ಮಂಗಳವಾರ, ಜೂನ್ 26, 2007

HR- ಮತ್ತೊಂದು ಸುತ್ತು!

ಕೆಲ ದಿನಗಳ ಹಿಂದೆ ನಮ್ಮಾಫೀಸಲ್ಲಿ ಇಂಟರ್ವ್ಯೂ ನಡೆಯುತ್ತಿತ್ತು. ಒಂದು ೧೦-೧೫ ಕೆಲ್ಸ ಖಾಲಿ ಇತ್ತು. ಸಂದರ್ಶನದ ವ್ಯವಸ್ಥೆಯ ಜವಾಬ್ದಾರಿ ಎಂಬ ಕರ್ಮ ನನ್ನ ತಲೆಗಂಟಿಕೊಂಡಿತ್ತು. ಒಂದೆರಡು ವಾರ ಬರೀ ಇದೇ ಕೆಲಸ ಮಾಡಿ ಹೈರಾಣಾಗಿ ಹೋದೆ. ನಾನು ಬರುವ ಕ್ಯಾಂಡಿಡೇಟುಗಳ ಹಣೇಬರದ ಬಗ್ಗೆ ಬರೆದರೆ, "ನೀನು ವ್ಯಂಗ್ಯ ಮಾಡುತ್ತೀಯಾ, ನಮ್ಮ ಕಷ್ಟ ನಮಗೆ" ಅಂತ ಓದುಗರಾದ ನೀವೆಲ್ಲ ತರಾಟಗೆ ತೆಗೆದುಕೊಳ್ಳುತ್ತೀರಿ, ನನಗೆ ಗೊತ್ತು. ಆದರೆ ಬರೆಯದೆ ಬೇರೆ ವಿಧಿಯಿಲ್ಲ. ಇದನ್ನ ಓದಿ, ಮುಂದೆ ಇಂಟರ್ವ್ಯೂಗಳಿಗೆ ತೆರಳುವ ಯಾರಿಗಾದರೂ ಉಪಕಾರವಾದರೂ ಅಗಬಹುದು.

. ಡ್ರೆಸ್ ಕೋಡ್.

ಶುಭ ಸೋಮವಾರ ಬೆಳಗ್ಗೆ ಒಬ್ಬ ಸುಂದರಾಂಗ ಬಂದ. ಒಳ್ಳೇ ನೈಕ್ ಸ್ಪೋರ್ಟ್ಸ್ ಶೂ, ಟಿ- ಶರ್ಟು, ಜೀನ್ಸು. "ಏನಪ್ಪಾ, ಏನಾಗಬೇಕು"? "ಶ್ರೀನಿಧಿ ಅನ್ನೋರು ಕರೆದಿದ್ದಾರೆ ನನ್ನ, ಇಂಟರ್ವ್ಯೂ ಇದೆ" . ಯಮ್ಮಾ! ಪದವಿ ಮುಗಿಸಿ, ಈಗಾಗಲೇ ಕೆಲಸ ಮಾಡುತ್ತಿರುವ ಯುವಕನಿಗೆ ಸಂದರ್ಶನಕ್ಕೆ ಹೇಗೆ ಬರಬೇಕು ಅನ್ನುವ ಕಾಮನ್ ಸೆನ್ಸ್ ಕೂಡಾ ಇಲ್ಲ. "ಅಣ್ಣಾ, ಈ ಡ್ರೆಸ್ಸಲ್ಲಿ ನಿನ್ನ ಇಂಟರ್ವೂ ತಗೋಳೋದಿಲ್ಲ, ವಾಪಾಸು ಹೋಗಿ ನಾಳೆ ಬಾರಪ್ಪಾ" ಅಂದು ಕಳಿಸಿದೆ.

ಒಬ್ಬ ಮಹಾಶಯರಂತೂ ಬಾಟಾ ಚಪ್ಪಲಿ ಹಾಕಿಕೊಂಡು ಸಂದರ್ಶನಕ್ಕೆ ಬಂದಿದ್ದರು.

