ಮಿತ್ರ ರಾಘವೇಂದ್ರ ಹೆಗ್ಡೆ , ನಾನು ಮೊನ್ನೆ ಸಿಕ್ಕಿ- ಸಿಕ್ಕಿದ್ದು ಹರಟುತ್ತಿದ್ದೆವು, ಎಂದಿನಂತೆ. ಮಾತು ಶಿಕ್ಷಕರು, ಅವರ ಬವಣೆಗಳು ಇತ್ಯಾದಿಗಳ ಕುರಿತು ಹೊರಳಿತು. ಅವನೂ ಕೂಡಾ ಪ್ರಾಧ್ಯಾಪಕನೇ, ಆರ್ಟ್ ಕಾಲೇಜಿನಲ್ಲಿ. ನನ್ನ ಅಪ್ಪನೂ ಕೂಡಾ ಅಧ್ಯಾಪಕರೇ ಆಗಿರುವುದರಿಂದ ಅದೂ ಇದೂ ಘಟನೆಗಳನ್ನ ಹಂಚಿಕೊಳ್ಳುತ್ತಿದ್ದೆವು.
ಅವನು ಒಂದು ದಿನ ಯಾವುದೋ ಕ್ಲಿಷ್ಟಕರ ಡಿಸೈನ್ ಮಾಡಿಕೊಂಡು ಹೋಗಿದ್ದನಂತೆ ತರಗತಿಗೆ. ಆ ಇಡೀ ಪಿರಿಯಡ್ಡು ವಿದ್ಯಾರ್ಥಿಗಳು ಅವೇ ಚಿತ್ರ ಬಿಡಿಸಬೇಕು, ಆಮೇಲೆ ಅದರ ಬಗ್ಗೆ ಮಾತಾಡೋಣ ಅನ್ನುವುದು ಪ್ಲಾನು. ಆ ಡಿಸೈನನ್ನು ಅವರೆದುರಿಗಿಟ್ಟು, ನೀವೆಲ್ಲ ಬಿಡಿಸಿ ಅಂತ ಹೇಳಿ ಮುಗಿಸುವುದರೊಳಗೆ, ಒಬ್ಬಾತ ಎದ್ದು, ಕಿಸೆಯಿಂದ ಸಟಕ್ಕನೆ ಮೊಬೈಲ್ ತೆಗೆದು, ಆ ಡಿಸೈನ್ ನ ಫೋಟೋ ತೆಗೆದು "ಸರ್ ನಾನಿದನ್ನ ಎಲ್ಲರಿಗೂ ಮೈಲ್ ಮಾಡ್ತೀನಿ ಸಾರ್, ನೀವೀಗ ಹೊಸ ವಿಷಯ ಹೇಳ್ಕೊಡಿ" ಅಂದನಂತೆ! ರಾಘುವಿನ ಶ್ರಮಕ್ಕೆ ಬೆಲೆಯೇ ಇಲ್ಲದಂತಾಗಿತ್ತು.
ಶಿಕ್ಷಕರ ಶ್ರಮ ಹೆಚ್ಚಾಗಿ ಗಮನಕ್ಕೆ ಬಾರದೆಯೇ ಉಳಿಯುತ್ತದೆ. ಒಂದನೇ ಕ್ಲಾಸು ಓದುತ್ತಿದ್ದಾಗಿನ ಟೀಚರು, ಇನ್ನೂ ಅಲ್ಲಿಯೇ ಇರುತ್ತಾರೆ, ಹೊಸ ಮಕ್ಕಳಿಗೆ ಅ ಆ ಇ ಈ ಕಲಿಸುತ್ತಾ. ನಾವು ಯಾವುದೋ ದೊಡ್ಡ ಕಂಪನಿಯ ಕೆಲಸದೊಳಗಿರಬಹುದು.
ಗುರುರಾಜ ಕರ್ಜಗಿ ಎಂಬ ಕಲಾವಿದರಿಗೆ, ಹುಟ್ಟೂರಿನ ಶಾಲೆಯಲ್ಲ್ಲಿ ಸನ್ಮಾನ ಮಾಡಿದರಂತೆ, ಅವರ ಸಾಧನೆಗಾಗಿ. ಆಗ ಅವರು ಗುರುಗಳ ಬಗ್ಗೆ ಹೇಳಿದ ಮಾತುಗಳಿವು:
"ಶಿಕ್ಷಕರು ಎಂದರೆ ನಮಗೆಲ್ಲ ಒಂದು ತೆರನಾದ ಔದಾಸೀನ್ಯ ಭಾವ. ನಾವು ಬೆಳೆದು ಎಲ್ಲೋ ಹೋಗಿದ್ದರೂ, ಈ ಅಧ್ಯಾಪಕರುಗಳು ಅಲ್ಲೇ ಇರುತ್ತಾರಲ್ಲ ಅಂತ. ಆದರೆ ಸತ್ಯ ಅದಲ್ಲ, ಶಿಕ್ಷಕರು ಅಂದರೆ, 'ಕೈಮರ' (ದಿಕ್ಸೂಚಿ) ಇದ್ದ ಹಾಗೆ. ಅವರು ನೀವು ಈ ಕಡೆ ಹೋಗಿ , ಆ ಕಡೆ ಹೋಗಿ ಎಂದು ದಿಕ್ಕು ತೋರಿಸುತ್ತ ಸದಾ ಕಾಲ ನಿಂತಲ್ಲೇ ನಿಂತಿರುತ್ತಾರೆ. ನಾವು ಅವರು ಹೇಳಿದ ಕಡೆಗೆ ಸಾಗುತ್ತೇವೆ. ಒಂದು ವೇಳೆ ಆ ಕೈಮರದ, ದಿಕ್ಸೂಚಿಯ ದಿಕ್ಕು ಬದಲಾದರೆ, ಅಥವಾ ತಪ್ಪು ದಾರಿ ತೋರಿಸಿದರೆ ಜೀವನ ಪರ್ಯಂತ ಗುರಿ ಮುಟ್ಟದೆ ಅಲೆಯಬೇಕಾಗುತ್ತದೆ"!
