ಮಂಗಳವಾರ, ಮೇ 26, 2009

ಮಳೆಗೆಜ್ಜೆ ಹುಡುಗಿ..

ಮಳೆಗೆಜ್ಜೆ ಹುಡುಗಿ ನಿನ್ನ ಕಣ್ಣಿನಂಚಿಗಿತ್ತ ಮುತ್ತು
ಕಾಲನುರುಳ ಹೇಗೋ ತಪ್ಪಿ, ಕಾವ್ಯವಾಗಿ ಉಳಿದಿದೆ
ಬಿಸಿಲಮಚ್ಚಿನಲ್ಲಿ ನಿಂತು, ಇರುಳತಾರೆ ತೋರಿಸುತ್ತ
ಹಾಗೇ ಹೊಂಚಿ ಕೊಟ್ಟ ಮುತ್ತು, ಚುಕ್ಕಿಯಾಗೇ ಹೊಳೆದಿದೆ

ಅಂದು ಏನೋ ತಪ್ಪಿನಿಂದ,ನಿನ್ನ ಮುನಿಸು ಮೇರೆ ಮೀರಿ
ಕೈಯ ಹಿಡಿದು ಕ್ಷಮೆಯ ಕೋರಿ, ಕರೆದೆ ಮನೆಯ ನೆತ್ತಿಗೆ
ಸಿಟ್ಟದಿನ್ನು ಮೊಗದಲಿರಲು, ಮೆಟ್ಟಿಲೇರಿ ನನಗು ಮೊದಲು
ನೋಡುತಿದ್ದೆ ಕ್ಷಿತಿಜದಾಚೆ ನಾನು ಬರುವ ಹೊತ್ತಿಗೆ

ನಲ್ಲೆ ಮುಖವು ಕಳೆಗುಂದಿದೆ,ಚಂದ್ರ ಬೇರೆ ಬಾನೊಳಿಲ್ಲ
ಕತ್ತಲಿಹುದು ಎಲ್ಲ ಕಡೆಗು,ನನ್ನ ದಿಗಿಲು ಹೆಚ್ಚಲು
ಮೆಲ್ಲ ಬಂದು ನಿನ್ನ ಬಳಿಗೆ,ಭುಜದ ಮೇಲೆ ಕತ್ತನಿರಿಸಿ
ಸೊಂಟ ಬಳಸಿ ನಿಂತುಕೊಂಡೆ,ದಿವ್ಯಮೌನ ಸುತ್ತಲೂ.

ಬಾನ ತುಂಬ ಕೋಟಿಚುಕ್ಕಿ,ಮೆಲ್ಲ ನಿನ್ನ ಕೈಯನೆತ್ತಿ
ಕಾಣದ ರಂಗೋಲಿ ಬಿಡಿಸಿ,ಮತ್ತೂ ಸನಿಹಕೆಳೆದೆನು
ಕಣ್ಣಹನಿಯು ಕೈಗೆ ತಾಕೆ,ಬೊಗಸೆ ತುಂಬ ಮೊಗವ ತುಂಬಿ
ಪುಟ್ಟಮುತ್ತ ನಯನಕೊತ್ತಿ ಅಲ್ಲೇ ಕರಗಿ ಹೋದೆನು

ಹೀಗಿದೊಂದು ಮಧುರ ಸ್ಪರ್ಶ ಸಮಯದೊಳಗೆ ಕಳೆದರೂ
ಮತ್ತೆ ತಿರುಗಿ ಬರುವುದುಂಟು ವರ್ತಮಾನದೊಳಗಡೆ
ಅಂಥದಿವಸ ಏಕೋ ನನ್ನ ಬಿಸಿಲುಮಚ್ಚು ಕರೆದರೆ

ದೂರತಾರೆ ಮಿನುಗು ಕಂಡು ಎದೆಯ ತಾನ ನಿಲುಗಡೆ.

11 ಕಾಮೆಂಟ್‌ಗಳು:

Parisarapremi ಹೇಳಿದರು...

oLLE huDugi.. enu maaDOdu.. kOpa maadkoLOdu huttu guNa. edeya taana nintroo ashte, kootroo ashte.

ಸುಧನ್ವಾ ದೇರಾಜೆ. ಹೇಳಿದರು...

u can compete with kaykini !

sunaath ಹೇಳಿದರು...

ಶ್ರೀನಿಧಿ,
೫೫ ದಿನಗಳ gap ನಂತರ ಬರೆದಿದ್ದೀರಿ. ಆದರೆ ಕವನ ಎಷ್ಟು ಚೆಲುವಾಗಿದೆ ಎಂದರೆ, ನಿಮ್ಮನ್ನು ಕ್ಷಮಿಸಬಹುದು!
ಇಂತಹ ಒಳ್ಳೆಯ ಕವನಗಳನ್ನು ಕೊಡುತ್ತಾ ಇರಿ.

Srikanth - ಶ್ರೀಕಾಂತ ಹೇಳಿದರು...

adbhuta!

Annapoorna Daithota ಹೇಳಿದರು...

Chennagide,
regular kavanagaligintha swalpa different aagide :)

Ittigecement ಹೇಳಿದರು...

ಶ್ರೀನಿಧಿ....

ಬಹಳ ಇಷ್ಟವಾಯಿತು...