ಸರಳವಾದ ಫಾರ್ಮಲ್ ಡ್ರೆಸ್ ಹಾಕಿಕೊಂಡು ಇಂಟರ್ವ್ಯೂಗಳಿಗೆ ಹೋಗಬೇಕು ಅನ್ನುವ ಕಾಮನ್ ಸೆನ್ಸ್ ಎಲ್ಲರಿಗು ಇದೆ ಅಂದುಕೊಂಡಿದ್ದೆ ನಾನು. ಅದು ಸುಳ್ಳು ಅಂತ ಈಗ ಗೊತ್ತಾಗಿದೆ.

೨. ರೆಸ್ಯೂಮ್ - ಜಾತಕ.

ನಮ್ ಆಫೀಸು ಗ್ಲಾಸ್ ಬಾಗಿಲನ್ನ ಹೆಚ್ಚು ಕಡಿಮೇ ಒಡೆದೇ ಬಿಡುವ ಸ್ಪೀಡಲ್ಲಿ ತಳ್ಳಿದ ಯಾರೋ ಒಬ್ಬ. ನಾನು ಅಲ್ಲೇ ಪೇಪರ್ ಓದುತ್ತ ಕುಳಿತಿದ್ದೆ. ಕೈಲಿ ಒಂದು ಸುರುಳಿ ಸುತ್ತಿದ ಪೇಪರು - ಈ ಒಲೇ ಊದೋಕೆ ಬಳಸುವ ಊದುಕೊಳವೆಯ ಹಾಗಿನದು.
"sorry i am bit late.. i am Mr. so and so.. ಇಂಟರ್ವ್ಯೂ... "

ಓಕೆ, ನಿನ್ನ ರೆಸ್ಯೂಮು ಕೊಡು ಅಂದಿದ್ದಕ್ಕೆ ಆ ಊದುಕೊಳವೆಯನ್ನ ನನ್ ಕೈಗಿತ್ತ ಆಸಾಮಿ. ಮುಖ ನೋಡಿದೆ. ಹೆ ಹೆ ಅಂತ ಪೆಕರು ನಗೆ. ನಾನು ಆ ಹಾಳೇ ಉಲ್ಟಾ ಪಲ್ಟಾ ಮಡಚಿ - ಸರಿ ಮಾಡಿ ನಮ್ಮ ಮ್ಯಾನೇಜರಿಗೆ ಕೊಟ್ಟೆ.

ಇನ್ನು ಒಂದಿಬ್ಬರು ರೆಸ್ಯೂಮಿನ ಬಿಡಿ ಬಿಡಿ ಹಾಳೆಗಳನ್ನ ನನ್ನ ಕೈಗಿತ್ತಿದ್ದರು. ನಾನು ಎಲ್ಲ ಜೋಡಿಸಿ, ಸ್ಟೆಪ್ಲರು ಹೊಡೆದುಕೊಂಡು ಇಟ್ಟುಕೊಂಡೆ. ನನಗೆ ಬೇಕಲ್ಲ ಅದು!.

ಒಂದು ಸಣ್ಣ ಫೈಲು ಇಟ್ಟುಕೊಂಡರೆ ಒಳಿತು. ಬೇಡ, ಆ ರೆಸ್ಯೂಮನ್ನ ನೀಟಾಗಿ ಹಿಡಕೊಂಡು ಬರೋಕೆ ಏನು ರೋಗ?

೩. ಸಮಯ ಪಾಲನೆ.

ಅರ್ಧ ತಾಸು ಲೇಟಾಗಿ ಬಂದು ಟ್ರಾಫಿಕ್ ಜಾಮ್ ಸಾರ್ ಸ್ವಾರೀ.. ಅನ್ನೋದು ಉಸಿರಾಡಿದಷ್ಟು ಸಹಜ ಕಾರಣವಾಗಿ ಬಿಟ್ಟಿದೆ. ಎಷ್ಟೇ ಉತ್ತಮ ಅಭ್ಯರ್ಥಿಯಾದರೂ, ಅವನ ಬಗ್ಗೆ ಒಂದು ಅಸಹನೆ ಮನದೊಳಗೆ ಅಷ್ಟರಲ್ಲೇ ಬೇರು ಬಿಟ್ಟಾಗಿರುತ್ತದೆ.

೪. ಸಂದರ್ಶನ

" tell me about yourself please.."

