ಶನಿವಾರ, ಮೇ 31, 2008

ಫೇಕ್ ಮೈಲ್ಸ್....

ನಾವೊಂದಿಷ್ಟು ಜನ ಸ್ನೇಹಿತರು- ನಾನು, ಅರುಣ, ಹರ್ಷ, ಸುಶ್ರುತ ಹೆಚ್ಚಾಗಿ ನಮಗೆ ಬರುವ ಫೇಕ್ ಮತ್ತು ಜಂಕ್ ಮೇಲ್ಸ್ ಗಳನ್ನು ಪರಸ್ಪರ ಫಾರ್ವರ್ಡ್ ಮಾಡಿಕೊಂಡು ನಗಾಡುತ್ತಿರುತ್ತೇವೆ. ಕೆಲವು ಈ-ಮೇಲುಗಳು ಪದೇ ಪದೇ ತಿರುಗಿ ಬರುತ್ತಿರುತ್ತವೆ. ಹೆಣ್ಣಿನಾಕಾರದ ಕಾಯಿ ಬಿಡುವ ಸುಡುಗಾಡು ಮರ!, ಮನುಷ್ಯನ ದೇಹ- ಮೀನಿನ ತಲೆ, 18 ಆಡಿಯ ರಾಕ್ಷಸಾಕಾರದ ದೇಹ ಅಲ್ಲೆಲ್ಲೋ ಸಿಕ್ಕಿದೆ, ಇತ್ಯಾದಿ ಇತ್ಯಾದಿ...

ಇನ್ನು ಪ್ರವಾಸಿ ಸ್ಥಳಗಳ ಮತ್ತು ಟ್ರೆಕ್ಕಿಂಗು ಸ್ಪಾಟುಗಳ ಬಗ್ಗೆ ಅಂತೂ ಕೇಳುವುದೇ ಬೇಡ. ಅಮೆರಿಕ ಯಾವುದೋ ಜಲಪಾತ ಬೆಂಗಳೂರಿನ ಸಮೀಪದ ಮುತ್ಯಾಲ ಮಡುವು ಅನ್ನುವ ಹಣೆಪಟ್ಟಿ ಹೊತ್ತುಕೊಂಡಿತ್ತು ಮೊನ್ನೆಯಷ್ಟೇ. ಜೊತೆಗೆ "ರತ್ನಘಡ ಎನ್ನುವ ಭೂಮಿಯ ಮೇಲಿನ ಸ್ವರ್ಗ" ಅನ್ನುವ ಹೆಸರು ಹೊತ್ತ ಈಮೇಲು ಬಗ್ಗೆ ಹೇಳಿ ಪ್ರಯೋಜ್ನಿಲ್ಲ! ಆ ಸ್ವರ್ಗ ಇರುವ ಜಾಗ ಪ್ರತಿ ಮೇಲ್ ನಲ್ಲೂ ಬದಲಾಗುತ್ತಿರುತ್ತದೆ! ಭಾರತದ ಎಲ್ಲಾ ರಾಜ್ಯಗಳನ್ನು ದಾಟಿ , ಈಗ ಈ ಸ್ಥಳ ಶ್ರೀಲಂಕಾದಲ್ಲಿದೆ ಎನ್ನುವ ಹೊಸ ಶೋಧವೂ ಆಗಿದೆ.

ಇನ್ನು ಈ ಈ ಮೇಲ್ ನ ೧೫ ಜನಕ್ಕೆ - ೨೦ ಜನಕ್ಕೆ ಕಳಿಸಿ , ಇಲ್ಲದಿದ್ದರೆ ಅದಾಗುತ್ತದೆ , ಇದಾಗುತ್ತದೆ ಎಂಬ ಧಮಕೀ ಹೊತ್ತು ಬರುವ ಮಿಂಚೆಂಚೆಗಳು ಮತ್ತೊಂದು ಗ್ರಹಚಾರ. ಅವುಗಳನ್ನು ಕಳಿಸಿದವರಿಗೇ ತಿರುಗಿ ೩೦ ಸಲ ಕಳಿಸಿದರೆ ಮುಗಿಯಿತು. ಮತ್ತೆ ಆ ತಪ್ಪು ಆತನಿಂದ ಆಗದು.ಇಂತವೆಲ್ಲ ನಿರುಪದ್ರವಿ ಮೇಲ್ ಗಳು ಅಂತ ಸುಮ್ಮನಿದ್ದು ಬಿಡಬಹುದು. ಆದರೆ, ಈಗೀಗ ತೊಂದರೆ ಉಂಟುಮಾಡುವ ಮೇಲ್ ಗಳೂ ಬರೋಕೆ ಶುರುವಾಗಿದೆ.

