ಬುಧವಾರ, ಫೆಬ್ರವರಿ 21, 2007

ಗೆಳತೀ ಎಲ್ಲಡಗಿರುವೆ?

ಎಲ್ಲಿ ಹುಡುಕಲೇ ಗೆಳತಿ ನಾನು ನಿನ್ನ?
ನಿನಗಿಂತ ಸುಲಭದಲಿ ದೊರಕುವುದು ಚಿನ್ನ!

ಕನಸೊಳಗೆ ಹುಡುಕಿದೆ, ಮನಸೊಳಗೆ ಅರಸಿದೆ
ಸಾಗರದ ಗರ್ಭದಲಿ, ಆಳದಾ ಕಣಿವೆಯಲಿ

ಹುಡುಕುಡುಕಿ ಬಳಲಿ ಬೆಂಡಾಗಿ ಹೋಗಿಹೆನು
ಬಿಟ್ಟಿಲ್ಲ ಈ ಜಗದ ಯಾವುದೇ ಮೂಲೆಯನು..

ಆಗಸದ ಆಂತರ್ಯ, ಕತ್ತಲಿನ ಸಹಚರ್ಯ
ವಿಪಿನದಾ ಒಳ ಹೊರಗು ನಿನ್ನ ಹುಡುಕುವ ಕಾರ್ಯ

ಕಳೆದುಕೊಂಡೆನೆ ನಿನ್ನ,ಅಳುವೊಂದೆ ಉಳಿದಿಹುದು
ನೀ ದೊರಕದಿದ್ದರೆ, ಸಾವೊಂದೆ ಗತಿಯಹುದು..

ನಾನಂದು ಹೀಗೆಯೇ ನಿನ್ನ ಧ್ಯಾನದೊಳಿರಲು,
ಕನ್ನಡಿಯನೊಂದನ್ನು ಒಮ್ಮೆಗೇ ನೋಡಿದೆನು

ಅರರೆ! ನಾನಲ್ಲಿ ಕಂಡುದಿನ್ನೇನು?
ನನ್ನ ದೇಹಕೆ ಇಹುದು ನಿನ್ನದೇ ಬಿಂಬ!

ನನ್ನೊಳಗೆ ನೀನೀರುವೆ ಅರಿಯದೇ ಹೋದೆನೇ!
ನಿನ್ನ ಹುಡುಕುವ ತಪ್ಪನಿನ್ನೆಂದೂ ಮಾಡೆನೇ..

(ಮೂಲ ಇಂಗ್ಲೀಷು ಕವನ, ಭಾವಾನುವಾದ).

4 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಕನಸೊಳಗೆ ಹುಡುಕಿದೆ, ಮನಸೊಳಗೆ ಅರಸಿದೆ
ಸಾಗರದ ಗರ್ಭದಲಿ, ಆಳದಾ ಕಣಿವೆಯಲಿ

ಆಗಸದ ಆಂತರ್ಯ, ಕತ್ತಲಿನ ಸಹಚರ್ಯ
ವಿಪಿನದಾ ಒಳ ಹೊರಗು ನಿನ್ನ ಹುಡುಕುವ ಕಾರ್ಯ

ಈ ಮೇಲಿನ ಸಾಲುಗಳು ತು೦ಬಾ ಅರ್ಥಪೂರ್ಣವಾಗಿದೆ.......

Annapoorna Daithota ಹೇಳಿದರು...

ತುಂಬಾ ಚೆನ್ನಾಗಿದೆ. ಸುಂದರವಾಗಿ ಅನುವಾದಿಸಿ ನಮಗೆಲ್ಲಾ ಉಣಬಡಿಸಿದ್ದಕ್ಕೆ ಧನ್ಯವಾದಗಳು :)

bhadra ಹೇಳಿದರು...

ಸುಂದರ ಕವನ, ತಕ್ಕುದಾದ ಭಾವಾನುವಾದ

ಬಹಳ ಚೆನ್ನಾದ ಪ್ರಯತ್ನ

Nirvana ಹೇಳಿದರು...

Uttama anuvada guru......
Saahitya krushi heege saagli...