"myself ramalingam, myself did BE in ... . , myself working in ... "

ಮೊದಲ ಪ್ರಶ್ನೆ ಇದೇ ಆಗಿರುತ್ತದೆ ಅನ್ನುವುದು, ಎಲ್ಲರಿಗೂ ಗೊತ್ತಿದೆ ಮತ್ತು ಇಲ್ಲೇ ಯಡವುತ್ತಾರೆ. ಇಂಗ್ಲೀಷು ನನ್ನದೂ ಚೆನ್ನಾಗಿಲ್ಲ. ಆದರೆ, ಸ್ವಲ್ಪವಾದರೂ ಸರಿ ಮಾಡಿಕೊಂಡಿರಬೇಕು ತಾನೆ?

( ಇದರ ಬಗ್ಗೆ, ವಿವರವಾಗಿ ಬೇರೆಯದೇ ಬರಹ ಬರೆಯಬೇಕು).

೫. ರಿಸಲ್ಟು

"ಸಾರ್ ನಾನು ಸೆಲೆಕ್ಟಾ?" ಅಂದ ಒಬ್ಬಾತ, ಇಂಟರ್ವ್ಯೂ ಮುಗಿದು ಹೊರ ಹೋಗುತ್ತಲೇ ಫೋನು ಅವನದು.

ಅಷ್ಟೊಂದು ಗಡಿಬಿಡಿ ಒಳ್ಳೆಯದಲ್ಲ. ಬಹಳ openings ಇದ್ರೆ, ಫೀಡ್ ಬ್ಯಾಕೂ ಸ್ವಲ್ಪ ಲೇಟ್ ಆಗತ್ತೆ.

ತಲೆಯೊಳಗೆ ಎಷ್ಟೇ ಬುದ್ಧಿ ಇದ್ದರೂ, ಹೊರಗಡೆ - ಮೇಲು ನೋಟಕ್ಕೆ ಕಾಣುವ ಹಾಗಿನ ಯಡವಟ್ಟು ಮಾಡಿಕೊಂಡರೆ - ಊಹೂಂ! ಕಷ್ಟ ಕಷ್ಟ.


ಇನ್ನೂ ತುಂಬ ಹೇಳಬೇಕು- ಮತ್ಯಾವಾಗಾದರೂ....

22 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

hr huddeyalli iruva nivu tiLi heLiddu chenna. well wrote mr.shreenidhi. ond interview ge hege hogbeku anno common sense irbeku nija. ondu vishya heLalu baystini...ondu top mnc cmpny nalli nanna friend interview kodoke hogiddu jeans nalle...result selected :) en heLona....

ಅನಾಮಧೇಯ ಹೇಳಿದರು...

ಶ್ರೀ,
ನಿನ್ನ ಲೇಖನ ಓದಿ ನನ್ನನ್ನ ಇದರ ಒಟ್ಟಿಗೆ ಹೋಲಿಸಿ ನೋಡಿಕೊಂಡಿ.
ನೀನು ಹುಡುಗರ ಡ್ರೆಸ್ ಕೋಡ್ ಬಗ್ಗೆ ಹೇಳಿದೆ ಹುಡುಗೀರ ಡ್ರೆಸ್ ಕೋಡ್ ಬಗ್ಗೆ? ನನ್ನ ರೂಮ್ ಮೇಟ್ಸ್ ಎಲ್ಲಾ ಕಾಟನ್ ಸೆಲ್ವಾರ್ ಹಾಕಿಕೊಂಡು ಹೋಕ್ತ ಇಂಟರ್ ವ್ಯುವ್ ಇದ್ದಾಗ. ಯಾಕೆ ಸಿಂಥೆಟಿಕ್ ಆಗದಿಲ್ಯಾ?

