ಮಂಗಳವಾರ, ಜನವರಿ 30, 2007

ಸಾವು

ನೆಲೆಯ
ಬಲೆಯನು
ಕಳಚಿಯೋ ಉಳುಚಿಯೋ
ಹೊರಬಂದು,
ಪರಿಧಿಯನೊಮ್ಮೆ ದಾಟಿ,
ಭಯಗೊಂಡು
ಮತ್ತೆ
ಒಳಬಂದು
ಇದ್ದುದರಲ್ಲೆ ಹೊಸತನು
ಹುಡುಕಿ
ಬಿತ್ತಿ,ಬೆಳೆಸಿ,
ಉದ್ಧಾರಕೆ
ಉಸಿರಾಗುವ ಮುನ್ನವೇ,
ಮೂರು
ಎರಡು
ಒಂದು....

5 ಕಾಮೆಂಟ್‌ಗಳು:

Sandeepa ಹೇಳಿದರು...

ಚಂದಿದ್ದು :)

ಅಂದಹಾಗೆ ಮೇಲಿನ ಕಾಮೆಂಟ್ ತರದ ಸ್ಪಾಮ್ ತಡಿಯಕೆ
ನೀನು word verification ಎನೇಬಲ್ ಮಾಡವು.

Anveshi ಹೇಳಿದರು...

ಹೌದಲ್ಲಾ... ಕಷ್ಟಪಡೋದೇ ಸುಖಕ್ಕಾಗಿ... ಸುಖ ಅನುಭವಿಸುವ ಕಾಲ ಬಂದಾಗ... ಕಾಲನೇ ಬರುತ್ತಾನೆ.. ಎಂಥ ವಿಪರ್ಯಾಸ.
ಸಾವು ಅನ್ನೋದು ಪದಗಳ ತುಂತುರು ಹನಿಯಲ್ಲಿ ಚೆನ್ನಾಗಿ ಉದುರಿದೆ. :)

VENU VINOD ಹೇಳಿದರು...

ಮೂರು..ಎರಡು...ಒಂದು...
ಏನಿದು? ಓಹ್ ಸಾವಿನ ಕಡೆಗೆ ನಾವೆಲ್ಲ ಹೆಜ್ಜೆ ಇಡ್ತಾ ಇರೋದೆ? ನೆನೆಸಿಕೊಂಡ್ರೇ ಭಯ ಆಗುತ್ತೆ!
ಕಲ್ಪನೆ ಹಿಡಿಸ್ತು

ಶ್ರೀನಿಧಿ.ಡಿ.ಎಸ್ ಹೇಳಿದರು...

ಅಲ್ಪಜ್ಞ, - ಸಲಹೆ ಸ್ವೀಕರಿಸಿ, ಮಾರ್ಪಾಡು ಮಾಡಲಾಗಿದೆ.

ಅಸತ್ಯಾನ್ವೇಷಿಗಳೇ,
ಧನ್ಯವಾದಗಳು..

ವೇಣು,
ಒಂತರಾ ಹಾಗೇ!, ಎಲ್ಲರೂ ಕೂಡಾ ಈ countdown ನಲ್ಲಿ ಪಾಲುಗೊಳ್ಳೋರೇ ಅಲ್ವೇ?

Annapoorna Daithota ಹೇಳಿದರು...

ಚೆನ್ನಾಗಿದೆ