ಗುರುವಾರ, ಮೇ 24, 2007

ಮತ್ತೆ HR ಕತೆ.

ನಮ್ಮನ್ನ ಅಂದರೆ ನಮ್ಮ ಕೆಲಸವನ್ನ- ಕೆಲಸ ಮಾಡುವವರನ್ನ ಹೆಚ್ಚಿನವರು ಬೈಯುತ್ತಾರೆ. HR ಗಳು ಅಂದರೆ, ಉಳಿದ ಸಹೋದ್ಯೋಗಿಗಳಿಂದ ಬೇರೆ ಇರುವವರು,distance ಕಾಪಾಡಿಕೊಳ್ಳುವವರು, ಮ್ಯಾನೇಜುಮೆಂಟಿನ CID ಗಳು .. ಹೀಗೆ. ನಾವು ಏನೂ ಮಾಡುವಂತಿಲ್ಲ. ನಮ್ಮ ಕೆಲಸದ ಹಣೇಬರ ಅದು. ಹೇಳುವವರು ಹೇಳುತ್ತಲೇ ಇರುತ್ತಾರೆ. ನಾವು ಮಾಡುವ ಕೆಲಸ ಮಾಡುತ್ತೇವೆ. ಟೆಲಿ ಮಾರ್ಕೆಟಿಂಗ್ ಗೆ ಫೋನ್ ಮಾಡುವುದಾದರೂ ಬೇಕು, ನಮ್ಮದಲ್ಲ.

ಒಂದೇ ಕೆಲ್ಸದ ಸಲುವಾಗಿ ೧೦-೨೦ ಜನಕ್ಕೆ ಫೋನಾಯಿಸುತ್ತೇವೆ, ಹತ್ತಿಪ್ಪತ್ತು ಬಗೆಯ ಉತ್ತರ ಬರುತ್ತದೆ. ಅದೆಲ್ಲ್ ಆಭ್ಯಾಸವಾಗಿದೆ, ಆದರೂ ಕೆಲವೊಮ್ಮೆ ಹೇಗೆ ಏಗುವುದೋ ತಿಳಿಯದೇ ಒದ್ದಾಡುವಂತಾಗುತ್ತದೆ.

"ನಮಸ್ಕಾರ, ನಾನು ಇಂತಿಂತವನು, ಇಂತಿಂತ ಕಡೆಯಿಂದ ಮಾತಾಡುತ್ತಿದ್ದೇನೆ, ಹೀಗೊಂದು ಕೆಲಸ ಇದೆ, ನಿಮ್ಮ ಪ್ರೊಫೈಲನ್ನ ಯಾವುದೋ ಒಂದು ಜಾಬ್ ಸೈಟಿನಲ್ಲಿ ನೋಡಿದೆ, ನಿಮ್ಗೆ ಈ ಕೆಲ್ಸದಲ್ಲಿ ಆಸಕ್ತಿ ಇದೆ ಅಂದ್ಕೋತೀನಿ"

ಉತ್ತರ ಈ ಧಾಟಿಯಲ್ಲಿ ಬರುತ್ತದೆ,

"ಯೋ , ಹೋಗಯ್ಯೋ, ಯಾಕೋ ತಲೆ ತಿಂತೀಯಾ, ನಂಗೆ ಯಾವ್ ಕೆಲ್ಸನೊ ಬ್ಯಾಡಾ ಮಾರಾಯ"

ಮತ್ತೆ ನಿಮ್ಮ profile ಯಾಕೆ ವೆಬ್ ಸೈಟ್ ಲಿ ಹಾಕಿದ್ರಿ?

"ನನ್ ಇಷ್ಟ, ಹಾಕ್ತೀನಿ, ಏನ್ ಇವಾಗ, ಫೋನ್ ಇಡು"

ಮಾರ್ಯಾದೆಯಲ್ಲಿ ಫೋನ್ ಇಟ್ಟು, ಮತ್ತೊಬ್ಬ ಕ್ಯಾಂಡಿಡೇಟ್ ಗೆ ಮಾಡಿ, ಸ್ವಲ್ಪ ಎಚ್ಚರಿಕೆಯಲ್ಲಿ ಫೋನ್ ಮಾಡಲಾಗುವುದು.
ನಮಸ್ಕಾರಾ, ನಾನು ಇಂತವನು ಅಂತವನು, ಇಂತಲ್ಲಿಂದ ಮಾತಾಡ್ತಿದೀನಿ ಸಾರ್

"ಹುಂ, ಹೇಳಿ"

ಸಾರ್ ಹೀಗೀಗೆ ಒಂದು ಕೆಲ್ಸ ಇದೆ, ನಿಮ್ ರೆಸ್ಯೂಮು ಒಂದು ವೆಬ್ ಸೈಟಲ್ಲಿ ನೋಡ್ದೆ, ಕೆಲ್ಸ ಏನಾರೂ ಚೇಂಜ್ ಮಾಡೋ ಅಲೋಚನೆ ಇದೆಯಾ? , ಇದ್ರೆ ಹೇಳಿ..

