ಬುಧವಾರ, ಫೆಬ್ರವರಿ 09, 2011

ಹೊಸಾ ಲವ್ಸ್ಟೋರಿ

ಹೊಳೇ ದಡದಾಗೆ ಬಾರ್ಜು ಇಲ್ಲ
ಮೊಬೈಲಿನಾಗೇ ಚಾರ್ಜು ಇಲ್ಲ
ಎಲ್ಲಿಗೋದ್ಲು ಹುಡುಗೀ
ಸಾಕಾಗೋಯ್ತು ಹುಡುಕೀ

ಬೀಡಿ ಕಾಸು ನಾಲ್ಕು ಉಳ್ಸಿ
ಬಾಡ್ಗೆ ಬೈಕಿಗ್ ಪೆಟ್ರೋಲ್ ತುಂಬ್ಸಿ
ಓಡೋಡೋಡೋಡ್ ಓಡಿ ಬಂದ್ರೆ
ಇದೇನ್ ಇಂಥ ತೊಂದ್ರೆ?

ಲಾಂಡ್ರಿ ಅಂಗ್ಡಿ ಲಕಪಕ ಶರಟು
ಜೀನ್ಸು ಪ್ಯಾಂಟು ಹಾಕ್ಕಂಡ್ ಹೊರಟು
ಏನೇನೇನೋ ಅಂದ್ಕಡ್ ಬಂದು
ಸಿಕ್ದಂಗಾಯ್ತು ಖಾಲಿ ಚಂಬು

ಕಾಲೇಜ್ ಬ್ಯಾಗು ಮಟ್ಟೀಲಿಟ್ಟು
ಓಡೋಗೋಣ ಊರುಬಿಟ್ಟು
ಅಂತೆಲ್ಲ ಅಂದವಳೇ ಇಲ್ಲ
ಸತ್ಯವಂತರ್ಗೆ ಕಾಲ್ವೇ ಅಲ್ಲ

ನಾಳಿಂದ್ ಮತ್ತೆ ಹೊಸಾದು ಹುಡ್ಕು
ಸಾವರ್ ರುಪಾಯ್ ಫೋನು ಕೊಡ್ಸು
ಕೆಲ್ಸ ಬಿಟ್ಟು ಕಾಲೇಜಿಗ್ ಓಡು
ಯಮಾಹ ಬೈಕಲ್ ವೀಲಿಂಗ್ ಮಾಡು

ಥತ್ತೇರೀಕಿ ಲೈಫೇ ಇಷ್ಟು
ಮನೇ ಹೆಂಡ್ತಿ ಪಾದ್ವೇ ಬೆಶ್ಟು!

13 ಕಾಮೆಂಟ್‌ಗಳು:

Sushrutha Dodderi ಹೇಳಿದರು...

ಅಂತೂ ಈಗ್ಲಾದ್ರೂ ಗ್ನಾನೋದಯ ಆಯ್ತಲ್ಲ! :P

ಬೈದಿವೇ, ಇಟ್ಸ್ ಗುಡ್ ಟು ಸೀ ಯು ಅಪ್‌ಡೇಟಿಂಗ್ ದ ಬ್ಲಾಗ್..

ತೇಜಸ್ವಿನಿ ಹೆಗಡೆ ಹೇಳಿದರು...

:D :D :D ಪಶ್ಚಾತ್ತಾಪಾಂಜಲಿನಾ ಇದು? :-P

ರಾಗ ಹಾಕಿ ಹಾಡ್ವಾಂಗಿದ್ದು...

umesh desai ಹೇಳಿದರು...

shreenidhi i am with u like all gentlemen we beleive in "mane hendti paada..."

sunaath ಹೇಳಿದರು...

ಜ್ಞಾನೋದಯಕ್ಕಾಗಿ ಅಭಿನಂದನೆಗಳು.
ಕವನ ತುಂಬ ಚೆನ್ನಾಗಿದೆ. ಆದರೆ ಫುರಸೊತ್ತು ಹೇಗೆ ಸಿಕ್ಕಿತು?

Sree ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Sree ಹೇಳಿದರು...

sandalwood ge entry na idu?:/

Non Sense ಹೇಳಿದರು...

Very good sheena.... Dont worry about how good or bad it is, just write and update the blog.
If you get a good composer this song will be super hit ;)

Parisarapremi ಹೇಳಿದರು...

enayyaa, antu full time mysore ge shift aago thara ide!

ಶ್ರೀನಿಧಿ.ಡಿ.ಎಸ್ ಹೇಳಿದರು...

@ Sush- thanksamma:)

@Tejaswini- khanditha alla!

@Umesh- thanks, by the way- idu nan kathe alla:)

@Sunatha kaka- thanks- hengo pursoth madkondiddeeni..

@Sree- No Way:)

ಶ್ರೀನಿಧಿ.ಡಿ.ಎಸ್ ಹೇಳಿದರು...

@ Raveendra- thanks dosta, but actually this poem is about nammoora hudugeera samasyegalu:)

@Aruna- eno nim asheervada kanappa:)

ಜ್ಯೋತಿ ಹೇಳಿದರು...

Nice :-)

ಶ್ರೀನಿಧಿ.ಡಿ.ಎಸ್ ಹೇಳಿದರು...

@ jyothi, thankz,

Anuradha ಹೇಳಿದರು...

Nice:)))