ಕವನದ ಭಾವ
ಶಬ್ಧಗಳ ಪ್ರಾಸ...
ಮತ್ತೆ ಮತ್ತೆ ಮೆಲುಕು ಹಾಕುವಂತೆ ಮಾಡುತ್ತದೆ...

ಅಭಿನಂದನೆಗಳು...

ತೇಜಸ್ವಿನಿ ಹೆಗಡೆ ಹೇಳಿದರು...

ಶ್ರೀನಿಧಿ,

ಕೆಲವು ತಿಂಗಳ ಹಿಂದೆ Gmail Status messageನಲ್ಲಿ ಈ ಕವನದ ಮೊದಲೆರಡು ಸಾಲುಗಳನ್ನು ನೀನು ಹಾಕಿಕೊಂಡಿದ್ದೆ. ಅ ಸಾಲುಗಳನ್ನೋದಿ ನಾನು ತುಂಬಾ ಇಷ್ಟಪಟ್ಟು ಅದಕ್ಕೆ ಪ್ರತಿಯಾಗಿ ಒಂದು ಕವನವನ್ನೂ ರಚಿಸಿ ನನ್ನ "ಮಾನಸದಲ್ಲಿ" ಹಾಕಿದ್ದೆ. ನೆನಪಿದೆ ತಾನೆ..? ಅದೇ.."ಮಳೆಮಾಲೆ ಹುಡುಗಿ ನಿನ್ನ ನೆನಪಲೇ ಈ ಮನ ತುಂತುರು ಹನಿಯಾಗಿಗೆ..." :)

ತುಂಬಾ ಸುಂದರವಾಗಿದೆ "ಮಳೆಗೆಜ್ಜೆ ಹುಡುಗಿ.." ಕವನ.

ಅಂದಹಾಗೆ ಈ ಮಳೆಗೆಜ್ಜೆ ಹುಡುಗಿಯ ಹೆಸರೂ ಕವನದೊಳಗಿರುವುದು ಒಂದು ವಿಶೇಷವೇ ಸರಿ.:-P :)

ಶ್ರೀನಿಧಿ.ಡಿ.ಎಸ್ ಹೇಳಿದರು...

ಅರುಣ, ನೀನು ಈ ಜನ್ಮದಲ್ಲಿ ಉದ್ಧಾರ ಆಗೋದು ಸಾಧ್ಯವೇ ಇಲ್ಲ ಕಣೋ!

ಸುಧನ್ವ,:) - ಈ ಕಮೆಂಟಿನ ಕ್ಲಾರಿಫಿಕೇಷನನ್ನು ಮುಖತಹ ತಿಳಿದುಕೊಳ್ಳಲಾಗಿದೆ.

ಶ್ರೀಕಾಂತ- ಧನ್ಯ!

ಅನಕ್ಕಾ- ಥ್ಯಾಂಕ್ಸೂ, ಏನು ಪತ್ತೆನೇ ಇಲ್ಲ?

ಪ್ರಕಾಶ್- ನಮಸ್ತೇ, ಕೃತಜ್ಞ.

ಅತ್ಗೇ, ಎಲ್ಲ ಓಕೆ, ಕೊನೆ ಸಾಲು ಯಾಕೆ?:) ಡಿಸ್ಕ್ಲೈಮರ್- ಅವಳ ಹೆಸರು ಕವನದೊಳಗಿಲ್ಲ:)

ಸಿಂಧು sindhu ಹೇಳಿದರು...

ನಿಧಿ,

ಸಿಕ್ಕಾಪಟ್ಟೆ ಇಷ್ಟ ಆತಲ್ಲ ಮಾರಾಯ..
ದಿಗಿಲು ಹೆಚ್ಚಾದಾಗೆಲ್ಲೆ ಇಷ್ಟೊಳ್ಳೆ ಪ್ಲಾನ್ ಮಾಡಿದರೆ ಹೇಗೆ.. :)
ದೂರತಾರೆ ಮಿನುಗು ಆಗಾಗ ಮಿಂಚಲಿ.. ಎದೆಯ ತಾನ ನಿಲುಗಡೆಯಾದ ಕ್ಷಣದಲ್ಲಿ ಹೊಸಹಾಡು ಬರಲು.
ಅವಳು ಎಲ್ಲಿ ನೋಡಲು ಸಿಗುತ್ತಾಳೆ? ;) ಹುಬ್ಬಳ್ಳಿಯಿಂದ ಅವಳೂರಿಗೆ ಹತ್ತಿರದ ದಾರಿಯಿದೆಯೇ?
ಪದ ಸಂಪತ್ತಿ ಮತ್ತು ವ್ಯುತ್ಪತ್ತಿ ಎಲ್ಲವೂ "ಹಳೆಯ" ಹಿರಿಯ ಕವಿಗಳ ನೆನಪನ್ನು ಗಾಢವಾಗಿ ತರುತ್ತಿದೆ.ಕನ್ನಡಪಂಡಿತರಿಗೆ ನಮಸ್ಕಾರಾ ಅಂದಿ..

ಪ್ರೀತಿಯಿಂದ
ಸಿಂಧು

PRANJALE ಹೇಳಿದರು...

really super shrinidhi anna i liked it very much...

ಅಹರ್ನಿಶಿ ಹೇಳಿದರು...

ಬಹಳ ಚೆನ್ನಾಗಿದೆ.