ಸೋಮವಾರ, ಜೂನ್ 15, 2009

ಕಾಲ

ಕೊನೆ ಮನೆಯ ಮುದುಕನಿಗೆ
ಕಾಲ ಕೇಳುವ ಕಷ್ಟ
ಕಾಲ ಕಾಲದ ಮೇಲೆ,
ಕಾಲ ಮರೆಯುವ ಲೀಲೆ

ನೀವಿಲ್ಲಿ ಹೇಳಿದರೂ
ಸಮಯ ಇಂತಿಷ್ಟೆಂದು
ಕೇಳುವೆನು ಮತ್ತಲ್ಲಿ,
ನಿಮ್ಮೆದುರೆ,ಅವರಲ್ಲಿ

ಕಾಲಬಲ ಇಲ್ಲದಿರೂ
ಕಾಲದೂಡುವ ಬಯಕೆ
ಹೊಸಸಮಯ ಕೇಳಿದೊಡೆ,
ಹಳೆಬಯಕೆ ನಾಯಿಕೊಡೆ

ಘಳಿಗೆಗಂಟೆಗಳಾಚೆ
ಬೇಕಿಹುದು ಬದುಕವಗೆ
ಸಾಯದು ಕಾಲಬೇರು
ಸಮಯಗಮ ಜೋರು.

9 ಕಾಮೆಂಟ್‌ಗಳು:

sunaath ಹೇಳಿದರು...

ವಾಹ್! ಖೂಬಸೂರತ್!

Ittigecement ಹೇಳಿದರು...

ಶ್ರೀನಿಧಿ.....

ತುಂಬಾ ಸುಂದರವಾಗಿದೆ..

" ಕಾಲಬಲ ಇಲ್ಲದಿರೂ
ಕಾಲದೂಡುವ ಬಯಕೆ
ಹೊಸಸಮಯ ಕೇಳಿದೊಡೆ,
ಹಳೆಬಯಕೆ ನಾಯಿಕೊಡೆ.."

ಈ ಸಾಲುಗಳು ತುಂಬಾ ಇಷ್ಟವಾದವು....

Parisarapremi ಹೇಳಿದರು...

ee kaviteya hinnele nange super aagi gottu!!!

Srikanth - ಶ್ರೀಕಾಂತ ಹೇಳಿದರು...

ಕವನ ಬೊಂಬಾಟ್.

ಮೊನ್ನೆ ಬಿಳಿಗಿರಿರಂಗನ ಬೆಟ್ಟದ ಮೇಲೆ ಆಗ ತಾನೆ ಜೋರಾಗಿ ಸುರಿದ ಮಳೆಯ ನೀರನ್ನು ಸ್ವಲ್ಪ ಕಾಲ ಶೇಖರಿಸಿ ಮಳೆ ನಿಂತ ನಂತರ ಕೆಳಗೆ ನಡೆದಾಡುವವರಿಗೆ ಪ್ರೋಕ್ಷಣೆ ಮಾಡುತ್ತಿದ್ದ ಒತ್ತಾಗಿ ಬೆಳೆದ ಹಸುರಾದ ಮರಗಳ ಸಮೂಹದಲ್ಲಿ ಎಲೆಯೊಂದರ ಮೇಲೆ ವಜ್ರದ ಚೂರೊಂದು ಬಿದ್ದಂತೆ ಇದ್ದ ಒಂದು ನೀರಿನ ಹನಿಯನ್ನು ನೋಡುತ್ತಿದ್ದಾಗ ನನಗೂ ಕಾಲ ಹೀಗೇ ನಿಲ್ಲಬಾರದೇ ಅನ್ನಿಸುತ್ತಿತ್ತು...

Unknown ಹೇಳಿದರು...

ಸತ್ಯವನ್ನೇ ಹೇಳುತ್ತೇನೆ. ಇಷ್ಟ ಆಗಿಲ್ಲ.

ವಿನಾಯಕ ಕೆ.ಎಸ್ ಹೇಳಿದರು...

ಕಾಲಾಯಾ ತಸ್ಮೈ ನಮಃ! ಎರಡನೇ ಪ್ಯಾರಾ ಮಜವಾಗಿದೆ...
ಅಣಾ ದೊರೆ ಕಮ್ಮೆಂಟ್ ಮಾಡುವವರಿಗೆ ಯಾಕೆ ಇಷ್ಟು ಕಾಟ?! ನಿನ್ನ ಬ್ಲಾಗಲ್ಲೂ ಕಮ್ಮೆಂಟ್ ಮಾದೋದು ಚೊರೆ! ಸ್ವಲ್ಪ ಈಸಿ ಮಾಡು ಮಾರಾಯ...ಸುಶ್ರುತ ಹೇಳಿದ ಮಾತು ಕೇಳಿದ್ದಾನೆ. ನೀನು ಮಾತ್ರ ಬಾಕಿ!
ಕೋಡ್ಸರ

jomon varghese ಹೇಳಿದರು...

ತುಂಬಾ ಚೆನ್ನಾಗಿದೆ ಅನ್ನಲು ಅಸೂಯೆಯಾಗುತ್ತಿದೆ....

Sushrutha Dodderi ಹೇಳಿದರು...

@ ಕೋಡ್ಸರ,
ಸುಶ್ರುತ ಜಾಣ; ಶ್ರೀನಿಧಿ ಕೋಣ. :) :D

Preethi Shivanna ಹೇಳಿದರು...

Nanna ajja nenapadaru,avaru galigogomme samayavestendu kelutidru. Tumba istavaytu!