ನೀನು ಎಲ್ಲಾ HR ಕಥೆನೂ ಹಿಂಗಿದ್ದೆ ಸರಿ ಇಲ್ದೆ ಇದ್ದಿದ್ದೆ ಬರದ್ದೆ. ಈ ತನಕ ನಿಂಗೆ ಖುಷಿ ಕೊಡೊ ತರಹ ಯಾವ ಕಥೆನೂ ನೆಡದ್ದೆ ಇಲ್ಯಾ?
ಅಥವಾ ನೀನು ಅವಗಳನ್ನು ಗುರುತಿಸುವಲ್ಲಿ ವಿಫಲನಾಗಿದ್ದಿಯಾ?
ಗುರುತಿಸಿದರೂ ಇಲ್ಲಿ ಬರೆಯಕೆ ಆಕ್ತಾ ಇಲ್ಯಾ?

Srikanth - ಶ್ರೀಕಾಂತ ಹೇಳಿದರು...

Shreenidhi, jeans pantina bagge nangu swalpa vaada maaDbeku anstide :-) Nija heLtini, naanu sandarshanakke yaavattu formal batte le hogirodu aadre jeans haakidre yenu tappu gottilla... ee vaada ella mundin sarti sikkdaaga maaDana...

Ene heLi,, neevu bariyo reethi nange tumba ishta...

ಅನಾಮಧೇಯ ಹೇಳಿದರು...

@ranju....sariyage keLddiri. nav mado kelsavanna preeti inda madbekri. tappannu etti hidiyodu sulabha...nanU obba s/w eng...talebisi halavu. adru besar padade kelsa madtini.

shree, nav hudugaru jeans nalli barabaradu anndri ok. haudu hudgiru synthetic dress nalle neat aagi bandre tappa?

ವಿ.ರಾ.ಹೆ. ಹೇಳಿದರು...

ಓದಲೂ ಚೆನ್ನಾಗಿದೆ , ಜೊತೆಗೆ ಉಪಯುಕ್ತ ಮಾಹಿತಿಯೂ ಇದೆ. ನೀನು ಬ್ಲಾಗ್ ಮೂಲಕ ಇಂಥ ವಿಷಯಗಳನ್ನ ಹೇಳಿರೋದು ಒಳ್ಳೆದಾಯ್ತು. ಅರ್ಥ ಮಾಡ್ಕಳೋರು ಮಾಡ್ಕೋತಾರೆ.

ಸದ್ಯ, ನೈಕ್ ಶೂ ಯಾಕೆ ಹಾಕ್ಕೋಬಾರ್ದು, ಅಡಿಡಾಸ್ ಹಾಕ್ಕ್ಕೋಬಹುದಾ ಅಂತ ಯಾರೂ ಕೇಳಲಿಲ್ಲ. ಅದೇ ಸಮಾಧಾನ :-)

Satish ಹೇಳಿದರು...

http://daari-deepa.blogspot.com/2006_07_01_archive.html

Satish ಹೇಳಿದರು...

ಬಹಳ ಚೆನ್ನಾಗಿದೆ, ಇನ್ನುಳಿದ ಅನುಭವಗಳನ್ನೆಲ್ಲ ಹೀಗೇ ಬರೀತಾ ಇರಿ...ನಿಮ್ಮ ಕಳಕಳಿ ಕೆಲವರಿಗಾದರೂ ಅರ್ಥವಾದರೆ ಅಷ್ಟೇ ಸಾಕು...
ಅಂತಹವರಿಗೆ ’ದಾರಿ-ದೀಪ’ ನೋಡಲು ಹೇಳಿ! :-)

ಅನಾಮಧೇಯ ಹೇಳಿದರು...

@Anonymous s/w.....
ಶ್ರೀನಿಧಿ ಕೆಲಸದ ಬಗ್ಗೆ ಶೃದ್ಧೆ ಇರದೆ ಹೀಗೆ ಬರೆಯುತ್ತಿದ್ದಾನೆ ಅಂಥ ನನಗೆ ಅನ್ನಿಸುತ್ತಿಲ್ಲಾ. ಬ್ಲಾಗ್ ಓದುಗರಿಗೆ ಸಹಾಯವಾಗಲಿ ಅಂಥ ಹೀಗೆ ಬರೆದಿರಬಹುದು. ನಿಮ್ಮ ಹೆಸರನ್ನು ಕಾಮೆಂಟ್ ನಲ್ಲಿ ಬರೆದಿದ್ದರೆ ಒಳ್ಳೆಯದಿತ್ತು.

