ಬುಧವಾರ, ಸೆಪ್ಟೆಂಬರ್ 01, 2010

ಅಪ್ಪ

ಸೆಕೆಂಡ್ ಪೀಯೂಸಿ, ಕನ್ನಡ ಕ್ಲಾಸು. ಅವತ್ತು ನೆಕ್ಸ್ಟ್ ಪಿರಿಯಡ್ಡು ಪೊಲಿಟಿಕಲ್ ಸೈನ್ಸು- ನಂದು ನೋಟ್ಸೇನೋ ಬರೆದಾಗಿರಲಿಲ್ಲ ಅಂತ ಏನೋ ಗೀಚುತ್ತಿದ್ದೆ. ಸರ್ರು ನೋಡಿದರು- ಏನದು ಅಂತ ದನಿ ಎತ್ತರಿಸಿಯೇ ಕೇಳಿದರು, ನಾನು ಸರ್, ಪೊ ಪೊ ಪೊಲಿಟಿಕಲ್ ಸೈನ್ಸ್ ನೋಟ್ಸು ಸಾರ್ ಅಂದೆ.. ಅದನ್ನ ಯಾಕೋ ನನ್ನ ಕ್ಲಾಸಲ್ಲಿ ಬರಿತಿದೀಯಾ
ಸಾರ್, ಮನೇಲಿ ತುಂಬ ಕೆಲ್ಸ ಸಾರ್ ಅಪ್ಪ ಬರಿಯೋಕೆ ಬಿಡ್ಲಿಲ್ಲ

ಕ್ಲಾಸು ಇಡೀ ಜೋರಾಗಿ ನಕ್ಕಿತು. ನಾನೂ ನಕ್ಕೆ- ಸರ್ರೂ ನಕ್ಕರು.

ಹೌದೌದು, ಮನೇಲಿ ಭಾರೀ ಕೆಲ್ಸ ಮಾಡ್ತೀಯಾ ನೋಡು ನೀನು ಅಂತಂದು ನೋಟ್ಸು ಎತ್ತಿಟ್ಟಿಕೊಂಡು ನಗುತ್ತಲೇ ಪಾಠ ಮುಂದುವರಿಸಿದರು.

++++

ನಂಗೆ ನನ್ನ ಅಪ್ಪನೇ ಪಿಯುಸಿಯಲ್ಲಿ ಕನ್ನಡ ಅಧ್ಯಾಪಕ .ರಾಮಾಯಣ ದರ್ಶನಂ, ಯಯಾತಿ, ದೇವರ ಹೆಣ, ಶವದ ಮನೆ ಯಂತಹ ಪಾಠಗಳನ್ನ, ಕುಮಾರ ವ್ಯಾಸ , ಲಕ್ಷ್ಮೀಶ, ರಾಘವಾಂಕ ರ ಷಟ್ಪದಿಗಳನ್ನು ತರಗತಿಯಲ್ಲಿ ಕಥೆ- ಉಪಕಥೆಗಳ ಸಮೇತರಾಗಿ ವಿವರಿಸುವಾಗ ಅದನ್ನ ಎರಡೂ ಕಿವಿದೆರೆದು ಕೇಳುವ ಭಾಗ್ಯ ನನ್ನದಾಗಿತ್ತು. ಅಪ್ಪ ಭೀಮನನ್ನು ವರ್ಣಿಸುವಾಗ ಭೀಮನಾಗಿಯೂ, ಕೃಷ್ಣನ ಮಾತು ಬಂದರೆ ಅದೇ ಶೃತಿಯಲ್ಲಿಯೂ ಸುಲಲಿತವಾಗಿ ಪಾಠ ಮಾಡ್ತಿದ್ದ. ಯಕ್ಷಗಾನ ದ ಹಿನ್ನೆಲೆ ಅಪ್ಪನಿಗೆ ಸಹಾಯ ಮಾಡಿತ್ತು. ಅಪ್ಪನ ಕ್ಲಾಸಲ್ಲಿ ಉಳಿದ ಕ್ಲಾಸಲ್ಲಿ ಆಗುವ ಹಾಗೆ ಗಲಾಟೆಯೂ ಆಗ್ತಿರ್ಲಿಲ್ಲ. ಯಾಕಂದ್ರೆ ಅಪ್ಪ ಮಾತಿಗೊಂದು ಕಥೆ ಹೇ ಗಮ್ಮತ್ತು ಮಾಡ್ತಿದ್ದರಾದ್ದರಿಂದ, ಯಾವ ಮಕ್ಕಳಿಗೂ ಅವರನ್ನ ಎದುರು ಹಾಕಿಕೊಳ್ಳುವ ಇಚ್ಛೆ ಇರಲೂ ಇಲ್ಲ. ಅಪ್ಪ ಯಾರಿಗಾದರೂ ದನಿ ಎತ್ತಿ ಬೈದಿದ್ದು ಕೂಡ ನಾನು ನೋಡಲಿಲ್ಲ.

