ಶುಕ್ರವಾರ, ಆಗಸ್ಟ್ 03, 2007

ಒಂದು ಅಲ್ಪ ವಿರಾಮ.

ನಮಸ್ತೇ.

ನಾನು ಸ್ವಲ್ಪ ದಿನಗಳ ಮಟ್ಟಿಗೆ ಬ್ಲಾಗಿಂಗ್ ನಿಂದ ವಿರಮಿಸುತ್ತಿದ್ದೇನೆ. ಕಾರಣ ಹಲವು. ಮುಖ್ಯವಾಗಿದ್ದು - ನಾನು ನನ್ನ HR ಪ್ರಪಂಚದಿಂದ ಹೊರ ಬಂದು ನನ್ನಿಷ್ಟದ ಮಾಧ್ಯಮ ಜಗತ್ತಿಗೆ ಹೊರಟಿದ್ದೇನೆ. ಅಲ್ಲಿಗೆ ನ್ಯಾಯ ಸಲ್ಲಿಸಬೇಕಿದೆ. ಬರವಣಿಗೆ ನನ್ನ ಉಸಿರು. ಅದಕ್ಕೇ ಬೇರೆಯದೇ ರೂಪ ಸಿಗುತ್ತಿದೆ. ಬ್ಲಾಗಿಸಲು ಸಮಯ ಸಿಗದು.
ನನ್ನ ಬರಹಗಳನ್ನ ಮೆಚ್ಚಿ ಪ್ರೋತ್ಸಾಹ ಸಲ್ಲಿಸುತ್ತಿದ್ದವರು ಹಲವರು. ಎಲ್ಲರಿಗೂ ಕೃತಜ್ಞ. ನಾನು ಬ್ಲಾಗಿಸಲು ಆರಂಭಿಸಿದಾಗ ಕನ್ನಡದಲ್ಲಿದ್ದವು ಬೆರಳೆಣಿಕೆಯ ಬ್ಲಾಗುಗಳು. ಈಗ ಅವುಗಳ ಸಂಖ್ಯೆ ಅಗಣಿತವಾಗುತ್ತಿದೆ! ಮತ್ತೆ ನಾನು ಬ್ಲಾಗಿಗನಾಗುವಾಗ
ಏನಾಗಿರುತ್ತದೋ!

ಎಲ್ಲರಿಗೂ ಮತ್ತೊಮ್ಮೆ ವಂದನೆಗಳು. ಮುಂದೆ ಯಾವಾಗಲಾದರೂ ಭೇಟಿಯಾಗೋಣ.
ಶ್ರೀನಿಧಿ.ಡಿ.ಎಸ್.

21 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

namaskara,
hige nivu nirgamanavaguttiruvudu besara agtide. nimma baaLa payanadalli ondu mukya tiruvu idu endu anisuttade. shubhavagali... sadhaneya mettilu erutta sagiri endu aashisuttene

ಶ್ಯಾಮಾ ಹೇಳಿದರು...

ನಿಜವಾಗಲೂ ಬೇಸರದ ವಿಷಯ. ನಿನ್ನ ಪ್ರತಿ posting ಅನ್ನು ಇಷ್ಟ ಪಟ್ಟು ಓದುತ್ತಿದ್ದಿ. ಆದರೂ ಏನೋ ಬೇರೆಯದನ್ನು ಸಾಧಿಸಲು ಇಲ್ಲಿ ಅಲ್ಪ ವಿರಾಮ ಹಾಕಿ ಹೋಗ್ತಾ ಇದ್ದೇ,All the best.
ಆದರೆ ಅಲ್ಪ ವಿರಾಮ ದೀರ್ಘ ವಿರಾಮ ಆಗದಿರಲಿ ಅಂತ ಆಶಿಸುತ್ತ ... ಶ್ಯಾಮಾ

ಅನಾಮಧೇಯ ಹೇಳಿದರು...

ಹೆಸರೇ ಹೇಳುವಂತೆ "ಒಂದು ಅಲ್ಪ ವಿರಾಮ."ಆದ್ದರಿಂದ ಪ್ರತಿ ಅದಿತ್ಯವಾರ ತಾವು ಇದೇ(ಬ್ಲಾಗ್)ಕಾಯಕವನ್ನು ಮುಂದುವರಿಸಬೇಕಾಗಿ ಬ್ಲಾಗ್ ಓದುವ ಎಲ್ಲಾ ಓದುಗರ ಪರವಾಗಿ ನನ್ನದೊಂದು ವಿನಂತಿ.ಅದು ಅಲ್ಪ ವಿರಾಮವೆ ಆಗಲಿ ಹೊರತೂ.........

ವಿ.ರಾ.ಹೆ. ಹೇಳಿದರು...

