ಬುಧವಾರ, ಜುಲೈ 25, 2007

ಶಿಫಾರಸು ಪತ್ರ ಎನ್ನುವ ಹೊಸ HR ಕಥೆಯು.

ಏನೋ ಕೆಲಸದಲ್ಲಿದ್ದೆ. ಮೊಬೈಲ್ ಸದ್ದಾಯಿತು, ಎತ್ತಿಕೊಂಡೆ.

"ಶ್ರೀನಿಧಿಯವರಾ ಮಾತಾಡೋದು?"

ಹೌದು.

"ನಮಸ್ಕಾರ, ನಾನು ಸೀತಾರಾಮ್ (ಹೆಸರು ಬದಲಿಸಲಾಗಿದೆ) ಮಾತಾಡ್ತಿರೋದು, ನಿಮ್ ಹತ್ರ ಸ್ವಲ್ಪ ಮಾತಾಡ್ಬೇಕಿತ್ತಲ್ಲ.."

ಹೇಳಿ..

ಒಂದು ಕೆಲ್ಸ ಬೇಕಿತ್ತಲ್ಲ ನಮ್ ಹುಡುಗಂಗೆ?

ಅರೇ! ಅಂತಂದುಕೊಂಡೆ ಮನದಲ್ಲೇ, ಕೆಲ್ಸ ಕೇಳೋರು ಯಾರೂ ಕನ್ನಡದಲ್ಲಿ ಮಾತಾಡುವುದಿಲ್ಲ.

ಹಮ್, ಹೇಳಿ..

"ನೋಡಿ ಸಾರ್ ನಮ್ ಹುಡ್ಗ ಭಾಳ ಒಳ್ಳೇವ್ನು, ಏನೋ ಕಂಪ್ಯೂಟರ್ ಓದ್ಕಂಡಿದಾನೆ, ಒಳ್ಳೇ ಮನ್ತನ."

ಐಲಾ! ಥೇಟು ರಾಜಕಾರಣಿಗಳದೇ ಧಾಟಿ. ಅದೇ ಗತ್ತು. ಒಳ್ಳೇ ಮನೆತನ ಆದ್ರೆ ನಾನೇನು ಮಾಡ್ಲಿ, ಅವ್ನುಗೇನು ಹೆಣ್ಣು ಹುಡುಕ್ತೀನಾ ನಾನು?

ನೀವ್ಯಾರು ಮಾತಾಡ್ತಿರೋದು?

"ವಸಿ ತಡ್ಕಳಿ, ಹೇಳೋಗಂಟ ಕೇಳಿ"

ನನ್ಗೆ ಉರಿದು ಹೋಗುತ್ತಿತ್ತು.

"ನಮ್ ನಂಜುಡಪ್ನೋರ್ ಮಗ, ಶ್ರೀಕಾಂತು ನನ್ ಹತ್ರ ಬಂದಿದ್ದ, ನಿಮ್ ಕಂಪ್ನಿಯಿಂದೇನೋ ಮೇಲ್ ಬಂದಿತ್ತಂತೆ, ನಿಮ್ಮಲ್ ಕೆಲ್ಸ ಇದ್ಯಂತಲ್ಲಾ , ಅದ್ನ ಅವಂಗೆ ಕೊಡ್ಸೋಕಾಗತ್ತಾ?!!"
"ಭಾಳಾ ಕಷ್ಟಾ ಪಟ್ ಓದಿದಾನೆ ಹುಡ್ಗ, ನಾನು ನೋಡ್ತಾನೇ ಬಂದಿದೀನಿ ಅವನ್ನ. ಪರ್ವಾಗಿಲ್ಲ ನೀವು ನಿಶ್ಚಿಂತೆಲ್ ಕೆಲ್ಸ ಕೊಡ್ಬೋದು ಅವಂಗೆ..

ಅವನ ಮಾತನ್ನ ಅರ್ಧದಲ್ಲೇ ತಡೆದು ನಿಲ್ಲಿಸಿ ಹೆಚ್ಚು ಕಡಿಮೆ ಕಿರುಚಿದೆ!
"ತಾವ್ ಯಾರ್ ಸಾರ್ ಮಾತಾಡದು!?"