" ಹೋಗಯ್ಯಾ, ಏನ್ ಜನ ಇರ್ತಾರಪ್ಪಾ?, ನಾನು ಕೆಲ್ಸ್ದ ಚೇಂಜ್ ಮಾಡೋ ಅಲೋಚ್ನೆ ಇಲ್ದಿದ್ರೆ ರೆಸ್ಯೂಮ್ ನ ಯಾಕೋ ನೌಕ್ರಿಲೋ, ಇನ್ನೆಲ್ಲೋ ಹಾಕ್ತಿದ್ದೆ?, ಹೇಗೆ ಮಾತಾಡ್ ಬೇಕು ಅಂತನೂ ಗೊತಾಯಲ್ಲ ನಿಮ್ಗೆಲ್ಲ!, ಛೇ!"

ನಮ್ಮ ಗ್ರಹಚಾರ!.

11 ಕಾಮೆಂಟ್‌ಗಳು:

Lanabhat ಹೇಳಿದರು...

ಛೆ ಛೆ ನಿಮ್ಮ ಪರಿಸ್ತಿತಿಗೆ ನಮ್ಮ ವಿಶಾದವಿದೆ..
ನಿಮಗೆ ಯಾರೂ Students ಸಿಗೋದಿಲ್ವ ಹೀಗೆ ಫೋನ್ ಮಡ್ದಾಗ ?...
ಸಾರ್ ನಾನಿನ್ನೂ ಕಲೀತಾ ಇದ್ದೇನೆ ಅನ್ನೋರು ? :P

Parisarapremi ಹೇಳಿದರು...

ಅಯ್ಯೋ ಪಾಪ...

ಅವರವರ ಕರ್ಮಕ್ಕೆ ಅವರವರೇ ಹೊಣೆ ಸ್ವಾಮಿ.. ;-)

Srikanth - ಶ್ರೀಕಾಂತ ಹೇಳಿದರು...

ನಾಳೆ ಇಂದ ನಾನು ಯಾರ್ಗೂ ಫೋನ್ ಮಾಡಲ್ಲ ಅಂತ strike ಮಾಡ್ರೀ... :-)

ಶ್ಯಾಮಾ ಹೇಳಿದರು...

ಅದು ಹಾಗೆ... ಎಲ್ಲ ಕೆಲಸಗಳಿಗೂ ಅದರದೇ ಆದ ಇಂಥ ಕಷ್ಟಗಳಿದ್ದೆ ಇವೆ. ಉದಾಹರಣೆಗೆ, ಒಬ್ಬ ರೋಗಿ ಡಾಕ್ಟರ್ ಹತ್ತಿರ ಹೋದ ..ಡಾಕ್ಟರ್ ಕೇಳ್ತಾನೇ "ಏನಾಗಿದೆಯಪ್ಪ" ಅದಕ್ಕೆ ರೋಗಿ ಹೇಳ್ತಾನೇ " ಅದು ಗೊತ್ತಾಗಿದ್ದ್ರೆ ನಿಮ್ಮ ಹತ್ರ ಯಾಕೆ ಬರ್ತಿದ್ದೆ ನಾನು" ಅಂತ. :)

ಶ್ರೀನಿಧಿ.ಡಿ.ಎಸ್ ಹೇಳಿದರು...

@ L@N@,

ಹಾಗಿದ್ದವರೆಲ್ಲ ಸಿಗೋದಿಲ್ಲ ಬಿಡಿ!;೦)

@,Parisarapremi,

:(

@ ಶ್ರೀಕಾಂತ್ ಕೆ.ಎಸ್.,

ಹಾಗೆ ಮಾಡಿದ್ರೆ, ಒದ್ದು ಓಡಸ್ತಾರೆ ಕಣ್ರೀ:)

ಶ್ರೀನಿಧಿ.ಡಿ.ಎಸ್ ಹೇಳಿದರು...

ಶ್ಯಾಮಾ,

ಹೌದೌದು:)ವಿಶ್ಯ ಕರೆಕ್ಟು ನೋಡಿ!

ಸುಪ್ತದೀಪ್ತಿ suptadeepti ಹೇಳಿದರು...

