ಚಕ್ರಗಳನ್ನ ಹೊಂದಿರುವ, ಕೆಂಪು ಮತ್ತು ಹಳದೀ ವಸ್ತ್ರಗಳಿಂದ ಅಲಂಕೃತವಾದ ಜಗನ್ನಾಥದ ರಥದ ದರ್ಶನವೇ ರೋಮಾಂಚನಕಾರಿ.  

ವಿದೇಶಗಳಲ್ಲೂ ರಥೋತ್ಸವ:
ಈಗ ಜಗತ್ತಿನ ಸುಮಾರು ಎಪ್ಪತ್ತಕ್ಕೂ ಹೆಚ್ಚು ದೇಶಗಳಲ್ಲಿ ಜಗನ್ನಾಥನ ರಥ ಯಾತ್ರೆಯ ದಿನದಂದೇ ಭಕ್ತರೆಲ್ಲ ಸೇರಿ ರಥ ಯಾತ್ರೆಯನ್ನ ನಡೆಸುತ್ತಾರೆ. ನ್ಯೂಯಾರ್ಕ್, ಲಂಡನ್, ಮಾಸ್ಕೋ ಸೇರಿದಂತೆ ಬಹು ಮುಖ್ಯ ನಗರಗಳಲ್ಲಿ ಜಗನ್ನಾಥನ ಯಾತ್ರೆ ಸಂಚರಿಸುತ್ತದೆ!

2 ಕಾಮೆಂಟ್‌ಗಳು:

sunaath ಹೇಳಿದರು...

ಅಬ್ಬಾ! ಜಗನ್ನಾಥನ ವೈಭವ ಹಾಗು ಆಪ್ತತೆಯನ್ನು ಓದಿ ಬೆರಗಾದೆ. ದರ್ಶನ ಮಾಡಿಸಿದ ನಿಮಗೆ ಧನ್ಯವಾದಗಳು. ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ, ದೇವನನ್ನು ಭಕ್ತನಿಗೆ ಅತಿ ಸಮೀಪದ ವ್ಯಕ್ತಿಯನ್ನಾಗಿ ಭಾವಿಸಿ, ಪೂಜಿಸುವ ಪದ್ಧತಿ ಇದೆ. ಪಂಢರಪುರದ ವಿಠ್ಠಲನನ್ನು ಭಜಿಸುವ ಒಂದು ಭಜನೆಯಲ್ಲಿ ‘ಡೊಳ್ಳು ಹೊಟ್ಟೆ, ಪುಟ್ಟ ಕಾಲು.." ಈ ತರಹದ ಸಾಲುಗಳಿವೆ. ಸಂತ ಸಖೂಬಾಯಿಯ ಮನೆಯಲ್ಲಿ ದೇವನು ಅವಳ ವೇಷದಲ್ಲಿ ಬಂದು, ಕಾಳು ಬೀಸಿದ ಕಥೆಯನ್ನು ನೀವು ಕೇಳಿರಬಹುದು. ಭಕ್ತ ಹಾಗು ಭಗವಂತನ ನಡುವೆ ಈ ರೀತಿಯ ಅನ್ಯೋನ್ಯ ಸಂಬಂಧ ಸ್ಥಾಪಿಸುವದು ಭಾರತೀಯ ಆಧ್ಯಾತ್ಮಿಕತೆಯ ವೈಶಿಷ್ಟ್ಯವೇ ಆಗಿದೆ.

Unknown ಹೇಳಿದರು...

ಜಗನ್ನಾಥನ ಸನ್ನಿಧಿಗೆ ಹೋಗುವ ಪೂರ್ವದಲ್ಲಿ ಓದಿದ ಈ ಲೇಖನ ಅವನೊಂದಿಗಿನ ಅನನ್ಯ ಅನುಸಂಧಾನದ ಸಂಕಲ್ಪಕ್ಕೆ ಮನವನ್ನು ಮಿಂದ ದಾರುವಾಗಿಸಿತು...ನಮನಗಳು....