ಗುರುವಾರ, ಡಿಸೆಂಬರ್ 06, 2007

ಚಳಿಯ ಬೆಳಗಲಿ...

ತೆಳ್ಳಗಿನ ಚಳಿ ಪದರು, ಮುಂಜಾವ ಸುತ್ತೆಲ್ಲ
ಜುಮುರು ಮಳೆ ನಿಂತಿಹುದು, ಆಗತಾನೆ.
ಮನೆಯ ಹಿತ್ತಿಲಲಿಹುದು, ಪಾರಿಜಾತದ ವೃಕ್ಷ
ಎಲೆ ಹಸಿರ ಮೇಲೆಲ್ಲ ಬಿಳಿ ಹೂವ ರಂಗೋಲಿ.

ಹೂವು ಹೆಕ್ಕುವ ಸಮಯ,ಅವಳು ಬರಬೇಕಿತ್ತು
ಇಂದೇಕೆ ಬಂದಿಲ್ಲ, ಬಹಳ ಚಳಿಯೆಂದೆ?
ನಿನ್ನೆ ನನಗೂ ಮೊದಲೆ ಬಂದುನಿಂತಿದ್ದಳು,
ಯಾಕಿಂದು ಈ ರೀತಿ, ತಿಳಿಯದಲ್ಲ

ಚಳಿಯು ಕಾರಣವಲ್ಲ, ಬೇರೇನೋ ಇರಬೇಕು
ಅಥವಾ ಚಳಿಯೇ ಹೌದೋ?, ಇರಲೂಬಹುದು!
ಎಂದೂ ತಡಮಾಡಿಲ್ಲ, ಅವಳು ನನ್ನ ಹಾಗಲ್ಲ.
ಪಾರಿಜಾತಕೂ ಗೊತ್ತು ಅದು, ಅಲ್ಲವೇನೆ?

ನಾನು ತಡವಾದಂದು ಹುಸಿಮುನಿಸು ತೋರುವಳು
ಮಾತೇ ಆಡುವುದಿಲ್ಲ ಮೂರು ನಿಮಿಷ!
ಮತ್ತೆ ನಾನೇ ಮೆಲ್ಲ ಬೆರಳು ತಾಕಿಸಿ, ಕಣ್ಣು ಹೊಡೆದು
ನಗಿಸಿ, ಕಿವಿ ಹಿಡಿದು ಕ್ಷಮೆ ಕೇಳಿ- ಅಬ್ಬಬ್ಬ, ಕಷ್ಟ ಕಷ್ಟ.

ಇಂದು ಮಾಡುವೆ ಶಾಸ್ತಿ, ಬರಲಿ ನನ್ನಯ ಬಳಿಗೆ
ಮಾತಾನಾಡುವುದಿಲ್ಲ, ನೋಡುವುದೂ ಇಲ್ಲ
ನನ್ನ ಪಾಡಿಗೆ ನಾನು ಹೂಹೆಕ್ಕಿ ನಡೆಯುವೆನು
ನನ್ನ ಕಾಡಿಸುವಳಲ್ಲ, ಇಂದು ಗೊತ್ತಾಗಲಿ!

ಮುನಿಸೇನಾದರೂ ಇದೆಯೆ ?ಹೇಗೆ ಸಾಧ್ಯ
ನವಿಲುಗರಿ ಕೊಟ್ಟಿದ್ದು ನಿನ್ನೆ ಬೆಳಗೆಯೆ ತಾನೆ?
ಬಾರೆ ಬೇಗನೆ ಹುಡುಗಿ, ಒಬ್ಬನೇ ಇರಲಾರೆ
ದೇವಪೂಜೆಗೆ ಹೂವು ನನಗಂತೂ ನೆಪವೇ.


ಅಪ್ಪ ಹೊಗಳುತಿದ್ದ ನಿನ್ನೆ, ಮಗನು ಉತ್ತಮನೀಗ
ಶೃದ್ಧೆ ಭಕ್ತಿಯು ಬರುತಿದೆ ಜೀವನದೊಳು.
ನೀನು ಕಾರಣವೆಂದು ಅವಗೆಂತು ಗೊತ್ತು,ಇಲ್ಲದಿರೆ
ಈ ಕೊರೆವ ಚಳಿಯಲ್ಲಿ ಹೂವ ಹೆಕ್ಕಲು ಹುಚ್ಚೆ?