"ಒಹ್ ಸಾರೀ ಕಣ್ರೀ, ಹೇಳದೇ ಮರ್ತ್ ಬಿಟ್ಟಿದ್ದೆ, ನಾನು ಕುಮಾರ್ ಸ್ವಾಮಿ PA ಮಾತಾಡ್ತಿರೋದು ಈ ಕಡೆಯಿಂದ"

ಹಾನ್! ನಂಗೆ ಒಂದು ಘಳಿಗೆ ಏನು ಹೇಳಬೇಕೋ ತೋಚಲಿಲ್ಲ!

"ಏನು , ಕುಮಾರಸ್ವಾಮಿ PA ನಾ?"

"ಹೌದು ಸಾರ್, ಕುಮಾರ್ ಸ್ವಾಮಿ ಪೀಏನೇ.. ನಾನು ಅವರ ...ನಗರ ಮನೆಲೇ ಇರೋದು, ಅಲ್ಲೇ ಕೆಲ್ಸ ಮಾಡೋದು.. ನಮ್ ಹುಡ್ಗ ನಿಮ್ ನಂಬರ್ ಕೊಟ್ಟು ಮಸಿ ಮಾತಾಡಣ್ಣೋ, ನಂಗ್ಯಾಕೋ ಹೆದ್ರಿಕೆ ಅಂತಂದ, ಹಾಂಗಾಗಿ ಫೋನ್ ಮಾಡ್ದೆ"

.......... ನಾನು ಏನೂ ಹೇಳಲಿಲ್ಲ, ಅವನಾಗೇ ಮುಂದುವರೆಸಿದ.

"ಒಂದ್ ಕೆಲ್ಸ ಮಾಡ್ತೀನಿ ನಾನು , ಕುಮಾರಣ್ಣಂದು ಒಂದು ಲೆಟರ್ ಕೊಟ್ ಕಳುಸ್ತೀನಿ ನಮ್ ಹುಡ್ಗನತ್ರ, ಅದ್ನ ನೋಡ್ಬುಟ್ಟೇ ಕೆಲ್ಸ ಕೊಡಿ, ನನ್ ಮೇಲೆ ನಂಬ್ಕೆ ಬರ್ಲಿಲ್ಲ ಅಂದ್ರೆ.. "

ಏನ್ ಲೆಟರ್, ಯಾಕೆ ಲೆಟರ್?

"ಅದೇಯಾ, ಇವ್ನು ಒಳ್ಳೇ ಹುಡ್ಗ, ನನ್ನ ಶಿಫಾರಸು ಇದೆ..ಈ ತರ ಈ ತರ ಅಂತ.. ಈ ಮಮೂಲಿ ಶಿಫಾರಸು ಪತ್ರ "
ನಂಗೆ ಅಕ್ಷರಶಃ ಪರಚಿಕೊಳ್ಳುವ ಹಾಗಾಯಿತು. ಸಾಫ್ಟ್ ವೇರ್ ಕೆಲ್ಸನಾ ಗವರ್ಮೆಂಟು ಕೆಲ್ಸ ಅಂದುಕೊಂಡು ಬಿಟ್ಟಿದ್ದ ಈ ಮನುಷ್ಯ ಅನ್ನುವುದರಲ್ಲಿ ಡೌಟೇ ಇರ್ಲಿಲ್ಲ!

ಅಲ್ಲಾ ಇವ್ರೇ, ನಮ್ಮಲ್ಲಿ ಇಂಟರ್ವ್ಯೂ ಗೆ ಸುಮಾರು procedures ಇದೆ, ಅದೆಲ್ಲ ಪಾಸಾದ್ರೆ ಮಾತ್ರ ಕೆಲ್ಸ ಸಿಗತ್ತೆ.. ಟೆಸ್ಟ್ ಬರೀಬೇಕು, ಆಮೇಲೆ ಇನ್ನೇನೇನೋ ತರದ್ದೆಲ್ಲ ಇರತ್ತೆ..

"ಹೀಂಗ್ ಮಾಡಿ ಸಾರ್, ಅದೇನೇನ್ ಕ್ವಶ್ಚನ್ಸು ಇದಿಯೋ ಅದ್ನೆಲ್ಲ ಮೊದ್ಲೇ ಹೇಳ್ಬುಡಿ ನೀವು, ನಮ್ ಹುಡ್ಗಂಗೆ ಸುಲ್ಭಾ ಆಗತ್ತೆ, ಮತ್ತೆ ಸೀಯಮ್ ಕುಮಾರಣ್ಣನ್ ಲೆಟ್ರು ಹ್ಯಾಂಗೂ ಇರತ್ತಾ, ಕೆಲ್ಸ ಆರಾಮಾಗಿ ಸಿಗತ್ತೆ"

ಎಲಾ ಇವನಾ! ನಂಗೆ ಅಳಬೇಕೋ ನಗಬೇಕೋ ಗೊತ್ತಾಗಲಿಲ್ಲ!

