ಬುಧವಾರ, ಜೂನ್ 25, 2008

ಕಡಲು ಜಗದ ದೊಡ್ಡ ಪ್ರೇಮಿ....

ಕಡಲು ಜಗದ ದೊಡ್ಡ ಪ್ರೇಮಿ ನಿತ್ಯ ಮಿಲನ ಅದಕೆ,
ನದಿಗಳುಂಟು ಲಕ್ಷ ಲಕ್ಷ , ತೀರದದರ ಬಯಕೆ

ಕೆಲ ನದಿಗಳು ಉಗ್ರ,ಘೋರ ವೇಗಾವೇಗ ಅವಕೆ
ಮಣಿಸುವುದು ಕಡಲ ತೆಕ್ಕೆ, ಸೆಳೆದು ತನ್ನೊಳಕೆ.

ಇನ್ನು ಕೆಲವು ಮಂದ-ಶಾಂತ, ಒಯ್ಯಾರ, ಒನಪು
ಕಡಲಿಗಿಲ್ಲ ಭೇದಭಾವ, ಅದೇ ಮುದ್ದು- ಬಿಸುಪು.

ದೂರದಾರಿ ಸಾಗಿ ಬಂದ ನದಿಗಲೆಗಳ ಸ್ವಾಗತ,
ಮೆಲ್ಲನೊಳಗೆ ಎಳೆಯುವವು,ಮೃದುಚುಂಬನವೀಯುತ.

ದಿನವು ಕೂಡ ಸಮುದ್ರ ಹೊಸದು, ಹೊಸ ಹರಿವಿನ ಸೇರಿಕೆ
ಮತ್ತೆ ಮತ್ತೆ ಒತ್ತಿಬಹುದು, ಪ್ರೇಮ ಜಲದ ಕಾಣಿಕೆ.

ಕಡಲು ಬರಿಯ ಪ್ರೇಮಿಯಲ್ಲ, ಶಕ್ತಿವಂತ ಚೇತನ
ಗಮ್ಯವಿರದೆ ಸಾಗೋ ಬಾಳ ಧನ್ಯ ಮಾಡೋ ಮೋಹನ

ಅಂತ್ಯವೆಂದು ತಿಳಿದು ಬರುವ ನೀರ್ಝರಿಗಳು ಸಾಸಿರ
ಕಡಲಿನೊಡಲ ಸೇರಿ ಹಿಗ್ಗಿ, ವಿಶಾಲ ಹರವ ಸಾಗರ!

16 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

good poem. liked the concept. ಕಾಣದ ಕಡಲಿಗೆ ಹಂಬಲಿಸಿದೆ ಮನ- ಕವಿತೆಯ ಜೊತೆಗಿಟ್ಟು ನೋಡಿ. ಜಿಎಸ್ಸೆಸ್ಗ್ ತನ್ನನ್ನು ನದಿಯಾಗಿ ನೋಡುತ್ತಾರೆ. ಕಡಲಿಗೆ ಹಂಬಲಿಸುತ್ತಾರೆ.
ನೀವು ಕಡಲನ್ನು ನಿಮ್ಮೊಂದಿಗೆ ಸಮೀಕರಿಸಿಕೊಂಡು ಬರೆದಂತಿದೆ. ಹಾಗಾಗಿ ಇಷ್ಟವಾಯಿತು. ಕೂಡುವ ಹಂಬಲ ಮತ್ತು ಸ್ವೀಕರಿಸುವ ಆತ್ಮವಿಶ್ವಾಸಕ್ಕೆ ಇವೆರಡೂ ಸಾಕ್ಷಿಯಾಗಬಲ್ಲವು
-ಜೋಗಿ

Srikanth - ಶ್ರೀಕಾಂತ ಹೇಳಿದರು...

super! adralloo ee saalugaLu extra-super!

ಕಡಲು ಬರಿಯ ಪ್ರೇಮಿಯಲ್ಲ, ಶಕ್ತಿವಂತ ಚೇತನ
ಗಮ್ಯವಿರದೆ ಸಾಗೋ ಬಾಳ ಧನ್ಯ ಮಾಡೋ ಮೋಹನ

Sree ಹೇಳಿದರು...

ಸೂಪರ್, ಕೊನೇ ಮೂರು ಸಾಲ್ಗಳು ಸಖತ್ ಇಷ್ಟ ಆದ್ವು:)

Lakshmi Shashidhar Chaitanya ಹೇಳಿದರು...

ದಿನವು ಕೂಡ ಸಮುದ್ರ ಹೊಸದು, ಹೊಸ ಹರಿವಿನ ಸೇರಿಕೆ
ಮತ್ತೆ ಮತ್ತೆ ಒತ್ತಿಬಹುದು, ಪ್ರೇಮ ಜಲದ ಕಾಣಿಕೆ.

ultimate ಆಗಿದೆ ಈ ಸಲುಗಳಂತೂ ! more than just superb !! excellent !! [ಸದ್ಯಕ್ಕೆ ಇಷ್ಟೇ ಹೊಳಿತಿರದು....ಒಂಥರಾ ಲೆವೆಲ್ಲಿಗೆ ತಗೊಂಡ್ ಹೊಟೋಗಿದೆ ನೋಡಿ ನಿಮ್ poem-u....ಏನೂ ತೋಚ್ತಾನೇ ಇಲ್ಲ !!]