ನೀನು ಓದುತ್ತಿದ್ದಾಗಿನ ಎರಡು ವರ್ಷ ನಾನು ಅತ್ಯಂತ ಕಷ್ಟದ ಕನ್ನಡ ಪ್ರಶ್ನೆ ಪತ್ರಿಕೆಗಳನ್ನು ಸಿದ್ದ ಪಡಿಸ್ತಾ ಇದ್ದೆ ಅಂತ ಅಪ್ಪ ಆಮೇಲೆ ನಂಗೆ ಹೇಳಿದ್ರು. ಯಾಕೆ ಅಂದ್ರೆ- ನಾನು ಹೈಸ್ಕೂಲಲ್ಲಿ ಇದ್ದಾಗಿನಿಂದ ಅಪ್ಪ ಬೇರೆ ಮಕ್ಕಳ ಪತ್ರಿಕೆ ತಿದ್ದುವುದನ್ನು ನೋಡೀ ನೋಡೀ ನಂಗೆ ಪ್ರಶ್ನೆ- ಉತ್ತರ ಎರಡೂ ಬಾಯಿಪಾಠ ಆಗಿ ಹೋಗಿದ್ದವು.

ನಾನು ಓದುತ್ತಿದ್ದ ಎರಡು ವರ್ಷವೂ ಅಪ್ಪ ನಂಗೆ ಒಂದೇ ಒಂದು ಕಿರು ಪರೀಕ್ಷೆಯ ಪ್ರಶ್ನೆ ಕೂಡ ಹೀಗಿರಬಹುದು ಅಂತ ಹೇಳಲಿಲ್ಲ. ನನ್ನ ಉತ್ತರ ಪತ್ರಿಕೆಯನ್ನು ನನ್ನೆದುರು ಒಂದೇ ಸಲ ಕೂಡ ತಿದ್ದಲಿಲ್ಲ. ಹಾಗಂತ ನಾನೇನು ತಪ್ಪು ಮಾಡಿದೆ ಅಂತ ಆಮೇಲೆ ಹೇಳುವುದನ್ನೂ ಮರೆಯಲಿಲ್ಲ. ನಾನು ತರಗತಿಯಲ್ಲಿ ಒಂದೇ ಸಲ ಕೂಡ ಕನ್ನಡದಲ್ಲಿ ಅತೀ ಹೆಚ್ಚು ಅಂಕ ಗಳಿಸಲಿಲ್ಲ!

++++

ಅಪ್ಪ, ತನ್ನ ೩೦ ವರ್ಷಗಳ ಸುದೀರ್ಘ ಸೇವೆಯಿಂದ ನಿನ್ನೆ ನಿವೃತ್ತನಾದ. ನಾನೂ ಹೆಂಡತಿ ಸಮೇತನಾಗಿ , ಅಮ್ಮನ ಜೊತೆ ನಾನು ಓದಿದ ಶಾಲೆಗೆ ಮತ್ತೆ ಹೋದೆ. ಅಪ್ಪನ ಬಗ್ಗೆ ಹಲವರು ಮಾತಾಡಿದ್ರು, ಅಪ್ಪನೂ ತನ್ನ ಮೂವತ್ತು ವರ್ಷಗಳ ಅನುಭವದ ಬಗ್ಗೆ ಮಾತಾಡಿದ. ಭಾವುಕ ಅಪ್ಪಂಗೆ ಎಲ್ಲಾದ್ರೂ ಅಳು ಬರತ್ತೇನೋ ಅಂತ ಸಣ್ಣಗೆ ಹೆದ್ರಿಕೆ ಇತ್ತು- ಆದ್ರೆ ಹಾಗೇನೂ ಆಗಲಿಲ್ಲ.
ಮಕ್ಕಳು- ಅಪ್ಪನ ಹಿತೈಷಿಗಳೆಲ್ಲ ಬಂದು ಹಾರದ ಮೇಲೆ ಹಾರ ಹಾಕುವಾಗ ಅಪ್ಪ ಕಳೆದುಹೋದವನಚಿತೆ ಕಂಡ.

