ಬುಧವಾರ, ಜೂನ್ 13, 2007

ಇವತ್ತು ಬೆಳಗ್ಗೆ..

ಇಂದು ಬೆಳಗ್ಗೆ ಎಂದಿನಂತೆ BTM ಲೇ ಔಟಲ್ಲಿ ೨೦೧ ಬಸ್ಸಿಳಿದೆ, ೯ ಗಂಟೆಯ ಸಮಯ. ಟ್ರಾಫಿಕ್ ಜಾಮ್ ಯಾಕೋ ಇನ್ನು ಆಗಿರಲಿಲ್ಲ, ಆಶ್ಚರ್ಯ ಅನ್ನಿಸಿತು. ದಿನನಿತ್ಯ ಇಲ್ಲಿ ವಾಹನಗಳ ಸರತಿ ಸಾಲು ಪೇ ಪೇ ಅಂತ ಹಾರ್ನು ಬಾರಿಸಿಕೊಂಡು ನಿಂತಿರುವುದು ತೀರಾ ಸಾಮಾನ್ಯ ದೃಶ್ಯ. ನಾನು ಬಸ್ಸಿಳಿದು ರೋಡು ದಾಟಲು ಹೊರಡುವುದಕ್ಕೂ, ಸಿಗ್ನಲ್ಲು ಬೀಳುವುದಕ್ಕೂ ಸರಿಯಾಯಿತು. ೨೦೧ ಬಸ್ಸು , ಅದರ ಹಿಂದೆ ಒಂದು ಆಟೋ, ಜೀಪು.. ಎಲ್ಲ ಬ್ರೇಕು ಹಾಕಿ ನಿಂತವು ಅಲ್ಲೇ.

೪ನೇ ವೆಹಿಕಲ್ಲು ಒಂದು ಅಂಬುಲೆನ್ಸ್. ಹಾರನ್ ಮೇಲೆ ಹಾರನ್ ಬಾರಿಸುತ್ತಿದ್ದ ಆತ. ನನ್ನಷ್ಟೇ ಪ್ರಾಯದ ಹುಡುಗ ಡ್ರೈವರ್ರು. "ಅಣ್ಣಾ, ಪ್ಲೀಸ್ ಮುಂದ್ ಹೋಗಣ್ಣ, ಅರ್ಜೆಂಟ್ ಕೇಸ್ ಬೇಗ್ ಹೋಗ್ಬೇಕೂ" ಅಂತ ಮುಂದಿನ ಜೀಪ್ನವನ್ನ ಅಂಗಲಾಚುತ್ತಿದ್ದ. ಅವನೋ, "ಸಿಗ್ನಲ್ ಇದ್ಯಪ್ಪಾ, ನಾನೇನ್ ಮಾಡ್ಲಿ ಹೋಗಿ ಆ ಟ್ರಾಫಿಕ್ ಪೋಲೀಸ್ನ ಕೇಳು" ಅಂದು ಸುಮ್ಮಗಾದ. ಇಲ್ಲಿನ ಪರಿಸ್ಥಿತಿ ಹೇಗೆಂದರೆ, ಮುಂದಿನ ಯಾವ ಘಳಿಗೆಯಲ್ಲಿ ಬೇಕಾದರೂ, ಯಾವನೋ ಒಬ್ಬ ತಲೆ ಕೆಟ್ಟವನು ಅಡ್ಡಂಬಡ್ದ ನುಗ್ಗಿ, ಟ್ರಾಫಿಕ್ಕು ಚಿತ್ರಾನ್ನ ಆಗಿಬಿಡಬಹುದು. ಹಾಗೆ ಆಗಿದ್ದನ್ನ ನಾನೇ ಎಷ್ಟೋ ಸಲ ನೋಡಿದ್ದೇನೆ.

ಒಂದು ಪ್ರಯತ್ನ ಮಾಡೋಣ ಅಂತ ಸೀದಾ ಟ್ರಾಫಿಕ್ ಪೋಲಿಸ್ ಹತ್ರ ಹೋದವನೇ
"ಸಾರ್ ನೋಡಿ ಅಲ್ಲಿ,ಒಂದು ಅಂಬುಲೆನ್ಸ್ ಮಧ್ಯ ಇದೆ..ಸಿಲ್ಕ್ ಬೋರ್ಡ್ ಕಡೆ ಹೋಗೋದು, ಆ ಕಡೆ ಸಿಗ್ನಲ್ ಕ್ಲಿಯರ್ ಮಾಡಿ .. ಏನೋ ಅರ್ಜೆಂಟಿರಬೇಕು" ಅಂದೆ, ಒಂದೇ ಉಸಿರಿಗೆ.

ಅವನು ತಣ್ಣಗೆ,
"ದಿನಕ್ಕೆ ಒಂದು ೧೦೦-೨೦೦ ಅಂಬುಲೆನ್ಸ್ ಓಡಾಡ್ತಾವೆ ಇಲ್ಲಿ, ಎಲ್ಲ ಅಂಬುಲೆನ್ಸ್ ಗೂ ನಾನು ಹೋಗೋಕೆ ಬಿಡ್ತಾ ಇದ್ರೆ, ಬೇರೆಯವ್ರು ಬಂದು ವದೀತಾರೆ ಅಷ್ಟೇ, ಸುಮ್ನೇ ಹೋಗಯ್ಯೋ "ಅಂದ.