@ವಿಕಾಸ್,
ನಾನು ಡ್ರೆಸ್ ಕೋಡಿನ ಬಗ್ಗೆ ಮುಗ್ಧತೆ ಇಂದ, ತಿಳಿದುಕೊಳ್ಳಲು ಪ್ರೇಶ್ನಿಸಿದ್ದೇನೆಯೆ ಹೊರತು ಮತ್ಯಾವ ವ್ಯಂಗ್ಯತೆಯೂ ಅದರಲ್ಲಿ ಇಲ್ಲಾ.ದಯವಿಟ್ಟು ತಮ್ಮ ಮಾತಿನ ಕಠೋರತೆಯನ್ನು ಕಡಿಮೆ ಮಾಡಿದ್ದರೆ ಒಳ್ಳೆಯದಿತ್ತು.

ಶ್ರೀನಿಧಿ.ಡಿ.ಎಸ್ ಹೇಳಿದರು...

@ ಅನಾನಿಮಸ್ and ಶ್ರೀಕಾಂತ್,

ಒಂದು ಸಾದಾ ಜೀನ್ಸು - ಮೇಲ್ಗಡೆ ಒಂದು ಫಾರ್ಮಲ್ ಶರ್ಟ್ ಇರಲಿ- ಆವಾಗ ಏನೂ ಅಭಾಸ ಅನ್ನಿಸುವುದಿಲ್ಲ. ಒಳ್ಳೇ ಹಾವಿನ ಚಿತ್ರ ಇರೋ ಜೀನ್ಸು, ಮೇಲ್ಗಡೆ ಪಟ್ಟಾಪಟ್ಟಿ ಹಳದಿ ಟಿ-ಷರಟು ಇದ್ರೆ?!!

@ರಂಜು ಮತ್ತು ಇನ್ನೊಬ್ಬ ಅನಾನಿಮಸ್!,

ನಾನು ಇಲ್ಲಿ ನನ್ನ HR ಅನುಭವಗಳನ್ನ - ನನ್ನ ಕಣ್ಣಿಗೆ ಕಂಡದ್ದನ್ನ ಬರೆಯಲು ಹೊರಟಿದ್ದೇನೆ."ನನ್ನ" ಅನುಭವಗಳು ಇವು! ಒಳ್ಳೇದಾಗ್ಲಿ - ಯಾರಿಗಾದ್ರೂ ಉಪಕಾರ ಆಗ್ಲಿ ಅಂತ ಬರ್ದಿದ್ದು ಅಂತ ಮೊದಲೇ ಹೇಳಿದ್ದೇನೆ.
ನನಗೆ ಸಿಂಥೆಟಿಕ್ ಡ್ರೆಸ್ ಗಳ ಹಣೇಬರಹದ ಅನುಭವ ಆಗಿಲ್ಲ. ಆ ತರಹ ನನ್ನ ಆಫೀಸಿಗಂತೂ ಯಾರೂ ಬಂದಿಲ್ಲ. ಕೆಟ್ಟ ಅನುಭವ ಹುಡುಗಿಯರ ವಿಷ್ಯದಲ್ಲೂ ಆಗಿದೆ. ಲೋ ಜೀನ್ಸು - ಶಾರ್ಟ್ ಶರಟು- ಮುಂದೆ ಹೇಳುವುದಿಲ್ಲ. ಅರ್ಥವಾಗಿರುತ್ತದೆ.

ರಂಜು,
ನನ್ನ ಹಳೆಯ ಬರಹಗಳನ್ನ ಓದು. ಖುಶಿ ಕೊಟ್ಟಿದ್ದನ್ನೂ ಬರದ್ದಿ. ಮತ್ತು ಈ ತರದ್ದನ್ ಬರಿಯದು- ನಾಲ್ಕು ಜನ ಒದಿ ತಿದ್ದಿಕೊಳ್ಳಲಿ ಅಂತ. "ಸರಿ ಇಲ್ದೆ ಇದ್ದಿದ್ದೆ ಬರದ್ದರ"- ಉದ್ದೇಶವೇ ಅದು.

ಶ್ರೀನಿಧಿ.ಡಿ.ಎಸ್ ಹೇಳಿದರು...