ಅಪ್ಪನಿಗೆ ಹಾರೈಸಿದ ಶಾಲೆಯ ಸಂಚಾಲಕರು,

May you always have work for your hands to do.
May your pockets hold always a coin or two.
May the sun shine bright on your windowpane.
May the rainbow be certain to follow each rain.
May the hand of a friend always be near you.
And may God fill your heart with gladness to cheer you.

ಅನ್ನೋ ಐರಿಶ್ ಕವನದ ಮೂಲಕ ಅಪ್ಪನ್ನ ಹಾರೈಸುವಾಗ, ನಂಗೆ ಅಪ್ಪ ಕಾಣಿಸಲಿಲ್ಲ.

+++
ಊರಲ್ಲಿ ಜೋರು ಮಳೆ, ನಾಲ್ಕು ದಿನ ಮಳೆ ನೋಡುತ್ತ ಕಳೆದು, ಅಪ್ಪನಿಗೆ ಶುಭ ಹಾರೈಸಿ ಬಂದದ್ದಾಯಿತು.


ಅಂದ ಹಾಗೆ, ಬ್ಲಾಗಿಗೆ ಇವತ್ತು ನಾಲ್ಕು ವರ್ಷ ತುಂಬಿತು. ನನ್ನನ್ನು ಪ್ರೋತ್ಸಾಹಿಸಿದ ಎಲ್ಲರಿಗು ಧನ್ಯವಾದಗಳು.

26 ಕಾಮೆಂಟ್‌ಗಳು:

Harsha Bhat ಹೇಳಿದರು...

We will miss the latest and very very interesting "Paper Valuation" stories from your father for sure ....

ಪ್ರಗತಿ ಹೆಗಡೆ ಹೇಳಿದರು...

ನಿಮ್ಮ ತಂದೆಯವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಆಶಿಸುತ್ತೇನೆ.. ಬ್ಲಾಗ್ ನ ೪ ನೆ ವರ್ಷಕ್ಕೆ ಅಭಿನಂದನೆಗಳು..

Non Sense ಹೇಳಿದರು...

1st incident is superb. Like Harsha said, we will miss them for sure. Anda hage retirement ge enanta wish madbeku? like: cograts, all the best, good luck? Blog anniversary ge congrats.

ತೇಜಸ್ವಿನಿ ಹೆಗಡೆ ಹೇಳಿದರು...

ಶ್ರೀನಿಧಿ,

ಸರ್‌ಗೆ ನನ್ನ ಹಾಗೂ ನನ್ನವರ ಕಡೆಯಿಂದಲೂ ಹಾರ್ದಿಕ ಅಭಿನಂದನೆಗಳು. ಅವರ ಈ ವರೆಗಿನ ಯಶಸ್ವಿ ಜೀವನ ಮುಂದೆಯೂ ಮುಂದುವರಿಯಲೆಂದು ಮನಃಪೂರ್ವಕವಾಗಿ ಹಾರೈಸುವೆ.

ತುಂತುರು ಹನಿಗೂ ಹಾರ್ದಿಕ ಅಭಿನಂದನೆಗಳು.

ಮನಸಿನ ಮಾತುಗಳು ಹೇಳಿದರು...

ಏನ್ರಿ ಶ್ರೀನಿಧಿ, ನಿಮ್ಮ ಅಪ್ಪನೇ ಕನ್ನಡ ಅದ್ಯಾಪಕರಾಗಿದ್ರು ಒಂದು ಸಾರಿನಾದ್ರು ಕನ್ನಡಕ್ಕೆ highest marks ತೊಗೊಬಾರ್ದೇನ್ರಿ?? ... :D
ನಿಮ್ಮ ತಂದೆಯವರಿಗೆ ದೇವರು ಒಳ್ಳೆ ಅರೋಗ್ಯ ಕೊಟ್ಟು ,ನಿವ್ರತ್ತಿಯ ಜೀವನವನ್ನು ಸುಖಮಯವಾಗಿಸಲಿ.. :)
ಹಾಗೆ ನಿಮಗೆ congratsugalu !!! ... All the best for 5th year ... :)

V.R.BHAT ಹೇಳಿದರು...