"ಇಲ್ಲಣ್ಣಾ, ನೋಡಿ ಅಣ್ಣಾ, ಪ್ಲೀಸ್".. ಅಂದೆ ನಾನು, ಆಸೆ ಬಿಡದೆ. "ನೋಡಿ ಸರ್ ಸ್ವಲ್ಪ.. ಆಗತ್ತೆ ನಿಮ್ ಹತ್ರ..."
ಅಲ್ಲಿ ಹಿಂದುಗಡೆ ಅವ್ನು ಒಂದೇ ಸಮನೆ ಮಾಡುತ್ತಿರುವ ಹಾರನ್ ಕೇಳಿಸುತ್ತಿತ್ತು.

"ಇದೊಳ್ಳೇ ಗೋಳಾಯ್ತಲ್ಲಪ್ಪಾ..ತಡಿ" ಅಂದು, ದೊಡ್ಡದಾಗಿ ವಿಸಲ್ ಊದಿ, ಆಗತಾನೇ ಹೋಗಲು ಬಿಟ್ಟಿದ್ದವರನ್ನ ತಡೆದು ನಿಲ್ಲಿಸಿ, ೨೦೧ ಬಸ್ಸಿನ ಡ್ರೈವರನಿಗೆ ಸನ್ನೆ ಮಾಡಿದ - ಮುಂದೆ ಹೋಗೋ ಅಂತ. ಅಂಬುಲೆನ್ಸ್ ಡ್ರೈವರ್ ನಂಗೊಮ್ಮೆ ಕೈ ಮಾಡಿ (ಪ್ರಾಯಶಃ ಅವನು ನನ್ನನ್ನ ನೋಡುತ್ತಿದ್ದ ಅನಿಸುತ್ತದೆ) ವೇಗವಾಗಿ ಸಾಗಿದ.

ನಾನು ಆಫೀಸಿನತ್ತ ಹೆಜ್ಜೆ ಹಾಕಿದೆ. ಇಂತಹ ಸಣ್ಣ ಸಣ್ಣ ಘಟನೆಗಳು ಮನಸ್ಸಿಗೆ ಖುಷಿ ನೀಡುತ್ತವೆ.

9 ಕಾಮೆಂಟ್‌ಗಳು:

Sandeepa ಹೇಳಿದರು...

keep it up!

cheers :)

ಅನಾಮಧೇಯ ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಅನಾಮಧೇಯ ಹೇಳಿದರು...

Shree,
olle kelsa..

bahisha intha sanna vishayagalindagiye navibbaru olle snehitareno annisuttade..


Cheers
Chin

Archu ಹೇಳಿದರು...

oLLe kelasa maadide..
good boy :-)

ಯಜ್ಞೇಶ್ (yajnesh) ಹೇಳಿದರು...

ಶ್ರೀ,

ಒಳ್ಳೇ ಕೆಲ್ಸ ಮಾಡಿದ್ಯಪ್ಪ.

ಎಷ್ಟೋ ಜನ ಅಂಬ್ಯುಲೆನ್ಸ್ ಹಿಂದೆ ಬರ್ತಾಯಿದ್ದರೆ ಅರಾಮಾಗಿ ತಮ್ಮ ವೆಹಿಕಲ್ಸ್ ಓಡಿಸ್ತಾಯಿರ್ತ. ಸ್ವಲ್ಪ ಸೈಡ್ ಕೊಡಕು ಅಂತ ಕಾಮನ್ ಸೆನ್ಸು ಇರ್ತಲ್ಲೆ. ಇನ್ನು ಕೆಲವರು ಅಂಬ್ಯುಲೆನ್ಸ್ ಹಿಂದೆ ಹೋದ್ರೆ ಬೇಗ ಹೋಗ್ಲಕ್ಕು ಹೇಳಿ ಫಾಲೋ ಮಾಡ್ತ. ನಾವು ಯಾರೋ ಪೇಷಂಟ್ ಕಡೆಯವರು ಇದ್ದಿಕ್ಕು ಅಂತ ತಿಳ್ಕಂಡಿರ್ತ್ಯ.

BTW, "ಹಿರೋ ತರ ಫೀಲ್ ಆಕ್ತಾ ಇದ್ದಾ?"
ಇದು ಸಕತ್ ಕಮೆಂಟು..ಹಹಹ

ಶ್ರೀನಿಧಿ.ಡಿ.ಎಸ್ ಹೇಳಿದರು...

sandeepaa,
:)

Ranju,
hero aagalaagi maDid alde adu..

chinmaya,
yep! idro iddikko.. snehada chemestry ballavaraaru?:)

archana,
:D

yajneshanna,

nee heLadu satya! ambulance adre tamgenu, yarigo sambandsiddu anta araamag hogtaa irta, tam padige..

Lanabhat ಹೇಳಿದರು...

ಒಳ್ಳೇ ಕೆಲಸ ಮಾಡಿದ್ರಿ ಶ್ರೀನಿಧಿಯವರೆ

ಅನಾಮಧೇಯ ಹೇಳಿದರು...

ಶ್ರೀ,

ನಾನು ಎಲ್ಲು ಹೇಳಿದ್ನಿಲ್ಲೆ ನೀನು ಹೀರೊ ಆಪಲೆ ಹಂಗೆ ಮಾಡಿದ್ದೆ ಅಂತಾ. ಹೀರೊ ತರಾ ಫೀಲ್ ಆಕ್ತಾ ಇದ್ದಾ ಕೇಳದಿ ಅಷ್ಟೆ.

Shree ಹೇಳಿದರು...

Ollethanada thunthuru hani eeginkaladalli aparoopa, adu illi sikkiddu khushi aythu.. :)
keep the good work going, inspire others too..:)