ಅನಾನಿಮಸ್ ಸಾಫ್ಟ್ ವೇರ್ ಇಂಜಿನಿಯರ್ ಸಾಹೇಬ್ರೇ,
ನನ್ನ ಕೆಲಸ ನಾನು ಪ್ರೀತಿಯಿಂದ ಮಾಡಲ್ಲ ಅಂತ ತಮಗ್ಯಾರು ಹೇಳಿದ್ರೋ?! ಪ್ರೀತಿ ಇಲ್ಲದೇ ಹೋದರೆ ಈ ಬರಹಗಳನ್ನ ಬರೆಯುತ್ತಿದ್ದೆನಾ?

ತಪ್ಪನ್ನು ಎತ್ತಿ ಹಿಡಿಯೋದು ಸುಲಭ - ಅಯ್ಯೋ ನಿಮಗೆ ಏನ್ ಹೇಳೋದು?- ಇಂತಾ ತಪ್ಪು ಮತ್ತೆ ಮಾಡೋದು ಬೇಡ ಅಂತಲೇ ಏನು ಮಾಡಿದರೆ ಒಳ್ಳೆಯದು ಅನ್ನೋದನ್ನ ಬರೆದಿದ್ದೇನೆ.

@ವಿಕಾಸ,
ಕೆಲ ಬಾರಿ ಬರಹಗಳನ್ನ ಬೇಕೆಂದೇ ನೆಗೆಟಿವ್ ಅಪ್ರೋಚ್ ಇಟ್ಟುಕೊಂಡು ಓದಿ ಬಿಡುತ್ತಾರೆ ಅನ್ನಿಸುತ್ತದೆ. ಏನ್ ಮಾಡೋದೋ?!

ಶ್ರೀನಿಧಿ.ಡಿ.ಎಸ್ ಹೇಳಿದರು...

ಸತೀಶ್,

ನಿಮ್ಮ "ದಾರಿ ದೀಪ"ವನ್ನ ಬಹಳ ಹಿಂದೆಯೇ ಓದಿದ್ದೆ. ಚೆನ್ನಾಗಿದೆ. ಮಾರ್ಗದರ್ಶೀ ಬರಹಗಳು. ಮುಂದುವರೆಸಿ.

Sushrutha Dodderi ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಅನಾಮಧೇಯ ಹೇಳಿದರು...

mr.shreenidhi, nanu heLiddu nimge asamadhana untu madtu anta kansatte. adre nange e lekhana odi ansiddanna heLidde. may be i need to change the angle of reading...good wishes

Vijaya ಹೇಳಿದರು...

That was a good read. Ellaroo tamtam moogina nerakke yochstaare - both interviewrs and interviewees. Nan hindina office nalli obba manager idda. avnu, candidate neat aagi, formals nalli bandre thakshna reject maadtidda. avna kaarana ... naanu ivanna kardiddu nam office nalli kelsa maadokke ... shoki maadokke alla anta annonu. Nam grahachara ... yenthentha manager irtaaro. Aadre, nodoke pleasant aagi, resume na neat aagi, time ge saryaagi interview ge hogbeku annodu nija. HR point of view thilsiddakke thanks :-), its useful ... ultimately we do have to please the HR!!!

ರಾಜೇಶ್ ನಾಯ್ಕ ಹೇಳಿದರು...

ಶ್ರೀ ನಿಧಿ,

ಚೆನ್ನಾಗಿ ಬರೆದಿದ್ದೀರಾ... ದಶಕದ ಹಿಂದೆ ಕೆಲಸದ ಹುಡುಕಾಟದಲ್ಲಿ ಹಲವಾರು 'ಇಂಟರ್ ವ್ಯೂ' ಗಳನ್ನು ಅಟೆಂಡ್ ಮಾಡಿದ್ದೆಲ್ಲಾ ಮತ್ತೆ ನೆನಪಾಯಿತು.

ಅನಾಮಧೇಯ ಹೇಳಿದರು...

Thank you so much...college nalli odtiro nannatavrige e tarahada salahe suchanegaLu tumba imp. hige barita iri.

ಸಿಂಧು sindhu ಹೇಳಿದರು...

