ಮಂಗಳವಾರ, ಜುಲೈ 28, 2009

ಜಂಗಮ ಬಿಂಬಗಳು -5

ಕಾಫಿ ಹುಡುಗ ತಪ್ಪಿ ಕಪ್ ಕೆಳಗೆ ಬೀಳಿಸಿದ. ಯಾರೂ ನೋಡಿಲ್ಲವೆಂದುಕೊಂಡು ಅದೇ ಲೋಟಕ್ಕೆ ಕಾಫಿ ಬಗ್ಗಿಸಿದ. ಯಾಕಯ್ಯ ಹೀಗೆ ಮಾಡುತ್ತೀ,ತಪ್ಪಲ್ಲವ ಅಂದೆ. ಏನಾಗತ್ತೆ ಸರ್, ಜಸ್ಟ್ ಕೆಳಗೆ ಬಿತ್ತು.. , ನೀವೇ ಮಾಡ್ಕಂಡ್ರೆ ತಪ್ಪಿಲ್ಲ, ನಾವಾದ್ರೆ.. ಮಾತು ತುಂಡರಿಸಿ, ಬೇರೆ ಕಪ್ ತೆಗಿ ಅಂದೆ. ಬೇರೆ ಕಾಫಿ ಕೊಟ್ಟ. ರಾತ್ರಿ ಮನೆಯಲ್ಲಿ ಕುಕ್ಕರಿಂದ ಅನ್ನ ಎತ್ತಿ ಕೆಳಗಿಡಬೇಕಾದಾಗ, ಇಕ್ಕಳ ಜಾರಿ ಅನ್ನದ ಪಾತ್ರೆ ಕವುಚಿ ಬಿತ್ತು. ಪಾತ್ರೆ ಎತ್ತಿಟ್ಟು, ನೆಲಕ್ಕೆ ತಾಕದೇ ಉಳಿದಿದ್ದ ಅನ್ನ ಮತ್ತೆ ಪಾತ್ರೆ ಹಾಕಿದೆ. ಊಟ ಮಾಡಿದೆ. ಹುಡುಗ ನೆನಪಾದ.

***

ಎದುರಿನ ಬೈಕಿನ ಸೈಡ್ ಸ್ಟ್ಯಾಂಡು ಹೊರ ಚಾಚಿದ್ದನ್ನೇ ಗಮನಿಸುತ್ತ ಅದನ್ನು ಅವನಿಗೆ ಹೇಳಬೇಕೆಂದುಕೊಂಡ.ಆದರೆ ತನ್ನೆದರು ಸಡನ್ನಾಗಿ ನುಗ್ಗಿ ಬರುತ್ತಿದ್ದ ಆಟೋ ಗಮನಿಸಲೇ ಇಲ್ಲ.

***
ಒಂದಿಷ್ಟು ಹುಡುಗರು ಕ್ರಿಕೆಟ್ ಆಡುತ್ತಿದ್ದರು.೪-೫ರ ವಯಸ್ಸಿನವರು. ಪಾಪುವೊಂದು ಹೇಗೆ ಬೌಲಿಂಗು ಮಾಡಿದರೂ ಒಬ್ಬ ಪೋರ ಔಟೇ ಆಗುತ್ತಿರಲಿಲ್ಲ. ಈ ಪಾಪಚ್ಚಿ, ಮಧ್ಯರಸ್ತೆಯಲ್ಲೇ ಶರಟಿನ ಬಟನ್ನನ್ನು ಪುಟ್ಟ ಬೆರಳುಗಳಿಂದ ಬಿಚ್ಚಿ, ಬರಿ ಮೈಲಿ ನಿಂತು, ಆಕಾಶ ನೋಡುತ್ತ, ದೇವಲೇ ಇವುನ್ನ ಔಟ್ ಮಾದೂ ಅಂತ ಕೂಗಿತು. ನಂಗೇ ನಾನೇ ದೇವರಾಗಿರಬಾರದಿತ್ತೇ ಅಂತ ಮೊದಲ ಸಲ ಅನ್ನಿಸಿತು.

***

9 ಕಾಮೆಂಟ್‌ಗಳು:

Pramod ಹೇಳಿದರು...

Nice 'Real' stories :)

ಅನಂತ ಹೇಳಿದರು...

ಚೆನ್ನಾಗಿವೆ.. :)

ಸುಶ್ರುತ ದೊಡ್ಡೇರಿ ಹೇಳಿದರು...

LY. :-)

sunaath ಹೇಳಿದರು...

ದೇವರು ಪಾಪೂನ ಮನವಿಯನ್ನು ಮನ್ನಸಲಿ!

Annapoorna Daithota ಹೇಳಿದರು...

ಚೆನ್ನಾಗಿದೆ :)

Parisarapremi ಹೇಳಿದರು...

ಎರಡನೆಯ ತರಗತಿಯಲ್ಲಿ dictation ಕೊಟ್ಟೆ. ಹತ್ತು ಪದಗಳು. ಸರಿಯಾದ ಸ್ಪೆಲ್ಲಿಂಗುಗಳನ್ನು ಬೋರ್ಡಿನ ಮೇಲೆ ಬರೆದು ನೀವೇ correction ಮಾಡಿಕೊಳ್ಳಿ, marksನೂ ನೀವೇ ಹಾಕಿಕೊಳ್ಳಿ ಎಂದಾಗ ಹತ್ತಕ್ಕೆ ಹತ್ತು ತೆಗೆದುಕೊಂಡ ಹುಡುಗನೊಬ್ಬ "sir, i have taken 10 out of 10" ಅಂತ ಹಿಗ್ಗುತ್ತ ಬಂದು ಪುಸ್ತಕವನ್ನು ತೋರಿಸಿದಾಗ ಅಲ್ಲಿ ಮಾರ್ಕ್ಸ್ ಜೊತೆ ಒಂದು ಕಮೆಂಟನ್ನೂ ಬರೆದುಕೊಂಡಿದ್ದ. Very good, keep it up" ಅಂತ.

ವಿ.ರಾ.ಹೆ. ಹೇಳಿದರು...

@nidhi, nice

@sush, Me2 :-)

@prEmi, ;-)

mruganayanee ಹೇಳಿದರು...

I was waiting for this ಕಣೋ.. ಮತ್ತು ಕೊನೆಯದು ಓದುತ್ತಾ ಬದುಕು ನಿಜಕ್ಕೂ ಸುಂದರ ಅನ್ನಿಸಿತು.

ಶಾಂತಲಾ ಭಂಡಿ ಹೇಳಿದರು...

ಚೆಂದ.
ಹಾಗೆಯೇ ‘ಹೂವು ಹೆಕ್ಕುವ ಸಮಯ’ಕ್ಕೆ ಶುಭಾಶಯ ಮತ್ತು ಅಭಿನಂದನೆ.