ಒಂದು ಕೆಲ್ಸ ಮಾಡಿ , ಅವನ್ನ ಇಂಟರ್ವ್ಯೂ ಗೆ ಕಳ್ಸಿ, ಹುಡ್ಗ ಚನಾಗಿದ್ರೆ, ಕೆಲ್ಸ ಸಿಗತ್ತೆ. ಅವ್ನಿಗೆ programming ಬಂದ್ರೆ, ಯಾರ ಶಿಫಾರಸು ಪತ್ರಾನೂ ಬೇಡ, ಕೆಲ್ಸ ಗೊತ್ತಿಲ್ಲಾ ಅಂದ್ರೆ ಕಲಾಮ್ ಶಿಫಾರಸು ಪತ್ರಾನೂ ನಡೆಯಲ್ಲ- ಅಂತಂದೆ.

ಆ ಆಸಾಮಿ ಇನ್ನೂ ಏನೇನೂ ಹಲುಬುತ್ತಿತ್ತು. "ನೋಡಿ, ನಿಮ್ಗೇ ಒಳ್ಳೇದು.. ಇಲ್ಲಾಂದ್ರೆ.. "

ನಾನು ಫೋನಿಟ್ಟೆ.

ಇವತ್ತಿನವರೆಗೂ ಯಾರೂ ಕುಮಾರಣ್ಣನ ಶಿಫಾರಸು ಪತ್ರ ಹಿಡಕೊಂಡು ಕೆಲಸ ಕೇಳುವುದಕ್ಕೆ ಬಂದಿಲ್ಲ.

17 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

namaskara....
nimma HR kathegaLu chennagi bartide...yake samagra HR kategaLu anta ondu pustakada rupadalli tarbardu? job hudkorige it will be very helpful...

ಅನಾಮಧೇಯ ಹೇಳಿದರು...

nanna modlin comment ge idanna add madkoLi....else u can start a column in any daily news papers...under education section

ಅನಾಮಧೇಯ ಹೇಳಿದರು...

ಶ್ರೀ,
ಸಕತ್ ಲಾ ಮರಯಾ! ಇನ್ನು ಸ್ವಲ್ಪ ದಿನ ಹೋದ್ರೆ PM ನ PA ನೂ ಫೋನ್ ಮಾಡ್ತಾರೋ ಎನೋ! ಕಾದು ನೋಡ ಬೇಕು. ಒಳ್ಳೆ HR ಕಥೆಗಳ ಸರಣಿ. ನಿನ್ನ ಕೆಲಸದಿಂದ ನಮಗೆಲ್ಲಾ ಒಳ್ಳೆ ಮಜಾ ಮಜಾ ಕಥೆಗಳು ಸಿಕ್ತಾ ಇದೆ.

ಅನಾಮಧೇಯ ಹೇಳಿದರು...

ಹಾಸ್ಯ ಹಾಗಿರಲಿ, ಒಂದು ಸಲ ಯೋಚನೆ ಮಾಡಿ,ಪ್ರೈವೇಟ್ ಸೆಕ್ಟರ್ ನಲ್ಲೂ ರಿಸರ್‌ವೇಷನ್ ಬಂದ್ರೆ ಎಲ್ಲ ಹೆಚ್ ಆರ್ ಗಳ ಗತಿ ಏನಾಗಬೇಕು? ಕಂಪನಿಗಳು ರೆಕ್‌ಮಂದೇಶನ್‌ಗೆ ಅಂತ ಬೇರೆ ಹೆಚ್ ಆರ್ ಡಿಪಾರ್ಟ್‌ಮೆಂಟ್ ತೆಗೀಬೇಕಾಗಬಹುದು, ಅಲ್ವಾ?

Srikanth - ಶ್ರೀಕಾಂತ ಹೇಳಿದರು...