ಅವರವರಿಗೆ ಅವರವರ ಕೆಲಸದಲ್ಲಿ ಇಂಥ ಒದ್ದಾಟ ಇರತ್ತೆ. ನಮ್ಮೂರಿನ ಕಮ್ಯುನಿಟಿ ಕಾಲೇಜಿನ ವ್ಯಾಯಾಮ ಶಾಲೆಯಲ್ಲಿ ನಾನು "Internship" ಮಾಡುತ್ತಿದ್ದೇನೆ. ವ್ಯಾಯಾಮ ಮಾಡುವವರು ಸರಿಯಾಗಿ ಮಾಡುತ್ತಿಲ್ಲವಾದರೆ ಅವರನ್ನು ಎಚ್ಚರಿಸಿ, ಸರಿಯಾದ ವಿಧಾನ ತಿಳಿಸುವುದು ನಮ್ಮ ಕೆಲಸ. ಮೊನ್ನೆ ಹಾಗೇ ಒಬ್ಬರಿಗೆ ತಿಳಿಸಲು ಹೋದರೆ, ಆತ.. "You mind yourself. I'm working out here like this for 30 years... nobody ever told me anything!" ಅಂದ. ಇವತ್ತು ಅವನನ್ನು ಇನ್ನೊಬ್ಬ Internಗೆ ತೋರಿಸಿದೆ, ಇವನೂ ಒಪ್ಪಿಕೊಂಡ ಅವನು ತಪ್ಪು-ತಪ್ಪಾಗಿ ಮಾಡುತ್ತಿದ್ದಾನೆಂದು. ಆದರೆ ಈಗ ಅವನನ್ನು ತಿದ್ದಲು ನಮಗಿಬ್ಬರಿಗೂ ಧೈರ್ಯ ಇಲ್ಲ. ಮತ್ತೆ ಬೈಯಿಸಿಕೊಳ್ಳಲು ನಾನಂತೂ ತಯಾರಿಲ್ಲ. ಇದೂ ಕಲಿಕೆಯ ಒಂದು ಮುಖ ಅಂತ ಸುಮ್ಮನಿದ್ದೇವೆ.

Srikanth - ಶ್ರೀಕಾಂತ ಹೇಳಿದರು...

ಶ್ರೀನಿಧಿ, ತಮಾಷೆ ಮಾಡ್ದೆ ಅಷ್ಟೆ. ನಾನು ಇಷ್ಟು ದಿನ IT ಉದ್ಯೋಗಿಗಳು ಮಾತ್ರ ಕೂಲಿ ಕೆಲ್ಸ ಮಾಡೋದು ಅಂತ ಅನ್ಕೊಂಡಿದ್ದೆ. ನಿಮ್ಮ ಬ್ಳಾಗ್ ನೋಡಿದ್ಮೇಲೇ HRಗಳ ಪಾಡೂ ಅಷ್ಟೆ ಅಂತ ಗೊತ್ತಾಗಿದ್ದು :-(

ಏನು ಮಾಡೋದು... ಯಾವ ಜನ್ಮದ "ಖರ್ಮ" ನಮ್ಮನ್ನು ಅಟ್ಟಿಸ್ಕೋಂಡು ಬರ್ತಿದ್ಯೋ!

ಅನಾಮಧೇಯ ಹೇಳಿದರು...

ಶ್ರೀನಿಧಿ,
ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡಕಾದ್ರೆ ಇವೆಲ್ಲಾ ಅನುಭವಿಸಲೇ ಬೇಕು. "ಕುಚ್ ಪಾನೆ ಕೆ ಲಿಯೆ ಕುಚ್ ಖೋನಾ ಚಾಹಿಯೆ"

ಹಿಂಗೆ ನಮ್ಮ ಹೊಟ್ಟೆಪಾಡಿಗೆ ಕೆಲಸ ಮಾಡಕಾದ್ರೆ ತಾಳ್ಮೆ ಬೇಕು. ಇದನ್ನೆಲ್ಲಾ ಬಿಟ್ಟು ಊರಕಡೆ ಹೋಗಿ ತೋಟದ ಕೆಲಸ ಮಾಡ್ಕ್ಯಂಡು ಬದುಕದು ಬೆಸ್ಟ್ ಎನಂತೀರಾ?

Pramod P T ಹೇಳಿದರು...

ನಕ್ಕು ನಕ್ಕು ಸುಸ್ತು...! ಚೆನ್ನಾಗಿದೆ.. ತುಂಬಾನೆ!
officeನ free time ನಲ್ಲಿ ಒದ್ತಾ ಜೋರಾಗಿ ನಗಾಡ್ ಬಿಟ್ಟೆ....

Sandeepa ಹೇಳಿದರು...

"ಸಂಸಾರ ಅಂದ್ಮೇಲೆ...