Anubhavadalli amrutatva adagide ! Thanks

Sushrutha Dodderi ಹೇಳಿದರು...

ಬರ್ದಿದ್ದು ಮೃದು-ಮಧುರವಾಗಿದ್ದು. ಭಾರ ಆಗೋದ್ರೊಳಗೆ ಹಗುರ ಆಗ್ತು, ಕಹಿ ಆಗೋದ್ರೊಳಗೆ ಸಿಹಿ ಆಗ್ತು. :-) ಅಪ್ಪಂಗೆ ಒಳ್ಳೇದಾಗ್ಲಿ.

ನಿಂಗೂ ಒಳ್ಳೇದೇ ಆಗ್ಲಿ. ಲವ್ಯೂ (ಇನ್ನೂ!). :-)

Vijaya ಹೇಳಿದರು...

:-) nan wishes-u ...

ಮಿಥುನ ಕೊಡೆತ್ತೂರು ಹೇಳಿದರು...

Atmiya baraha. chennagide.
shubhavagali appangu maganigoo.

ಸಿಂಧು sindhu ಹೇಳಿದರು...

ಪ್ರೀತಿಯ ನಿಧಿ,

ಪುಟ್ಟ ಘಟನೆ, ಕೆಲವೇ ಸಾಲು ಕೊಟ್ಟು ನಮನಮಗೇ ನಿನ್ನ ಅಪ್ಪನನ್ನ, ನಿಮ್ಮಿಬ್ಬರ ಅನುಬಂಧವನ್ನ ನಮ್ಮ ಭಾವಜಗತ್ತಿನಲ್ಲಿ ವಿಶಾಲವಾಗಿ ವಿಸ್ತರಿಸಲಿಕ್ಕೆ ಕೊಟ್ಟಿದ್ದೀ.
it's beautiful.

ಅಪ್ಪಯ್ಯನಿಗೆ ನನ್ನ ಶುಭಾಶಯಗಳು. ಅವರು ಇನ್ನು ಕನ್ನಡಕ್ಕಾಗಿ ಮುಂದೆ ಬರಲಿರುವ ಮೊಮ್ಮಕ್ಕಳ ಜನರೇಷನ್ ಗಾಗಿ ಏನೆಲ್ಲ ಮಾಡಬಹುದು ಅಂತ ಊಹಿಸಿಕೊಂಡು ಪುಳಕವಾಗ್ತಿದೆ.

ಇನ್ನೊಂದಿನ ಅಪ್ಪಯ್ಯನ ಬಾಳಗೆಳತಿಯ ಬಗೆಗೊಂದು ಇಂತಹದೇ ಕೆಲಿಡೋಸ್ಕೋಪಿಕೆ ಪೋಸ್ಟ್ ಹಾಕು.

ಪ್ರೀತಿಯಿಂದ
ಸಿಂಧು

ವನಿತಾ / Vanitha ಹೇಳಿದರು...

Beautiful :-)
ಅಪ್ಪ ಮತ್ತು ಮಗನಿಗೆ ಶುಭಾಶಯಗಳು..:-)

ಜಲನಯನ ಹೇಳಿದರು...

ಶ್ರೀನಿಧಿ...ನಿಜಕ್ಕೂ ತಂದೆಯವರ ನಿರೀಕ್ಷಕ ಕಣ್ಣುಗಳ ಮತ್ತು ಮೇಸ್ಟ್ರ ತಿದ್ದು-ತೀಡಿವಿಕೆಗೆ ಒಳಪಟ್ಟ ನೀವೇ ಧನ್ಯರು...
ಅವರ ನಿವೃತ್ತ ಜೀವನ ಸುಖಮಯವಾಗಲೆಂದು ಹಾರೈಸುತ್ತೇವೆ.
ತೇಜಸ್ವಿನಿಯವರು ಕೊಟ್ಟ ಬಜ್ ಲಿಂಕ್ ನಿಮ್ಮಲ್ಲಿಗೆ ನನ್ನನ್ನ ಎಳೆದು ತಂದಿತು.

ಶ್ರೀನಿಧಿ.ಡಿ.ಎಸ್ ಹೇಳಿದರು...

@harsha,
but inno sumar kathe iddo:)

@ಪ್ರಗತಿ ಹೆಗಡೆ,
ನಿಮ್ಮ ಹಾರೈಕೆ ಧನ್ಯವಾದಗಳು,

@ ರವೀ,
:) ಹೆಂಗಾರು ಮಾಡ್ಲಕ್ಕು ನೋಡು.. ಥ್ಯಾಂಕ್ಸು.