ಸಖತ್! ಆದ್ರೆ "ಶ್ರೀಕಾಂತ" ಅನ್ನೋ ಹೆಸರಿಗೇ ಅವಮಾನ ಮಾದ್ಬಿಟ್ರಲ್ಲ ಆ ಮಹಾನುಭಾವರು! ಸಿಗ್ಲಿ ಮಾಡ್ತೀನಿ...

Parisarapremi ಹೇಳಿದರು...

ಒಳ್ಳೇ ಶಿಫಾರಸು...

ಅನು ಹೇಳಿದರು...

ತುಂಬಾ ಚೆನಾಗಿದೆ....ನಿಮ್ಮ HR ಕಥೆಗಳ ಸರಣಿಯನ್ನು ಓದಿ ನನಗೂ HR ಆಗಬೇಕು ಅಂತ ಆಸೆಯಾಗ್ತಿದೆ....ತುಂಬಾ ಎಂಜಾಯ್ ಮಾಡ್ತೀರಿ ಅನ್ನಿಸುತ್ತೆ ಅಲ್ಲವಾ?:D

ಅನಾಮಧೇಯ ಹೇಳಿದರು...

ನಿಲ್ಲಿಸದಿರು ಮಿತ್ರಾ.... ನಿನ್ನ HR ಕಥೆಗಳನ್ನ......
ಮುಂದೊಮ್ಮೆ ನಾವಿಬ್ಬರು ಸೇರಿ ಧಾರವಾಹಿ ಮಾಡೋಣ...
ಸಿಲ್ಲಿ ಲಲ್ಲಿಯ ಹಾಗೆ ಪ್ರಸಿದ್ದಿಯಾಗುತದೆ.

ಅನಾಮಧೇಯ ಹೇಳಿದರು...

ಹ್ಹ ಹ್ಹ. ಸೂಪರ್

Banavasi Balaga ಹೇಳಿದರು...

geLeyare,
kannaDada para chintane, charche, hot discussions ella ee hosa blog alloo nadeetide. illoo bhAgavahisONa banni !

http://enguru.blogspot.com

- KattEvu kannaDada naaDa, kai joDisu baara !

Mahantesh ಹೇಳಿದರು...

HR kathegaLu dindinda dinakke hosa ayyam kodta ive..:))

ಮೃಗನಯನೀ ಹೇಳಿದರು...

Kharma kaanda..
super comedy....

ಅನಾಮಧೇಯ ಹೇಳಿದರು...

It's a great joke. For some oen like me who has spent all of his life in teh HR world. this is a great relief. Though, some of my colleagues should get a bit offended, perhaps.. :D
--------------------------------------------------------
If you think you need to type in Kannada, please use quillpad.in/kannada/ It's going to
make your life so easy, you'll think computers were made for Kannada. Try Quillpad. Put up lot
of blog articles and anything else you may want to do...

ರಾಜೇಶ್ ನಾಯ್ಕ ಹೇಳಿದರು...

ಶ್ರೀ ನಿಧಿ,

ಈ ಮಾ.ಸಂ. ಕಂತು ಸೊಗಸಾಗಿತ್ತು. ನೀವು ಬರೆಯುವ ಶೈಲಿಯಿಂದ ಘಟನೆ ಕಣ್ಣ ಮುಂದೆ ನಡೆದಷ್ಟು ಸ್ಪಷ್ಟವಾಗಿ ಮನಸ್ಸಲ್ಲಿ ಚಿತ್ರಗಳು ಮೂಡಿಬರುತ್ತವೆ. ಮುಂದಿನ ಕಂತಿಗಾಗಿ ಕಾಯುತ್ತಿದ್ದೇನೆ...

VENU VINOD ಹೇಳಿದರು...

ಶಿಫಾರಸು ಕಥೆ ಸ್ವಾರಸ್ಯಕರ

ಶ್ರೀನಿಧಿ.ಡಿ.ಎಸ್ ಹೇಳಿದರು...

@ all,

ಎಲ್ಲರ ಕಮೆಂಟಿಗೂ ನಾನು ಧನ್ಯ. ಇದು ನನ್ನ ಕೊನೆಯ HR ಕಥೆ! ಇನ್ನು ಬೇರೇನಾದರೂ ಹುಟ್ಟಬಹುದೇನೋ, ನೋಡೋಣ.

ಅನಾಮಧೇಯ ಹೇಳಿದರು...

ನಿಂಗೆ ಕಾದೈತೆ ತಡಿ