ಮೇ ಫ್ಲವರ್ ಮರಗಳ
ಸಾಲಿನ ಕೆಳಗೆ,
ಹಳೆಯ ಒಣಗಿದ ಹೂ ರಾಶಿ
ಸಣ್ಣನೆಲೆಗಳ ತರಗೆಲೆ ಪದರ
ಹಾಸಿಕೊಂಡಿವೆ.
ಈ ಬೀದಿ ಎಲ್ಲೋ ಮೂಲೆಯಲ್ಲಿದೆ,
ಯಾರೂ ಇದನ್ನ ಗುಡಿಸಲು ಬರುವುದಿಲ್ಲ.
ಮರದ ಕೆಲ ಗೆಲ್ಲುಗಳಲಿನ್ನೂ,
ಹೂ ಗೊಂಚಲುಳಿದಿವೆ,
ಕೆಂಪು ಕೆಂಪು.
ಗಾಳಿಗೊಂದೊಂದು ಹೂ ಪಕಳೆ
ಅಲ್ಲೆ ತೇಲುತ್ತ ಕೆಳಬೀಳುತ್ತವೆ.
ಈ ಬೀದಿ ಎಲ್ಲೋ ಮೂಲೆಯಲ್ಲಿದೆ,
ಯಾರು ಇದನ್ನ ನೋಡಲು ಬರುವುದಿಲ್ಲ.
ಮಳೆಗಾಲ ಶುರುವಾಗಿದ್ದರಿಂದ,
ಸಾಲು ಮರಗಳ ತುಂಬ ಹಸಿರ ಲವಲವಿಕೆ;
ಮಳೆ ನಿಂತ ಮೇಲೆ ಇಲ್ಲಿ
ನಡೆಯುವುದೆಂದರೆ ಬಹಳ ಖುಷಿ.
ನೀರು ತೊಟ್ಟಿಕ್ಕುತ್ತದೆ, ಹನಿ-ಹನಿಯಾಗಿ.
ಈ ಬೀದಿ ಮೂಲೆಯಲ್ಲಿದೆ
ಯಾರೂ ಈ ಸುಖ ಅನುಭವಿಸಲು ಬರುವುದಿಲ್ಲ.
ಮೇ ಫ್ಲವರಿನ ಮರ ಎಷ್ಟೇ ಚಂದ
ಕಂಡರೂ,
ಮಳೆಗಾಲದಲ್ಲದು ಹೂ ಬಿಡುವುದಿಲ್ಲ.
ಭಣಗುಡುವ ಬೇಸಗೆಯೇ ಬೇಕದಕೆ.
ಹೂ ಬಿಟ್ಟಾಗಲೂ ಅಷ್ಟೇ,
ಯಾರು ಅದರ ಚಂದ ಹೊಗಳುವುದಿಲ್ಲ.
ಈ ಬೀದಿ, ಮೂಲೆಯಲ್ಲಿದೆ.
5 ಕಾಮೆಂಟ್‌ಗಳು:
namaskara kavigaLige :)
nija, may flower maravanna sogasagi kavanadalli chitrisiddira. huli ugaru maadi aata ado dinagaLu nenpayitu....
ಶ್ರೀನಿಧಿ,
ಓದಿ ಖುಷಿಯಾಯ್ತು.
ಎಲ್ಲೋ ಮೂಲೆಯಲ್ಲಿರುವ ಬೀದಿಯ ಮರವನ್ನು ಬ್ಲಾಗಿನ ಫ್ರೇಮಲ್ಲಿ ತೋರಿಸುತ್ತಾ, ಮಳೆಯಲ್ಲು ಹೂ ಬಿಟ್ಟಿರುವ ಗೆಲ್ಲನ್ನ ಕಣ್ಣೆದುರು ತಂದು ಹಿತವೆನ್ನಿಸಿದ್ದೀ. ಭಣಗುಡುವ ಬೇಸಗೆಯನ್ನ ತಂಪಾಗಿಸುವ ನೋಟ ಕೊಡುವ ಮೇ ಫ್ಲವರಿನ ಮರದ ಹಲ ನೋಟಗಳು..
ಚಂದ ಹೊಗಳಲು ಮಾತಿಲ್ಲ.
ಹಿಂಸೆ ಆಗ್ತಿದೆ ಶ್ರೀನಿ ಯಾಕೆ ಅಂತ ಗೊತ್ತಾಗ್ತಿಲ್ಲ ಯಾರು ಗಮನಿಸದ ಮೇ ಫ್ಳವರಿನ ಮರದ ಬಗ್ಗೆ ಸುಮ್ಮನೇ ಪ್ರೀತಿ ಉಕ್ಕುತ್ತಿದೆ
ನಿನಗೆ william wordsworth ಕವಿ ಬಗ್ಗೆ ಗೊತ್ತಿರಬಹುದು ಅವನು lucy poems ಅಂತ ಯಾರ ಕಣ್ಣಿಗೂ ಹೆಚ್ಚಾಗಿ ಬೀಳದ ಲುಸಿ ಅನ್ನೋ ಹುಡಿಗಿಯ ಬಗ್ಗೆ ಬರೀತಾನೆ
no one could know when lucy ceased to be ಅಂತೇನೋ ಬರುತ್ತೆ ಅದರ ಸಾಮ್ಯತೆ ಇಲ್ಲಿ ಕಾಣಬಹುದು. vaer good work carry on
ಇಲ್ಲೊಬ್ಬರು ಹೇಳಿದ ಹಾಗೆ ನಿಜಕ್ಕೂ ವರ್ಡ್ಸ್‌ವರ್ತ್ ಕವನ ಹಾಗೆ ಭಾಸವಾಗುತ್ತೆ ನಿಮ್ಮ ಕವನ...ಸರಳ...ಆದರೂ ಮಧುರ...ಕೀಪಪ್ ಶ್ರೀನಿಧಿ
nice one :)
ಕಾಮೆಂಟ್ ಪೋಸ್ಟ್ ಮಾಡಿ