ಈ ಕೆಳಗಿನ ಸಬ್ಜೆಕ್ಟ್ ಲೈನು ಹೊತ್ತ ಮೇಲ್ ಗಮನಿಸಿರುತ್ತೀರಿ:

Please Pass this Message "1098"
dial 1098 for givin ur left over food to the diprieved ..

Need one small promise from you....!

Helping Hands Are Better Than Praying Lips.............
Not liking the food you have daily????


ಭಾರತದಲ್ಲಿನ ಬಡತನವನ್ನು ಅತ್ಯಂತ ಗಾಢವಾಗಿ ಬಿಂಬಿಸುವ ಒಂದಿಷ್ಟು ಚಿತ್ರಗಳನ್ನು ಮತ್ತು ಹಸಿವಿಂದ ಸಾಯುತ್ತಿರುವವರ ಅಂಕಿ ಅಂಶಗಳನ್ನು ಹೊತ್ತಿರುವ ಮೇಲ್ ಇದು. ಆ ಮೇಲ್ ನ ಸಾರಂಶ ಇಷ್ಟೇ. ನಿಮ್ಮ ಮನೆಯಲ್ಲೋ, ಅಥವ ಯಾವುದೇ ಸಮಾರಂಭಗಳಲ್ಲೇಸಿದ್ಧ ಪಡಿಸಿದ ಆಹಾರ ಉಳಿದು ಹೋಯಿತು ಅಂದರೆ ಅದನ್ನ ಹಾಳು ಮಾಡಬೇಡಿ, 1098 ಅನ್ನುವ ಟೋಲ್ ಫ್ರೀ ನಂಬರಿಗೆ ಫೋನ್ ಮಾಡಿ ಹೇಳಿ, ಅಲ್ಲಿನ ಸಂಬಂಧಿಸಿದ ವ್ಯಕ್ತಿಗಳು ಬಂದು ಆ ಅಳಿದುದ್ದನ್ನ ತಗೊಂಡು ಹೋಗಿ, ಏನೂ ಊಟಕ್ಕಿಲ್ಲದ ಮಕ್ಕಳಿಗೆ ಕೊಡುತ್ತಾರೆ, ನಾಲ್ಕು ಮಕ್ಕಳಿಗೆ ಉಪಕಾರ ಆಗ್ಲೀ, ದಯವಿಟ್ಟು ಸಾಧ್ಯ ಆದಷ್ಟ್ ಜನಕ್ ಕಳ್ಸೀ ಅಂತ ಈ ಅಂಚೆ ನಿಮ್ಮನ್ನು ಬೇಡಿಕೊಳ್ಳುತ್ತದೆ. ಮತ್ತು ನಾವು -ನೀವುಗಳು ಅದನ್ನು ಯಥಾಸಾಧ್ಯ ಜನಕ್ಕೆ ಫಾರ್ವರ್ಡ್ ಮಾಡಿ ಸುಮ್ಮನಾಗುತ್ತೇವೆ.

ಯಾರಾದರೂ , ಒಮ್ಮೆಯಾದರೂ 1098 ಗೆ ಫೋನ್ ಮಾಡಿದ್ದೀರಾ?