ನಿನ್ನ ಹೊಸ ವೃತ್ತಿ ಜೀವನಕ್ಕೆ ಶುಭ ಹಾರೈಸುತ್ತೇನೆ.
ಸಮಯ ಮಾಡಿಕೊಂಡು ಬ್ಲಾಗಿಸಬೇಗು ಎಂದು ಅಭಿಮಾನಿಗಳ ಮನವಿ .

miss u :(

ಪ್ರೀತಿಯಿಂದ
-ವಿಕಾಸ್

Unknown ಹೇಳಿದರು...

ನಿನು ಬ್ಲಾಗ್ ಬರೆಯಲು ಶುರು ಮಾಡಿ ಮುಂದಿನ ತಿಂಗಳಿಗೆ ಒಂದು ವರ್ಷ ಆಗುತ್ತದೆ. ಆ ದಿನಕ್ಕಗಿ ಕಾದಿದ್ದ ಓದುಗರಿಗೆ ಹೀಗೆ ನಿನು ಹೊಗೊದು ಬೆಸರದ ವಿಷಯ. ನಿನ್ನ ಕವನದ ಮೂಲಕವೇ ನಮ್ಮ ಸ್ನೇಹ ಚಿಗುರೊಡೆದದ್ದು... ನಿನ್ನದೆ ಸಾಲುಗಳ ಮೂಲಕ ನನ್ನ good wishes ತಿಳಿಸುತ್ತಿದ್ದೆನೆ.

ಪಯಣ ಸಾಗುತಲಿರಲಿಗುರಿಯ ಕಡೆಗೆ,
ವಿನಯ ಸೂಸುತಲಿರಲಿಕೊನೆಯವರೆಗೆ
ತಾಳ್ಮೆ ತಪ್ಪದೆ ಇರಲಿ,ಜಯವೆ ನಿನಗೆ!

Lanabhat ಹೇಳಿದರು...

all the best Shree

ನಿಮ್ಮ ಮುಂದಿನ ವೃತ್ತಿಬದುಕು ಸುಂದರವಾಗಿರಲಿ ಎಂದು ಹಾರೈಸುತ್ತೇನೆ.....

Sushrutha Dodderi ಹೇಳಿದರು...

ಏನಂತ ಹೇಳಲಿ ನಿಧಿ?

ಶ್ರೀ ಹೇಳಿದರು...

ಶ್ರೀನಿಧಿ, ನಿಮ್ಮ interestನ ಮುಂದೆ ತೆಗೆದು ಕೊಂದು ಹೊಗುತ್ತಿದ್ದೀರಿ. ನಮ್ಮ ಶುಭ ಹಾರೈಕೆಕಳು. ಬರನಣಿಗೆಯ ಮಾಧ್ಯಮ ತುಂಬಾ ಪ್ರಭಾವಶಾಲಿ. ನಿಮ್ಮ ಬರವಣಿಗೆ ಎಲ್ಲರಿಗೂ ಒಳ್ಳೆಯದನ್ನು ತರಲಿ ಅಂತ ಆಶಿಸುತ್ತೇನೆ. ಜೊತೆಗೆ ನಿಮಗೂ.. ನಿಮ್ಮ blog ಓದಿದವರೆಲ್ಲರೂ ನಿಮ್ಮಿಂದ ತುಂಬ expectಮಾಡುತ್ತಾರೆ :)

Ranju ಹೇಳಿದರು...

ಶ್ರೀ,
ತುಂಬಾ ಬೇಜಾರ್ ಆಗುತ್ತಿದಿ. ನನ್ನಂತ ಬ್ಲಾಗ್ ಓದೊ ಜೀವಿಗಳಿಗೆ ನೀವೆ ಜೀವನಾಧಾರ. ನಿಮ್ಮ ಅಲ್ಪ ವಿರಾಮ ಆದಷ್ಟು ಬೇಗ ಕೊನೆಗೊಳ್ಳಲಿ.
really missing your articles.
ನೀನು ಆಯ್ದು ಕೊಂಡ ದಾರಿ ಸುಗಮವಾಗಿರಲಿ, ನಿನ್ನನ್ನು ಉನ್ನತಿಯತ್ತ ಕರೆದುಯ್ಯಲಿ.

ಎಂದು ಹಾರೈಸುತ್ತೇನೆ.

ರಾಜೇಶ್ ನಾಯ್ಕ ಹೇಳಿದರು...

ಪೂರ್ಣವಿರಾಮ ಅಂದಿಲ್ಲವಲ್ಲ, ಅಷ್ಟು ಸಾಕು. ನಿಮ್ಮಲ್ಲಿರುವ ಬರಹಗಾರ ಪೂರ್ಣವಿರಾಮ ಅನ್ನಲು ಸಾಧ್ಯನೂ ಇಲ್ಲ ಬಿಡಿ. ನಿಮ್ಮ ಪೋಸ್ಟ್ ಗಳನ್ನು ಮತ್ತೆ ಮತ್ತೆ ಓದಿದರೂ ಮೊದಲ ಸಲ ಓದುತ್ತಿರುವಂತೆ ಅನ್ನಿಸುವಷ್ಟು ಪಕ್ವತೆ ಇದೆ ನಿಮ್ಮ ಬರಹದಲ್ಲಿ.