ತೇಜತ್ಗೇ, ಧನ್ಯವಾದಗಳು..

ದಿವ್ಯಾ,
ಏನ್ ಮಾಡೋದು ಹೇಳಿ, ಅಪ್ಪ ನಂಗೆ ಹೆಚ್ಗೆ ಮಾರ್ಕ್ಸೇ ಕೊಡ್ತಿರ್ಲಿಲ್ಲ!

ವಿ.ಆರ್.ಭಟ್, ಥ್ಯಾಂಕ್ಸು:)

ಸುಶ್ರುತಾ,
ನಿನ್ನ ಪ್ರೀತಿಗೆ ಅದರ ರೀತಿಗೆ...:)

ಶ್ರೀನಿಧಿ.ಡಿ.ಎಸ್ ಹೇಳಿದರು...

@ವಿಜಯಾ,
ತಲುಪಿಸಲಾಗುವುದು!

@ ಮಿಥುನ,
ನಿಮ್ಮ ಆಶೀರ್ವಾದ:)

@ ಸಿಂಧೂ,

ನಿನ್ನ ಪ್ರೀತಿಯ ಹಾರಯಿಕೆಗೆ ಧನ್ಯ. ಸಲಹೆ ನೆನಪಿಟ್ಟುಕೊಳ್ಳುತ್ತೇನೆ,

@ ವನಿತಾ,
ಥ್ಯಾಂಕ್ಸ್

@ಜಲನಯನ,
ನಿಮ್ಮ ಶುಭ ಹಾರೈಕೆಗೆ ವಂದೇ. ಬ್ಲಾಗಿಗೆ ಸ್ವಾಗತ.

Parisarapremi ಹೇಳಿದರು...

teachers day ge oLLe giftu kaNayya nimm tande ge idu... :-)

Parisarapremi ಹೇಳಿದರು...

teachers day ge oLLe giftu kaNayya nimm tande ge idu... :-)

sapna ಹೇಳಿದರು...

nice shree nidhi avre. halegannada patana enjoy mado thara elrigu madak agalla. kelave mandi irthare antha teachers. nim tande kooda haagene alva?

ರಾಜೇಶ್ ನಾಯ್ಕ ಹೇಳಿದರು...

ಶ್ರೀನಿಧಿ,
ಪ್ರೀತಿ ತುಂಬಿದ ಬರಹ. ನನ್ನ ಅಪ್ಪ ಅಮ್ಮ ಹೀಗೆ ನಿವೃತ್ತರಾದ ದಿನ ನೆನಪಾಯಿತು. ಮಾರ್ಕ್ಸ್ ಚೆನ್ನಾಗಿ ಬರದಿದ್ರೇನಂತೆ.... ಕನ್ನಡದಲ್ಲಿ ಅಭಿರುಚಿ ಹುಟ್ಟುವಂತೆ ಮಾಡಿದರಲ್ಲವೇ... ಅದು ಗ್ರೇಟ್. ನಾಲ್ಕು ವರ್ಷ ತುಂಬಿದ ’ತುಂತುರು ಹನಿ’ಗೂ ಶುಭಾಶಯಗಳು.

Sandeepa ಹೇಳಿದರು...

ಶುಭಾಶಯಗಳು,
ನಾಲ್ಕು ಜನರಿಗೂ :-)

Shiv ಹೇಳಿದರು...

ಶ್ರೀನಿಧಿ,

ಸುಂದರವಾದ ಲೇಖನ.

ಅಪ್ಪನಿಗೆ ಮುಂದಿನ ದಿನಗಳಲ್ಲಿ ಸಹ ನೆಮ್ಮದಿ-ಸಂತಸಗಳಿಂದ ತುಂಬಿರಲಿ..

ಬೌಂಡರಿ ಹೊಡೆದ ತುಂತುರು ಹನಿಗಳಿಗೆ ಅಭಿನಂದನೆಗಳು !

ವಿ.ರಾ.ಹೆ. ಹೇಳಿದರು...

ಶುಭಾಶಯಗಳು..:-)

ಶ್ರೀನಿಧಿ.ಡಿ.ಎಸ್ ಹೇಳಿದರು...

@arun- :)

@Sapna- hun, khanditha!