1098 ಅನ್ನುವುದು ಚೈಲ್ಡ್ ಲೈನ್ ಅನ್ನುವ ಸರಕಾರ ಮತ್ತು ಎನ್ ಜಿ ಓ ಗಳ ಸಹಕಾರದಿಂದ ನಡೆಯುವ, ಕಷ್ಟದಲ್ಲಿರುವ ಮಕ್ಕಳ ಸಹಾಯಕ್ಕಿರುವ ಸಂಸ್ಥೆಯ ದೂರವಾಣಿ ಸಂಖ್ಯೆ. ತೊಂದರೆಗೊಳಗಾದ ಮಕ್ಕಳಿಂದ ಅಂದರೆ- ಬಾಲ ಕಾರ್ಮಿಕರಾಗಿರುವವರು, ಮನೆಯಿಂದ ಓಡಿ ಬಂದು ದಿಕ್ಕುಗಾಣದವರದು, ಅಥವಾ ಪರೀಕ್ಷೆ ಅಂತ ಹೆದರಿ ಕೂತಿರುವವರಿಂದ- ದಿನವೊಂದಕ್ಕೆ 300-400 ಫೋನುಗಳು ಹಗಲು ರಾತ್ರಿ ಅನ್ನದೇ ಬರುತ್ತಲೇ ಇರುತ್ತದೆ. ಈ ಸಂಸ್ಥೆಗೆ ಬೇಕಷ್ಟು ಸಹಾಯಧನ ದೇಶವಿದೇಶಗಳಿಂದ ಬರುತ್ತದೆ. ಅವರುಗಳಿಗೆ ಊರಲ್ಲಿನ ಉಳಿದ ಆಹಾರವನ್ನು ಸಂಗ್ರಹಿಸಿ ತಮ್ಮಲ್ಲಿನ ಮಕ್ಕಳಿಗೆ ನೀಡುವ ಅವಶ್ಯಕತೆ ಖಂಡಿತಕ್ಕೂ ಇಲ್ಲ.

ಈ ಈ ಮೈಲ್ ಏನು ತೊಂದರೆ ಮಾಡುತ್ತಿದೆ ಗೊತ್ತಾ?- ದಿನವೊಂದಕ್ಕೆ 60-70 ದೂರವಾಣಿ ಕರೆಗಳು, "ನಮ್ಮನೇಲಿ ಮೂರು ಜನಕ್ಕಾಗೋ ಅಷ್ಟ್ ಅನ್ನ ಸಾಂಬಾರು ಇದೆ, ತಗೊಂಡೋಗಿ", "ನೋಡೀ, ಇಂತಾ ಛತ್ರಕ್ಕೆ ಬನ್ನೀ, ಮೂವತ್ತು ಊಟ ಕೊಡ್ತೀವೀ ತಗಂಡು ಹೋಗೀ" ಅನ್ನೋ ತರದವೇ ಆಗಿವೆ. ಮತ್ತು ಇಂತಹ ಕರೆಗಳು ಬರುತ್ತಿರುವಾಗ,

ಅಲ್ಲೆಲ್ಲೋ ಜೀತ ಮಾಡುವ ಹುಡುಗನೊಬ್ಬ, ಅಥವಾ ದುಡ್ದಿಗಾಗಿ ಯಾರಿಗೋ ಮಾರಲ್ಪಟ್ಟಿರುವ ಹುಡುಗಿ, ತನ್ನನ್ನ ಬಚಾವು ಮಾಡೀ ಅಂತ ಕೋರಿಕೊಳ್ಳಲು ಫೋನ್ ಮಾಡುತ್ತಿರುತ್ತಾರೆ ಮತ್ತು ಈ ನಂಬರು ಪದೇ ಪದೇ ಎಂಗೇಜು ಬರುತ್ತದೆ.

ಸ್ನೇಹಿತರೇ, ಅವರುಗಳಿಗೆ ಆ ಹೊತ್ತಿಗೆ ಡಯಲ್ ಮಾಡಲು ಸಾಧ್ಯವಾಗದೇ ಹೋದರೆ. . .ಮತ್ತೆಂದೂ ಮಾಡಲಾಗದೇ ಹೋದೀತು.

ಯೋಚಿಸಿ..

ನಿಮಗೆ ಮೇಲ್ ಕಳಿಸೋರಿಗೆ, ಇದು ಸುಳ್ಳು ಮಾಹಿತಿ ಅನ್ನೋ ವಿಷ್ಯ ತಿಳಿಸಿ, ಮತ್ತು ನಿಜಕ್ಕೂ ಕಷ್ಟದಲ್ಲಿರೋ ಮಕ್ಕಳು ಕಣ್ಣಿಗೆ ಬಿದ್ದಾಗ ಮಾತ್ರ ಚೈಲ್ಡ್ ಲೈನ್ ಗೆ ಫೋನ್ ಮಾಡಿ.