ಹೊಸ ವೃತ್ತಿಯಲ್ಲಿ ಒಳ್ಳೆದಾಗಲಿ. ನಿಮ್ಮಿಷ್ಟದ ವೃತ್ತಿಯನ್ನು ಮಾಡುತ್ತಿದ್ದೀರಿ. ಹೆಸರು ಗಳಿಸಿ.

Srikanth - ಶ್ರೀಕಾಂತ ಹೇಳಿದರು...

ನಿಮ್ಮ ಬೇರೆಯ ರೂಪದ ಬರವಣಿಗೆಗಳನ್ನು ಓದಲು ಎದುರುನೋಡುತ್ತಿದ್ದೇನೆ. ಇಷ್ಟವಾದ ಕೆಲಸಕ್ಕೆ ಕೈ ಹಾಕುತ್ತಿದ್ದೀರ - ನನ್ನ ಶುಭಹಾರೈಕೆಗಳು ಸದಾ ನಿಮ್ಮೊಂದಿಗಿರುತ್ತವೆ.

Shree ಹೇಳಿದರು...

ಇಷ್ಟೊಂದು ಬೇಜಾರ್ ಮಾಡ್ಕೊಬೇಕಾಗಿಲ್ಲ ಯಾರೂ, NIDHI WILL BE BACK WITH A FACELIFT, IN FULL SPEED :)

Parisarapremi ಹೇಳಿದರು...

All the best..

ಸಿಂಧು sindhu ಹೇಳಿದರು...

ನಿಧಿ,

ಒಳ್ಳೆಯದಾಗಲಿ.
ಸಿಕ್ಕ ದಾರಿಗಳಲ್ಲಿ ವೇಗವಾಗಿ ಸಾಗಿ ಹೋಗುವಾಗೊಮ್ಮೆ ಕೆಲಸಮಯ ನಿಂತು (ಮುಂದೆ ನಡೆಯದೆ) ಹೊರಟರೆ ಪಯಣಕ್ಕೆ ಹೊಸ ಪರಿಧಿ, ಹೊಸತೆ ಗುರಿ ದಕ್ಕಬಹುದು.

ಹೊಸಹೊಸನೋಟಗಳ ಮಾನ್ಸೂನ್ ನಿರೀಕ್ಷಿಸುತ್ತಿದ್ದೇನೆ. ಬೇಸಿಗೆಯಲ್ಲಿ ಕಾದಾಗಲೆ ತುಂತುರು ಹನಿಗಳ ಹನಿಹನಿಯನ್ನೂ ಸವಿಯಲಾಗುವುದು..

ಬದುಕುವ ಕಲೆಯ(art of living) ಎಪಿಸೋಡುಗಳಿಗಾಗಿ ಕಾಯುತ್ತಿದ್ದೀನಿ ಕೂಡಾ.. :)

ಪ್ರೀತಿಯಿರಲಿ, ಉಳಿದೆಲ್ಲ ತಾನಾಗೆ ಬರುತ್ತದೆ.
ಸಿಂಧು

Vijaya ಹೇಳಿದರು...

Hey good luck ... naanoo sumaaru dina aadmele nin blog noDde ... olle news. Tumba jana tam passion enirotto adanna mundvarsde badukkokke sulabha aago kelsa maadtirtaare. Chennagi nadita iro kelsa bittu, nangishta aagidanna maadteeni antha hogoru tumba kammi. Hearty wishes to you!!

PRAVINA KUMAR.S ಹೇಳಿದರು...

best of luck... come back again..

Suma Udupa ಹೇಳಿದರು...

HR kelsa bittu nimma istada kelsakke hogutiruva nimage nanna subhashaya ... Matte beega blog bariyalu aarambhisi ...

Shiv ಹೇಳಿದರು...

ಶ್ರೀನಿಧಿ,
ಒಳ್ಳೆಯದಾಗಲಿ ನಿಮ್ಮ ಹೊಸ ಪ್ರಯತ್ನಕ್ಕೆ..
ಬೇಗ ಬಂದು ಮತ್ತೆ ಬ್ಲಾಗಿಸೋಕೆ ಶುರುಮಾಡಿ

Sandeepa ಹೇಳಿದರು...

ಶುಭವಾಗಲಿ!

ಅನಾಮಧೇಯ ಹೇಳಿದರು...

missing ur writeups....

ಅನಾಮಧೇಯ ಹೇಳಿದರು...

innu bareyodakke saadhyavaagilvEnu? bahushah mODa kappiTTu tuMturu badalaagi jOru maLe barabahudu anno nirIkshellidini.