ಮಂಗಳವಾರ, ನವೆಂಬರ್ 14, 2006

ಆಗುಂಬೆಯ ಸಂಜೆ.

ಕಳೆದ ಭಾನುವಾರ ಸಂಜೆ, ಆಗುಂಬೆಯ ಸೂರ್ಯಾಸ್ತ ನೋಡುವ ಭಾಗ್ಯ ನಮ್ಮದಾಯಿತು. ನಾವು ಅಂದರೆ, ನಾನು , ಹರ್ಷ, ದಯಾ, ಕೃಷ್ಣ, ವ್ಯಾಸ ಮತ್ತು ನಾಗರಾಜರದು. ಹೋಗಿದ್ದು ಗೆಳೆಯ ಶ್ರೀರಾಮನ ಮದುವೆ ಕಾರ್ಯಕ್ರಮಕ್ಕೆ, ಸಂಜೆ ಅಲ್ಲಿಂದ ಆಗುಂಬೆಗೆ . ಮೋಡ ಇರಬಹುದು, ಸೂರ್ಯಾಸ್ತ ನೋಡೋಕೆ ಸಿಗಲ್ಲ ಅಂತೆಲ್ಲ ಅಳುಕಿದ್ದರೂ ಧೈರ್ಯ ಮಾಡಿ ಹೊರಟೆವು! ನಮ್ಮ ಜೀಪಿನ ಚಾಲಕ ರಫೀಕನೂ ಸರಿಯಾಗೇ "ಚಚ್ಚಿದ್ದ" ಗಾಡಿನ! ೪.೩೦ ರ ಸುಮಾರಿಗೆ ತೀರ್ಥಹಳ್ಳಿಯಿಂದ ಹೊರಟವರು ೫ರ ಆಸುಪಾಸಿಗೇ ಆಗುಂಬೆ ತಲುಪಿಯಾಗಿತ್ತು! ನಮ್ಮ ಪುಣ್ಯಕ್ಕೆ ಶುಭ್ರ ಆಗಸ, ಮತ್ತು ಹೊಳೆಯುತ್ತಿರುವ ನೇಸರ, ಜೊತೆಗೆ ನಮ್ಮಂತೇ ಸೂರ್ಯಾಸ್ತಕ್ಕೆ ಕಾಯುತ್ತಿರುವ ಒಂದಿಷ್ಟು ಸಹೃದಯರು.
ಅರ್ಧ ತಾಸು ಮೇಲೆ ಕೆಳಗೆ ಸುತ್ತಿ, ಒಂದಿಷ್ಟು photo session ನಡೆಸಿ ಸೂರ್ಯಾಸ್ತ ನೋಡಲು ಮನಸ್ಸನ್ನ ಹದ ಮಾಡಿಕೊಂಡೆವು. ಮತ್ತೆ ನಾವು ನೋಡಿದ್ದು, ಅಲ್ಲಲ್ಲ, ಅನುಭವಿಸಿದ್ದು ಸುಂದರ ನೇಸರನ ಬಣ್ಣದಾಟ, ಅದನ್ನ ಶಬ್ದದಲ್ಲಿ ಕಟ್ಟಿಡಲು ಸಾಧ್ಯವೇ ಇಲ್ಲ!! ಹಾಗಾಗಿ ಕೆಲವೊಂದು ಚಿತ್ರಗಳು, ನಿಮಗಾಗಿ.

ಇಲ್ಲಿರುವ ಚಿತ್ರಗಳು ದೇವರಾಣೆಯಾಗೂ "painting" ಅಲ್ಲ ಎಂದಷ್ಟೆ ಹೇಳಲು ಬಯಸುತ್ತೇನೆ! ಕೄಷ್ಣ ಮತ್ತು ಹರ್ಷ ಇಬ್ಬರ camera ಗಳು ತುಂಬಿಕೊಂಡ ಒಂದಿಷ್ಟು ಚಿತ್ರಗಳು....

೧)ಪಶ್ಚಿಮ ಸಮುದ್ರದಲ್ಲಿ ಮುಳುಗೋಕೆ ರೆಡಿ! ಇನ್ನೂ ಕೂಡ ಕಾವು ತಣಿದಿಲ್ಲ ಸೂರ್ಯನದು...


೨) ಹಮ್, ಸ್ವಲ ಸಮಾಧಾನಗೊಂಡ ನೇಸರ..


೩)ಹಳದಿ ತಟ್ಟೆಯ ಸುತ್ತ,ಕೆಂಪು ಚಿತ್ತಾರ.

೪)ಸೂರ್ಯನೊಳಗಡೆ ಅರಶಿನ ಕುಂಕುಮ!

೫)ಇನ್ನೇನು ಮುಳುಗೇ ಬಿಡ್ತೀನಿ!

೬)ಕತ್ತಲ ಗರ್ಭದಲಿ ಅರ್ಧ ಅಡಗಿದ ಸೂರ್ಯ.

೭)ಆಹ್! ಮಾಯ ಆಗೇ ಬಿಟ್ಟ!