ಒಂದೊಂದೆ ಹೂ ಹೆಕ್ಕಿ, ಬಿದಿರ ಬುಟ್ಟಿಗೆ ಹಾಕಿ
ಮತ್ತೆ ನೋಡಿದನವನು ಮಂಜದಾರಿ.
ಮೆಲು ಗೆಜ್ಜೆಯಾದನಿಯು, ಬೇಲಿದಾಟುತಲಿರಲು
ಬುಟ್ಟಿಯಾ ಹೂ ಮತ್ತೆ, ಭೂಮಿಪಾಲು.

17 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

namaskara,
after such a long time hintad ond kavana bantu tamminda. beLagge beLagge idanna odiddu manassige khushi kodtu. tunturu hanigaLu in chaLiya beLagali... barita iri.
shubhashayagaLondige...

ಸಿಂಧು sindhu ಹೇಳಿದರು...

ಖುಷ್ಯಾತು ನಿಧಿ ಓದಿ.

ಎಷ್ಟ್ ಚೆನಾಗ್ ಬರದ್ದೆ.. :)
ಇಬ್ಬನಿಯ ಕುಳಿರು ಚಳಿ ಒಳಹೊಕ್ಕು ಮೈಮನಸು ನವಿರೆದ್ದಿದ್ದು.
ಎಲೆ ಹಸಿರ ಮೇಲೆಲ್ಲ ಬಿಳಿ ಹೂವ ರಂಗೋಲಿ!
ಬುಟ್ಟಿಯಾ ಹೂ ಮತ್ತೆ ಭೂಮಿಪಾಲು..
ಅಬ್ಬಬ್ಬ ಕಷ್ಟ ಕಷ್ಟ!

ಪ್ರೀತಿಯಿಂದ
ಸಿಂಧು

Sushrutha Dodderi ಹೇಳಿದರು...

ಇಷ್ಟು ಚಂದ ಕವನದ ಬಗ್ಗೆ ಪ್ರತಿಕ್ರಿಯೆ, ಪ್ರಶಂಸೆ, ಏನು ಮಾಡಿದರೂ ಅದು ತಪ್ಪಾಗತ್ತೆ.. ಓದಿ ಸುಮ್ನಾಗ್ಬಿಡ್ಬೇಕು.. ಕಣ್ಮುಂದಿರೋ ಆ ಚಿತ್ರ ಕದಲೋದಿಲ್ಲ.. ಕಾಡುತ್ತೆ.. ಆ ಭಾವಪುಷ್ಪಗಳ ಹಿತವಾದ ಘಮ ಮನ್ಸಿನ ತುಂಬ ತುಂಬ್ಕೊಂಡು ಮುಂಜಾವಿನ ಚಳಿಗೆ ರುಚಿ ಕೊಡತ್ತೆ .. ಹ್ಮ್.. ಎಷ್ಟೋ ಹೊತ್ತು ಹಾಗೇ ಇರೊತ್ತೆ.. ದಿನವನ್ನ ಚಂದ ಮಾಡುತ್ತೆ..

ಲವ್ಯೂ ಚೋ ಮಚ್ ನಿಧೀ..

ರಂಜನಾ ಹೆಗ್ಡೆ ಹೇಳಿದರು...

ಹೆಯ್ ಶ್ರೀ,

ತುಂಬಾ ಚನ್ನಾಗಿ ಬರದ್ದೆ ಕಣೋ.
ಎಂತಾ ಸುಂದರ ಸರಳ ಸಾಲುಗಳು.
ಮತ್ತೆ ಬುಟ್ಟಿಯಾ ಹೂವುಗಳು ಭೂಮಿ ಪಾಲು ಈ ಸಾಲು ಸಕತ್ ಇಷ್ಟ ಆತು.
ಬರಿತಾ ಇರಪ್ಪ.
ಬೆಳಗ್ಗೆ ಬೆಳಗ್ಗೆ ಓದಿ ದಿನವನ್ನ ಸುಂದರ ಮಾಡಿದ್ದೆ. ಥ್ಯಾಂಕ್ಸ್ ಎ ಲಾಟ್.

ಅನಾಮಧೇಯ ಹೇಳಿದರು...

I go wid Shushrutha ಇಷ್ಟು ಚಂದದ್ ಕವನದ ಬಗ್ಗೆ ಏನೂ ಹೇಳಬಾರದು.... ಓದಿ ಖುಶಿ ಪಡಬೇಕಷ್ಟೇ
ಮಲ್ನಾಡ್ ಹುಡ್ಗಿ;-)

Avani ಹೇಳಿದರು...

Good work man.............

ಮನಸ್ವಿನಿ ಹೇಳಿದರು...

ವಾವ್ ...
ಬಹಳ ಚಂದದ ಹಾಡು :)

ಶ್ಯಾಮಾ ಹೇಳಿದರು...

