**********
ಅಮ್ಮ , ಮಗ ಬಸ್ಸಲ್ಲಿ ದೂರದೂರಿಗೆ ಹೊರಟಿದ್ದರು. ಮಧ್ಯರಾತ್ರಿ ದಾರಿ ಬದಿ ಬಸ್ಸು ನಿಂತಿತು. ಕತ್ತಲ ಮರೆಗೆ ಗಂಡಸರು ತೆರಳಿದರು. ಹೆಂಗಸರು ಮತ್ತೂ ಕತ್ತಲನ್ನು ಹುಡುಕಿ ಸ್ವಲ್ಪ ಒಳ ಹೋದರು. ಮಗ ಬಂದ, ಬಸ್ಸು ಹೊರಡಲಾದರೂ ಅಮ್ಮ ಬರಲಿಲ್ಲ. ಕರೆದರೂ ಇಲ್ಲ. ಬ್ಯಾಟರಿ ಬೆಳಕಲ್ಲಿ ಹೊರಟರೆ, ಗದ್ದೆ ಪಕ್ಕದ ತೆರೆದ ಬಾವಿಯೊಳಗೆ ಅಮ್ಮ ತೇಲುತ್ತಿದ್ದಳು. ಕತ್ತಲೆ, ಕಾಲ ಬುಡ ಕಾಣುತ್ತಿರಲಿಲ್ಲ.
**********
ರಾತ್ರೆ ಎರಡು ಗಂಟೆ, ಯಾರೋ ದೇಹಭಾದೆ ಅತಿಯಾದವರು ಬಸ್ಸು ನಿಲ್ಲಿಸು ಅಂದರು, ಡ್ರೈವರ್ ಬಳಿ. ಆತನಿಗೂ ಬ್ರೇಕ್ ಬೇಕಿತ್ತು. ನಿಲ್ಲಿಸಿದ. ಇನ್ನೊಂದಿಷ್ಟು ಜನ ಕೆಳಗಿಳಿದರು. ಎಲ್ಲರೂ ಬಂದರೂ ಡ್ರೈವರು ಇಲ್ಲ. ಹುಡುಕುತ್ತಿದ್ದಂತೆ ಕತ್ತಲ ಮರೆಯಿಂದ ಹೊರಬಂದ ಆತ. ಮೈತುಂಬ ಸಗಣಿ, ಮಣ್ಣು. ಆತನಿಗೆ ಹುಚ್ಚು ಹಿಡಿದಿತ್ತು. ಡ್ರೈವಿಂಗು ಗೊತ್ತಿರುವ ಬೇರೆ ಯಾರೋ, ಬಸ್ಸನ್ನ ಮೆಜೆಸ್ಟಿಕ್ ಗೆ ಓಡಿಸಿಕೊಂಡು ಬಂದರು, ಹುಚ್ಚು ಹಿಡಿದ ಡ್ರೈವರ್ ಸಮೇತ.
**********
ಇವಿಷ್ಟೂ ನಡೆದ ಘಟನೆಗಳು.
12 ಕಾಮೆಂಟ್ಗಳು:
huh!
hmm..
well ... :-S
ಎರಡನೆಯದೇನೋ ಸರಿ.. ಆದರೆ ಮೊದಲನೆಯದು, ಮೂರನೆಯದು ಆಗುವುದಕ್ಕೆ ಸಾಧ್ಯವಾ?
murane kathe channagide neenu 'kathegaara'
ಏನ್ಸಾರ್ ಇದೂ?
ಜಾಗೃತಿ ಕೆ.ಎಸ್.ಆರ್.ಟಿ.ಸಿ ಯ ಕಾರ್ಯಕ್ರಮವನ್ನೇ ತುಂತುರು ಹನಿಗಳಾಗಿ ಸಿಂಪಡಿಸಿಬಿಟ್ಟಿದೀರಿ. :)
ನಿಧಿ, ಪುಟ್ಟದಾಗಿ ಪದಗಳನ್ನ ನ್ಯಾಯೋಚಿತವಾಗಿ ಕಟ್ಟಿ ಬರೆದ ಚೊಕ್ಕತನ ತುಂಬ ಇಷ್ಟವಾಯಿತು.
ಕವಿತೆಗಳೆಲ್ಲಿ? ಬೇಗ ಬರೆಯಿರಿ ಸಾರೂ..
ಪ್ರೀತಿಯಿಂದ
ಸಿಂಧು
ಮೊದಲೆರಡು ಘಟನೆಗಳು ಸತ್ಯಕ್ಕೆ ಹತ್ತಿರವಾಗಿವೆ. ಆದರೆ ಮೂರನೆಯದು ಯಾಕೋ ನಿಜವೆಂದೆನಿಸುತ್ತಿಲ್ಲ. ಕಥೆಯಾಗಿದ್ದರೆ ತುಂಬಾ ಚೆನ್ನಾಗಿದೆ ಎನ್ನಬಹುದು.
ಇಲ್ಲಿನ ಕಥೆಗಳೆಲ್ಲ ನಡೆದ ಘಟನೆಗಳೇ!
ನಮ್ಮ ಎಣಿಕೆಗೆ ಮೀರಿದ, ವಿಚಿತ್ರ ಅನ್ನಿಸುವ ಘಟನೆಗಳೂ ಜರುತ್ತವೆ ಅನ್ನುವುವುದನ್ನು ತಿಳಿಸಿವುದು ಉದ್ದೇಶವಾಗಿತ್ತು.
ಪ್ರತಿಕ್ರಿಯಿಸಿದ ಎಲ್ಲರಿಗೂ ಕೃತಜ್ಞ.
ಶ್ರೀ,
ಎರಡನೇ ಘಟನೆ ಹಾರಿಬಲ್. uffffffffff.
idenriiii hostagi shuru maadidira :-) last ghatane oodi nija appalle sadyane ille anstu...adrenijavaagi nadedaddu anta nivu heLtidira...hmmmm
Chennagive..!!!
ºÁAiÀiï, ªÉÆzÀ® PÀxÉ, Q¤ßUÉÆýAiÀÄzÀÄÝ C¯Áé? ZÉ£ÁßVªÉ.
ಕಾಮೆಂಟ್ ಪೋಸ್ಟ್ ಮಾಡಿ