ಮತ್ತೊಂದು ಕನಸು ನನಸಾಗಲು ಹೊರಟಿದೆ. ಬಹುದಿನಗಳಿಂದ ಅಂದುಕೊಂಡಿದ್ದು.
ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ! ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ.
ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.
ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು
ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.
ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.
ಅಲ್ಲಿ ಸಿಗೋಣ.
9 ಕಾಮೆಂಟ್‌ಗಳು:
ನನ್ನ ಬ್ಲಾಗ್ ನಲ್ಲಿ http://banadi.blogspot.com/
ಕನ್ನಡದ ಸುಮಾರು ೨೦೦ ಬ್ಲಾಗ್ ಗಳನ್ನು ಲಿಂಕಿಸುತ್ತಿರುವೆನು. ನಿಮಗೆ ಉಪಯೋಗಕ್ಕೆ ಬರಬಹುದು. ಒಮ್ಮೆ ನೋಡಿ ಬನ್ನಿ.
ಒಳ್ಳೆಯ ಪ್ರಯತ್ನಕ್ಕೆ ಅಭಿನಂದನೆಗಳು, ಕಾರ್ಯಕ್ರಮಕ್ಕೆ ಶುಭಾಶಯಗಳು.
ಈಗ ನೀವೆಲ್ಲ ಒಟ್ಟಾಗಿ, ಹರಟೆ ಹೊಡೆದು, ಕಾಪಿ ಕುಡಿದು, ಸ್ನೇಹದ ಚಾದರ ಹರಡಿ. ನಮ್ಮನ್ನು ನಿಮ್ಮ ನೆನಪುಗಳಲ್ಲಿ ಅಲ್ಲಿರಿಸಿಕೊಳ್ಳಿ.
ಮತ್ತೊಮ್ಮೆ ಜುಲಾಯಿ ಕೊನೆ ವಾರದಲ್ಲಿ ಪುನಃ ಒಟ್ಟಾಗುವ ಹಾಗಿದ್ದರೆ, ನಾವು ಕೆಲವು "ಪರದೇಶಿ"ಗರೂ ಸೇರಬಹುದೇನೋ. ನಮಗಂತೂ ಆಸೆಯಿದೆ. ನೆರವೇರಿಸುತ್ತೀರೋ, ನೋಡಿ.
http://karsap.blogspot.com/
http://pichchar.wordpress.com/
http://bayalu.wordpress.com/
http://venkatesha.wordpress.com/
http://sassysoni.blogspot.com/
http://astroshiva.wordpress.com/about-me/
http://kavana.wordpress.com/
http://chakora.wordpress.com/
sorry barlikke agilla.
ನಮಸ್ಕಾರ ಶ್ರೀನಿಧಿ ಅವರಿಗೆ,
ನೀವು ಮತ್ತು ಅಮರ ಅವರು ಕಳಿಸಿದ ಕರೆಯೋಲೆ ಸಿಕ್ಕಿತು. ದೂರದ ನ್ಯೂಜಿಲೆಂಡಿನಲ್ಲಿರುವುದರಿಂದ ಕಾರ್ಯಕ್ರಮಕ್ಕೆ ಬರುವುದು ಇನ್ನೂ ದೂರದ ಮಾತು. ಪ್ರಣತಿಯಿಂದ ಹೀಗೆ ಹೆಚ್ಚು ಹೆಚ್ಚು ಕಾರ್ಯಕ್ರಮಗಳು ನಡೆಯಲಿ ಎಂದು ಆಶಿಸುತ್ತೇನೆ.
ದಟ್ಸ್ ಕನ್ನಡ ದಲ್ಲಿ ನಿಮ್ಮೆಲ್ಲರ " ಪ್ರಣತಿ"ಯ ಬಗ್ಗೆ ಓದಿದೆ. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತೆಂದು ಕೇಳಿ ಸಂತೋಷವಾಯಿತು. ಹಾಗೆಯೇ ಕೆಲವರ " ಅಪ್ ಡೇಟ್ಸ್" ಗಳನ್ನು ಓದಿದೆ. ಮತ್ತೆ ಯಾವಾಗಲಾದರೂ ಸಿಗೋಣ.
-NG
ಶ್ರೀನಿಧಿ,
ಸಿಕ್ಕಾಬಟ್ಟೆ ಹೆಸರಿನ ಕನ್ಫ್ಯೂಶನ್ನು ಕಣ್ರಿ! ನೀವೂ ಶ್ರೀ, ಇನ್ನೂ ಇಬ್ರು ಶ್ರೀಗಳಿದಾರೆ ಅಂತ ಮೊನ್ನೆ ತಾನೆ ನನ್ನ ಮೆದುಳೊಳಗಿನ ಟ್ಯೂಬುಲೈಟು ಫ್ಲ್ಯಾಶು ಮಾಡಿತು. ಆಮೇಲೆ ಬ್ಲಾಗರ್ಸ್ ಮೀಟಿನ ರಿಪೋರ್ಟುಗಳನ್ನ ಓದಿದ ಮೇಲೆ ಮೇಲು ಫೀಮೇಲುಗಳ ಗೋಜಲು ಇನ್ನೂ ಕ್ಲಿಯರಾಯಿತು. ಮುಂದಿನ ಸಾರ್ತಿ ಸಿಗುವಾ!
-ಟೀನಾ.
ಶ್ರೀನಿಧಿ to ಶ್ರೀನಿಧಿ
ಕಾರ್ಯಕ್ರಮ ಚೆನ್ನಾಗಿತ್ತು, ಆದರೆ ನನಗೆ ರೈಲು ಬಿಡಬೇಕಿದ್ದುದರಿ೦ದ ಸ್ವಲ್ಪ ಮೊದಲೇ ಎದ್ದು ಹೋಗಬೇಕಾಯಿತು...
Shrinidhi Hande
www.enidhi.net
ಕಾಮೆಂಟ್ ಪೋಸ್ಟ್ ಮಾಡಿ