(ನಾನು ಸ್ನಾತಕೋತ್ತರ ಪದವಿ ಓದುತ್ತಿರುವ ಸಂದರ್ಭದಲ್ಲಿ ಮಂಗಳೂರಿನ ಚೈಲ್ಡ್ ಲೈನ್ ಸಂಸ್ಥೆಯಲ್ಲಿ ಒಂದು ವರುಷ, ಫೀಲ್ಡ್ ವರ್ಕ್ ಮಾಡಿದ್ದೆ.)

ಚೈಲ್ಡ್ ಲೈನ್ ವೆಬ್ ಸೈಟ್.

14 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

Shree, cholo baradde. yaarige avashyakate irta avke sahaya madade iddavke madtidda. yaake hige heLdi andre...corporate social responsibility anta irtali ee s/w company gaLalli, avu madadu idanne, khayam 1-2 NGOs hidkandu avke sahaya madalle heLi pgms conduct madadu. allira makLu/vruddaru papa haudu adre avke utakke battige kadme irtille. darili bikshe beda putta makLu esht jana ille....antavke sahaya mada alda...

ತೇಜಸ್ವಿನಿ ಹೆಗಡೆ ಹೇಳಿದರು...

ಶ್ರೀನಿಧಿ,

ತುಂಬಾ ಉತ್ತಮವಾದ ಮಾಹಿತಿಗಳನ್ನು ನೀಡಿರುವೆ. ಖಂಡಿತವಾಗಿ ಇನ್ನು ಮುಂದೆ ಇಂತಹ ಮೈಲ್ ಬಂದರೆ ಜಾಗರೂಕಳಾಗಿವೆ. ಧನ್ಯವಾದಗಳು. ಆದರೂ ಒಂದು ಪ್ರಶ್ನೆ.. ಯಾರು ಯಾಕಾಗಿ ಈ ರೀತಿಯ ಮೈಲ್ ಕಳುಹಿಸಿ ಇಂತಹ ಸಂಸ್ಥೆಗಳಿಗೆ ತೊಂದರೆ ಕೊಡುತ್ತಿದ್ದಾರೆ?!

ಅನಾಮಧೇಯ ಹೇಳಿದರು...

thanks man. olle information kottidde.
aadre antha mail galella henge start aagtu? entakke?

ಶ್ವೇತ ಹೇಳಿದರು...

Sari Shreenidhiyavare. Maahitigaagi dhanyavaadagalu.

MD ಹೇಳಿದರು...

Hi Shreenidhi,
The subject you mentioned is absolutely the thing if concern. From being few in this software industry i had observed that the fake mails get forwarded each year at same month almost. yes but strange.And still i get the mail of so called Siemens employee who's kid (wrapped in towel)requires major surgery, and somebody hubby is suffering from some blood desease and need info on that desease, and in some nation punishing a boy stealing bread, and original picture of some God (!) forwardee got few thousand dollars (i wonder since when India God started to pay in Dollars !!!), Dont pick the call from this and this Devil number, and many more.
Uff..
But on other part we cant just break the chain. We should break chain only after verification as u mentioned. Good thought

Parisarapremi ಹೇಳಿದರು...

ಈ ಬ್ಲಾಗ್ ಲಿಂಕನ್ನು ಹನ್ನೆರಡು ದಿನದೊಳಗೆ ಹನ್ನೆರಡು ಜನಕ್ಕೆ ಕಳಿಸದಿದ್ದಲ್ಲಿ ರಕ್ತ ಕಾರಿ ಸಾಯದಿದ್ದರೂ, ಕೆಟ್ಟ ಕಾಯಿಲೆ ಅಂತೂ ಬರುತ್ತದೆ. ಕಳಿಸಿದರೆ ಹನ್ನೆರಡು ತಿಂಗಳೊಳಗೆ ಗುಡ್ ಲಕ್ ಬರುತ್ತದೆ. ಇದನ್ನು ಇಗ್ನೋರ್ ಮಾಡಬೇಡಿ.

Parisarapremi ಹೇಳಿದರು...