ಒಂದೊಂದೆ ಹೂ ಹೆಕ್ಕಿ, ಬಿದಿರ ಬುಟ್ಟಿಗೆ ಹಾಕಿ
ಮತ್ತೆ ನೋಡಿದನವನು ಮಂಜದಾರಿ.
ಮೆಲು ಗೆಜ್ಜೆಯಾದನಿಯು, ಬೇಲಿದಾಟುತಲಿರಲು
ಬುಟ್ಟಿಯಾ ಹೂ ಮತ್ತೆ, ಭೂಮಿಪಾಲು.

WOW!!!!!!

VENU VINOD ಹೇಳಿದರು...

ಶ್ರೀನಿಧಿ,
ಬೇರೇನೂ ಹೇಳೋದಿಲ್ಲ, ಮಂತ್ರಮುಗ್ಧನಾದೆ...ಅಷ್ಟೇ

ಅನಾಮಧೇಯ ಹೇಳಿದರು...

ಕೆ.ಎಸ್.ನ. ಮತ್ತೆ ಬಂದರೆ?

ಸುಧನ್ವಾ ದೇರಾಜೆ. ಹೇಳಿದರು...

after a long time, good come back.

Sandeepa ಹೇಳಿದರು...

wwooww!!!

jomon varghese ಹೇಳಿದರು...

ಸುಂದರ ದೃಶ್ಯಕಾವ್ಯ!

ಧನ್ಯವಾದಗಳು,
ಜೋಮನ್

Parisarapremi ಹೇಳಿದರು...

ನಾನು ಕಮೆಂಟಿಸೋ ಹೊತ್ತಿಗೆ ಚಳಿ ಹೋಗಿ ಆಗಿದೆ. ಆದರೆ ಮೊನ್ನೆ ತಾನೆ ದೆಹಲಿಯ ಚಳಿಯನ್ನು ಅನುಭವಿಸಿ ಬಂದೆ. ಬಂದ ಮೇಲೆ ನಿನ್ನ ಈ ಕವನ ಓದ್ತಿರೋದ್ರಿಂದ ಇದೇ ಸಾಲುಗಳನ್ನು ದೆಹಲಿಯ ವೀಥಿಗಳಲ್ಲಿ ಊಹಿಸಿಕೊಳ್ಳಲೆತ್ನಿಸುತ್ತಿದ್ದೇನೆ. ಸೊಗಸಾಗಿದೆ ಚಳಿಯ ಫಲಗಳು ಶ್ರೀನಿಧಿ!

ಶ್ರೀನಿಧಿ.ಡಿ.ಎಸ್ ಹೇಳಿದರು...

ಪ್ರತಿಕ್ರಿಯಿಸಿದ ಎಲ್ಲರಿಗೂ ನಾನು ಕೃತಜ್ಞ.:)

Harisha - ಹರೀಶ ಹೇಳಿದರು...

ಸುಶ್ರುತನ ಬಜ್ ನೋಡಿ ಇಲ್ಲಿಗೆ ಬಪ್ವಂಗೆ ಆತು :-)

ನಿಜವಾಗ್ಲೂ ನಾನೇ ಈ ಚಳಿಯಲ್ಲಿ ಹೂವು ಕೊಯ್ಯಲೆ ಹೋಗಿ ಯಾರಿಗೋ ಕಾದ ಅನುಭವ ಆತು. ಅದ್ಭುತವಾಗಿ ಬರದ್ದೆ...

AntharangadaMaathugalu ಹೇಳಿದರು...

ನಮಸ್ಕಾರ ಶ್ರೀನಿಧಿ..

ಸುಶ್ರುತ ಅವರ buzz ನೋಡಿ, ಪೂರ್ತಿ ಕವನ ಓದಲು ಇಲ್ಲಿ ಬಂದೆ. ಬಾರದಿದ್ದಲ್ಲಿ ಎಂತಹ ಅದ್ಭುತ ಕವನ ಓದುವ ಅವಕಾಶ ಕಳೆದುಕೊಳ್ಳುತ್ತಿದ್ದೆ ಎನ್ನಿಸಿತು. ನಿಜ್ಜ ಓದಿ ನಿಮ್ಮ ಭಾವವನ್ನು ನಮ್ಮದಾಗಿಸಿಕೊಂಡು ಕಣ್ಮುಚ್ಚಿ ಕುಳಿತು ಅನುಭೂತಿಸಬೇಕು ಅಷ್ಟೆ...

ಶ್ಯಾಮಲ