ಸೋಮವಾರ, ಅಕ್ಟೋಬರ್ 30, 2006

ವಾಸ್ತವ

( ಹಿಂದೆ ಬರೆದ ಹೃದಯ ಗೀತ ಕವನವನ್ನ ಓದಿಕೊಂಡು ಇದನ್ನ ಓದಿ)

ಕೇಳೋ ಸಖ ನನ್ನ ಮಾತ,
ನಿಂತೆ ನೋಡು ಇಲ್ಲಿಯೇ,
ಒಮ್ಮೆ ನನ್ನ ನೋಡಿ ನಕ್ಕು
ಮಾತ ಕೇಳಬಾರದೆ?

ತಪ್ಪು ನಿನ್ನದಲ್ಲ ಗೆಳೆಯ
ಮನದ ಮಾತು ಸತ್ಯವು
ನಾನು ನಿನಗೆ ಬಾಳ ಬೆಳಕೆ?!
ಧನ್ಯೆ ನಾನು ನಿತ್ಯವು.

ನನಗು ಕೂಡ ನಿನ್ನ ಹಾಗೆ
ಆಸೆಯುಂಟು ಸಾಸಿರ
ನೀನು ನನ್ನ ಜೊತೆಯಲಿರಲು
ಬಾಳ ಬಂಧ ಸುಂದರ

ಗೆಳೆಯ ನನ್ನ ಕ್ಷಮಿಸಿ ಬಿಡೊ,
ನಿನಗೆ ನಾನು ದೊರಕೆನು.
ನನ್ನ ಪರಿಧಿ ಬಹಳ ಕಿರಿದು
ಹೆತ್ತವರ ನಾ ಮೀರೆನು

ಹೊರಟೆ ನಾನು, ತಿರುಗಿ ಬರೆನು
ಖುಷಿಯಲಿರು ಎಂದಿಗೂ
ನನ್ನ ಹೃದಯ ನಿನ್ನಲಿರಲಿ
ನಿನ್ನ ಬಡಿತ ನನ್ನದು.

2 ಕಾಮೆಂಟ್‌ಗಳು:

Sushrutha Dodderi ಹೇಳಿದರು...

Nice one. ಈ ಕವನಕ್ಕೆ 'ಬೀಳ್ಕೊಡುಗೆ' ಅಂತ ಹೆಡ್ಡಿಂಗ್ ಕೊಟ್ರೂ ತಪ್ಪಿರ್ಲೆ. ಆದ್ರೆ 'ಹೃದಯ ಗೀತ' ಎಲ್ಲಿದ್ದು? ನಿನ್ ಬ್ಲಾಗಲ್ಲಿ ಇಲ್ಯಲ?

bhadra ಹೇಳಿದರು...

kavana bahaLa sogasAgide