ಮತ್ತೆ, ಮೊದಲು ಪುಣೆ ಹತ್ರ ಇರೋ ರತನಘಡಕ್ಕೆ ಹೋಗಿ ಬರೋಣ. ಆಮೇಲೆ ಕೇರಳದಲ್ಲಿರೋ ರತನಘಡ, ನಂತರ ಕಲಕತ್ತಾ, ಕೊನೇಗೆ ಶ್ರೀಲಂಕಾದಲ್ಲಿರೋ ರತನಘಡಕ್ಕೆ ಹೋಗಿ ಬರೋಣ. ಇವೆಲ್ಲಾ ಮುಗಿದ ಮೇಲೆ, ಬೆಂಗಳೂರಿನಿಂದ ಕೇವಲ ಅರವತ್ತು ಕಿಲೋ ಮೀಟರು ದೂರ ಇರೋ ರತನಘಡಕ್ಕೆ ಪ್ರವಾಸ ಹೋಗೋಣ. ಅಲ್ಲಿಗೆ ಎಲ್ಲಾ ರತನಘಡಗಳನ್ನೂ ಮುಗಿಸಿದ ಹಾಗಾಯ್ತು.

Vijaya ಹೇಳಿದರು...

kelsavilladoru enaadru maadbekalla ... heege chain mails shuru maadtaare ansutte... adoo onthara virus iddhaage :-)... 8 varshada kelage naanu kelsakke seridaaga bartid email ... ade adenthaddo cancer bandu treatment ge duddu beku siemen's employee ge antha ... adu eegloo barutte ... paapa ... vaasi ne aagilla aa hengsige. illandre hoax emails-u. aa thara forward bandaaga, urban legends nallo, google nallo adu authentic-aa alwa antha noo search maadde forward maadtaare jana ... namboru iroivargoo nambsi maja thogoloroo irtaare alwa?

ಮೃಗನಯನೀ ಹೇಳಿದರು...

nin poem ge waitingu bEga bari

ವಿ.ರಾ.ಹೆ. ಹೇಳಿದರು...

thanx for information and awareness! ನಿಮ್ಮಂತೋರಿರೋದ್ಲಿಂದ್ಲೇ ದೇಶದಲ್ಲಿ ಮಳೆ ಬೆಳೆ ಕಣೋ ! :)

ಆ 1098 mail, ೨-೩ ವರ್ಷದಿಂದ ಹರಿದಾಡ್ತಿದೆ, ಅಂತೂ ಈಗ ನೀವು ಮನಸು ಮಾಡಿದ್ದಕ್ಕೆ ನಿಜ ವಿಷ್ಯ ಗೊತ್ತಾಯ್ತು!!

Dynamic Divyaa ಹೇಳಿದರು...

matte sakkat article-u!
mundhe nu sakkat-u!!

excellent! teeera sahajavaagi maataaDiro thara asaamaanya writing! :-) khushi aaytu odi..

food for thought!

sritri ಹೇಳಿದರು...

ಅಯ್ಯೋ! ಹೀಗಾ!?

ಅಮರ ಹೇಳಿದರು...

ಈತರದ ಮೇಲ್ ಎಷ್ಟು ಚಂದಕ್ಕೆ ಕಂಪೊಸ್ ಮಾಡಿರ್ತಾರೆ ಅಂದ್ರೆ .......... ಫೇಕ್ ಮೇಲ್ ಅಂತ ಅನುಮಾನವು ಬರೊದಿಲ್ಲ .... ಇವಾಗಂತು ಆದಷ್ಟು ಈ ಮೇಲ್ಗಳನ್ನ ಗೂಗಲ್ ಇಂದ ಸರಿ ತಪ್ಪೊ ಅಳೆದು ನಂತರ ಮುಂದೆ ಕಳುಹಿಸುವುದು ಅಭ್ಯಾಸವಾಗಿದೆ.... :)

ವಿ.ರಾ.ಹೆ. ಹೇಳಿದರು...

"ರತ್ನಗಡ ಎನ್ನುವ ಭೂಮಿಯ ಮೇಲಿನ ಸ್ವರ್ಗ"ಕ್ಕೆ ಹಿಂದಿನವಾರ ಹೋಗಿಬಂದೆ. ಅದು ಇರುವುದು ಮಹಾರಾಷ್ಟ್ರದಲ್ಲಿ ಅಂತ ಗ್ಯಾರಂಟಿ ಹೇಳ್ತೀನಿ ಈಗ :)