ಈ ಮಾತುಗಳಿಗೆ ಬೇರೆ ವಿವರಣೆಯೇ ಬೇಕಾಗಿಲ್ಲ!
13 ಕಾಮೆಂಟ್ಗಳು:
ನಗುರೋರಧಿಕಂ ನ ಗುರೋರಧಿಕಂ,
ನಗುರೋರಧಿಕಂ ನಗುರೋರಧಿಕಃ
......
shikshakara bavane avarige gottu... :)
ಖಂಡಿತಾ ಶ್ರೀನಿಧಿ..... ನಿನ್ನ ಅನಿಸಿಕೆಗಳು ಸತ್ಯ. ಒಂದು ಸುಂದರ ಮೂರ್ತಿಯನ್ನ ಕೆತ್ತಲು ಶಿಲ್ಪಕಾರನು ಹೇಗೆ ಶ್ರಮಿಸುತ್ತಾನೊ .... ಹಾಗೆಯೆ ನಮ್ಮನ್ನ ತಿದ್ದಿ ಒಂದು ಸುಂದರ ಬದುಕನ್ನ ರೂಪಿಸಲು ಶಿಕ್ಷಕನ ಪಾತ್ರ ಬಹು ದೊಡ್ಡದು.
ಅವನು ಸಮಾಜದ ಒಂದು ಮುಖ್ಯ ಭಾಗ, ನಾವು ಅವರ ಪರಿಶ್ರ್ಅಮ ಗುರುತಿಸದೆ ಇದ್ದರೆ .... ನಾನು ನಮಗೆ ಮಾಡಿಕೊಂಡ ಮೊಸ ಅನ್ನೊದು ನನ್ನ ಭಾವನೆ.
ಮತ್ತೊಂದು ವಿಷಯ ಇಲ್ಲಿ ಹಂಚಿಕೊಳ್ಳೊಣ ಅಂತಾ ..... ಮುಂದಿನ ವಾರ ನಮ್ಮ ಗೆಳೆಯರೆಲ್ಲ ಸೇರಿ ನಾವು ಓದಿದ ಕಾಲೇಜಿನ ನಮ್ಮ ಗುರುಗಳಿಗೆ ಒಂದು ನಮನ ಕಾರ್ಯಕ್ರಮ ಮಾಡುತ್ತಿದ್ದೆವೆ ..... ಇದು ಅವರಿಗೆ ಒಂದು ಪುಟ್ಟ ಗುರುದಕ್ಷಿಣೆ ..... ಇಷ್ಟಾದರು ಮಾಡಲು ನಮಗಾಗುತ್ತಿದೆಯಲ್ಲ ಅನ್ನುವ ಸಮಾಧಾನ ನಮ್ಮಲಿದೆ .....
ಒಲವಿನಿಂದ
ಅಮರ
ಶ್ರೀನಿಧಿ,
ಬಹಳ ಚೆನ್ನಾಗಿ ಬರೆದಿದ್ದೀರಿ..
ಇತಿ,
ಅರ್ಚನಾ
ಸಂದೀಪ,
ಇದರ ತಾತ್ಪರ್ಯನೂ ಬರ್ದಿದ್ರೆ ಚೊಲೋ ಆಗಿತ್ತು! ನಂಗೆ ಸ್ವಲ್ಪ್ ಸ್ವಲ್ಪ ಅರ್ಥ ಆತು!!
ಲನಾ,
ಹಮ್, ಕೆಲವು ಸರಿ ನಮಗೂ ಗೊತ್ತಾಗತ್ತೆ!
ಅಮರ್,
"ನಮನ ಕಾರ್ಯಕ್ರಮ" ಸ್ವಾಗತಾರ್ಹ! ಒಳ್ಳೇ ಕೆಲ್ಸ ಮಾಡ್ತಾ ಇದೀರ.
ಅರ್ಚನಾ,
ಧನ್ಯವಾದ ಕಣ್ರೀ:)
satyavaagaloo satya nodu neenu bardiddu...
http://whos.amung.us/
idanna try madu.. mail ge login agididnille.. hegu idanna nodte heli gottiddu adke ille :)
btw, Jeevanadalli gurugalu madiddakkinta dodda upakar innu yaru madidville.. well written
Cheers
Chin
houdu neevu baredidu nija. naavu bari sep 5 e shishakara dinacharane aacharise marethu bodtheve. avar kastha athwa avra samasyegallana yaaru artha madkololla
Mobileನಲ್ಲಿ photo ತೆಗೆದಿರುವುದನ್ನ ನೋಡಿದರೆ ಇದು ವಿದ್ಯಾರ್ಥಿಗಳ ಸೋಮಾರಿತನದ ಪರಮಾವಧಿ ಅನಿಸುತ್ತದೆ.
Shikshakara dinacharaneya hardika shubhashayagalu
Beautiful writing
ಕಾಮೆಂಟ್ ಪೋಸ್ಟ್ ಮಾಡಿ