ಶನಿವಾರ, ಜೂನ್ 02, 2007

ಸಂಜೆಗೊಂದು ಕವನ..

ಬಾನಂಚಿನಲಿ ಕೆಂಪು
ಸೂರ್ಯ ಮುಳುಗುವ ಸಮಯ,
ಮೋಡಗಳ ತುದಿಯಲ್ಲಿ ಹೊನ್ನ ಕಲಶ.
ಬಾಗಿಲಲಿ ಅವಳ ನಗು
ಗುಡುಗು ಸಿಡಿಲಿನ ಮಂತ್ರಘೋಷ.

ಸಂಧ್ಯೆಯೊಡಲಿನ ಕೆಂಪು, ಸೂರ್ಯನಾಗಲೆ ತಂಪು
ಸೇರುತಿರುವನೆ ಅವನು ಅವಳ ಒಡಲೊಳಗೆ?
ಮನತೆರೆದು, ಕೈ ಚಾಚಿ, ಬರಮಾಡಿ
ಬರ ಸೆಳೆದು
ನಗುತಿಹುದು ನೋಡಲ್ಲಿ ಸಂಧ್ಯೆ ಮೊಗವು.

ದಿನದ ಕೆಲಸವ ಮುಗಿಸಿ, ಬಳಲಿ
ಸಾಗುತಲಿರಲು, ಮಂದಹಾಸವ ಬೀರಿ
ಕರೆಯುವಳು ಅವಳೆಡೆಗೆ.
ಅವನ ಪುಣ್ಯವೆ ಪುಣ್ಯ!
ಬಳಲಿಕೆಯ ಅರಿವಿಲ್ಲ,
ಕರಗುವನು ಅವಳಲ್ಲೆ,
ಕದವ ಮುಚ್ಚಿ.

{ನನ್ನ ಗೆಳತಿ ಅಂಜಲಿ ಬರೆದಿರೋ ಕವನ ಇದು. ಅಪ್ಪಣೆಯಿಲ್ಲದಿದ್ದರೂ ಇಲ್ಲಿ ಪ್ರಕಟಿಸಿದ್ದೇನೆ. ಅವಳು ಬೈದುಕೊಂಡರೂ ಬೇಜಾರಿಲ್ಲ. }

6 ಕಾಮೆಂಟ್‌ಗಳು:

ಸಿಂಧು sindhu ಹೇಳಿದರು...

ಓದಿ ಅವಳು ಕೆಂಪು ಕೆಂಪಾಗಿದ್ದಾಳೆ,
ಉರಿವ ಬೆಂಕಿ ಕೋಪ ಕೆಂಪಲ್ಲ
ಸಂಜೆ ಸೂರ್ಯನ ತಂಪು ಕೆಂಪು,
ಅವನ ಕಣ್ಣಿಗೆ ಮಾತ್ರ ಕಾಣುವ ಲಜ್ಜೆಗೆಂಪು..

ಅನಾಮಧೇಯ ಹೇಳಿದರು...

ಮನತೆರೆದು, ಕೈ ಚಾಚಿ, ಬರಮಾಡಿ
ಬರ ಸೆಳೆದು
ನಗುತಿಹುದು ನೋಡಲ್ಲಿ ಸಂಧ್ಯೆ ಮೊಗವು
Superb.....

ಅನಾಮಧೇಯ ಹೇಳಿದರು...

kone pyaara nodi..yehst adbhutavagide...nimma gelati anjali tumba tunti ansuttte allava..adbhutavaag bardiddare....neev avarige ondu blog maadi kodi shreenidhiyavare[:P]

ವಿ.ರಾ.ಹೆ. ಹೇಳಿದರು...

ಗುಡ್ ಅಂಜಲಿ :-)

ಶ್ರೀನಿಧಿ, ನೀನೂ ಗುಡ್ಡು :-)

Lanabhat ಹೇಳಿದರು...

ಮನಸ್ಸಿಗೆ ಹಿತವನ್ನುಂಟುಮಾಡುವ ಕವನ...ಚೆನ್ನಾಗಿದೆ

ಅನಾಮಧೇಯ ಹೇಳಿದರು...

chenagidhe. nanagu kannada fontnalli blog madbeku plz help me