ಟೌನ್ ಹಾಲ್ ಎದುರು
ಬಸ್ಸಲ್ಲಿ ಕೂತವಳ
ಕಣ್ಣಲ್ಲಿ ಕಿತ್ತೂರು ಚೆನ್ನಮ್ಮನ ಖಡ್ಗ
ಬೆನ್ನಲ್ಲಿ
ಸುಟ್ಟ ಸಿಗರೇಟಿನ ಉರಿ
ಸಾವಿರ ವಾಹನಗಳ
ಕೈ ಸನ್ನೆಯಲ್ಲೇ
ನಿಲ್ಲಿಸುವ ಟ್ರಾಫಿಕ್ ಪೇದೆ;
ವರ್ಷ ನಾಲ್ಕಾಯ್ತು
ಪ್ರಮೋಷನ್ ಸಿಗದೆ
"ಇಲ್ಲಿ ಲಿಂಗ ಪತ್ತೆ ಮಾಡಲಾಗುವುದಿಲ್ಲ"
ಹೇಳುತ್ತಿದೆ ಆಸ್ಪತ್ರೆಯ ಫಲಕ
ಹಿತ್ತಲ ಕಸದ ರಾಶಿಯ
ಒಳಗೆ
ಬೆಳಕೇ ಕಾಣದ ಮೊಳಕೆ
ಎಲ್ಲ ಸಮಸ್ಯೆಗೆ
ಪರಿಹಾರ ಹೇಳುವ ಜ್ಯೋತಿಷಿಯ
ಮಗಳು
ಅಚಾನಕ್ಕು ಓಡಿ ಹೋಗಿದ್ದಾಳೆ
ಇಂದು ಜ್ಯೋತಿಷ್ಯಾಲಯ ಬಂದು.
9 ಕಾಮೆಂಟ್ಗಳು:
ಚನಾಗಿದ್ದು !!
ಬದುಕು ಇರೋದೇ ಹೀಗೆ. ಒಳ್ಳೆಯ ಕವನ.
ಇದು ಕವನವಲ್ಲ, ಜೀವನ :)
ನಿಮ್ಮ ತುಂತುರು ಹನಿಗಳು ಚುರುಕು ಮುಟ್ಟಿಸುತ್ತಿವೆ.
"bere maathe illa.....
thumba chennagive.."
ಹಿತ್ತಲ ಕಸದ ರಾಶಿಯ ಒಳಗೆ
ಬೆಳಕೇ ಕಾಣದ ಮೊಳಕೆ .. ಅನ್ನುವ ಮಾತಂತೂ ಕೇಳಲೂ ಬೇಡದ ಸತ್ಯ. ಕವನ ತುಂಬಾ ಚೆನ್ನಾಗಿದೆ
nice :)
ಜೀವನದ ಒಂದು ಮುಖ ಸಾರ್ವಜನಿಕ, ಇನ್ನೊಂದು ವೈಯಕ್ತಿಕ. ಅರ್ಧ ಸತ್ಯದ ಹೆಸರಲ್ಲಿ ಎರಡೂ ಮುಖಗಳಿಗೆ ಕನ್ನಡಿ ಹಿಡಿದಿದ್ದೀ ಕಣೋ. ವೆಲ್ ಡನ್.
ಇದು ಅರ್ಧ ಸತ್ಯವಲ್ಲ ,ಪೂರ್ಣ ಸತ್ಯ ...ಕಂಡೂ ಕಾಣದೆ ಮುಂದೆ ನಡೆದು ಹೋಗುವ ಮಂದಿಯ ಬಗ್ಗೆ ..
ಅಭಿನಂದನೆಗಳು ,
ಕಾಮೆಂಟ್ ಪೋಸ್ಟ್ ಮಾಡಿ