೮)ಬರಿಯ ಚಿತ್ತಾರ ಮಾತ್ರ ಬಾನ ತುಂಬ!



ದಿನಪ ಮೂಡಿಸಿದ ವರ್ಣ ವೈಭವ, ಆ ನೈಸರ್ಗಿಕ ಚಿತ್ತಾರಗಳು ಮನದಲ್ಲಿ ಇನ್ನೂ ಹಾಗೇ ಉಳಿದಿವೆ.

ಮಾರನೇ ದಿನ ಬೆಳಗ್ಗೆ ಹರ್ಷ ಹೇಳುತ್ತಿದ್ದ, "ನಾನಿನ್ನೂ ಆ sunset ಗುಂಗಲ್ಲೇ ಇದ್ದಿ ಮಾರಾಯ" ಅಂತ.
ಸೂರ್ಯಾ, ನಿನಗೊಂದು ಪ್ರಣಾಮ!

8 ಕಾಮೆಂಟ್‌ಗಳು:

Sushrutha Dodderi ಹೇಳಿದರು...

ಕಾಮೆಂಟರಿ ಚೆನ್ನಾಗಿದೆ! "ಸೂರ್ಯನೊಳಗೆ ಅರಿಶಿನ-ಕುಂಕುಮ" -ವರ್ಣನೆ ಅದ್ಭುತ.

ಅನಾಮಧೇಯ ಹೇಳಿದರು...

Snaps are really very beautifull.............-

Gubbacchi ಹೇಳಿದರು...

ಪೃಕೃತಿ ಮಡಿಲು ಯಾವಾಗಲೂ ಸುಂದರ...
wow nice comment and photos....

Anveshi ಹೇಳಿದರು...

ಆಗುಂಬೆಯಲ್ಲಿ ಸೂರ್ಯನ
ಈ ಗೊಂಬೆಯನ್ನು
ಚೆನ್ನಾಗಿ ಸೆರೆಹಿಡಿದು
ನಿಮ್ಮ ಬೊಗಳೆಯಲ್ಲಿ ತುರುಕಿದ್ದೀರಿ....
ನಮಗಂತೂ ಆಗುಂಬೆಗೆ ಹೋಗಿ ಬಂದ ಅನುಭವವಾಯಿತು.
ಚೆನ್ನಾಗಿದೆ.

ಶ್ರೀನಿಧಿ.ಡಿ.ಎಸ್ ಹೇಳಿದರು...

ಸುಶ್, ಸಂತೃಪ್ತಿ, ಗುಬ್ಬಚ್ಚಿ,ಬೊಗಳೆ ಮಾಮ:)
ನಿಮ್ಮಗಳ ಪ್ರತಿಕ್ರಿಯೆಗೆ ಕೃತಜ್ಞ.

VENU VINOD ಹೇಳಿದರು...

good pics and good writing as well.

bhadra ಹೇಳಿದರು...

ಬಹಳ ಸುಂದರವಾದ ಚಿತ್ರಗಳು. ಅದಕ್ಕೆ ತಕ್ಕನ ಹಾಗೆ ಲೇಖನವನ್ನು ಸೇರಿಸಿದ್ದೀರಿ. ಸೂರ್ಯೋದಯದ ಚಿತ್ರವನ್ನೂ ತೆಗೆದಿರುವಿರಾ?

ಅದನ್ನು ಹಾಕುವಂತಿದ್ದರೆ - ಲೇಖನದಲ್ಲಿ ಇದನ್ನು ಸೇರಿಸಿ

ನಮಃ ಸವಿತ್ರೇ ಜಗದೇಕ ಚಕ್ಷುಷೇ
ಜಗತ್ಪ್ರಸೂತಿ ಸ್ಥಿತಿನಾಶ ಹೇತವೇ|
ತ್ರಯೀ ಮಯಾಯ ತ್ರಿಗುಣಾತ್ಮಕ ಧಾರಿಣೇ
ವಿರಿಂಚಿ ನಾರಾಯಣ ಶಂಕರಾತ್ಮನೇ||

ಶ್ರೀನಿಧಿ.ಡಿ.ಎಸ್ ಹೇಳಿದರು...

ತ ವಿ ಶ್ರೀಯವರೆ,

ಸೂರ್ಯೋದಯದ ಚಿತ್ರಗಳು ಸದ್ಕ್ಯಕ್ಕಂತೂ ಇಲ್ಲ, ಮುಂದೆ ಸಿಕ್ಕಾವು ಬಿಡಿ.

ಅರ್ಥಗರ್ಭಿತ ಶ್ಲೋಕ, ನನ್ನ ಪದವಿ ತರಗತಿಯಲ್ಲಿ ಸಂಸ್ಕೃತ ಅಧ್ಯಾಪಕರು ಒಮ್ಮೆ ಈ ಶ್ಲೋಕವನ್ನ ವಿವರಿಸಿದ್ದರು, ನೀವು ಮತ್ತೆ ನೆನಪಿಸಿದಿರಿ, ಧನ್ಯವಾದಗಳು.