ಶ್ರೀನಿಧಿ,
ಉಪಯುಕ್ತ ಬರಹ. ಅಲ್ಲದೆ ಲಲಿತ ಲಹರಿಯಲ್ಲಿ ಹರಿದ ಬರಹ ಓದಲು ಮುದ ಕೊಡುತ್ತದೆ.
ನೀನು ಹೇಳಿರುವುದು ನಿಜ. ಬರೆದ ಮೇಲೆ ಅದು ಓದುವವರದ್ದಾಗಿಬಿಡುತ್ತದೆ. ಅವರವರ ಭಾವಕ್ಕೆ ತಕ್ಕಂತೆ ಓದುತ್ತಾರೆ.
ನಿನ್ನ ಇತರ ಬರಹಗಳನ್ನು ಓದಿರುವವರು ನಿನ್ನ ಬರಹದ ಒಳ್ಳೆಯತನ ಮತ್ತು ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಳ್ಳುತ್ತಾರೆ.

ಶ್ರೀನಿಧಿ.ಡಿ.ಎಸ್ ಹೇಳಿದರು...

@ anonymus,
ಅಸಮಾಧಾನ ಆಗಿಯೇ ಆಗುತ್ತದೆ - ನಮ್ಮ ಬರಹದ ಆಶಯವನ್ನ ಅರ್ಥ ಮಾಡಿಕೊಳ್ಳದಿದ್ದಾಗ!

@ವಿಜಯಾ,
ultimately we do have to please the HR!!! - ಹೆ ಹೆ!:)ನೋಡಿ , ನಿಮ್ಗೆ ವಿಶ್ಯ ಗೊತಾಯ್ತು:) ನಿಮ್ಮ ಆ ಮ್ಯಾನೇಜರು ಭಯಂಕರನೇ ಸರಿ!

ರಾಜೇಶ್ ನಾಯ್ಕ್,

ನನ್ನ ಬರಹ ನಿಮಗೆ ಖುಷಿ ಕೊಟ್ಟಿದ್ದು ನನಗೂ ಸಂತಸ. ಬಂದು ಹೋಗುತ್ತಿರಿ.

ಶ್ರೀನಿಧಿ.ಡಿ.ಎಸ್ ಹೇಳಿದರು...

@ dmh,

ನಿಮ್ಮಂತಹವರಿಗೆ ಉಪಯೋಗ ಆಗಲೆಂದೇ ಬರೆದೆ ಇದನ್ನ. ಎಷ್ಟೋ ಜನ talent ಇರೋ ಅಂತವರು ಬಂದು ತಮ್ಮ silly mistakes ಗಳಿಂದ ವಾಪಾಸು ಹೋಗುವುದು ನೋಡಿದಾಗ ಬೇಸರವಾಗುತ್ತದೆ.

@ಸಿಂಧು,
ಬೆನ್ನು ತಟ್ಟಿದ್ದಕ್ಕೆ ಧನ್ಯ! ಕೆ.ವಿ.ತಿರುಮಲೇಶ್ ತಮ್ಮ ಬರಹವೊಂದರಲ್ಲಿ ಹೇಳಿದ್ದರು. ಬರೆದ ಮೇಲೆ ಆ ಬರಹ ನಿಮ್ಮದಲ್ಲ, ಅದು ಸತ್ತು ಹೋಗಿದೆ. ಅದರ ಚಿಂತೆ ಬಿಡಿ ಅಂತ! ಆ ಪಾಲಿಸಿ ರೂಢಿ ಮಾಡಿಕೊಳ್ಳಬೇಕು ಇನ್ನು!

Jagali bhaagavata ಹೇಳಿದರು...

ಶ್ರೀನಿಧಿ,
ಉಪಯುಕ್ತ ಲೇಖನ. ಸುಮ್ಮನೆ ಹಾಗೆ ಮಾಡ್ಬೇಕು, ಹೀಗೆ ಮಾಡ್ಬಾರ್ದು ಅಂತ ಬರೆಯೋದಕ್ಕಿಂತ ಈ ಥರ ಸೋದಾಹರಣವಾಗಿ, ಲಘುಧಾಟಿಯಲ್ಲಿ ಬರೆದ್ರೆ ಚೆನ್ನಾಗಿರತ್ತೆ. ತಾಜಾತನದ ಶೈಲಿ ನಿಮ್ಮದು.