@rajesh- thanks sir,

@sandeepa, shiv and vikasa, thanksrpa:)

Shubhada ಹೇಳಿದರು...

ಶ್ರೀನಿಧಿ,
ನೀವೇ ಲಕ್ಕಿ ಬಿಡಿ. ನಮ್ಮಪ್ಪನೂ ಕನ್ನಡ ಮೇಷ್ಟ್ರೇ. ಪ್ರಾಸದ ಮೇಲೆ ಪ್ರಾಸ ಜೋಡಿಸ್ತಾ, ಸಂದರ್ಭಾನುಸಾರ ಚಿತ್ರ ಬಿಡಿಸುತ್ತ ರಸವತ್ತಾಗಿ ಪಾಠ ಮಾಡ್ತಾರೆ ಅಂತ ಬೇರೆಯವ್ರ ಬಾಯಲ್ಲಿ ಕೇಳಿದ್ದೀನಿ ಬಿಟ್ರೆ ಕ್ಲಾಸಲ್ಲಿ ಅವ್ರ ಪಾಠ ಕೇಳೋ ಯೋಗ ಸಿಗ್ಲಿಲ್ಲ ನಂಗೆ. ಆದ್ರೆ ಮನೇಲಿ ಚೆನ್ನಾಗಿ ತಲೆ ತಿಂತಿದ್ದೆ ಅನ್ನಿ ;-) ಪೇಪರ್ ತಿದ್ದುವಾಗೆಲ್ಲ ನಾನೂ ತಿದ್ತೀನಿ ಅಂತ ರಗಳೆ ಮಾಡಿದ್ದೆಲ್ಲ ನೆನಪಾಯ್ತು ನಿಮ್ಮ ಲೇಖನ ಓದಿ.ನಿಮ್ಮ ತಂದೆಯವರ ನಿವೃತ್ತ ಜೀವನ ಸಂತಸದಾಯಕವಾಗಿರಲಿ. ನಿಮಗೂ ಹಾರ್ದಿಕ ಶುಭಾಶಯಗಳು :-)

Prakash Shetty ಹೇಳಿದರು...

ನನ್ನ ಶಿಷ್ಯೋತ್ತಮನ ಅಪ್ಪ ಮೊದಲು ನನ್ನ ಗುರುಗಳಾಗಿ, ನಂತರ ನನ್ನ ಸಹೋದ್ಯೋಗಿಯಾಗಿದ್ದವರು...

ಅಪ್ಪ ಗುರು- ಮಗ ಶಿಷ್ಯರಾಗಿ ಒಂದೇ ಕಾಲೇಜಿನಲ್ಲಿರುವ ಸಂದರ್ಭದಲ್ಲಿ ಅದೇ ಕಾಲೇಜಿನಲ್ಲಿ ನಾನೂ ಕಾರ್ಯ ನಿರ್ವಹಿಸುತ್ತಿದ್ದೆ.

ಬಹಳ ಹತ್ತಿರದಲ್ಲಿ ನೋಡಿದವನು ನಾನು.

ಇಲ್ಲಿ ಬರ್ದಿರೋದಕ್ಕಿಂತಲೂ ಹೆಚ್ಚು ಅಪ್ಪ-ಮಗ ಒಡನಾಡಿಗಳಾಗಿರುವ ಬಗ್ಗೆ ನಾನು ಕೇಳಿ ತಿಳಿದಿದ್ದೇನೆ..

ನಿಧಿ..., ತಂದೆ ಹಾಗೂ ಗುರು ಇವರಡು ಸಂಬಂಧಗಳ ಮಧ್ಯೆ ಆ ಎರಡು ವರ್ಷಗಳಲ್ಲಿ ನಿನ್ನ ಅನುಭವ ಹೇಗಿತ್ತು.. ಅದನ್ನು ನಿಭಾಯಿಸಿದ ರೀತಿಯನ್ನು ನಮಗೂ ಮುಂದಿನ ಬ್ಲಾಗಂಕಣದಲ್ಲಿ ವಿವರಿಸು...

ಓದಲು ಉತ್ಸುಕರಾಗಿದ್ದೇವೆ.

ಪೂರ್ಣ ವಿ-ರಾಮ ಹೇಳಿದರು...

thats mava-rikk!!!!!

Medini M Bhat ಹೇಳಿದರು...

Very nice article Shreenidhi anna...:-) Tumbaa channagi baritira...:-)