ಅನಾಮಧೇಯ ಹೇಳಿದರು...

ಮತ್ತೆ ಮತ್ತೆ ಓದಬೇಕನಿಸುವ ರಚನೆ.

-ಚಂದಿನ

ಅಮರ ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಅನಾಮಧೇಯ ಹೇಳಿದರು...

ತುಂಬ ದಿನದಿಂದ ಕಾಯ್ತಿದ್ದೆ ಈ ಪದ್ಯಕ್ಕೆ. ಖುಷಿಯಾಯ್ತು ಓದಿ... :-)

Vijaya ಹೇಳಿದರು...

$@#*&(^%$$&*^*&$##$@#@$&**&*&
ಸಿಗು ಮಾಡ್ತೀನಿ ನಿಂಗೆ ... !!!!! :-(

ಸಿಂಧು sindhu ಹೇಳಿದರು...

ನಿಧಿ,

ಚೆನಾ~~~ಗಿದೆ.
ನಿತ್ಯಮಿಲನ/ಸಾಂಗತ್ಯದ ಜೀವನಪ್ರೀತಿಯ ಕವಿತೆ. ಆದರೆ ಓದುತ್ತ ಓದುತ್ತ, ಇದೇ ಕಡಲಿನ ಚಿರವಿರಹವೂ, ಚಿರಂತನವಾಗಿ ಹನಿಗಳನ್ನ ಆವಿಯಾಗಿಸುತ್ತಿರುವುದೂ ನೆನಪಾಗುತ್ತಿದೆ. ಯಾಕೋ ಇವತ್ತು ನಾನು ಉಲ್ಟಾ ಮೂಡಲ್ಲಿದೀನಿ ಅನ್ಸತ್ತೆ.

ಕವಿತೆ, ನೇಯ್ಗೆ, ಭಾವಪೂರ್ಣ ಅಭಿವ್ಯಕ್ತಿ ಎಲ್ಲ ಇಷ್ಟವಾಯಿತು.

ಪ್ರೀತಿಯಿಂದ
ಸಿಂಧು

ತೇಜಸ್ವಿನಿ ಹೆಗಡೆ ಹೇಳಿದರು...

ಶ್ರೀನಿಧಿ,

"ಕಡಲು ಜಗದ ದೊಡ್ಡ ಪ್ರೇಮಿ ನಿತ್ಯ ಮಿಲನ ಅದಕೆ,
ನದಿಗಳುಂಟು ಲಕ್ಷ ಲಕ್ಷ , ತೀರದದರ ಬಯಕೆ"


ಮೊದಲೆರಡು ಸಾಲುಗಳೇ ಸಾಕು ಒಂದು ಕ್ಷಣ ಓದುಗನನ್ನು ತನ್ಮಯಗೊಳಿಸಲು... ರಾಗಬದ್ಧವಾದ ಕವನ. ಅದರಲ್ಲೂ ನನ್ನ ಮೆಚ್ಚಿನ ಸಾಗರನ ಕುರಿತು ಬರೆದದ್ದು. ಹಾಗಾಗಿ ಮತ್ತಷ್ಟು ಆಪ್ತವೆನಿಸಿತು. ಸುಂದರ ಕವನ. ಮತ್ತಷ್ಟು ಬರಲಿ.

Parisarapremi ಹೇಳಿದರು...

taavu samudra na yaakO "flirt" antha heLtideera antha gumaani... ;-)

Parisarapremi ಹೇಳಿದರು...

@Amara: aahaa, "kaDaku" antha bardidiya puNyaatma.... sadhya.. "kaDabu" antha bardilla.. ;-)

VENU VINOD ಹೇಳಿದರು...

ಪದಗಳ ಜೋಡಣೆ ಸುಂದರ...ಹೇಗೆ ಬರೀತಿ ಮಾರಾಯ ಇಂಥ ಕವನಗಳನ್ನೆಲ್ಲ? :)

ಅನಾಮಧೇಯ ಹೇಳಿದರು...

@Parisarapremi:-
Flurt mathra alla sir, complete gemini character haakiddaare samudrakke! :P

-Shree

ಅಮರ ಹೇಳಿದರು...

ಹು ಮಾರಾಯ ಜಗದ ದೊಡ್ದ ಪ್ರೇಮಿಯೆ ಕಡಲು ..... ಹೊಸ ಪದಗಳ ಜೋಡಣೆ ಹೊಸ ಕಲ್ಪನೆ .... ಕವನವನ್ನ ಫ್ರೇಶ್ ಮಾಡಿದೆ :)

@ಅರುಣ್: ಕಡಲು ಸರಿ ಮಾಡಿದ್ದಿನೊ ಮಾರಾಯ ... :)
-ಅಮರ

Dynamic Divyaa ಹೇಳಿದರು...

nice nice rhyming words!!!
primary school alli poems odkoLtaa kai kaTkonDu, baai paaTa maaDtiro thara odkonDeeeee, 2 2 lines at a time....
dooooooooooori maaaDtaa, tale allllaaaDskonDu kai kaTkonD baai paaTada poem sooooooooper!!!!