ಮಂಗಳವಾರ, ಜೂನ್ 10, 2008

ಜಂಗಮ ಬಿಂಬಗಳು -೪.

ನಾನು ಮತ್ತು ನನ್ನ ಸ್ನೇಹಿತ ಟಾಕೀಸಲ್ಲಿ ಸಿನಿಮಾ ನೋಡುತ್ತ ಕುಳಿತಿದ್ದೆವು. ಪಕ್ಕದಲ್ಲಿ ಒಬ್ಬ ತೀರಾ ಸಾಧಾರಣ ಹುಡುಗ, ಮತ್ತು ಅತ್ಯದ್ಭುತ ಚೆಲುವಿನ ಹುಡುಗಿ- ಹರಟುತ್ತ ಕುಳಿತಿದ್ದರು. ಅಯ್ಯೋ ಅವನ ನಸೀಬೇ ಏನ್ ಒಳ್ಳೆ ಹುಡ್ಗಿ ಸಿಕ್ಕಿದಾಳಪ್ಪ, ಕೆಲ ಹುಡುಗರ ಪುಣ್ಯವೇ ಹೀಗೆ- ಅವರು ನೋಡೋಕೆ ಕೆಟ್ಟದಾಗಿದ್ದರೂ ಒಳ್ಳೇ ಹುಡುಗೀರು ಸಿಕ್ಕಿ ಬಿಡ್ತಾರೆ, ಅಂತೆಲ್ಲ ಹಲುಬಿದ್ದಾಯ್ತು. ಇಂಟರ್ವಲ್ ಬಂತು. ಆ ಹುಡುಗ ಎದ್ದು, ತನ್ನ ಪಕ್ಕದಲ್ಲಿದ ಆಕೆಯನ್ನು ಮೆಲ್ಲನೆಬ್ಬಿಸಿಕೊಂಡು, ತನ್ನ ತೋಳನ್ನೇ ಅವಳಿಗಾಸರೆಯಾಗಿಸಿ ನಡೆಸಿಕೊಂಡು ಹೊರಟ. ಅವಳಿಗೆ ಪೋಲಿಯೋ ಆಗಿತ್ತು.

9 ಕಾಮೆಂಟ್‌ಗಳು:

Vijaya ಹೇಳಿದರು...

beauty is only skin deep!! aa hudugana manassu yeshtu sundara alwa?

Lakshmi S ಹೇಳಿದರು...

A beautiful rose comes with a thorn. ಅಲ್ಲವೇ ?

ಅಂತರ್ವಾಣಿ ಹೇಳಿದರು...

tumbaa oLLe huDuga

ತೇಜಸ್ವಿನಿ ಹೆಗಡೆ- ಹೇಳಿದರು...

ಇಂತಹ ದೇವಮಾನವರು ಇರುವುದರಿಂದಲೇ ಭೂಮಿಯ ಸಹನೆ ಇನ್ನೂ ನಶಿಸಿಲ್ಲವೇನೋ!!

ಮಮತೆ ಮಳೆ ಹೇಳಿದರು...

ಶ್ರೀನಿಧಿ...
ಓದಿ ಮಾತು ಮೌನವಾಯಿತು. ಕಮೆಂಟಿಸ ಬಂದರೆ ಮಾತೀಗ ಮೂಕ ಕೂಡ.:(

Parisarapremi ಹೇಳಿದರು...

ಪಲ್ಸ್ ಪೋಲಿಯೋ ಲಸಿಕೆ ಬಗ್ಗೆ ಏನಾದ್ರೂ ಕಾರ್ಯಕ್ರಮ ಮಾಡ್ತಿರೋ ಹಾಗಿದೆ ನಿಮ್ ಚಾನೆಲ್‍ಗೆ?? ;-)

subbu ಹೇಳಿದರು...

good one dostaa :)

ಅನಾಮಧೇಯ ಹೇಳಿದರು...

she is so lucky to have such a caring person in her life, alda...ibru chennagirli

mithuna ಹೇಳಿದರು...

putta barahadalli adestu adbuta!