ಬದುಕು ಬದಲಿಸಬಹುದು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಬದುಕು ಬದಲಿಸಬಹುದು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಮೇ 01, 2011

ಜೀವಯಾನವೆಂದರೆ..

ಕಾಲು ಕಾಯುವ ಪಾದರಕ್ಷೆ
ತಿಳಿಸುತ್ತದೆ ನಡೆದು
ಬಂದ ದಾರಿ
ಬೇಡದ ಭೂತಕ್ಕೆ ಹೇಳಿ ವಿದಾಯ
ಓಡಿದರೆ ಕಾಣುವುದು
ವಿಸ್ತಾರ ಹೆದ್ದಾರಿ

ಜೀವನ ಮಿಠಾಯಿ ಡಬ್ಬ
ಸಿಕ್ಕೀತು ಒಂದಲ್ಲ ಒಂದು
ಸಿಹಿ,
ತೆರೆದರೆ ಮುಚ್ಚಳ

ಸುಮ್ಮನೆ ಸಂತೈಸಿದರೆ ಸಿಗುವ
ಶಾಂತಿಗೆ
ಉದ್ದೇಶವಿಲ್ಲದ ಸಹಾಯಕ್ಕೆ
ಸಿಡುಕಿನ ಮುಖಕ್ಕೆ ದೊರಕುವ
ಕಿರುನಗೆಯ ಉತ್ತರಕ್ಕೆ
ಇಲ್ಲ ಯಾವ ನಿಘಂಟಿನಲ್ಲೂ ಅರ್ಥ

ಕಲಿತುಕೊಳ್ಳುತ್ತ ಹೋದರೆ
ಒಂದರ ನಂತರ
ಮತ್ತೊಂದ
ಕಾಣುವುದು ಹೊಳೆವ ತಾರೆಗಳ
ಹೊಸ ಆಕಾಶ

ಜೀವಯಾನ, ಎಲ್ಲ ಸಿದ್ಧತೆಗಳ
ನಂತರದ ಪಯಣ
ಅಥವ, ಸುಮ್ಮಗೆ
ಬೀಸಿದ ಗಾಳಿಗೆ ಹಾರಿದ ಪುಕ್ಕ

ಕೊನೆಗುಳಿಯುವುದು ಮಾತ್ರ
ದಕ್ಕಿದ
ನೆಮ್ಮದಿಗಳ ಲೆಕ್ಕ