ನಿಮ್ಮ ಬ್ಲಾಗ್-ನಲ್ಲಿ comments ಓದೋದು ಖುಶಿ ಕೊಡತ್ತೆ. ರಂಜನ ಯಾಕೊ ತಪ್ಪಾಗಿ ಸಿಟ್ಟಾಗಿದಾರೆ ಅನ್ಸತ್ತೆ.

Sandeepa ಹೇಳಿದರು...

ಅಂಶ ೨ ೩ ೪ ಮತ್ತು ೫, ಉಪಯುಕ್ತ ಮಾಹಿತಿಗಳನ್ನು ಒಳಗೊಂಡಿವೆ.

point 1:
ವಿಷಯ ಸರಿ ಇದೆ. ಎಂದರೆ HR ಗಳು ನಿರೀಕ್ಷಿಸುವುದು ನಿಜವೇ. ಆದರೆ ಅಭ್ಯರ್ಥಿಯ ಬಾಹ್ಯ ರೂಪ , ಅಲಂಕಾರ ಇತ್ಯಾದಿಗಳ ಬಗ್ಗೆ ಅವರ ನಿರೀಕ್ಷೆಗಳಲ್ಲಿ ಹೆಚ್ಚಿನವು (ಅಥವಾ ಕೆಲವೊಮ್ಮೆ ಎಲ್ಲವೂ) ಅರ್ಥಹೀನ.

ಇವರಲ್ಲಿ ಹಲವರಿಗೆ ತಾವು ಆಯ್ಕೆ ಮಾಡುವವರು ಮುಂದೆ ಸಂಸ್ಥೆಯಲ್ಲಿ ಯಾವ ಜವಾಬ್ದಾರಿಗಳನ್ನು ವಹಿಸಿಕೊಳ್ಳುತ್ತಾರೆ, ಅವರ ಕೆಲಸಕ್ಕೆ ಬೇಕಾದ ಅರ್ಹತೆಗಳೇನು ಮುಂತಾಗಿ ಹೆಚ್ಚು ತಿಳಿದಿರುವುದಿಲ್ಲ. ಎಲ್ಲಾ ಕಂಪನಿಯ ಎಲ್ಲಾ HR ಗಳು ಹೀಗೆಂದು ಹೇಳುತ್ತಿಲ್ಲ. ಸಮಸ್ಯೆಯ ಮೂಲವಿರುವುದೇ ಇಲ್ಲಿ.

ಕೆಲಸಕ್ಕೆ ಆಯ್ಕೆಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡವರು ಕೆಲಸದ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರಬೇಕು ಮತ್ತು ಸ್ವತಃ ಕೆಲಸದಲ್ಲಿ ಅನುಭವಹೊಂದಿದವರಾಗಬೇಕು.

ಅದೆಲ್ಲಾ technical round ನಲ್ಲೇ ಆಗಿರುತ್ತದೆ ಎನ್ನುವವರಿದ್ದಾರೆ.

ಅವರಿಗೆ ಪ್ರತ್ಯೇಕವಾಗಿ ಪ್ರತಿಕ್ರಿಯಿಸುತ್ತೇನೆ.

ಏನೇ ಆಗಲಿ, ಬರೆದಿದ್ದು ಒಳ್ಳೆಯದಾಯಿತು. ಸದ್ಯಕ್ಕೇ ಇಷ್ಟನ್ನೇ ನನ್ನ ಬ್ಲಾಗಿನಲ್ಲಿ ಹಾಕುವವನಿದ್ದೇನೆ.

keep it up shreenidhi.

Harisha - ಹರೀಶ ಹೇಳಿದರು...

Interview ಗೆ ಚಿತ್ರ-ವಿಚಿತ್ರ dress ಹಾಕಿಕೊಂಡು ಹೋಗಬಾರದು, ಸರಿ.

ಆದರೆ, dress ಆ ಅಭ್ಯರ್ಥಿಯ ಮಾನದಂಡ ಆಗುವುದು ಸರಿಯೇ?

ಉದಾಹರಣೆ